ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗಾ ನಿನ್ನ ಕೊಂಡಾಡುವ ಮಂಗಳಾತ್ಮರ ಸಂಗಸುಖವಿತ್ತು ಕಾಯೋ ಕರುಣಾ ಸಾಗರ ಪ ಅರಿಯರೋ ನೀನಲ್ಲದೆ ಮತ್ತನ್ಯದೈವರ ಮರೆಯರೋ ನೀ ಮಾಡಿದ ಅನಿಮಿತ್ತೋಪಕಾರ ತೊರೆಯರೋ ನಿನ್ನಂಘ್ರಿ ಸೇವಾ ಪ್ರತಿವಾಸರಾ ಒರೆಯರೋ ಪರತತ್ವವಲ್ಲದೆ ಇತರ ವಿಚಾರಾ 1 ಮೂಕ ಬಧಿರರಂತಿಪ್ಪರೋ ನೋಳ್ಪಜನಕೆ ಕಾಕುಯುಕುತಿಗಳನ್ನು ತಾರರೋ ಮನಕೆ ಸ್ವೀಕರಿಸರನರ್ಪಿತ ಒಂದು ಕಾಲಕ್ಕೆ ಆ ಕೈವಲ್ಯಭೋಗ ಸುಖ ಅವರಿಗೆ ಬೇಕೆ 2 ಕಂಡಕಂಡಲ್ಲಿ ವಿಶ್ವರೂಪ ಕಾಂಬೋರೋ ಉಂಡು ಉಣಿಸಿದ್ದೆಲ್ಲ ನಿನ್ನ ಯಜ್ಞವೆಂಬರೋ ಬಂಡುಣಿಯಂದದಿ ನಾಮಾಮೃತವ ಸವಿವರೋ ಹೆಂಡಿರು ಮಕ್ಕಳು ನಿನ್ನ ತೊಂಡರೆಂಬೋರೋ 3 ಬಿಡರು ತಮ್ಮ ಸ್ವಧರ್ಮಗಳೇನು ಬಂದರೂ ಬಡರು ದೈನ್ಯ ಒಬ್ಬರಿಗೂ ಲೋಕ ವಂದ್ಯರೊ ಪಿಡಿಯರೋ ನಿನ್ನ ದ್ವೇಷಿಗಳಿಂದೇನು ಬಂದರು ಕೊಡುವರೋ ಬೇಡಿದಿಷ್ಟಾರ್ಥ ನಿತ್ಯಾನಂದರೂ 4 ಜಯಾಜಯ ಲಾಭಾಲಾಭ ಮಾನಾಪಮಾನಾ ಭಯಾಭಯ ಸುಖದುಃಖ ಲೋಷ್ಟ ಕಾಂಚನಾ ಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನಾ ಶ್ರೀಯರಸ ಚಿಂತಿಸುವರೋ ನಿನ್ನ ಅಧೀನ 5 ಈಶಿತವ್ಯರೆಂಬರೋ ಏಕಾಂತ ಭಕ್ತರೋ ದೇಶಕಾಲೋಚಿತ ಧರ್ಮ ಕರ್ಮಾಸಕ್ತರು ಆಶಾ ಕ್ರೋಧ ಲೋಭ ಮೋಹ ಪಾಶ ಮುಕ್ತರು ಈ ಸುಜನರೇವೆ ಶಾಪಾನುಗ್ರಹ ಶಕ್ತರು 6 ನಗುವರೋ ರೋದಿಸುವರೊ ನಾಟ್ಯವಾಡೋರೊ ಬಗೆಯರೋ ಬಡತನ ಭಾಗ್ಯ ಭಾಗವತರು ತೆಗೆಯರೋ ನಿನ್ನಲ್ಲಿ ಮನ ಒಮ್ಮೆಗಾದರೂ ಜಗನ್ನಾಥವಿಠಲ ನಿನ್ನವರೇನು ಧನ್ಯರೋ 7
--------------
ಜಗನ್ನಾಥದಾಸರು
