ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತುಮಾತಿಗೆ ಮರೆಯಬೇಡ ಸೀತಾರಾಮನ ಪ ಮಾತರಿಶ್ವನಾಥನು ಪ್ರೀತನಾಗುವ ಅ.ಪ. ಹನುಮ ತಾನು ಭಕ್ತಿಯಿಂದ ನೆನೆದು ಸುಖಿಸುತ ವನಜ ಸಂಭವ ಪದವಿ ಪೊಂದಿದ ಘನತರನ ಮಾತ 1 ಅಬಲೆಯನ್ನು ಕುಲಕೆ ತಂದ ಪ್ರಬಲನ ಮಾತ ಶಬರಿಯೆಂಬ ಭಕ್ತಳಿಗೆ ಅಭಯವಿತ್ತನ ಮಾತ 2 ಅಂಗಜವೈರಿ ಶ್ರೀ ಶಿವನು ಹಿಂಗದೆ ಭಜಿಪ ರಂಗೇಶವಿಠಲನೆಂಬುವ ಮಂಗಳನ ಮಾತ 3
--------------
ರಂಗೇಶವಿಠಲದಾಸರು
ಅಸಾಧಾರಣ ವಿಠಲ ನೀ ಸಲಹೊ ಇವಳಾ |ಈಶಾದಿ ದಿವಿಜೇಡ್ಯ | ಶ್ರೀರಾಮಚಂದ್ರಾ ಪ ವಿಶ್ವ ಮೂರುತಿಯೇ |ಮೀಸಲ ಮನದಲಿರೆ | ನೀ ಸ್ವಪ್ನ ಸೂಚಿಸಿದೆಏಸು ಕರುಣವೊ ನಿನಗೆ | ದಾಸ ಜನರಲ್ಲೀ1 ಪರಿಪರಿಯ ಭವಣೆಗಳ | ಪರಿಹರಿಸಿ ಭಕ್ತಳಿಗೆಪೊರೆಯೊ ಕರುಣಾವನಧಿ ನರಹರಿಯೇ ಸ್ವಾಮೀ |ತರತಮದ ಜ್ಞಾನ ಸ | ದ್ವೈರಾಗ್ಯ ಭಕುತಿಯನುಕರುಣಿಸೀ ಪೊರೆ ಇವಳ | ಮರುತಾಂತರಾತ್ಮ 2 ಪಂಚಾತ್ಮಕನೆ ಪ್ರಾ | ಪಂಚ ಸುಖದೊಳಗೆ ತವಸಂಚಿಂತನೆಯ ಕೊಟ್ಟು | ಕಾಪಾಡೊ ಹರಿಯೇಪಂಚಭೇದವು ಅಂತೆ | ನೀಚೋಚ್ಚ ಕ್ರಮ ತಿಳಿಸೀವಾಂಛಿತಾರ್ಥದ ಕಳೆಯೊ | ಸಂಚಿತಾಗಮವಾ 3 ಸೃಷ್ಟಾದಿಕರ್ತನೇ | ಕೃಷ್ಣ ಮೂರುತಿ ದೇವಭ್ರಷ್ಟಸಂಗವ ಕೊಡವೆ | ಶಿಷ್ಟರಲ್ಲಿಡಿಸೋ |ಇಷ್ಟ ಮೂರ್ತಿಯ ಮನದಿ | ಸ್ಪಷ್ಟ ತೋರುತ ಸಲಹೋಶಿಷ್ಟ ಜನ ಸದ್ವಂದ್ಯ | ವಿಷ್ಣು ಪ್ರಾರ್ಥಿಸುವೇ 4 ಗೋವರ್ಧನೋದ್ದರಗೆ | ಭಾವುಕರ ಪರಿಪಾಲಪಾವನಕೆ ಪಾವನನೆ | ಕಾವುದೀಕೆಯನುದೇವನೀನಲ್ಲದಲೆ | ಕಾವರನ್ಯರನ ಕಾಣೆಗೋವಿದಾಂಪತಿ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು