ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಯ್ಯಾ ನಿತ್ಯಾತ್ಮನನ್ನು ನಿಜವಾಗಿ ನಿನ್ನೊಳಗೆ ನೀನು ನೋಡಯ್ಯಾ ನಲಿನಲಿದಾಡಯ್ಯಾ ಎರಡುದಿನಸಂಸಾರಾ ಎರವಾಗಿ ತಂದ ಶರೀರಾ ಸ್ಥಿರವಲ್ಲ ಸ್ವಾಮಿ ಗುರುಬಲ್ಲಾ ನೋಡಯ್ಯಾ 1 ಶರೀರ ಅರ್ಥಪ್ರಾಣ ಮೂರು ಗುರುಮೂರ್ತಿಗರ್ಪಿಸಿ ತೋರು ದೃಢಭಾವಾ ಆತ್ಮಸುಖವೀವಾ ನೋಡಯ್ಯಾ 2 ನರದೇಹಕ್ಕೆ ಬಂದು ನೀನು ಇರುವಂಥಾ ಸಾರ್ಥಕವೇನು ದೃಢ ಭಕ್ತಿಮಾಡಿ ಪಡೆ ಮುಕ್ತಿ ನೋಡಯ್ಯಾ3 ದೊರಕುವುದು ಪರಿಕರ ಸರ್ವಾ ಗುರುಮೂರ್ತಿ ಸಿಕ್ಕುವುದಪೂರ್ವಾ ಬಿಡಬೇಡಾ ವ್ಯರ್ಥ ಕೆಡಬೇಡಾ ನೋಡಯ್ಯಾ 4 ಭಕ್ತಿಯಲಿ ಕೈವಿಡಿದು ಹೋಗು ಭಜಿಸಿ ಜೀವನ್ಮುಕ್ತನಾಗು ಸಾರಿದೆ ಮರ್ಮವ ತೋರಿದೆ ನೋಡಯ್ಯ5 ಯುಕ್ತಿಯಲಿ ಸಾಧಿಸಲು ಬೇಕು ಇಷ್ಟೊಂದು ಸಿಕ್ಕಿದರೆ ಸಾಕು ಚಂದದಿ ಗುರುವಿಮಲಾನಂದದಿ ನೋಡಯ್ಯಾ 6
--------------
ಭಟಕಳ ಅಪ್ಪಯ್ಯ
ನೋಡಿ ಭಕ್ತಿಮಾಡಿ ಪಾಡಿರಿ ರೂಢಿಗೊಡೆಯ ದಾಸರಾ ಕಾಡುವಾ ದುರಿತಂಗಳ ಓಡಿಸಿ ಸಲುಹುವರಾ ಪ ನಂಬಿದೆ ಶರಣರ ಹಂಬಲ ನೀಡಲು ಸಂಭ್ರಮದಲಿ | ಇದೆ ಸ್ತಂಭದಿ ನೆಲೆಸಿಹರಾ 1 ಇವರ ಕವನ ಶ್ರವಣ ಮನನಗಳಿಂದ | ಲವತೀಶವಾಗದು ಜವನ ಭವನ ಬಂಧು 2 ಶ್ರೀಮಹೀವಲ್ಲಭ ಶಾಮಸುಂದರನ ಪ್ರೇಮಕೆ ಪಾತ್ರಧರಾಮರ ದಾಸರಾ 3
--------------
ಶಾಮಸುಂದರ ವಿಠಲ
