ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಂಭಾರಿಸುತ ಅಭವ ಪ ಪುರಹರ ಸಾಂಬ ತ್ರಿಯಂಬಕ ಶಂಬಕಾರಿ ರಿಪುಗಂಭೀರ ಕರುಣಿ ಅ. ಪ. ಭಸಿತ ಭೂಷಿತ ಶರೀರ-ಭಕ್ತರುದ್ಧಾರ ವಿಷಕಂಠ ದುರಿತಹರ ಪಶುಪತಿ ಫಣಿಹಾರ-ಪಾವನಕಾರ ನೊಸಲನಯನ ವಿಕಸಿತಾಂಬುಜ ಮುಖ ಶಶಿಧರ ಮತ್ತರಕ್ಕಸ ಮದ ಮರ್ದನ ಘಸಣೆಗೊಳಿಪ ತಾಮಸವ ಕಳೆದು ಮಾ- ಬಿಸಜ ಪಾದವ ತೋರೊ 1 ರಜತ ಪರ್ವತ ನಿವಾಸ ನಿರ್ಮಲ ಭಾಸ ಗಜವೈದ್ಯನಾಶ ಗಿರೀಶ ಸುಜನರ ಮನೋವಿಲಾಸ ವ್ಯೋಮಕೇಶ ತ್ರಿಜಗದಲ್ಲಣ ಗೌರೀಶ ಅಜಸುತನಧ್ವರ ಭಜನೆಯ ಕೆಡಸಿದೆ ಅಜಗರ ಮಂದಿ ಗಜಮುಖ ಜನಕನೆ ಗಜಗಮನ ಮುನಿ ತನುಜನ ಕಾಯ್ದನೆ ವಜ್ರಮುನಿ ವಂದಿತ ಭಜಿಸುವೆ ನಿನ್ನ2 ಮಧರಾಪುರಿ ನಿಲಯ ಮೃತ್ಯುಂಜಯ ಸದಮಲ ಸುಮನಗೇಯ ಸದಾ ನಮಿಪರ ಹೃದಯದೊಳಗುಳ್ಳ ಭಯ- ಸದೆಯುತ್ತ ಕೊಡು ಅಭಯ ಜಾಹ್ನವಿ ಧರಕೃತ ಮಾರಾ ನದೀತೀರದಿ ವಾಸವಾಗಿಪ್ಪ ಸೌಂದರ್ಯ ಮಧುಪುರಿ ವಿಜಯವಿಠ್ಠಲನ ಪದಾಬ್ಜಕೆ ಮಧುಪನೆನಿಪ ಪಂಚವದನ ಕೈಲಾಸ 3
--------------
ವಿಜಯದಾಸ
ಜೋ ಜೋ ಶ್ರೀಹರಿ ಮಲಗೊ ಜೋಗುಳ ಪಾಡಿ ಪಾಡಿ ತೂಗುವೆ ಮುದದಿಪ ಯೋಗಿಗಳರಸನೆ ಸಾಗರಶಯನನೆ ಭಾಗವತರಪ್ರಿಯ ಬಾಗಿ ಸ್ತುತಿಪರೊ ನಿನ್ನ ಅ.ಪ ಹರ ಬ್ರಹ್ಮಾದಿಗಳು ಕೂಡಿ ನಿನ್ನನು ಪರಿಪರಿ ವಿಧದಲಿ ಕೊಂಡಾಡಿ ಸುರರು ಗಂಧರ್ವರು ವರಋಷಿಗಳು ಕೂಡಿ ಪರಮ ಸಂಭ್ರಮದಿಂದ ಹರಿ ನಿನ್ನ ಸ್ತುತಿಪರು 1 ಗೋಕುಲದ ನಾರಿಯರು ಗೋವಿಂದ ನಿನಗೆ ಬೇಕಾದ ಪಾಲ್ಮೊಸರು ಜೋಕೆಯಿಂದಲಿ ಹೊಸ ಬೆಣ್ಣೆ ತಂದಿಹೆವೆಂದು ಅ- ನೇಕ ಬಗೆಯಲಿ ಸ್ತುತಿ ಮಾಡಿ ಬೇಡುತಲಿರುವರು 2 ದಿಟ್ಟ ಗೋಪಾಲ ಕಯ್ಯೊಳಗೊಂದು ಪುಟ್ಟ ಬಚ್ಚೆಯ ಪಿಡಿದು ಅಚ್ಚುತ ನಿನಗೀವೆವೆಂದು ಬಾಗಿಲೋಳ್ ನಿಂದು ಪುಟ್ಟ ಮಕ್ಕಳು ಬಾಯಿಬಿಟ್ಟು ಪ್ರಾರ್ಥಿಸುವರು 3 ಇನಕೋಟಿ ಪ್ರಭೆ ನಾಚಿಪ ಮುಖ ಕಮಲದ ದನುಜದಲ್ಲಣ ನಿನ್ನನು ಸನಕಾದಿಗಳು ಸ್ತುತಿಮಾಡಿ ಮೈ ಮರೆತರೊ ವನಿತೆಯರೋಕುಳಿಗಳನಾಡಿ ನರ್ತಿಸುವರೊ 4 ನಿದ್ರೆ ಮಾಡಿದರೆ ನೀನು ಈ ಜಗವೆಲ್ಲ ಉದ್ಧಾರವಾಗುವುದೇನು ನಿದ್ರೆ ಸಾಕೇಳೆಂದು ದುರ್ಗಾದೇವಿಯರು ಸ್ತುತಿಸೆ ಮುದ್ದು ಕೃಷ್ಣನೆ ಭಕ್ತರುದ್ಧಾರಕರ್ತನೆ5 ಹಯ ಮುಖ ಹರಿ ಮತ್ಸ್ಯನೆ ಕೂರ್ಮನೆ ವರಹ ಹಯಗ್ರೀವ ನರಸಿಂಹನೆ ಜಯವಟು ಭೃಗು ರಾಮಕೃಷ್ಣ ಬುದ್ಧನÉ ಕಲ್ಕಿ ಜಯ ನಾನಾ ರೂಪನÉ ಜಯವೆಂದು ಪೊಗಳ್ವರೊ6 ನವನೀತ ಚೋರನೆಂದು ನಾರಿಯರೆಲ್ಲ ನವವಿಧ ನುಡಿ ನುಡಿವರೊ ಭುವನ ಮೋಹನಸ್ವಾಮಿ ಸುಮನಸ ವಂದ್ಯನೆಕವಿ ಜನರಪ್ರಿಯ ಶ್ರೀ ಕಮಲನಾಭ ವಿಠ್ಠಲ 7
--------------
ನಿಡಗುರುಕಿ ಜೀವೂಬಾಯಿ
ಬಾರಮ್ಮಾ ಬಾರಮ್ಮಾ ಭಾಗ್ಯದನಿಧಿಯೇ ತೋರಮ್ಮಾ ತೋರಮ್ಮಾ ಕರುಣಾನಿಧಿಯೇ ಪ. ಬಾರಮ್ಮಾ ಮಹಲಕ್ಷ್ಮಿ ತೋರುತ ಕರುಣವ ಬೀರುತ ತವಕದಿ ಸೇರುತ ಪತಿಸಹ ಅ.ಪ. ಶ್ರೀ ರಮಾದೇವಿ ಇನ್ನಾರು ಸಮನಾಗರೇ ಭೂ ರಮೇಶನ ಸೇವೆಗೆ ನಿಲ್ಲಲು ಬಾರಮ್ಮಾ ಭಕ್ತರುದ್ಧಾರ ಮಾಡಲು ಎಲ್ಲಾ ಕಾರಳು ನೀನಾಗಿ ವಾರುಧಿಶಯನಗೆ ಸೇವಿಸಲು ಘೋರತರ ಸಂಸಾರ ಸಾಗರ ಪಾರುಗಾಣಿಪ ಹರಿಯು ನಿನ್ನೊಳು ಸೇರಿಯಿರುತಿಹನೇ ತೋರಿ ಭಕ್ತರಿಗೆ ಚಾರುಕಮಲ ಕರಾರವಿಂದದಿ ಧೀರೆಯೆತ್ತುಪಕಾರ ಮಾಡಲು ವಾರಿಜಾಕ್ಷಿಯೆ ಸಾರುತೀಗಲೆ 1 ಪುಲ್ಲಲೋಚನೆ ನಿನ್ನ ಗಲ್ಲ ಮಿಂಚಿನ ಸೊಬ ಗೆಲ್ಲ ನೋಡುತ ನಿನ್ನ ಒಡನಾಡುವ ಪಲ್ಲವಾಧರೆ ನಿನ್ನ ವಲ್ಲಭ ಹರಿಯಲ್ಲಿ ಎಲ್ಲ ಭಕ್ತರ ಮನಸಲ್ಲ ಅರುಹು ತಾಯೆ ನಿಲ್ಲದೆಲೆ ಕಾನಲ್ಲಿ ಇಹ ಹರಿ ಎಲ್ಲಿ ಭಕ್ತರು ಕರೆ ದಲ್ಲಿ ಬರುತಿಹನೆ ಮಲ್ಲಮರ್ಧನ ಶ್ರೀ ನಲ್ಲ ಕೃಷ್ಣನು ಚೆಲ್ಲಿ ಕರುಣವ ಬಲ್ಲೆ ನಿನಪತಿ ಗುಣಗಳನೆಲ್ಲ ಕಾಯೆ 2 ರಂಗನರ್ಧಾಂಗಿಯೆ ಮಂಗಳ ಮೂರುತಿ ನಿ ನ್ನಂಗಜನಯ್ಯನ ಕಾಣೆ ಕಾಯೆ ಗಂಗಜನಕ ಸಹ ಸರ್ವರಂಗದೊಳಿದ್ದು ನೀ ರಂಗನ ಲೀಲೆಯತಿಸಂಭ್ರಮದಲಿ ನೋಳ್ಪೆ ತುಂಬುರು ನಾರದರು ಪಾಡಲು ರಂಭೆ ಊರ್ವಶಿ ನಾಟ್ಯವಾಡಲು ಸಂಭ್ರಮದಿ ಶ್ರೀ ಶ್ರೀನಿವಾಸನ್ನ ಇಂಬತೋರಿಸೇ ಅಂಬುಜಾಕ್ಷಿಯೇ ಬೆಂಬಿಡದೇ ಎನ್ನ ನಂಬಿರುವೇ ನಿನ್ನ ಕಂಬುಕಂಧರೆ ಕುಂಭಿಣೀಪತಿ ಸಹಿತ ಬೇಗನೆ 3
--------------
ಸರಸ್ವತಿ ಬಾಯಿ
ಭಕ್ತರುದ್ಧಾರಕ ದಾಸರಾಯರಿವರ್ಯಾರೇ ಪೇಳಕ್ಕ ಪ. ಮುಕ್ತಿಗೊಡೆಯನ ಮಾರ್ಗತೋರಿ ಭವ ಮುಕ್ತಿಗೊಳಿಪ ಶ್ರೀ ಗುರುವೆಲೆ ತಂಗಿ ಅ.ಪ. ಕಂದರಂದದಿ ಪೊಂದಿದವರ ಪೊರೆಯುವರ್ಯಾರೇ ಪೇಳಕ್ಕಯ್ಯ ನಂದಕಂದನ ಅಂಕಿತ ಕೊಡುವವರ್ಯಾರೇ ಪೇಳಕ್ಕಯ್ಯ ಸಿಂಧುಶಯನನ ತೋರುವೆನೆಂಬುವರ್ಯಾರೇ ಪೇಳಕ್ಕಯ್ಯ ಬಿಡಿಸುವ ದಾಸೋತ್ತಮರೆಲೆ ತಂಗಿ 1 ಭಾವಜನಯ್ಯನ ಭಾವಿಸಿ ಭಜಿಸುವರ್ಯಾರೇ ಪೇಳಕ್ಕಯ್ಯ ಸಾವಕಾಶವಿಲ್ಲದೆ ತತ್ವವನೊರೆಯುವರ್ಯಾರೇ ಪೇಳಕ್ಕಯ್ಯ ಪಾವನಮಾನಿಗತಿ ಪ್ರಿಯರೆಂದೆನಿಸುವರ್ಯಾರೇ ಪೇಳಕ್ಕಯ್ಯ ನಾಮಾತ್ಮಕರಲೆ ತಂಗಿ 2 ಮಂದಮತಿಗಳ ಬಂದು ಕಾಯ್ವರಿವರ್ಯಾರೇ ಪೇಳಕ್ಕಯ್ಯ ಗಂಧಾಕ್ಷತೆ ಪದ್ಮಾಕ್ಷಿಯ ಧರಿಸಿಹರ್ಯಾರೇ ಪೇಳಕ್ಕಯ್ಯ ಬಂದು ಸ್ವಪ್ನದಿ ಅಭಯ ಕೊಡುವರಿವರ್ಯಾರೇ ಪೇಳಕ್ಕಯ್ಯ ಪೊಂದಿ ಭಜಿಸಿದ ಮಹಿಮರೆ ತಂಗಿ 3 ಕಷ್ಟವ ಬಿಡಿಸಿ ಉತ್ಕøಷ್ಟವ ತೋರಿದರ್ಯಾರೇ ಪೇಳಕ್ಕಯ್ಯ ಸೃಷ್ಟೀಶ ನಿತ್ಯಾನಂದನ ತೋರಿದರ್ಯಾರೇ ಪೇಳಕ್ಕಯ್ಯ ತುಷ್ಟಿಬಡಿಸಿ ವಚನಾಮೃತ ಕರೆಯುವರ್ಯಾರೇ ಪೇಳಕ್ಕಯ್ಯ ಶ್ರೇಷ್ಠ ದಾಸರೆಂದೆನಿಸಿ ಗೋಪಾಲಕೃಷ್ಣವಿಠಲಗತಿ ಪ್ರ್ರಿಯರೆ ತಂಗಿ4
