ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉರುಟಣೆಯ ಹಾಡು ಜಯಜಯ ಸಾರಸನಯನ ಜಯಜಯ ವಾರಿಧಿಶಯನ ಜಯಜಯ ಲಕ್ಷ್ಮೀರಮಣ ಜಯ ಭಕ್ತಾಭರಣ ಪ. ಸ್ಮರತಾತಾ ಶ್ರೀಕಾಂತ ವರದಾತಾ ರಘುನಾಥ ವರಕÀಪೋಲವ ತಾರೈ ಅರಿಸಿನ ಹಚ್ಚುವೆನು 1 ಶೌರಿ ಸುರರಿಪುಸಂಕುಲ ವೈರಿ ಕರಪಲ್ಲವತೋರೈ ಅರಿಸಿನ ಪೂಸುವೆನು2 ಪಾದಾಪ ಹೃತಶಾಪ ಪರಮಪಾವನರೂಪ ಪಾದಪದ್ಮವ ತಾರೈ ಪೂಜಿಪೆ ನಾನೊಲವಿಂ3 ಖಲದೈತ್ಯಕುಲಕಾಲ ಬಾಲೇಂದು ನಿಭಫಾಲ ಸ್ಥಳದೊಳುಮಿಗೆ ಪೊಳೆವ ತಿಲಕವ ತಿದ್ದುವೆನು 4 ಶಂಭುಸನ್ನುತನಾಮ ಜಂಭಾರಿನುತರಾಮ ಕಂಬುಕಂಧರ ತೋರೈ ಗಂಧವ ಹಚ್ಚುವೆನು 5 ಕಮನೀಯ ಮೃದುಲಾಂಗ ಕಮಲಾಕ್ಷ ಶ್ರೀರಂಗ ನಳವಡಿಪೆ ನಿನ್ನೀಕೊರಳೊಳು ಕಮಲಮಾಲೆಯ 6 ವರಶೇಷಾಚಲವಾಸ ಶರದಿಂದುನಿಭಹಾಸ ಕರುಣಿಸುನೀಂಹೃದಯೇಶ ತರಣಿಕುಲಾವತಂಸ 7
--------------
ನಂಜನಗೂಡು ತಿರುಮಲಾಂಬಾ
ಜಯಜಾನಕೀರಮಣ ಜಯಕೌಸ್ತುಭಾಭರಣ ಪ ಜಯ ಪಾವನಚರಣ ಜಯ ಕೌಸಲ್ಯಾನಂದವರ್ಧನ ಜಯ ಭಕ್ತಾಭರಣ ಅ.ಪ. ಜಗದೋದ್ಧರಣ ಅಪಾರಕರುಣಾ ಅಗಜರ್ಚಿತ ಚರಣ ಖಗೇಶಗಮನ ಜಲನಿಧಿಶಯನ ಸುರರಿಪು ಸಂಹನನ 1 ಸೂನೃತಪಾಲ ಜಾನಕೀಲೋಲ ದೀನಜನಾವಾಲ ದಾನವಕಾಲಾ ಶ್ರೀವನಮಾಲಾ ಮಾನಿತ ಗುಣಶೀಲಾ 2 ವಾಸವ ಪರಿತೋಷ ದೋಷವಿನಾಶ ದಶಶಿರಧ್ವಂಸ ಮುನಿಜನ ಮಾನಸಹಂಸ 3
--------------
ನಂಜನಗೂಡು ತಿರುಮಲಾಂಬಾ
ರಂಗಾ ಮನೆಗೆ ಬಂದ ಪರಮ ಮಂಗಳದಾಯಿ ಹಿಂಗಿತು ದಾರಿದ್ರ್ಯವಿನ್ನು ಶೃಂಗಾರ ಭುಜಂಗ ಶಾಯಿ ಪ. ಪದ್ಮನಾಭ ಸಿರಿನಲ್ಲಕೃಷ್ಣ ತನ್ನ ಪಾದ ಪಲ್ಲವೆ ಶರಣೆಂದು ನಿಲ್ಲೆ ಧೈರ್ಯದಿ ಮೆಲ್ಲ ಮೆಲ್ಲಕಾಗಿ ತನ್ನ ವಲ್ಲಭೆಯ ಕೂಡಿ ಎನ್ನ ಸೊಲ್ಲ ಲಾಲಿಸುತ ಕಂಸದಲ್ಲಣ ತಡವಿಲ್ಲದಂತೆ 1 ಆರುವೆನನೆಂಬ ಹುಣ ಘೋರಭಾವದಿಂದಲುಂಡು ಗಾರುಮಾಳ್ಪ ಸಮಯದಲ್ಲಿ ಚೀರುತಿರುವುದ ಮಾರಜನಕ ಲಾಲಿಸಿ ಕೃಪಾರಸದಿ ಸಲಹಿ ನಿಜ ಪಾ ದಾರವಿಂದ ಯುಗ್ಮವನ್ನು ತೋರಿ ತಿರುಗಿ ಕಳುಹಿದಂಥ 2 ಭಕ್ತಾಭರಣನೆಂಬ ಬಿರುದ ವ್ಯಕ್ತವಾಗಿ ತೋರಿ ಸರ್ವೋ ದ್ವøಕ್ತ ಮಹಿಮ ತನ್ನೊಳ್ಪರಮಾ ಮತಿಯನಿತ್ತು ಮಾಯಾ ಶಕ್ತಿಯರಸ ವೆಂಕಟೇಶ ನಿತ್ಯ ಮುಕ್ತ ರಮೆಯ ಕೂಡಿ ನಗುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹನುಮ-ಭೀಮ-ಮಧ್ವರು ಅಖಿಳ ಬೊಮ್ಮಾಂಡ ನಾಯಕ ಸಕಲ ಜೀವೋತ್ತುಮ ಪಾದ ನಿಖಿಳ ಲೋಕವ್ಯಾಪ್ತಾ ಲಕುಮಿರಮಣನ ಪ್ರಾಣ ಸಂಭೂತ ಸುಖಙÁ್ಞನಮಯ ಸ್ವರೂಪ ಸುಮನೋತ್ತಂಸ ಶಿಖಿಸಖೋದಿತರವಿ ಪ್ರಕರ ಸನ್ನಿಭ ಮುಖ ಸುಖಪೂರ್ಣ ಶುದ್ಧ ಸತ್ತ್ವ್ವಶರೀರ ಆಖಣಾಶ್ಮ ಸಮಚರಣ ಭಕ್ತಾಭರಣ ಲೋಕೈಕ ವೈದ್ಯಾಭಾರತೀಕಾಂತಾ ಲೌಕಿಕ ಸುಖದಾತಾ ಪ್ರಖ್ಯಾತಾ ಕಾಕೋದರ ಶಾಯಿ ನಮ್ಮ ಗುರುಜಗನ್ನಾಥವಿಠಲನಾ ಲೋಕನವಿತ್ತು ಪೊರೆಯೋ ಪ್ರಾಣರಾಯ
--------------
ಗುರುಜಗನ್ನಾಥದಾಸರು