ಒಟ್ಟು 4 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

100(ಅ) ತುಳಸಿದೇವಿ ಶರಣು ಹೊಕ್ಕೆನು ಕಾಯೆ ಶ್ರೀ ತುಳಸಿ ತಾಯೆ ನಾರಾಯಣನ ಪ್ರೀಯೇ ತರಣಿಕೋಟಿ ದಿವ್ಯ ಪ್ರಕಾಶ ಹರಿಚರಣಕಮಲಕಾಭರಣಿಯೆನಿಪಳೆ ಪ ಉದಧಿಯೊಳುದಿಸಿದಮೃತವ ಮುದದಿಂದಲಿ ಶ್ರೀಧರನು ನೋಡಿ ಸ್ವೀಕಾರವನು ಮಾಡಿ ಆ- ನಂದಲಾನಂದ ಬಾಷ್ಪಗಳು ಉದುರಲಕ್ಷಿಯೊಳು ಉದುಭವಿಸಿದೆಯೆ ನೀನು ಪದುಮಮುಖಿಯೆ ನಿಮ್ಮ ಅದುಭುತ ಮಹಿಮೆಯು ಪದ ಕವಿಗಳಿಗೆಲ್ಲ ಪೊಗಳಲಸಾಧ್ಯ 1 ನಿಮ್ಮ ಮೂಲ ಮಧ್ಯಾಗ್ರದಲಿ ಬ್ರಹ್ಮಾದಿ ಸುರರು ಸುಮ್ಮನದಿಂದ ಒಲಿದಿಹರು ಒಮ್ಮನದಿಂದ ಸ್ತುತಿಸಲು ಶುಭಗುಣವಂತೆ ಧರ್ಮಾರ್ಥ ಕಾಮ ಮೋಕ್ಷಗಳ ಗಮ್ಮನೆ ಕೊಡುವ ನಮ್ಮಮ್ಮಗೊಲಿದು ನಿನ್ನಮ್ಮಿದವರಿಗಾಧರ್ಮದ ನಿಧನೆ (?) 2 ನಿಷ್ಠೀಲಿ ನಿಮ್ಮ ಭಜಿಸುವ ಭಕುತರಿಗೆ ಬಂದ ಕಷ್ಟವ ಕಳೆದು ಕೈವಿಡಿದು ದುಷ್ಟ ಸಂಗವನೆ ಬಿಡಿಸಿ ಇಹಪರದಲ್ಲಿ ವಿಷ್ಣುಭಕ್ತರಿವರೆಂದೆನಿಸಿ ಶ್ರೇಷ್ಟ ಕದುರುಂಡಲಗಿ ಹನುಮಯ್ಯನೊಡೆಯನು ಶ್ರೀ- ಕೃಷ್ಣನ ಲೋಕದಿ ಸಂತುಷ್ಟಬಡಿಸುವಾ 3
--------------
ಕದರುಂಡಲಗಿ ಹನುಮಯ್ಯ
ಸ್ಮರಿಸಿ ಬದುಕಿರೊ ಗುರುವರರಾ ನರ- ಹರಿಸ್ಮರಣೆ ಮರೆಯದಲೆ ಕೀರ್ತಿಸಿ ನಲಿದವರ ಪ ದಾಸದೀಕ್ಷೆಯ ವಹಿಸಿದವರ ಹರಿ ದಾಸರ ಕೂಡಿ ನರ್ತಿಸಿ ನಲಿದವರ ಶ್ರೀಶನ ಮಹಿಮೆ ಬಲ್ಲವರ ಭವ ಪಾಶಗಳಳಿವ ಸನ್ಮಾರ್ಗಬೋಧಕರ 1 ಬಡತನದಲಿ ಬಳಲಿದವರ ಭಾಗ್ಯ ಬಿಡದೆ ಬಂದೊದಗೆ ಹಿಗ್ಗದೆ ತಗ್ಗಿದವರ ಮೃಡಸಖನೊಲುಮೆ ಪಡೆದವರ ಬಹು ಸಡಗರದಲಿ ಹರಿ ಭಜನೆ ಮಾಡ್ದವರ 2 ಪಂಕಜಾಕ್ಷನ ಪೊಗಳಿದವರ ತಂದೆ ವೆಂಕಟೇಶ ವಿಠ್ಠಲ ದಾಸರಿವರ ಬಿಂಕದಿ ಹರಿಯ ಮರೆತವರ ಗರ್ವ ಬಿಂಕಗಳಳಿಯ ಸನ್ಮಾರ್ಗಕೆಳದವರ3 ತಾಳ ತಂಬೂರಿ ಪಿಡಿದವರ ಗೆಜ್ಜೆ ತಾಳ ಮೇಳದಿ ನರ್ತಿಸಿ ನಲಿದವರ ವ್ಯಾಳ ಶಯನನ ಭಕ್ತರಿವರ ಸಂಜೆ ವೇಳೆ ಹರಿಭಜನೆ ಮಾಡಿ ನಲಿದವರ 4 ಮಡದಿ ಮಕ್ಕಳು ಬಂಧು ಜನರ ಕೂಡಿ ಕಡು ಸಂಭ್ರಮದಿ ಹರಿಭಜನೆ ಮಾಡ್ದವರ ಕಡಲ ಶಯನನ ಭಕ್ತರಿವರು ಭಾಗ್ಯ ಬಡತನ ಸಮವೆಂದು ತಿಳಿಯ ಹೇಳ್ದವರ 5 ಹರಿಗುಣ ಕೀರ್ತಿಸಿದವರ ನರ ಹರಿಯ ಮಹಿಮೆಗಳ ಶಿಷ್ಯರಿಗೊರೆದವರ ಹರಿಯೆ ಸರ್ವೋತ್ತಮನೆಂದವರ ನಮ್ಮ ಉರುಗಾದ್ರಿವಾಸ ವಿಠ್ಠಲನ ನಂಬಿದವರ6 ಮಮತೆಯ ಬಿಡಬೇಕೆಂದವರ ದೇಹ ಮಮತೆಯ ಬಿಡುತ ಹರಿಪುರ ಸೇರಿದವರ ಕಮಲಾಕ್ಷನ ಭಕ್ತರಿವರ ನಮ್ಮಕಮಲನಾಭನ ವಿಠ್ಠಲನ ನಂಬಿದವರ 7
--------------
ನಿಡಗುರುಕಿ ಜೀವೂಬಾಯಿ