ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅ. ಗಣಪತಿ - ಸರಸ್ವತಿಯರು ಶ್ರೀ ಗಣಪತಿ ಓಂ ನಮೋನಮೋ | ಜಯ ಶ್ರೀ ಗಣಪತಿ ಓಂ ನಮೋನಮೋ ಪ ಅಗಜಾವರಸುತ | ನಿಗಮಾಗಮನುತ | ಯೋಗಿಗಳರಸನೆ | ಭಾಗವತರ ಪ್ರೀಯ ಅ.ಪ ಶುಭ | ಲಗ್ನಪ್ರದಾಯಕ | ಭಗ್ನದುರಿತ ನಿಜ | ಮಗ್ನ ಪ್ರಭಾಕರ1 ವಿದ್ಯಪ್ರದಾಯಕ | ಬುದ್ಧಿ ಪ್ರದಾಯಕ | ಸಿದ್ಧಿಸಂಪದ ಆಯುರ್ ವೃದ್ಧಿ ಪ್ರದಾಯಕ 2 ಶಕ್ತಿ ಪ್ರದಾಯಕ | ಸೌಖ್ಯಪ್ರದಾಯಕ | ಭಕ್ತಿದಾಯಕ ನಿಜ | ಮುಕ್ತಿದಾಯಕ ನಮೋ 3 ಋಣಬಂಧಂಗಳ | ಗುಣದಿಂ ಬಿಡಿಸುತ್ತ | ತ್ರಿಣಯಕುಮಾರನೆ | ಪ್ರಣತನ ಪಾಲಿಸೋ 4 ಭವ ಭಯ ಹರ | ತ್ರೈಭುವನಜನಾರ್ಚಿತ | ಕವಿಸುತಲೋಲನೆ | ಶಿವಸದಾನಂದನೆ 5
--------------
ಸದಾನಂದರು
ಉಗಾಭೋಗ ಭಕ್ತಿದಾಯಕ ಕೇಳೊ ನಿನ್ನನು ಒಲಿಸಲು ಶಕ್ತಿ ಎನಗೆ ಇಲ್ಲ ಸರ್ವೇಶ್ವರ ಭಕ್ತಿಪಾಶದಿ ನಿನ್ನನುಕ್ತಿಯಿಂದಲಿ ಬಿಗಿವೆ ಮುಕ್ತಿಗೊಡೆಯ ಹೃದಯ ಮಧ್ಯದಿ ಬಂಧಿಸುವೆ ಶಕ್ತಿ ನಿನಗಿಲ್ಲ ಬಿಡಿಸಿಕೊಳ್ಳಲು ಇನ್ನು ಯುಕ್ತಾಯುಕ್ತ ತಿಳಿಸಿ ಉದ್ಧರಿಸಬೇಕಿನ್ನು ಶಕ್ತನಿಲ್ಲವೊ ನಿನಗೆ ಸರಿ ಜಗದೊಳು ಮಹ ಸಿರಿ ಗೋಪಾಲಕೃಷ್ಣವಿಠ್ಠಲಾ
--------------
ಅಂಬಾಬಾಯಿ
ದುರಿತ ನಿವಾರಣಗೆ ಪಮಾಯಾರಹಿತನಿಗೆ ಮನಕಗೋಚರನಿಗೆಕಾಯ ಕರಣ ಕೃತ್ಯ ದೂರನಿಗೆಹೇಯಾದಿ ಭೇದ ರಹಿತನಿಗೆ ನಿಜ ಭಕ್ತಿದಾಯಕನಾದ ಶ್ರೀ ಗುರುವರ್ಯಗೆ 1ಜ್ಞಾನಸ್ವರೂಪಗೆ ಜ್ಞಾನದಾಯಕನಿಗೆಜ್ಞಾನಶಕ್ತಿಯೊಳೊಡಬೆರದಿಹಗೆಜಾನಿಸುತಿಪ್ಪರಜ್ಞಾನವಿರೋಧಿಗೆತಾನೆ ತಾನಾಗಿ ನಲಿವ ಮೂರ್ತಿಗೆ 2ಸ್ವಾನುಭವಾನಂದ ಪರಿಶುದ್ಧನಾದಗೆದೀನಜನರ ಪರಿಪಾಲಿಪಗೆಮಾನರಹಿತನಿಗೆ ಮಾನ್ಯ ಸನ್ನುತನಿಗೆಭಾನುವಿನಂದದಿ ಹೊಳೆವನಿಗೆ 3ಪುಣ್ಯ ಪಾಪಗಳೆಂಬ ಕಣ್ಣಿಯ ಕಟ್ಟನುಚೆನ್ನಾಗಿ ಕಳಚಿದ ಚಿನ್ಮಯಗೆತನ್ನವರನ್ಯರೆಂತೆಂಬ ಭೇದವ ಬಿಟ್ಟುತನ್ನಂತೆ ತನ್ನವರನು ಮಾಳ್ಪಗೆ 4ಸುರತರು ರೂಪಗೆ ಸುರಭಿಯಂತಿರುವಗೆಪುರುಷಾರ್ಥ ದಾನಿಗೆ ಪುಣ್ಯಾತ್ಮಗೆತಿರುಪತಿ ನಿಲಯ ಶ್ರೀ ವೆಂಕಟರಮಣಗೆಗುರು ವಾಸುದೇವ ರೂಪಿನ ದೇವಗೆ 5ಕಂ||ಇಂತೀ ಪೂಜಾ ಸ್ತುತಿಗಳಸಂತಸದಿಂ ಪಾಡಿ ಪೊಗಳಿ ಕೇಳುವ ಜನರಿಗೆಸಂತತ ಕಾಮಿತ ವರಗಳಸಂತೋಷದಿ ಕೊಡುವ ನೊಲಿದು ವೆಂಕಟರಮಣಂಓಂ ಪರಾತ್ಪರಾಯ ನಮಃ
--------------
ತಿಮ್ಮಪ್ಪದಾಸರು
ನಾನೇನು ಬೇಡಿದೆನೋ ರಂಗಯ್ಯ ನೀನೆನ್ನ ನೋಡವಲ್ಲ್ಯಾಕೋ ಪ ಹಾನಿ ಮಾಡೆ ಮಹಹೀನಭವಸಾಗರ ಮಾನದಿಂ ಗೆಲಿಸೆಂದು ನಾನಿಷ್ಟೇ ಬೇಡುವೆ ಅ.ಪ ನಿಗ್ರಹಿಸಿ ಸ್ಥಿರಪದನುಗ್ರಹಿಸಿ ಪೊರೆಯೆಂದೆನೆ ಸುಗ್ರೀವನಂತೆನ್ನ ಆಗ್ರಜನ ಕೊಂದು ಕಪಿ ದುರ್ಗಕ್ಕಧಿಪತಿಯೆನಿಸೆಂದಾಗ್ರಬಟ್ಟೆನೊ ನಿನಗೆ 1 ಕುಲವ ನಿರ್ಮೂಲ ಮಾಡಿ ಇಳೆ ಪಟ್ಟಕ್ಕೆ ಸ್ಥಿರವಾಗಿ ನಿಲಿಸು ಎನಗೆಯೆಂದು ಸುಲಭದಿಂ ಬೇಡಿದೆನೆ ಒಲಿದು ಸಾರಥಿಯಾಗಿ ಕುಲದವರ ಸವರೆಂದು ನಳಿನಾಕ್ಷ ತವಪಾದದೊಳು ಬೇಡಿದೆನೇನೋ 2 ಚಿತ್ತಜಪಿತ ನಿನ್ನ ಸತ್ಯ ಬಿರುದುಗಳು ನಿತ್ಯ ನಿತ್ಯದಿ ಬಿಡದೆ ಶಕ್ತಿಯಿಂ ಪೊಗಳುವೆ ಭಕ್ತಿದಾಯಕ ನಿನ್ನ ಯುಕ್ತ್ಯಾರುಬಲ್ಲರು ಮುಕ್ತಿ ದಯಮಾಡೆಂದು ಪ್ರಾರ್ಥಿಪೆ ಶ್ರೀರಾಮ 3
--------------
ರಾಮದಾಸರು