ವಾರಿಧಿನಿಲಯನೆಂಥಾತ ತೀರದ ಮಹಿಮಗಾರನೀತ ಪ ಸಾರಿ ನಂಬಿ ಭಜಿಸಿ ಸತತ ಘೋರ ದುರ್ಭವಳಿರೋ ನಿರುತಅ.ಪ ದೇವದೇವ ದಿವ್ಯಚರಿತ ದೇವಿದೇವಕಿ ಗರ್ಭಸಂಜಾತ ಗೋವುಗಳನು ಕಾಯಿದಾತ ಗೋವಳರೊಡನೆ ಆಡಿದಾತ ಮಾವನಮರ್ದಿಸಿ ಭುವಿಗೀತ ಕೇವಲಸೌಖ್ಯ ನೀಡಿದಾತ 1 ಗೋವರ್ಧನಗಿರಿ ಎತ್ತಿದಾತ ಗೋವಳರನ್ನು ಸಲಹಿದಾತ ಮಾಯಾಪೂತನಿಯಸುವನೀತ ಮಾಯದಿಂದ ಹೀರಿದಾತ ತಾಯಿ ಯಶೋದಾದೇವಿಗೀತ ವಿಶ್ವ ತೋರಿದಾತ 2 ಅಸಮಾಯದಾಟವಾಡುತ ಶಿಶುವಾಗಿ ತೋರಿದಾತ ಕುಶಲಗೋಪಿಕಾಸ್ತ್ರೀಯರನೀತ ವಸನ ಕಳೆದು ನಿಲಿಸಿದಾತ ವಸುಧೆ ಭಾರವನಿಳುಹಿದಾತ ನೊಸಲಗಣ್ಣನ ಸಲಹಿದಾತ 3 ಬಾಲೆಗೋಪಿಯರಿಗೊಲಿದಾತ ಪಾಲಮೊಸರು ಬೆಣ್ಣೆ ಮೆಲಿದಾತ ಕೊಳಲನೂದುತ ನಲಿದಾಡಿದಾತ ಬಾಲನಾಗಿ ಲೀಲೆ ತೋರಿದಾತ ಕಾಳರಕ್ಕಸರ ಕುಲಭೀತ ಕಾಳಿಯನ್ನು ಮೆಟ್ಟಿ ಸೀಳಿದಾತ 4 ಹಿಡಿ ಅವಲಕ್ಕಿಗೆ ಒಲಿದಾತ ಮಾನವ ಕಾಯ್ದಾತ ದೃಢ ಭಕ್ತರೋಳ್ವಾಸವಾದಾತ ಇಡೀ ಭುವನಗಳ್ಹೊತ್ತಾಳುವಾತ ಅಜ ಸುರಾದಿವಂದಿತ ಒಡೆಯ ಶ್ರೀ ರಾಮಯ್ಯ ಮಮದಾತ 5
--------------
ರಾಮದಾಸರು
ಎಂಥಾ ಚಲುವ ಶ್ರೀಹರಿಭಕ್ತರೋದ್ಧಾರಿಎಂಥಾ ಚಲುವ ಶ್ರೀಹರಿಪಎಂಥಾ ಚಲುವ ಲಕ್ಷ್ಮೀಕಾಂತ ಶ್ರೀಭೂಸಹಿತಚಿಂತಿತಾರ್ಥವ ನೀವ ಕಂತುಪಿತನುಹರಿಅಪಚರಣದಂದುಗೆ ಗೆಜ್ಜೆಯು ಘಲುಘಲುರೆಂದುಮೆರೆವ ಪೈಜನರುಳಿಯು ಜರದ ಪೀತಾಂಬರವುನಡುವಿನ ಚಲ್ಲಣವು ಸಡಗರದಿಂದ ನಿಂತಮದನಗೋಪಾಲನು ಹೃದಯದಿ ಹಾರವುಕೌಸ್ತುಭಹೊಳೆಯಲು ವಿಧವಿಧಪದಕಗಳಿಂದಲಿ ಶೋಭಿಪಅದ್ಭುತ ಮಹಿಮನು ವಿಧಿಭವವಂದ್ಯನುಸದಮಲಕಾಯನು ಸಚ್ಚಿದಾನಂದನು 1ಕರದಿ ಕಂಕಣ ಭೂಷಣ ಕರುಣದಿ ಸುರರಪೊರೆವ ವೈಭವ ಕಾರಣಕರವತೋರುತ ತನ್ನಚರಣಸೇವೆಯ ಮಾಳ್ಪಪರಮಭಕ್ತರನೆಲ್ಲ ತ್ವರದಿ ಪಾಲಿಪೆನೆಂದುಸುರವರ ವಂದ್ಯನು ಪರಿಪರಿವರಗಳಕರದು ನೀಡುವಸಿರಿಕರಿರಾಜವರದನುಸರಸಿಜನಾಭಸನ್ಮಂಗಳ ಮಹಿಮನುಉರಗಗಿರಿಯ ಶ್ರೀವರಶ್ರೀನಿವಾಸನು2ಪಟ್ಟೆನಾಮವು ಘಣೆಯೊಳುಕಸ್ತೂರಿ ತಿಲಕ ಒಪ್ಪುತಿರೆ ವ್ಯೆಭವದೊಳುಸರ್ಪಶಯನ ಸರ್ವೋತ್ತಮ ಸಿರದೊಳುರತ್ನಕಿರೀಟನಿಟ್ಟು ಅತ್ಯಂತ ಶೋಭಿಸಲುಸುತ್ತಲ ಚಾಮರವೆತ್ತಿ ಬೀಸುತಿರೆನರ್ತನ ಗಾಯನ ವಿಸ್ತರಿಸಲು ಪುರು-ಷೋತ್ತಮ ತಾನಿರ್ಲಿಪ್ತನಾಗಿ ಸರ್ವಕರ್ತೃಕಮಲನಾಭವಿಠ್ಠಲ ಸರ್ವೋತ್ತಮ3
--------------
ನಿಡಗುರುಕಿ ಜೀವೂಬಾಯಿ
ದೇವರನಾಮ - ಶ್ರೀ ಸೇತುಮಾಧವ ಸ್ತೋತ್ರ62-1ಸೇತುಮಾಧವ ವಿಭುವೇ | ನಿನ್ನಯ ದಿವ್ಯವೃತತಿಜ ಪದಯುಗಳ |ಸತತ ನಂಬಿದೆ ಎನ್ನ ಹಿತದಿ ಪಾಲಿಸಿ ಸದಾಕೃತ ಕೃತ್ಯ ಧನ್ಯನ ಮಾಡಿ ಸಲಹೋ ಸ್ವಾಮಿ ಪಪುಟ್ಟಿದಾರಭ್ಯ ನಿನ್ನ | ನಾಮವ ಒಂದು |ತೃಟಿಯು ಭಜಿಸಲಿಲ್ಲವೋ |ವಿಠ್ಠಲರಾಯ ಪರಮೇಷ್ಟಿಯ ಪಿತ ಎನ್ನಕಷ್ಟಗಳಳಿದು ಸಲಹೋ ಸರ್ವೋತ್ಕøಷ್ಟ ||ಕೃಷ್ಣ ಕೃಷ್ಣಾವರದ ಅಜಮಿಳಭ್ರಷ್ಟತನವ ಎಣಿಸದೇ ಬಹುನಿಷ್ಟವಿಪ್ರಸುಧಾಮಗೊಲಿದತ್ರಿಧಾಮ ನಮೋ ಮಧ್ವೇಷ್ಟಪಾಹಿ1ಸೇತು ಸರ್ವಾಶ್ರಯನೇ | ನೀನೊಬ್ಬನೇ |ಮುಕ್ತಾ ಮುಕ್ತಾಶ್ರಯನು |ತ್ರಾತನೀನೇವೆ ಯೆಂದರಿತವರ ಭೀತಿಹರಪಾತ ಸರ್ವೋತ್ತಮ ಜಗದೇಕ ಈಶದ್ಯುಧರಾ ಪಾತಾಳ ಸರ್ವಾಧಾರನಾಗಿಹಪ್ರಭುವೇ ನಿನ್ನಯ ಅತಿ ಅಗಾಧಸುಮಹಿಮೆ ಅನಂತವು |ಮೋದಮಯ ದಶಶತಸಹಸ್ರಾನಂತರೂಪನೇ ||2ಹೀನಮಂದನು ನಾನೆಂದು | ದೂರನೀ ||ಎನ್ನ ಮಾಡದೇ ಸಲಹೋ |ಎನ್ನ ಹಿರಿಯರು ನಿನ್ನಚ್ಛನ್ನ ಭಕ್ತರೋಘನದಯಾಂಬುಧೇ ಗಂಗಾಜನಕ ಪಾವನ ನಾಮಾ |ಮನೋವಾಕ್ಕಾಯದಿ ನಿಂತು ಎನ್ನೊಳುನೀನೆ ಮಾಡಿ ಮಾಡಿಸುವುದೆಲ್ಲನಿನಗೆ ಸುಪ್ರೀತಿಯಾಗಲೋ ಮುಕ್ -ಕಣ್ಣ ವಿಧಿಪ ಶ್ರೀ ಪ್ರಸನ್ನ ಶ್ರೀನಿವಾಸ ಶ್ರೀಶ || 3
--------------
ಪ್ರಸನ್ನ ಶ್ರೀನಿವಾಸದಾಸರು