ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಣ್ಣಿಸಲಳವಲ್ಲ ನಿಮ್ಮ ಪ್ರ ಸನ್ನ ಮೂರುತಿ ಯಲಗೂರ ವಾಸ ಹನುಮಾ ಪ ಅಂಜನಿಯುದರದಲಿ ಜನಿಸೀ ತೇಜ ಪುಂಜ ರಾಮನ ಸೇವೆಯಲಿ ಮನನಿಲಿಸಿ ಕಂಜ ಛವನ ಪಟ್ಟ ಧರಿಸಿ ಬಲು ರಂಜನೆ ಮೆರೆದ ಭಕ್ತಾಗ್ರಣಿಯೆನಿಸಿ 1 ಜ್ಞಾನ ಭಕುತ ವೈರಾಗ್ಯದಲಿ ಸರಿ ಉರಗ ಲೋಕದಲಿ ಮಾನನಿಧಿಯೇ ವಿಕ್ರಮದಲಿ ಚರ ಣಾಗತೆ ರಕ್ಷಕ ನೇಮ ಬರದಿರಲಿ2 ಮೂರವ ತಾರದಿ ಬಂದು ದೀನೋ ದ್ಧಾರಣ ಮಾಡಿದೆ ಸದ್ಬೋಧ ಗರದು ಕಾರುಣಿ ಗುರುವಾಗೆಂದೆಂದು ಸಹ ಕಾರದಿ ಮಹಿಪತಿ ಸುತಗೊಲಿದಿಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಾರತಿ ರಮಣ ಪಾಲಿಸು ಕರುಣ ಶ್ರೀರಾಮನ ಪದ ನಿಜ ಶರಣ ಪ ಭವ ಸಂಹಾರಣ ಪರಾಶರ ಮತ ವಿಸ್ತರಣಅ.ಪ. ತ್ರೇತೆಯೊಳಂಜನೆ ಉದರದಿ ಜನಿಸಿ ಸೀತಾನಾಥನ ಪಾದಕೆ ನಮಿಸಿ ದೌತ್ಯವ ವಹಿಸಿ ಕೀರ್ತಿಯ ಗಳಿಸಿ ಭಕ್ತಾಗ್ರಣಿಯೆನಿಸಿದ ಗುರುವೆ 1 ದ್ವಾಪರದಲಿ ನೃಪ ಕುಲದಲಿ ಬಂದು ಪಾಪಿ ಮಾರ್ಗದ ಪ್ರಮುಖರ ಕೊಂದು ದ್ರೌಪದಿ ಬೇಡಿದ ಸುಮವನು ತಂದು ಶ್ರೀ ಪತಿಗರ್ಥಿಯ ಸಲಿಸಿದ ಗುರುವೆ 2 ಕಲಿಯೊಳು ಕುಜನರ ಮತಗಳ ಜರಿದು ಸುಲಲಿತ ಭಕ್ತಿಯ ಮತವನು ಒರೆದು ನೆಲೆಸಲು ಲಕ್ಷ್ಮೀಕಾಂತನ ಮಹಿಮೆಯ ತುಳುವ ವಿಪ್ರನಲಿ ಉದಿಸಿದೆ ಗುರುವೆ 3
--------------
ಲಕ್ಷ್ಮೀನಾರಯಣರಾಯರು