ಒಟ್ಟು 7 ಕಡೆಗಳಲ್ಲಿ , 4 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ದಿವಸ ಹೀಗೆ ಕಳೆಯಲೊ ಗೋಪಾಲಕೃಷ್ಣ ಎಷ್ಟು ದಿವಸ ಹೀಗೆ ಕಳೆಯಲೊ ಪ. ಎಷ್ಟು ದಿವಸ ಹೀಗೆ ಎನ್ನ ಸೃಷ್ಟಿಗೊಡೆಯ ಬಳಲಿಸುವೆಯೊ ಕಷ್ಟಪಡಲಾರೆ ಭವದಿ ದೃಷ್ಟಿಯಿಂದ ನೋಡಿ ಸಲಹೋ ಅ.ಪ. ನಾನಾ ಜನ್ಮದಿ ತೊಳಲಿಸಿ ಎನ್ನನು ನೀನೆ ತಂದೆಯೊ ಮಾನವತ್ವದಿ ನಾನು ಎಂಬುದು ಬಿಡಿಸಿ ಈಗ ನೀನೆ ಕರ್ತನೆನಿಸಿ ಕಾಯೋ1 ದೇಹಸ್ಥನೆಂದೆನಿಸಿ ಎನ್ನ ದೇಹ ಮಧ್ಯದಿ ಕಾಣದಿಹರೆ ದೇಹಗಳನು ಧರಿಸಲಾರೆ ದೇಹ ಮೋಹ ಬಿಡಿಸದಿಪ್ಪರೆ 2 ಭೃತ್ಯವತ್ಸಲನೆಂದು ನಿನ್ನ ಭಕ್ತರೆಲ್ಲರು ಕರೆಯುತಿಹರೊ ಪೊತ್ತ ಬಿರುದು ಬಿಡುವರೇನೊ ಭೃತ್ಯಳೆಂದು ಎನ್ನ ಸಲಹೊ3 ಪೋಗುತಿದÉ ದಿವಸ ನೋಡು ಬೇಗ ಬೇಗನೆ ದಯವ ಮಾಡು ಭೋಗದಲಿ ವೈರಾಗ್ಯ ನೀಡು ಭಾಗವತರ ಸಂಗ ಕೊಡು 4 ಕರ್ಮದಲ್ಲಿ ಶ್ರದ್ಧೆಯಿಲ್ಲ ಧರ್ಮದಲ್ಲಿ ಬುದ್ಧಿಯಿಲ್ಲ ನಿರ್ಮಲದ ಜ್ಞಾನವಿಲ್ಲ ನಿರ್ಮಲಾತ್ಮ ಬಲ್ಲೆಯಲ್ಲ 5 ಅಂಧಕಾರದಿ ಎನ್ನನಿರಿಸಿ ಚಂದವೇನೋ ಹೀಗೆ ಮಾಳ್ಪದು ಕರ್ಮ ಸ್ವೀಕರಿಸಿ ಮುಂದೆ ಕರ್ಮವಿಡದೆ ಸಲಹೋ 6 ಅಪಾರ ಜನುಮದಲ್ಲಿನ ಪಾಪ ಸಮೂಹಗಳ ತರಿದು ಶ್ರೀಪಾದ ಸ್ಮರಣೆ ನೀಡೋ ಗೋಪಾಲಕೃಷ್ಣವಿಠಲ 7
--------------
ಅಂಬಾಬಾಯಿ
ಗುರುವೆ ಪೂಜಿಪೆ ನಿಮ್ಮಯ ಚರಣಗಳನ್ನು ಗುರುವೆ ಭಜಿಪೆ ತಮ್ಮಯ ಚರಣಗಳನ್ನೂ ಪಪರಮತತ್ವದೊಳಿರುವ ನಿಜಗುರು ತುಲಸಿರಾಮರತೆರದಿ ನಮ್ಮಯದುರಿತಗಳ ಪರಿಹರಿಸಲೀತೆರ ರಂಗಸ್ವಾ'ುಗಳಾಗಿ ಬಂದಿರಿ 1ಪರಿಪರಿಯ ಇಚ್ಛೆಗಳೊಳಿರ್ದಸರಳಜೀವನಪಿಡಿದು ತಮ್ಮಯಚರಣಗಳ ಭಜಿಪುದಕೆ ಪರಮಾನಂದವ[ನರು'] ತೋರಿದಿರಿ ನಿಜಗುರು 2ಸರ್ವಜನರನು ಏಕಭಾವದಿಸ್ಮರಣೆಮಾಡುªತೆÉರದಿ ುೀಮ'ಪರಮಪುರುಷನ ದಿವ್ಯಮ'ಮೆಯಅರು'ದಿರಿ ತವಕರುಣದಿಂದಲಿ 3ರಾಮಕೋಟಿಯ ಸೇವೆಯನು [ನಮ್ಮ] ಚನ್ನಪಟ್ಣದ ಭಕ್ತರೆಲ್ಲರುಪ್ರೇಮದಿಂದಲಿ ಭಜನೆಮಾಡಿಕಾಮಜನಕನ ಕರುಣಪಡೆದರು 4ಪಾಮರನು ನಾನಾಗಿ ಈ ಮ'[ಯೊಳು]ಪ್ರೇಮದಿಂ ಗುರು ನಿಮ್ಮ ಕರುಣದಿರಾಮಕೃಷ್ಣದಾಸ [ನೆನಿಸಿ] ನುಡಿದೆನುನೇಮದಿಂ ಕೀರ್ತನೆಯ ರೂಪದಿ 5
--------------
ಮಳಿಗೆ ರಂಗಸ್ವಾಮಿದಾಸರು
ಬೇಗನೆ ಬಾರೊ ಶ್ರೀ ಹರಿಯನೆ ತೊರೋ ಶ್ರೀ ಗುರುವೇ ದಯದಿ ಪ. ಬೇಗನೆ ಬಾರೊ ಯೊಗಿಗಳೊಡೆಯ ನಾಗಶಯನ ಪ್ರೀತ ತ್ವರಿತದಿ ಅ.ಪ. ಭಕ್ತರೆಲ್ಲರು ನಿಮ್ಮ ದಾರಿಯನೆ ನೋಡುತಾ- ಸಕ್ತಿಯಿಂದಿರುತಿಹರೊ ಮೋದ ಗುರುವೆ ನಿಮ್ಮ ಶಕ್ತಿಗೆ ಎದುರ್ಯಾರೊ ಧರೆಯೊಳು 1 ಕಾಣದೆ ಕಂಗಳು ಕಾತರಗೊಳ್ಳುತ ತ್ರಾಣಗೆಡುತಲಿಹವೊ ಪ್ರಾಣವ ರಕ್ಷಿಪ ಪ್ರಾಣಪತಿಯ ಪ್ರಿಯ ಕಾಣೆ ನಾನನ್ಯರನಾ ಜಗದೊಳು 2 ಪರಮಪ್ರಿಯರು ಎಂದು ಪರಮ ಬಿರುದು ಪೊಂದಿ ಪರಮಾತ್ಮನನು ಕಂಡು ಪರಮಾತ್ಮ ತತ್ವ ಪರಮಯೊಗ್ಯರಿಗರುಹಿ ದುರಿತ ತ್ವರಿತದಿ 3 ಕಮಲಾಕ್ಷನನು ಹೃತ್ಕಮಲದಲಿ ಕಾಂಬ ಕಮಲಾಪ್ತ ಅತಿ ಪ್ರೀತ ಕಮಲಸಂಭವಪಿತ ಕಮಲಾಕ್ಷ ಹರಿಯ ಹೃ ತ್ಕಮಲದಲಿ ತೋರೋ ಗುರುವರ 4 ಗೋಪಾಲಕೃಷ್ಣವಿಠ್ಠಲನ ಸೌಂದರ್ಯದ ರೂಪವೆನಗೆ ತೋರೊ ತಾಪವ ಹರಿಸುತ ಕಾಪಾಡಬೇಕೆಂದು ನಾ ಪ್ರಾರ್ಥಿಸುವೆ ಗುರುವೆ ತ್ವರಿತದಿ 5
--------------
ಅಂಬಾಬಾಯಿ
ಭಜನೆ ಭಾಗ್ಯ ಒಂದೇ ಸಾಲದೇ | ಹರೀ ಪ. ಭಜಕರಾದವರಿಗೆ ಹಗಲು ಇರುಳು ಮಾಳ್ಪಾ ಭಜನೆ ಭಾಗ್ಯ ಒಂದೇ ಸಾಲದೆ ಅ.ಪ. ಭಕ್ತರೆಲ್ಲರು ಕೂಡೀ ಮುಕ್ತಿಗೊಡೆಯನ ಪಾಡಿ ಭಕ್ತಿ ಭಾಗ್ಯವ ಬೇಡಿ ನೃತ್ಯವ ಗೈಯುವಾ 1 ತಾಳ ತಂಬೂರಿ ಗೆಜ್ಜೆ ಮೇಳನದಿಂದಲೀ ತೋಳುಗಳೆತ್ತಿ ಪಾಡೀ ವೇಳೆಯ ಕಳೆವಂಥಾ 2 ಹಿಂದೆ ಮುಂದಾಡುವ ನಿಂದಕರಾ ನುಡಿ ಒಂದು ತಾರದೆ ಮನಕಾನಂದವ ಬೀರುವಾ 3 ಕಟ್ಟಳೆ ಮೀರದೆ ಬಿಟ್ಟು ಬಿಡದೆ ನಿತ್ಯ ನಿಷ್ಠೆಯಿಂದಲಿ ಗುರು ಕೊಟ್ಟ ಅಜ್ಞೆ ಎಂಬಾ 4 ಮೂರ್ತಿ ನಿಂತು ಒಳಗೆ ಹೊರಗೆ ಸಂತಸಪಡಿಸೆ ಏಕಾಂತ ಭಕ್ತರು ಮಾಳ್ಪ 5 ಸಾಸಿರ ಸತ್ಕರ್ಮ ಮೀಸಲು ಫಲಗಳೂ ಶ್ರೀಶನ ಧ್ಯಾನಕೆ ತ್ರಾಸಿಗೇರದೆಂಬ 6 ಪದ್ಧತಿಯಂತೆ ತಂದೆ ಮುದ್ದುಮೋಹನ್ನ ಗುರು ಪದ್ಮ ಪಾದಕೆ ಸೇರಿ ಪೊದ್ದಿದ ದಾಸ್ಯದ 7 ತ್ರಿಗುಣದ ಕಲ್ಮಶ ವಗೆದು ದೂರಕೆ ಮನ ಮಿಗಿಲಾಗಿ ಹರಿಪದ ತಗಲಿಕೊಂಬುವುದಕ್ಕೆ 8 ನರ್ತಗೈಯ್ಯುತ ಸುತ್ತಿ ಪ್ರದಕ್ಷಿಣೆ ಎತ್ತಿ ಸ್ವರವ ಹರಿ ಮೂರ್ತಿಯ ಪಾಡುವಾ 9 ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನನು ಇಟ್ಟು ಹೃತ್ಕಮಲದಿ ಮುಟ್ಟುವೋ ಹರಿ ಪುರ 10
--------------
ಅಂಬಾಬಾಯಿ
ಭಾಗ್ಯವಂತರಾರು ಪೇಳಿರೈ ಸದ್ಭಕ್ತರೆಲ್ಲರು ಪ ಭಾಗ್ಯವೊ ವೈರಾಗ್ಯವೊ ನಿಮ್ಮ ಯೋಗ್ಯತಾನುಸಾರ ಶ್ಲಾಘ್ಯವೆಂದರಿತವರು ಅ.ಪ ಧನಿಕನು ಪರರನು ಗಣಿಸದೆ ತ- ಹಣವುಯಿಲ್ಲದ ಸುಗುಣವಂತನು ತಾ ವನಜಾಕ್ಷನನೆನದೂ ಅನುದಿನದಿ ಸುಖಿಸುವನು1 ಭಾಗವತ ಜನ ವಿ- ರಾಗ ವೈಭೋಗದಿ ತ್ಯಾಗಿಗಳೆನಿಪರು 2 ತಾಮನೆಯೆನಿಸಿ ಧಾಮರಾಗಿಹರ್ ಕ್ಷೇಮವುಳ್ಳ ಸಾಧುಗಳು ನಿರತ ಗುರು- ರಾಮವಿಠಲನ ನಿಷ್ಕಾಮದಿ ಭಜಿಸುವರು 3
--------------
ಗುರುರಾಮವಿಠಲ