ನಿಖಿಲಾತ್ಮ ನಿಖಿಲಾತ್ಮ ಅಖಿಲಬ್ರಹ್ಮಾಂಡಪತಿ ಸಲಹು ಸರ್ವೋತ್ತಮ ಪ ಮಂದರಧರ ಎನ್ನ ಮಂದಮತ್ಯಳಿದಾ ನಂದ ಮತಿಯಿತ್ತು ಚೆಂದದಿಂ ರಕ್ಷಿಸು 1 ನಿತ್ಯನಿರುಪಮ ಸತ್ತು ಚಿತ್ತ ನಿಮ್ಮ ಭಕ್ತಿ ಭಜನೆ ಎನ್ನ ಚಿತ್ತಕ್ಕೆ ದಯಮಾಡು 2 ಬಗೆದು ಎನ್ನಂತರಂಗzಗಲದೆ ನಿಂತು ನಿಜ ಸುಗುಣವಿತ್ತು ಪೊರೆ ಸುಗುಣಾಂಬುಧಿ 3 ಕಾಮಿತಜನಕಲ್ಪ ಕಾಮಧೇನು ಎನ್ನ ಕಾಮ ಪೂರೈಸಿ ನಿನ್ನ ನಾಮವಿತ್ತು ಕಾಯೊ 4 ಭಕ್ತಿದಾಯಕ ನಿನ್ನ ಭಕ್ತಿಯಿಂ ಭಜಿಸುವೆ ಸತ್ಯ ಶ್ರೀರಾಮ ನಿತ್ಯಮುಕ್ತಿಯಿತ್ತು ಪೊರೆ 5
--------------
ರಾಮದಾಸರು
ಲಕ್ಷ್ಮೀಶ ಗೋವಿಂದ ವಿಠಲ ಪೊರೆ ಇವಳಾ ಪ ಪಕ್ಷ್ಮಗಳು ಅಕ್ಷಿಗಳ ಅಗಲದಿಪ್ಪಂತೇ ಅ.ಪ. ಕುಕ್ಷಿಯಲಿ ಜಗಧರಿಪ ಪಕ್ಷಿವಾಹನ ದೇವಅಕ್ಷರೇಡ್ಯನೆ ಕರುಣದೀಕ್ಷಿಸುತ ಇವಳ |ರಕ್ಷಿಪುದು ಸುಜ್ಞಾನ ಭಕ್ತಿದಾಯಕನಾಗಿಕಕ್ಷೆತರತಮ ಜ್ಞಾನ ಭೇದಪಂಚಕನರುಹಿ 1 ಪತಿಯೆ ಪರದೈವವೆಂಬುನ್ನತದ ಮತಿಯಿತ್ತುಪಥತೋರೊ ಸದ್ಗತಿಗೆ ಸರ್ವವ್ಯಾಪಕನೇ |ಹಿತದಿಂದ ಬಯಸುವಳು ತವಪಾದ ದಾಸ್ಯವನುಕೃತಿ ಪತಿಯೆ ನೀನಿತ್ತು ಸಲಹ ಬೇಕಿವಳಾ 2 ವಾಗ್ದೇವಿ ಪತಿ ಪ್ರೀಯಕೃಪೆಗೈದು | ತವಪಾದ ಹೃದುಹದಿ ನೋಳ್ಪ |ಸುಪಥವೆನೆ ಹರಿಗುರೂ ಸದ್ಭಕ್ತಿ ಕರುಣಿಪುದುವಿಪಗಮನ ಹಯವದನ ಶ್ರೀ ಲಕ್ಷ್ಮೀ ಸದನಾ 3 ಅಂಕಿತಿಲ್ಲದ ದೇಹ ಸಾಧನಕೆ ಸಲ್ಲದೆನೆಅಂಕಿತವ ವಿತ್ತಿಹೆನು ಗುರುಕರುಣದೀ | ನಿಂತು ನೀನಿವಳಲ್ಲಿ ತೋರು ತವ ಮಹಿಮೆಗಳಸಂತತದಿ ನಿನ್ನಂಘ್ರಿ ಸ್ಮರಣೆ ಕರುಣಿಸುತ 4 ಸರ್ವ ಶ್ರುತಿ ಸಮ್ಮತದ ಪವನಮತ ದೀಕ್ಷೆಯನುಸರ್ವ ಕಾರ್ಯದಿ ನಿನ್ನ ಸೇವೆ ಮತಿಯ |ಸರ್ವದಾ ಕರುಣಿಸುತ ಪೊರೆ ಎಂದು ಭಿನ್ನೈಪೆಪವನಾಂತರಾತ್ಮ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು