ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಚಿಂತಾಮಣಿಯ ನರಸಿಂಹದೇವರು) ಚಿಂತಾಮಣಿ ನರಸಿಂಹನ ನೆನೆದರೆ ಚಿಂತಿತ ಫಲವೀವನು ಭ್ರಾಂತ ಬುದ್ಧಿಯೊಳನ್ಯ ದೈವವ ಭಜಿಸದೆ ಕಂತು ಜನಕ ಲಕ್ಷ್ಮೀಕಾಂತನ ನೆರೆನಂಬು ಪ. ಜಲಜ ಸಂಭವ ಶಂಭು ಬಲವೈರಿ ಮುಖದೇವ- ರ್ಕಳನೆಲ್ಲ ಸುಲಭದಿ ಸಲಹುವ ದೊರೆಯು ಕಲಿಕೃತ ಮಲವನ್ನು ಕಳವನು ನಿರತ ಬೆಂ ಬಲವಾಗಿ ದುರಿತಾಳಿಗಳ ಓಡಿಸುವನು ಕಳೆಯ ಪುರದಲಿ ನೆಲೆಯದೋರುವ ಚೆಲುವ ಲಕ್ಷ್ಮೀನಿಲಯ ಮೂರುತಿ ಯೋಗಿನಿಗಣ ಭಯಕ್ಕಾಗಿ ಸಂಸ್ತುತಿವೇದ 1 ನಾಗಭೂಷಣ ನಮ್ಮುದಾಗಿ ರಕ್ಷಿಸೀದ ವಾಗೀಶ ಪದಯೋಗ್ಯನಾಗಿ ಭೂಮಿಗೆ ಬಂದ ಯೋಗೀಶ ವಾದಿರಾಜರಿಗೊಲಿದನಾ ಬೇಗದಲಿ ಭಕ್ತಾಳಿ ರಕ್ಷಣ- ರಾಗಿಯೆನಿಪ ವಿರಾಗಿ ಹೃದ್ಗತ 2 ಶಂಖಾರಿ ಪದ್ಮ ಗದಾಧರ ನಿಜ ಜನ ಶಂಕಾನಿವಾರ ಶಂಕರ ವರದಾ ಲಿಂಗ ಸುಲಾಲಿತ ಪ್ರಲ್ಹಾದ ರಮಾಕುಚ ಕುಂಕುಮಲಿಪ್ತಾ ವಕ್ಷೋವೀವರ ಶಂಕಿಸದೆ ಸಕಲಾರ್ಥವೀವ ಮೃ- ಮಾಧವ ವೆಂಕಟೇಶ್ವರ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗೋವಿಂದ ಗೋವಿಂದ ಗೋಕುಲಾನಂದ ದೇವೇಶ್ವರಾನಂದ ಪಾದಾರವಿಂದ ಪ ಲಾವಣ್ಯ ಪರಿಪೂರ್ಣ ಸಚ್ಚಿದಾನಂದ ಶ್ರೀವೇಣುಗೋಪಾಲ ಶೌರೇ ಮುಕುಂದ ಅ.ಪ ನೀನೇ ಗತಿ ನೀನೇ ಮತಿ ನೀನೆನ್ನ ಪ್ರೇಮಾ ನೀನೆನ್ನ ತಾಯ್ತಂದೆ ಲೋಕಾಭಿರಾಮಾ ನೀನೆನ್ನ ಕರುಣದಲಿ ಕಾಯೋ ಶ್ರೀರಾಮ 1 ಮಂಗಳಾಂಗನು ನೀನು ಕಮಲಾಯತಾಕ್ಷ ಮಂಗ ಮೂಢನು ನಾನು ಸಿರಿದೇವಿ ಪಕ್ಷ ಶೃಂಗಾರ ಪೂರ್ಣನೀ ಕಾಮ್ಯಾರ್ಥದಕ್ಷ ಮಾಂಗಿರಿಯ ರಂಗ ಭಕ್ತಾಳಿ ಸಂರಕ್ಷ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್