ದಾಸಜನರ ಪ್ರಾಣೇಶ ಬಾರೋ ಪ
ಉರಗಶಯನ ಬಾರೋ ಗರುಡಗಮನ ಬಾರೋ
ಶರಧಿಸುತೆಯ ಪ್ರಾಣದರಸ ಬಾರೋ 1
ಕಲುಷಹರಣ ಬಾರೋ ವಿಲಸಿತಮಹಿಮ ಬಾರೋ
ತುಲಸೀಮಾಲನೇ ಸಿರಿಲೋಲ ಬಾರೋ 2
ತರಳನುದ್ಧರ ಬಾರೋ ಕರಿಯಪಾಲನೆ ಬಾರೋ
ಮಾನವ ಕಾಯ್ದ ಕರುಣಿ ಬಾರೋ 3
ಭಾವಜನಯ್ಯ ಬಾರೋ
ಸೇವಕಜನ ಜೀವದಾಪ್ತ ಬಾರೋ 4
ಭಕ್ತವತ್ಸಲ ಬಾರೋ ಮುಕ್ತಿದಾಯಕ ಬಾರೋ
ಭಕ್ತಾಂತರಂಗ ಶ್ರೀರಾಮ ಬಾರೋ 5