ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಗಾಭೋಗ ಭಕ್ತಿದಾಯಕ ಕೇಳೊ ನಿನ್ನನು ಒಲಿಸಲು ಶಕ್ತಿ ಎನಗೆ ಇಲ್ಲ ಸರ್ವೇಶ್ವರ ಭಕ್ತಿಪಾಶದಿ ನಿನ್ನನುಕ್ತಿಯಿಂದಲಿ ಬಿಗಿವೆ ಮುಕ್ತಿಗೊಡೆಯ ಹೃದಯ ಮಧ್ಯದಿ ಬಂಧಿಸುವೆ ಶಕ್ತಿ ನಿನಗಿಲ್ಲ ಬಿಡಿಸಿಕೊಳ್ಳಲು ಇನ್ನು ಯುಕ್ತಾಯುಕ್ತ ತಿಳಿಸಿ ಉದ್ಧರಿಸಬೇಕಿನ್ನು ಶಕ್ತನಿಲ್ಲವೊ ನಿನಗೆ ಸರಿ ಜಗದೊಳು ಮಹ ಸಿರಿ ಗೋಪಾಲಕೃಷ್ಣವಿಠ್ಠಲಾ
--------------
ಅಂಬಾಬಾಯಿ
ಶ್ರೀ ಧೀರೇಂದ್ರರು ಚಾರು ನಿಮ್ಮಯ ಚರಣತೋರಿಸುದ್ಧರಿಸಬೇಕೊ ಪ. ಆರು ಇವನೆಂದು ನೀವ್ ಗಾರುಮಾಡದಲೆನ್ನ ಸಾನುರಾಗದಿ ಪೊರೆಯಬೇಕೊ ಸ್ವಾಮಿ ಅ.ಪ. ವರದಾ ತೀರದಿ ನಿಂದು ವರ ಕೊಡಿವೀಯೆಂದು ಘನಗರ್ವ ನಿನಗ್ಯಾತಕೊಸುರಪತಿಯ ಬಲದಲ್ಲಿ ಇಹೆನೆಂದು ನೀ ಬಲು ಜರಿದು ನೋಡಲಿ ಬ್ಯಾಡವೊಆರುಗತಿಯಿಲ್ಲವೆಂದೀರ ನಿನ್ನೆಡೆ ಬರಲು ಏರಿ ಕೂಡ್ರುವುದುಚಿತವೇಸಾರಿ ಹೇಳುವೆ ನಿನಗೆ ಚೋರದಾಸನು ನಾನು ಘೋರರೂಪದಿ ಬಂದು ತೋರೋ ಸ್ವಾಮಿ 1 ರಘುಕುಲತಿಲಕನ ಭಕ್ತಿಪಾಶದಿ ಕಟ್ಟಿಚಕ್ರವರ್ತಿಯೆನಿಸಿ ಗೋಕುಲದ ಗೊಲ್ಲನ ಯುಕುತಿಯಲಿ ನೀನೊಲಿಸಿದ್ಯೊಶಕ್ತಿಯಿಂ ಕಲಿಯುಗದಿ ಧೀರೇಂದ್ರ ಪೆಸರಿನಿಂ ದುರಿತಗಳ ಕಳೆಯುವಿಯೊಧಿಃಕರಿಸಿ ವಾದಿಗಳ ದೇಶದೊಳ್ ಚರಿಸಿದ ವಸುಧೀಂದ್ರ ಸಂಜಾತ ಪೊರೆಯೆ ಸ್ವಾಮೀ 2 ಹೆಣ್ಣಿನಾಶೆಗೆ ಬಿದ್ದು ಹೊನ್ನು ಸ್ಥಿರವೆಂದು ನಾ ಮಣ್ಣುಪಾಲಾದೆನೊತನುವು ತನ್ನದು ಎಂಬ ಭಿನ್ನ ಜ್ಞಾನವನೇ ಹೊಡೆದೋಡಿಸೆಮಾನ್ಯವಂತರ ಸಂಗ ಇನ್ನು ಮೇಲಾದರೂ ದಯಪಾಲಿಸೊಘನ್ನ ಮಹಿಮಾ ತಂದೆವರದವಿಠಲನಲ್ಲಿ ಜ್ಞಾನದಿಂ ಭಕ್ತಿ ವ್ಯೆರಾಗ್ಯವನೆ ಈಯೋಸ್ವಾಮಿ 3
--------------
ಸಿರಿಗುರುತಂದೆವರದವಿಠಲರು