--------------
ಅಂಬಾಬಾಯಿ
ರಕ್ಷಿಸೆ ಏಕನಾಥೆ ತಾಯೆ ದಯದಿಂದ ಎನ್ನನು ಸೊಕ್ಕಿದ ದೈತ್ಯ ಸಂಹಾರೆ ಶರಣ ಜನೋದ್ಧಾರೆ ಪ. ದುರಿತ ದುಃಖ ನಿವಾರಿ ಶರಣರ ಸಲಹುವ ದಾತೆ ಖಳರೆದೆಗಂತೆ ನಿಡಿ ಗುರುಳ ಬಾಲೆ ಪಲ್ಲವಪಾಣಿ ಸುರರ ನಾಯಕಿ ಅಖಿಲದೇವಮಾತೆ ವಿಖ್ಯಾತೆ 1 ಅಳುವಾಡುವ ರಂಗನ ಅದೇನರಿತು ಭಂಗ ಬಾಳ ಬಡಿಸಿದೆಯವ್ವ ಭಕ್ತರುದ್ಧಾರಿ ಕಾಳಗದೊಳು ಕಂಠೀರವೆ ಕರೆದಭಯವನೀವೆ ಸುಕೃತ ಪಂಥಗಾರ್ತಿ 2 ಹಿಂಡು ಭೂತಂಗಳಿಗೆಲ್ಲ ಹೆಚ್ಚಿನ ಬಿರುದನೆ ತಾಳ್ದೆ ಚಂಡಿ ಚಾಮುಂಡಿ ತ್ರೈಲೋಕ್ಯನಾಥೇ ಕಂಡು ನಮಿಸುವರ ಕಾಯ್ವೆ ಕಾಮಿತದಾತೆ 3 ಇಂದ್ರಾದಿ ದಿಕ್ಪಾಲಕರು ವಂದಿಸಿ ಸ್ತುತಿಮಾಡಲವರ ಬಂಧನವ ಪರಿಹರಿಸಿದೆಯೆ ಚಂದ್ರಮುಖಿಯೆ ಇಂದು ಬಂದ ಬಂಧನವ ಬಿಡಿಸಿ ಎಂದೂ ಎನ್ನ ನೀ ಕಾಯೆ ತಾಯೆ 4 ಮಲೆತ ಮಹಿಷಾಸುರನ ಕೊಂದೆ ಮಲೆಬೆನ್ನೂರಿನಲಿ ನಿಂದೆ ಬಲುನೇಮವಂತೆ ಸಂತೆಹರವಿಲೆ ನಿಂತೆ ಪುಲ್ಲಲೋಚನೆ ಪ್ರಖ್ಯಾತೆ ಪರಶುರಾಮನ ಮಾತೆ ಹೆಳವನಕಟ್ಟೆ ರಂಗನ ಸಹೋದರಿ5
--------------
ಹೆಳವನಕಟ್ಟೆ ಗಿರಿಯಮ್ಮ
ಮನ್ನಾರು ಕೃಷ್ಣಗೆ ಮಂಗಳ ಜಗವಮನ್ನಿಸಿದೊಡೆಯಗೆಮಂಗಳ ಪ.ಬೊಮ್ಮನ ಪಡೆದಗೆ ಭಕ್ತರುದ್ಧಾರಿಗೆಕಮ್ಮಗೋಲನಯ್ಯಗೆ ಮಂಗಳ ||ಧರ್ಮಸಂರಕ್ಷಗೆ ದಾನವ ಶಿಕ್ಷಗೆನಮ್ಮ ರಕ್ಷಕನಿಗೆ ಮಂಗಳ 1ತುರುಗಳ ಕಾಯ್ದಗೆ ಕರುಣಾಕರನಿಗೆಗಿರಿಯನೆತ್ತಿದನಿಗೆ ಮಂಗಳ ||ಪುರದ ತಿಮ್ಮಪ್ಪಗೆ ವಾರಿಜನಾಭಗೆಹರಿರ್ವೋತ್ತಮನಿಗೆ ಮಂಗಳ 2ದೇವಕಿ ದೇವಿಯ ತನಯಗೆ ಮಂಗಳದೇವ ತಿಮ್ಮಪ್ಪಗೆ ಮಂಗಳ ||ಮಾವನ ಕೊಂದು ಮಲ್ಲರ ಮಡುಹಿದಪುರಂದರವಿಠಲಗೆ ಮಂಗಳ 3
--------------
ಪುರಂದರದಾಸರು