ಶ್ರೀಕರಾರ್ಚಿತ ರಂಗನಾಥ ಜಗದೇಕನಾಥ ಪ. ಪಾಕಶಾಸನವಂದ್ಯ ಪರಮ ಕಾರುಣ್ಯನಿಧಿ ಜೋಕೆಯಿಂ ಭಕ್ತರನು ರಕ್ಷಿಸಲು ಬಂದೆಯೊ ಅ.ಪ. ಸಿರಿ ಆಲದೆಲೆಯ ಮೇ- ಲೊಂದು ಬೆರಳನೆ ಚೀಪುತ ಮುಂದೆ ಶೇಷಶಯನನಾಗಿ ಬ್ರಹ್ಮನ ಪಡೆದು ಮಂದಹಾಸದಿ ನಲಿಯುತ ಇಂದಿರೆ ಸಹಿತಲಿರೆ ಭಕ್ತರೆಲ್ಲರು ಆಗ ನೋಡಲಿಲ್ಲೆಂದೆನುತ ಇಂದು ಈ ನಾಗರಾಜನ ಮಂಚವನೆ ಏರಿ ಸಿಂಧುಶಯನನೆ ಮಲಗಿದ್ಯಾ ಸ್ವಾಮಿ 1 ಅಜಗೆ ವೇದವನಿತ್ತು ಅಸುರನ್ನ ಕೊಂದು ನೀ ಭುಜಗಶಯನನೆ ಮಲಗಿದ್ಯಾ ಋಜುಗಣವಂದಿತನೆ ಬೆನ್ನಲಿ ಗಿರಿಪೊತ್ತ ಆಯಾಸದಿಂ ಮಲಗಿದ್ಯಾ ದ್ವಿಜಧ್ವಜನೆ ಭೂಮಿಯನು ಮೇಲೆತ್ತಿ ತಂದು ಸಾಕಾಗಿಲ್ಲಿ ಶಯನಿಸಿದೆಯಾ ಭಜಿಸಿದ ಬಾಲಕನ ಪಿತನೊಡನೆ ಕಾದಾಡಿ ಬಳಲಿ ನೀ ಪವಡಿಸಿದೆಯಾ ಸ್ವಾಮಿ 2 ಇಂದ್ರ ಪದವಿಗೆ ಬಂದ ಬಲೀಂದ್ರನ ನೆಲಕೊತ್ತಿ ಬಂದಿಲ್ಲಿ ಮಲಗಿಪ್ಪೆಯಾ ಕೊಂದು ಜನನಿಯ ಚಿಂತೆಯಿಂದ ಮನದಿನೊಂದು ಬಂದಿಲ್ಲಿ ಮಲಗಿಪ್ಪೆಯಾ ತಂದೆ ತಾಯಿ ಆಜ್ಞೆಯಿಂದ ಅಡವಿಯ ಅಲೆದು ಬಂದಿಲ್ಲಿ ಮಲಗಿಪ್ಪೆಯಾ ಮಂದರೋದ್ಧರ ಶ್ರೀಶ ಮಾವನ್ನ ಕೊಂದು ನೀ ಬಂದಿಲ್ಲಿ ಪವಡಿಸಿದೆಯಾ ಸ್ವಾಮಿ 3 ನಾರಿಯರ ವ್ರತ ಕೆಡಿಸಿ ನಾಚಿಕೆಯಿಂ ಬಂದು ಏರಿ ಮಂಚವÀ ಮಲಗಿದ್ಯಾ ಏರಿ ಕುದುರೆಯನು ದುಷ್ಟರ ಶಿರವ ತರಿಯುತ್ತ ಸೇರಿ ಶೇಷನ ಮಲಗಿದ್ಯಾ ಬಾರಿ ಬಾರಿಗೆ ಇಂಥ ಕಾರ್ಯಗಳ ಮಾಡಿಸಿ ಬಳಲಿಲ್ಲಿ ಮಲಗಿಪ್ಪೆಯಾ ನಾರದಾದ್ಯರ ಗಾನ ಕೇಳುತಾನಂದದಿಂ ನಿದ್ರೆಗೈಯುತ ಮಲಗಿದ್ಯಾ ಸ್ವಾಮಿ 4 ಭಕ್ತ್ರರಾಡುವ ಸಲಿಗೆ ಬಿನ್ನಪಕೆ ಬ್ಯಾಸತ್ತು ಯುಕ್ತಿಯಿಂ ಪವಡಿಸಿದೆಯಾ ಮುಕ್ತರ ಸ್ತುತಿಗೆ ನಿದ್ರೆಯು ಬಾರದೆಂತೆಂದು ಮುಕ್ತೇಶ ಇಲ್ಲಿ ಮಲಗಿದೆಯಾ ಎತ್ತ ನೋಡಲು ಮಾರ್ಗಬಿಡಳು ಕಾವೇರಿ ಎಂದು ಸೋತಿಲ್ಲಿ ಮಲಗಿಪ್ಪೆಯಾ ಚಿತ್ತಜಾಪಿತ ಸ್ವಾಮಿ ಭಕ್ತರೆಬ್ಬಿಸಲೆಂದು ಚಿತ್ತದಲಿ ಇಪ್ಪದೇನೋ ದೇವ 5 ಅಸುರರ ಕಾಟ ವೆಗ್ಗಳವಾಗೆ ಬಂದಿಲ್ಲಿ ಅಡಗಿ ನೀ ಮಲಗಿಪ್ಪೆಯಾ ಬಿಸಜನಾಭನೆ ನಿನ್ನ ಬಗೆಯರಿತು ಎಬ್ಬಿಸುವ ಬಲವಂತರನ್ಯಾರೆಲೊ ಶಶಿವದನ ಭಕ್ತರನುದ್ಧರಿಸಲೋಸುಗದಿ ಬಂದಿಲ್ಲಿ ಮಲಗಿಪ್ಪೆಯಾ ಭವ ಬಂಧನವ ಪರಿಹರಿಸಿ ಘಸನಗೊಳಿಸದಲೆ ಕಾಯೊ ಜೀಯ 6 ಏಳು ಫಣೆಯ ಸರ್ಪನ ಮೇಲೆ ಮಲಗಿ ಏಳು ಕಣ್ದೆರದು ನೋಡೋ ತಾಳಲಾರೆನೊ ನಿನ್ನ ಸೇವೆಯಗಲಿದ ದುಃಖ ಏಳು ಮನ್ನಿಸಿ ಪಾಲಿಸೊ ವ್ಯಾಳಶಯನನೆ ನಿನ್ನ ಸೇವೆಯನು ಎನ್ನಿಂದ ಲೀಲೆಯಿಂ ಸ್ವೀಕರಿಸೆಲೊ ಭಾಳ ಬೇಡುವದೇನೊ ಗೋಪಾಲಕೃಷ್ಣವಿಠ್ಠಲ ಈ ವ್ಯಾಳೆ ಎನ್ನ ಸಲಹೊ ಸ್ವಾಮಿ 7
--------------
ಅಂಬಾಬಾಯಿ
(ಅ) ಶ್ರೀಹರಿಸ್ತುತಿ87ಎಷ್ಟು ಆನಂದವೊ ಶ್ರೀಹರಿಯ ಭಜನೆ ಪದುಷ್ಟತರ ದೋಷಗಳು ಬಳಲುವಕಷ್ಟಗಳ ಪರಿಹರಿಸಿ ಸರ್ವೋತ್ಕøಷ್ಟ ಪದವಿಯ ಕೊಡುವ ಲಕ್ಷ್ಮೀಇಷ್ಟನಾರಾಯಣನ ಭಜನೆ 1ಪದ್ಮದಳನಯನ ಪ್ರತಿಷ್ಠೆಯಪದ್ಮಶಾಲಿಯ ಭಕ್ತರೆಲ್ಲರುಪದ್ಮನಾಭನ ಪ್ರೀತಿಮಾಡಿ ಸುಭದ್ರಸಂಪದ್ಯುಕ್ತರಾದರು 2ಮಂದಿರವು ಕಟ್ಟಿಸಿಯು ಪರಮಾನಂದದಿಂ ಉತ್ಸವವು ನಡಿಸಿದರೆಂದು ಕೇಳಿದ ಭಾಗ್ಯಶಾಲಿಗಳುಇಂದಿರೇಶನ ಕೃಪೆಯ ಪಡೆದರು 3ಅಂಬುಜೋದರದಾಸರೆಲ್ಲರುತಂಬುರೆಯು ಕರತಾಳವಾದ್ಯವಿಜೃಂಭಿಸಿ ಹರಿಸ್ಮರಣೆಯ ಮಾಡುತಸಂಭ್ರಮದಿ ಬಂದವರು ನೋಡಲು 4ವಾಸುಕೀನಗರೇಶ ದಾಸರದಾಸರಾಗಿಯು ತುಲಸಿರಾಮದಾಸ ಪರಮೋಲ್ಲಾಸದಿಂ ಶ್ರೀವಾಸುದೇವನ ಚರಣನಂಬಿದೆ 5
--------------
ತುಳಸೀರಾಮದಾಸರು