ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೋಷನಾಶ ಜಗದೀಶ ಈಶ ಕೈ ಲಾಸವಾಸ ಸದಾನಂದ ಹರ ಜೈಜೈ ಪರಮಾನಂದ ಪ ದಂಡಧರನೆ ಹರ ರುಂಡಮಾಲ ರುದ್ರ ಕೆಂಡನಯನ ಸದಾನಂದ ಹರ ಜೈ ಜೈ ಪರಮಾನಂದ1 ಗೌರಿನಾಥ ಪ್ರಭು ಮಾರಮರ್ದನ ಮೃಡ ವಾರಿಧಿಧರ ಸದಾನಂದ ಹರ ಜೈ ಜೈ ಪರಮಾನಂದ 2 ಅಗಜಾವಲ್ಲಭ ನಿಗಮವಂದ್ಯ ಭಕ್ತ ರಘನಾಶನ ಸದಾನಂದ ಹರ ಜೈ ಜೈ ಪರಮಾನಂದ 3 ಗಜಚರ್ಮಾಂಬರ ಸುಜನರ ಪರಿಪಾಲ ತ್ರಿಜಗಪೂಜ್ಯ ಸದಾನಂದ ಹರ ಜೈ ಜೈ ಪರಮಾನಂದ 4 ತ್ರಿಪುರಸಂಹರ ನುತ ಸುಫಲದಾಯಕ ಮಹ ಕೃಪಾಕರ ಶಿವ ಸದಾನಂದ ಹರ ಜೈ ಜೈ ಪರಮಾನಂದ 5 ನೀಲಕಂಠ ಭವಮಾಲನಿವಾರ ತ್ರಿ ಶೂಲಧಾರಿ ಸದಾನಂದ ಹರ ಜೈ ಜೈ ಪರಮಾನಂದ 6 ಚಂದ್ರಚೂಡ ಶರಣೇಂದ್ರ ಮೃಕಂಡುಮುನಿ ಕಂದಗೊಲಿದ ಸದಾನಂದ ಹರ ಜೈ ಜೈ ಪರಮಾನಂದ 7 ಫಾಲನಯನ ಸುಖದಾಲಯ ನುತಜನ ಮೇಲುಮಂದಿರ ಸದಾನಂದ ಹರ ಜೈ ಜೈ ಪರಮಾನಂದ 8 ಭವ ಭೂತಿಖ್ಯಾತ ಜಗ ದಾತ ಸದಾನಂದ ಹರ ಜೈಜೈ ಪರಮಾನಂದ 9 ನಾದತೀತ ಅಮರಾದಿವಿನುತ ಮಹ ದಾದಿದೇವ ಸದಾನಂದ ಹರ ಜೈ ಜೈ ಪರಮಾನಂದ 10 ನತಜನ ಸುಖದಾಶ್ರಿತ ಹಿತಮತಿ ದೇ ನುತಿಪೆ ಸತತ ಸದಾನಂದ ಹರ ಜೈಜೈ ಪರಮಾನಂದ 11 ಭಾಗವತರ ಪ್ರಿಯ ಭಗವತ್ಶಿಖಾಮಣಿ ನಾಗಭೂಷ ಸದಾನಂದ ಹರ ಜೈ ಜೈ ಪರಮಾನಂದ 12 ಖೊಟ್ಟಿಲೋಹ ಸುಟ್ಟು ಕಿಟ್ಟತೆಗೆವಂತೆನ್ನ ಭ್ರಷ್ಟತ್ವಕಳಿ ಸದಾನಂದ ಹರ ಜೈ ಜೈ ಪರಮಾನಂದ 13 ಹರಣಪೋದರು ಹರಿಚರಣಸ್ಮರಣೆಬಿಡ ದ್ವರವ ಪಾಲಿಸು ಸದಾನಂದ ಹರ ಜೈ ಜೈ ಪರಮಾನಂದ 14 ಲಿಂಗಪುರೇಶ ಶಿವಲಿಂಗರೂಪ ಭವ ಭಂಗಸಂಗ ಸದಾನಂದ ಹರ ಜೈ ಜೈ ಪರಮಾನಂದ 15 ಮಂದರಧರನಡಿ ಚಂದದೊಲಿಸಿ ಎನಗಾ ನಂದಕೊಡು ಸದಾನಂದ ಹರ ಜೈ ಜೈ ಪರಮಾನಂದ 16 ಮಂಗಳಮೂರುತಿ ತುಂಗವಿಕ್ರಮ ಶ್ರೀ ರಂಗ ರಾಮ ಭಕ್ತಾನಂದ ಹರ ಜೈ ಜೈ ಪರಮಾನಂದ 17
--------------
ರಾಮದಾಸರು
ನರಿತಿಹರಾರಿಹರು || ಪರತರಪಾವನನು ಪ ಭಗವದ್ರೂಪನು| ತ್ರಿಗುಣಾತ್ಮಕನು| ಜಗದಾಧಾರಕನು || ಜಗನ್ನಿವಾಸನು| ಜಗದಾನಂದನು| ಜಗದೀಶನು ನೀನು 1 ಜಗನಿಯಾಮಕ | ಜಗದುದ್ಧಾರಕ | ತ್ರಿಜಗವಿರಾಜಿತನು|| ಅಗಣಿತಮಹಿಮನು| ನಿಗಮಗೋಚರ | ತ್ರಿಜಗದ್ವಂದಿತನು2 ಭಕ್ತಾನಂದನು| ಭಕ್ತಾಧೀನನು| ಭಕ್ತಪರಾಯಣನು 3 ಶರಣಾಗತಪರಿ | ಪಾಲಕ | ನೀನು| ಕರುಣಾಸಾಗರನು|| ಪರಬ್ರಹ್ಮನು | ಪರಂಜ್ಯೋತಿಯು | ಪರಮಾತ್ಮನು ನೀನು4 ನಿನ್ನಯ ನಾಮೋ| ಚ್ಚರಿಸಿದ ಪಾಮರ | ಪಾವನನಾಗುವನು|| ನಾಮಾಮೃತವನು | ಸೇವಿಸೆ ಬ್ರಹ್ಮಾ| ನಂದವ ಪೊಂದುವನು5
--------------
ವೆಂಕಟ್‍ರಾವ್
ಶ್ರೀ ಮಹಾದೇವರ ಸ್ತೋತ್ರ ಗಿರಿಜಾಪತಿ ತವ ಚರಣಕೆ ಎರಗುವೆ ಕರುಣದಿಂದೆನ್ನನು ಪೊರೆ ಮಹಾದೇವ ಪ ನಂದಿವಾಹನ ಸುರವೃಂದ ಸುಪೂಜಿತ ಇಂದ್ರವಿನುತ ಭಕ್ತಾನಂದದಾಯಕನೇ 1 ಶುಂಡಾಲ ಮದಹರ ಚಂಡವಿಕ್ರಮ ಮೃಕಂಡಜ ವರದ 2 ಭೂಜಗ ವಿಭೂಷ ವಿಜಯ ಸುಪೋಷ ಅಜಿನಾಂಬರಧರ ತ್ರಿಜಗವಂದಿತನೆ 3 ಗರಕಂಧರ ಹರ ಸುರಗಂಗಾಧರ ಸ್ಮರಸಂಹರ ನಿಜ ಶರಣರಪಾಲ 4 ವರದೇಶ ವಿಠಲನನಿರುತದಿ ಸ್ಮರಿಸುವ ಕರುಣಾಕರಭವಹರ ಶಂಕರ ಶಿವ 5
--------------
ವರದೇಶವಿಠಲ