ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೂರ ಮಾಡುವರೇ ಶ್ರೀಶ ಪ ದೂರ ಮಾಡುವರೇದೂರ ಮಾಡುವರೇನೋ ಶ್ರೀಶದಾರಿ ಕಾಣದೆ ಮೊರೆಯನಿಡುವೆಆರು ಕಾಯುವರಿಲ್ಲ ಶ್ರೀಶಸಾರಸಾಕ್ಷ ಸಲಹೆ ಬೇಡುವೇ ಅ.ಪ. ಸಕ್ತಿ ಇಲ್ಲವೋ | ನಿನ್ನೊಳಾಸಕ್ತಿ ಇಲ್ಲವೋ |ಸಕ್ತಿ ನಿನ್ನಲ್ಲಿಲ್ಲದೇಲೇಮುಕ್ತಿ ಇಲ್ಲವೆಂದು ಶೃತಿಯಉಕ್ತಿ ಕೇಳಿ ಕೇಳಿದಾಗ್ಯೂ ವಿ-ರಕ್ತಿ ಪುಟ್ಟಲಿಲ್ಲ ಎನಗೆ ಭಕ್ತಿಮಾರ್ಗ ದೂರವಾಯ್ತೊ 1 ದುಷ್ಟ ವಿಷಯದೀ | ಮನವುಅಟ್ಟಿ ಪೋಗೋದೋ |ಎಷ್ಟು ಪೇಳಿದಾರೂ ಮನವುನೆಟ್ಟಗಾಗೋ ಪರಿಯ ಕಾಣೆಸೃಷ್ಠಿಗೀಶ ಮನವ ಅಭಿಧಸೊಟ್ಟ ಮನವ ಸರಿಯ ಪಡಿಸಿ | ಶ್ರೇಷ್ಠ ನನ್ನ ಮಾಡದ್ಹಾಂಗೆ 2 ಕೈಯ್ಯ ಬಿಡುವರೇ | ದಯಾಳು ವಿಷಯಧುಯ್ಯಲು ಕಳೆಯದೇ |ಪ್ರೇರ್ಯ ಪ್ರೇರಕನಾಗಿ ನೀನುಮಯ್ಯ ಮರೆಸಿ ಧೈರ್ಯಗೆಡಿಸೆಆರ್ಯರಿದನ ಸಯ್ಯೆಂಬೊರೇನೋಅಯ್ಯ ಕೈಯ್ಯ ಬಿಡದೆ ಕಾಯೋ | ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಯಾಕೆನಗೆ ವೈರಾಗ್ಯ ಪುಟ್ಟಲಿಲ್ಲವೊ ದೇವ ಏನು ಪಾಪಿಯೊ ಜಗದಲಿ ಪ. ಸಾಕು ಸಾಕೀ ವಿಷಯ ಚಿಂತನೆಯ ಬಿಡಿಸಿನ್ನು ಲೋಕನಾಯಕನೆ ಸ್ವಾಮಿ ಅ.ಪ. ಅಸನವಸನಗಳಿಗೆ ಆಲ್ಪರಿದು ಅನ್ಯರಿಗೆ ಬಿಸಜನಯನನೆ ಕಾಲಹರಣೆಯನೆಗೈದೆ ವಸುದೇವಸುತ ನಿನ್ನ ಅರಘಳಿಗೆ ನೆನೆಯದಲೆ ಹಸಿವು ತೃಷೆಯಿಂ ಬಳಲಿ ಬೆಂಡಾದೆನಯ್ಯಾ 1 ಇಂದ್ರಿಯಗಳೆಲ್ಲವನು ಬಂಧನದೊಳಗೆ ಇರಿಸಿ ಇಂದಿರೇಶನೆ ನಿನ್ನ ಧ್ಯಾನಿಸದಲೆ ಮಂದಮತಿಯಿಂದ ನಾ ಮಮಕಾರದಲಿ ಬಿದ್ದು ಮಂದ ಜನರೊಡನಾಡಿ ಮಾಯಕೊಳಗಾದೆ 2 ಭಕ್ತಿಮಾರ್ಗವ ಕಾಣೆ ಜ್ಞಾನ ಮೊದಲೆ ಅರಿಯೆ ಮುಕ್ತಿಗೊಡೆಯನೆ ಎನ್ನ ಮುದದಿಂದ ಸಲಹೊ ಯುಕ್ತಯುಕ್ತಿಗಳರಿಯೆ ಸುತ್ತುತಿಪ್ಪೆನೊ ಭವದಿ ಶಕ್ತ ನೀ ಒಳಗಿದ್ದು ಎನ್ನ ಕಾಡುವರೆ 3 ಕರ್ಮಮಾರ್ಗವ ತೊರೆದು ನಿರ್ಮಲದಲಿ ನಿನ್ನ ಒಮ್ಮೆಗಾದರೂ ಮನದಿ ನೆನೆಯಲಿಲ್ಲ ರಮೆಯರಸನೆ ಶ್ರೀ ಗುರುಗಳಂತರ್ಯಾಮಿ ಕರ್ಮತ್ರಯಗಳ ಕಡಿದು ಕರುಣದಲಿ ಕಾಯೊ4 ಪಾಪರಹಿತನೆ ಎನ್ನ ಪಾಪ ಕರ್ಮಗಳೆಲ್ಲ ಪರಿ ನುಡಿದೆ ನೀ ಪರಿಹರಿಸಿ ಕಾಯೋ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದಲೆ ಈ ಪಾಪಿಯನು ಕಾಯ್ವರಾರೊ ಶ್ರೀ ಹರಿಯೆ5
--------------
ಅಂಬಾಬಾಯಿ
ಸಾಂಬಶಿವಾ ಭಕ್ತಿಮಾರ್ಗದಿ ನಡೆಸೋ ಅಂಬುಜಾಕ್ಷನ ದಿವ್ಯನಾಮವ ನುಡಿಸೋ ಪ ನಂಬಿದ ಭಕ್ತನ ಕೊರತೆಯ ಬಿಡಿಸೋ ಶಂಬರಾರಿಯ ಪಿತನ ಚರಣವ ಹಿಡಿಸೋ ಅ.ಪ ಮಾನವರಿಷ್ಟವ ಸಲ್ಲಿಸುವೆಯಂತೆ ದೀನರೊಳನುಕಂಪ ನಿನಗುಂಟಂತೆ ಜ್ಞಾನ ವೈರಾಗ್ಯ ನಿಧಿ ನೀನಂತೆ ದೀನಗೊಲಿದು ವರವೀಯುವೆಯಂತೆ 1 ಕಾಮಿತವೆನ್ನದು ಒಂದೇ ಅಯ್ಯ ಆ ಮಾಂಗಿರಿಪತಿ ಕರುಣೆ ಅದಯ್ಯ ರಾಮತಾರಕನಾಮ ಎನಗಿರಲಯ್ಯ ನೀ ಮನಮಾಡೆ ಕೃತಾರ್ಥ ನಾನಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್