ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಗಾ ಭಾಗೀರಥೀ ಮಂಗಳಾಂಗಿ ಅಳಕನಂದನ ನೀ ಮಹಾ ಸುಂದರಾಂಗಿ ಸಿಂಧುರಾಜನ ರಾಣಿ ಸಿರಿಯು ಸಂಪತ್ತು ಕೊಡು ಕಂಗಳಿಂದಲಿ ನೋಡಿ ಕರುಣಿಸೆನ್ನ ಪ ಕಾಶಿ ಪಟ್ಟಣದಲಿ ವಾಸವಾಗಿ ಸರಸ್ವತಿಯನು ಕೂಡಿ ನೀ ಸರಸವಾಗಿ ಸೋಸಿಲಿಂದಲಿ ಸೂರ್ಯಪುತ್ರಿ ಯಮುನೆಯನು ಕೂಡಿ ಉ- ಲ್ಲಾಸದಿದ್ಹರಿದು ವಾರ್ಣಾಸಿಗ್ಹೋಗಿ 1 ಹಾಲಿನಂತೆ ಹರಿವೊ ಗಂಗೆ ನೀನು ನೀಲದಂತಿದ್ದ ಯಮುನೆಯನು ಕೂಡಿ ಲೀಲೆಯಿಂದಲಿ ಸರಸ್ವತಿಯನು ಕೂಡಿ ಓಲ್ಯಾಡುತ ಬಂದೆ ಒಯ್ಯಾರದಿಂದ 2 ಭಗೀರಥನ ಹಿಂದೆ ನೀ ಬಂದೆ ಓಡಿ ಸಗರನ ಸುತರ ಉದ್ಧಾರ ಮಾಡಿ ಜಗವ ಪಾವನ ಮಾಡೋ ಜಾಹ್ನವಿಯೆ ನೀ ಎನ್ನ ಮಗುವೆಂದು ಮುಂದಕೆ ಕರೆಯೆ ತಾಯಿ 3 ಬಿಂದುಮಾಧವ ವೇಣುಮಾಧವನ್ನ ಆ- ನಂದ ಭೈರವ ಕಾಳ ಭೈರವನ್ನ ಚಂದದಿಂದ್ವಿಶ್ವನಾಥನ್ನ ಗುಡಿಮುಂದೆ ಹೊಂದಿ ಹರಿದ್ಹನುಮಂತ ಘಾಟಿನ್ಹಿಂದೆ 4 ಪೊಡವಿ ಮ್ಯಾಲಿಂಥ ಸಡಗರದಿ ಹರಿದು ಕಡಲಶಯನನ್ನ ಕಾಲುಂಗುಷ್ಠದ ಮಗಳು ಕಡಲರಾಣಿಯೆ ಕಯ್ಯ ಪಿಡಿಯೆ ನೀನು 5 ಮರದ ಬಾಗಿಣ ಕುಂಕುಮರಿಷಿಣವು ಗಂಧ ಪರಿಪರಿಯಿಂದ ಪೂಜೆಯಗೊಂಬುವಿ ಸ್ಥಿರವಾದ ಮುತ್ತೈದೆತನ ಜನುಮ ಜನುಮಕ್ಕು ವರವ ಕೊಟ್ಟು ವೈಕುಂಠವನು ತೋರಿಸೆ 6 ಮಧ್ಯಾಹ್ನದಲಿ ಮಲಕರ್ಣಿಕೆಯ ಸ್ನಾನ ಶುದ್ಧವಾಗಿ ಪಂಚಗಂಗೆಯಲಿ ಭವ ಸ- ಮುದ್ರವನು ದಾಟಿಸೆ ಭಾಗೀರಥಿ 7 ಸುಕೃತ ಒದಗಿತೆಂದು ಗಂಗ ಭೆÀಟ್ಟಿಯಾಗೊ ಪುಣ್ಯ ಬಂದಿತಿಂದು ಚಕ್ರತೀರ್ಥದ ಸ್ನಾನ ಸಂಕಲ್ಪದ ಫಲವ ಕೊಟ್ಟು ರಕ್ಷಿಸು ತಾಯಿ ತರಂಗಿಣಿ 8 ಸಾಸಿರ ಮುಖದಿ ಶರಧಿಯನು ಕೂಡಿ ಹೋಗಿ ಬಾ ಊರಿಗೆ ಭಕ್ತಿಮುಕ್ತಿ ನೀಡಿ ನೀನು ಭೀಮೇಶ ಕೃಷ್ಣನಲಿ ಹುಟ್ಟಿದ್ದು ಪಾದವನು ತೋರೆನ್ನ ಪೊರೆಯಬೇಕೆ 9