ಸನಿಹದಲೆ ದೆಸೆದೆಸೆಗೆ ಪ ಇನಿತುಪಾದಗಳಿಂದ ಅನಿಲನ ಸೋಲಿಸಿ ಅ.ಪ ಕಾಮಕ್ರೋಧಗಳೆಂಬ ನೇತ್ರಗಳಿದಕಿದೆ ವ್ಯಾಮೋಹ ಲೋಚನ ಎಂಬ ಕರ್ಣಂಗಳಿವೆ ದುರ್ಮದವೆಂಬುವ ಪುಚ್ಚವೊಂದಿಹುದಯ್ಯ ಈ ಮದಹಯಕೆ ಮಾತ್ಸರ್ಯ ನಾಸಿಕವಯ್ಯ1 ಮೃಡನು ತಾ ಎಂಬುವ ಕಡಿವಾಣದ ಹಿಡಿ ದೃಢಭಕ್ತಿಯೆಂಬ ಪಾಶ ಕೊರಳೊಳಗಿರಲಿ ಎಡಗೈಯೊಳು ಹರಿಯೆಂಬ ಕೊಳಲನು ಹಿಡಿ ತಡವೇಕೆ ಮನುಜ ಓಡಿ ಹಯವ ತಡಿ 2 ಆಡಲು ನಿಲಬೇಡ ನೋಡಿ ನಲಿಯಬೇಡ ಓಡಾಡಿ ತುರಗವ ಹಿಡಿ ಹಿಡಿ ಮನುಜ ಓಡಿ ಹಯವ ಪಿಡಿದು ಬಂಧಿಸದಿದ್ದರೆ ಕಾಡಿಗೈದಿ ದೊಡ್ಡ ಮಡುವ ಸೇರುವುದು 3 ನರಹರಿಯೆಂಬ ಕುಣಿಕೆಯ ಗೈದು ತ್ವರಿತದಿ ತುರಗದ ಕೊರಳಿಗೆ ಬಿಗಿದು ಕರದೊಳಗಿರುವ ಕಡಿವಾಣ ಒಂದಿಡಿ ನೆರೆ ಭಕ್ತಿಪಾಶದಿ ತುರಗವ ಸೆರೆಗೈ 4 ನಾರಾಯಣಾ ಎಂಬ ನೀರ ಕುಡಿಸುತಲಿ ಶ್ರೀರಮಣ ಎಂಬ ಹುರಳಿಯ ನಿಡುತೆ ಮಾರ[ಮಣ] ಎಂಬ ತೃಣವನೆಣಿಸಿ ದಿವ್ಯಾ ಕಾರದಿ ಮಾಂಗಿರಿರಂಗಗರ್ಪಿಸಿರೋ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಔತುಕೊಂಡಿ ಯಾಕೊ ನರಹರಿಪ್ರಾರ್ಥನೆಯನ್ನು ಕೇಳೊ ಸ್ವಾಮಿ ಪವೇದ ತಂದುಭಾರಪೊತ್ತುಕೋರೆ ತೋರಿ ಕರುಳ ಬಗೆದುಬೇಡಿ ಭೂಮಿ ದೂಡಿನೃಪರಸಾಗರವ ಬಂಧಿಸಿದ ಭಯವೋ 1ಕದ್ದು ಬೆಣ್ಣೆ ಕಳ್ಳನೆನಿಸಿವದ್ದು ತ್ರಿಪುರಾಸುರರ ಸದೆದುಹದ್ದನೇರುವುದನೆ ಬಿಟ್ಟುಹಯವನೇರಿದ ಭಯವೋ ಸ್ವಾಮಿ 2ತರಳಗೊಲಿದು ಬರಲು ನಿನ್ನಇರಿಸಿ ಸ್ನಾನಕೆನುತ ಪೋಗಿತ್ವರದಿ ಬಂದು ನೋಡಲು ಅದ್ಭುತದಿ ಬೆಳೆದ ಭಯವೋ ದೇವ 3ನಿಲುಕದಿರಲು ನಿನ್ನವದನಯುವಕ ನೋಡಿ ಮೊರೆಯನಿಡಲುತವಕಿಸುವಿ ಬಾಲಕನೆ ನಿನ್ನಸಮಕೆ ಎನ್ನ ಮಾಡಿಕೊ ಎಂದು 4ಸಿರದಿ ಕರವನಿಡುತ ತನ್ನಸಮಕೆ ಬರುವ ತೆರದಿ ನಿನ್ನಸಿರವ ಪಿಡಿದು ಬಿತ್ತಿ ಸ್ತುತಿಸೆಕುಳಿತೆ ಕೂಡಲಿಯ ತೀರದಲಿ 5ಭಕ್ತರೆಲ್ಲ ನೆರೆದು ನಿನ್ನಭಕ್ತಿಪಾಶದಿಂದ ಬಿಗಿದುಇಚ್ಛೆ ಬಂದ ತೆರದಿ ಕುಣಿಸೆಮೆಚ್ಚಿಅವರಪೊರೆವೆÀ ದೇವ6ಬಂದ ಜನರು ಛಂದದಿಂದತುಂಗಭದ್ರೆ ಸಂಗಮದಲಿಮಿಂದು ನಿನ್ನ ವಂದಿಸುವರೊತಂದೆ ಕಮಲನಾಭವಿಠ್ಠಲ 7
--------------
ನಿಡಗುರುಕಿ ಜೀವೂಬಾಯಿ