ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಕ್ಷಿಸೆ ಏಕನಾಥೆ ತಾಯೆ ದಯದಿಂದ ಎನ್ನನು ಸೊಕ್ಕಿದ ದೈತ್ಯ ಸಂಹಾರೆ ಶರಣ ಜನೋದ್ಧಾರೆ ಪ. ದುರಿತ ದುಃಖ ನಿವಾರಿ ಶರಣರ ಸಲಹುವ ದಾತೆ ಖಳರೆದೆಗಂತೆ ನಿಡಿ ಗುರುಳ ಬಾಲೆ ಪಲ್ಲವಪಾಣಿ ಸುರರ ನಾಯಕಿ ಅಖಿಲದೇವಮಾತೆ ವಿಖ್ಯಾತೆ 1 ಅಳುವಾಡುವ ರಂಗನ ಅದೇನರಿತು ಭಂಗ ಬಾಳ ಬಡಿಸಿದೆಯವ್ವ ಭಕ್ತರುದ್ಧಾರಿ ಕಾಳಗದೊಳು ಕಂಠೀರವೆ ಕರೆದಭಯವನೀವೆ ಸುಕೃತ ಪಂಥಗಾರ್ತಿ 2 ಹಿಂಡು ಭೂತಂಗಳಿಗೆಲ್ಲ ಹೆಚ್ಚಿನ ಬಿರುದನೆ ತಾಳ್ದೆ ಚಂಡಿ ಚಾಮುಂಡಿ ತ್ರೈಲೋಕ್ಯನಾಥೇ ಕಂಡು ನಮಿಸುವರ ಕಾಯ್ವೆ ಕಾಮಿತದಾತೆ 3 ಇಂದ್ರಾದಿ ದಿಕ್ಪಾಲಕರು ವಂದಿಸಿ ಸ್ತುತಿಮಾಡಲವರ ಬಂಧನವ ಪರಿಹರಿಸಿದೆಯೆ ಚಂದ್ರಮುಖಿಯೆ ಇಂದು ಬಂದ ಬಂಧನವ ಬಿಡಿಸಿ ಎಂದೂ ಎನ್ನ ನೀ ಕಾಯೆ ತಾಯೆ 4 ಮಲೆತ ಮಹಿಷಾಸುರನ ಕೊಂದೆ ಮಲೆಬೆನ್ನೂರಿನಲಿ ನಿಂದೆ ಬಲುನೇಮವಂತೆ ಸಂತೆಹರವಿಲೆ ನಿಂತೆ ಪುಲ್ಲಲೋಚನೆ ಪ್ರಖ್ಯಾತೆ ಪರಶುರಾಮನ ಮಾತೆ ಹೆಳವನಕಟ್ಟೆ ರಂಗನ ಸಹೋದರಿ5
--------------
ಹೆಳವನಕಟ್ಟೆ ಗಿರಿಯಮ್ಮ
ಮನ್ನಾರು ಕೃಷ್ಣಗೆ ಮಂಗಳ ಜಗವಮನ್ನಿಸಿದೊಡೆಯಗೆಮಂಗಳ ಪ.ಬೊಮ್ಮನ ಪಡೆದಗೆ ಭಕ್ತರುದ್ಧಾರಿಗೆಕಮ್ಮಗೋಲನಯ್ಯಗೆ ಮಂಗಳ ||ಧರ್ಮಸಂರಕ್ಷಗೆ ದಾನವ ಶಿಕ್ಷಗೆನಮ್ಮ ರಕ್ಷಕನಿಗೆ ಮಂಗಳ 1ತುರುಗಳ ಕಾಯ್ದಗೆ ಕರುಣಾಕರನಿಗೆಗಿರಿಯನೆತ್ತಿದನಿಗೆ ಮಂಗಳ ||ಪುರದ ತಿಮ್ಮಪ್ಪಗೆ ವಾರಿಜನಾಭಗೆಹರಿರ್ವೋತ್ತಮನಿಗೆ ಮಂಗಳ 2ದೇವಕಿ ದೇವಿಯ ತನಯಗೆ ಮಂಗಳದೇವ ತಿಮ್ಮಪ್ಪಗೆ ಮಂಗಳ ||ಮಾವನ ಕೊಂದು ಮಲ್ಲರ ಮಡುಹಿದಪುರಂದರವಿಠಲಗೆ ಮಂಗಳ 3
--------------
ಪುರಂದರದಾಸರು