--------------
ಹರಪನಹಳ್ಳಿಭೀಮವ್ವ
ಗುರುವೇ ನಿತ್ಯನು ಗುರುವೇ ನಿತ್ಯನುಗುರುವೇ ನಿತ್ಯನು ಸತ್ಯ ಪ ಬೋಧ ಬೋಧ 1 ಬುದ್ಧಿ ಬುದ್ಧಿ ತಾನ್ಯಾತರ ಬುದ್ಧಿಯುಬುದ್ಧಿಯು ನಿಶ್ಚಯ ಬುದ್ಧಿಸಿದ್ಧಿ ಸಿದ್ಧಿ ತಾನ್ಯಾತರ ಸಿದ್ಧಿಯುಸಿದ್ಧಿಯು ಜ್ಞಾನದ ಸಿದ್ಧಿ 2 ಶಾಂತ ಶಾಂತ ತಾನ್ಯಾತರಶಾಂತವು ಎಲ್ಲಕೆ ನಿಂತುದೆ ಶಾಂತಭ್ರಾಂತುಭ್ರಾಂತು ತಾನ್ಯಾತರಭ್ರಾಂತದು ಗುರುವಿನಲ್ಲಿದ್ದುದೆ ಭ್ರಾಂತು3 ಧ್ಯಾನ ಧ್ಯಾನ ತಾನ್ಯಾತರ ಧ್ಯಾನವುಧ್ಯಾನವು ತನ್ನದೆ ಧ್ಯಾನಮೌನ ಮೌನ ಅದು ಯಾತರ ಮೌನವುಮೌನವು ತುರ್ಯದೆ ಮೌನ 4 ಭಕ್ತಿ ಭಕ್ತಿ ತಾನ್ಯಾತರ ಭಕ್ತಿಯುಮುಕ್ತಿಯು ನಿಜವಹ ಭಕ್ತಿಮುಕ್ತಿ ಮುಕ್ತಿ ತಾನ್ಯಾತರ ಮುಕ್ತಿಯುಮುಕ್ತಿ ಚಿದಾನಂದ ಮುಕ್ತಿ5
--------------
ಚಿದಾನಂದ ಅವಧೂತರು
ಭಕ್ತ ಮಂದಾರಿಣಿ ಭವಭಯನಿವಾರಿಣಿ ಭಕ್ತಿಮುಕ್ತಿ ಪ್ರದಾಯಿನಿ ತ್ರಿಭುವನೈಕ ಜನನಿ ಪ. ಭುವನತ್ರಯಮೋಹಿನಿ ಭಾನುಕೋಟಿಪ್ರಕಾಶಿನಿ ಭೂರಿಭೂಭುಜ ಸೌಭಾಗ್ಯದಾಯಿನಿ ಪಾಹಿಮಾಂ ಜನನಿ ಅ.ಪ. ಸಾಮಜಾಧಿಪಗಾಮಿನಿ ಕಾಮಿತಾರ್ಥಪ್ರದಾಯಿನಿ ರಾಮಣೀಯ ಸ್ವರೂಪಿಣಿ ಕಾಮಜನನಿ ಕಲುಷವಿಭಂಜಿನಿ 1 ಕನಕವಸನೆ ಕವಿಮನೊಲ್ಲಾಸಿನಿ ಸುಮನಸವರ ಪರಿತೋಷಿಣಿ ಕೋಮಲತರ ಕೋಕಿಲ ಮೃದುಭಾಷಿಣಿ 2 ಕಮಲ ಬಾಂಧವ ವಂಶ ಸಂಭವ ರಾಮಚಂದ್ರ ಸುಪ್ರೇಮಾಕಾಂಕ್ಷಿಣಿ 3 ವನಜ ಸಂಭವ ಸನ್ನುತೆ ಕನಕಭೂಷಣ ಭೂಷಿತೆ ಅನಿಲನಂದನ ಸೇವಿತೇ ಘನಕರುಣಾರಸಾನ್ವಿತೇ 4 ಅನಘ ಸದ್ಗುಣಭೂಷಿತೆ ಅನಿಮಿಷಾಧಿಪ ಪೂಜಿತೆ ಜನಕ ಭೂಪತಿ ಪೋಷಿತೇ ಘನಶೇಷಾದ್ರೀಶ ದಯಿತೆ5
--------------
ನಂಜನಗೂಡು ತಿರುಮಲಾಂಬಾ