ಶಾರದೇಂದು ಸನ್ನಿಭಾನನೇ ಸರಸಿಜಲೋಚನೆ ಪ.
ಶಾರದೇ ಸುವಿಶಾರದೇ ದಯೆಬಾರದೇ ನತಕಾಮದೆ
ಭೂರಿಹರ್ಷದೆ ಬೀರಿ ನಲ್ಮೆಯಾಪಾರ ಸೌಖ್ಯವ ತೋರು ಕೀರ್ತಿಯ 1
ವಾಣಿ ವೀಣಾಪಾಣಿ ಮಂಜಳವಾಣಿ ಪುಸ್ತಕಧಾರಿಣಿ
ವೇಣುನಾದ ವಿನೋದಿನಿ ಸುಜ್ಞಾನದಾಯಿನಿ ಪಾಹಿ ಜನನೀ 2
ಮಾತೆ ಮಂಗಳ ಗೀತೆ ಕವಿಸುಪ್ರೀತೆ ಪದ್ಮಜದಯಿತೆ
ಖ್ಯಾತೆ ಶೇಷಗಿರೀಶ ಭಕ್ತಿಪ್ರದಾತೆ ಸದ್ಗುಣಪೂತೆ ಮಹಿತೆ 3