ಶೌರಿ ಬಾರೋ ಶ್ರೀಹರಿ ಪ ಬಾರೋ ಬಾರೋ ಕರುಣಾನಿಧಿ ನಿನ್ನನು ಬಾರಿ ಬಾರಿಗೆ ಸಿರಬಾಗಿ ನಮಿಸುವೆನು ಅ.ಪ ಮಾರನಯ್ಯನೆ ಮಂಗಳರೂಪ ತೋರೊ ಬೇಗನೆ ಸಾರಸಾಕ್ಷ ಸನ್ಮಂಗಳ ಮಹಿಮನೆ ತೋರೋ ನಿನ್ನ ಮಹಾ ಮೀನರೂಪವನು 1 ಸುಂದರಾನನ ಚಂದಿರವದನ ಮಂದಹಾಸನೆ ದುರಿತ ಕಳೆವಂದದಿ ಬೆನ್ನಿಲಿ ಮಂದರವೆತ್ತಿದ2 ಆದಿದೈತ್ಯನು ಭೂದೇವಿಯಪಹಾರ ಗೈದನು ಆ ದಿತಿಜರ ಸಂಹಾರ ಮಾಡಲು ನೆಲ ವರಾಹ ಬೇಗ 3 ಕಂದನಾಡಿದ ಆ ನುಡಿ ಕೇಳಿಯಾನಂದ ತಾಳಿದ ಮಂದರೋದ್ಧರ ಮುಚುಕುಂದ ವರದ ಸುರ- ಗಂಗೆಯ ಪಿತ ನರಸಿಂಗರೂಪದಿ 4 ಬಾಲರೂಪದಿ ಬೇಡಿದ ದಾನ ಭೂಮಿ ಮಾತ್ರದಿ ಬೇಡಿದುದನೆ ಕೊಟ್ಟಾಮಹೀಪಾಲನ ದೂಡಿ ಪಾತಾಳಕ್ಕೆ ಬಾಗಿಲ ಕಾಯ್ದೆ 5 ಶೂರ ರಾಜರ ಸಂಹಾರ ಮಾಡಿ ತೋರಿ ಶೌರ್ಯವ ಸಾಗರಶಯನಗೆ ತೋರಿ ಪರಾಕ್ರಮ ಶೂಲಿಯ ಧನುವಿತ್ತೆ ರೇಣುಕಾತ್ಮಜ 6 ವಾನರಾಧಿಪ ಹಗಲಿರುಳು ಭಕ್ತಿಮಾಡಿ ಧ್ಯಾನಿಪ ಶ್ರೀ ಮಾನಿನಿಯಳ ಕೈಪಿಡಿಯುತ ಅಯೋಧ್ಯದಿ ಮೆರೆದ ಶ್ರೀರಾಮ ಚಂದಿರನೆ 7 ಪಾಂಡುನಂದನ ಮಾಡಿದ ನಿನ್ನ ಬಂಡಿ ಬೋವನ ಸಂದೇಹಿಸದಲೆ ಅಂದು ಅವರ ಮನೆ ಎಂಜಲ ಬಳಿದ ಮುಕುಂದನೆ ಬೇಗದಿ 8 ಮಂಗಳಾತ್ಮಕ ತ್ರಿಪುರರ ಮದ ಭಂಗನಾಶಕ ಮಂಗಳಮಹಿಮ ವಿಹಂಗವಾಹನ ಸುರ ಸಂಗೀತಲೋಲ ಕೃಪಾಂಗ ದಯಾನಿಧೆ 9 ತೇಜಿಯನೇರುತ ಸುಜನರು ಮಾಳ್ಪಪೂಜೆಗೊಳ್ಳುತ ರಾಜೀವಾಕ್ಷ ರಕ್ಕಸ ಸಂಹಾರಕ ಅ- ಪಾರ ಮಹಿಮ ರಥವೇರುತ ತವಕದಿ 10 ಕಂಜಲೋಚನ ಕಮಲಾಯತಾಕ್ಷ ಮಂಜುಭೂಷಣ ಕಂಜದಳಾಂಬಕ ಕಮಲನಾಭ ವಿಠ್ಠಲಝಗಝಗಿಸುವ ಮದ್ಹøದಯ ಮಂಟಪಕೇ 11
--------------
ನಿಡಗುರುಕಿ ಜೀವೂಬಾಯಿ