ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದಾದ್ರಿ ಕ್ಷೇತ್ರದಲ್ಲಿ ಆನಂದವ ಕಂಡೆ ಪ. ಆನಂದ ಕಂದನ ಗುಣಗಳ ಆನಂದನಿಲಯರು ಪೇಳಲು ಅ.ಪ. ಆನಂದವಾಯಿತು ಮನಕೆ ಆನಂದಗೋಕುಲದೊಡೆಯನು ಆನಂದತೀರ್ಥರ ಕರದಲಿ ಆನಂದ ಸೇವೆಯ ಕೊಳುತಿರೆ 1 ಆನಂದಾದ್ರಿ ಶಿಖರದಲ್ಲಿ ಸ್ವಾನಂದ ಸೂಚನೆ ತೋರಲು ಏನೆಂದು ಬಣ್ಣಿಸಲಿನ್ನು ಸ್ವಾನಂದರು ಶ್ರೀ ಗುರು ದಯದಿ 2 ಆನೆಂದರೆ ಶಿಕ್ಷಿಸುವನು ಹರಿ ನೀನೆಂದರೆ ರಕ್ಷಿಸುವನು ದೊರಿ ಆನಂದವನ ತರುವಂತೆ ಆನಂದಭೀಷ್ಟವ ಕೊಡುವ 3 ಆನಂದಜ್ಞಾನಪೂರ್ಣ ಆನಂದ ನಿತ್ಯರೂಪ ಆನಂದ ಗುಣಪೂರ್ಣ ನಿ- ತ್ಯಾನಂದ ಭಕ್ತರಿಗೀವ4 ಗೋಪಾಲಕೃಷ್ಣವಿಠಲ ನೀ ಪರಮದೈವವೆನಲು ತಾಪವÀ ಭವಹರಿಸಿ ಕಾಪಾಡೊ ಹರಿಯ ಲೀಲೆ 5
--------------
ಅಂಬಾಬಾಯಿ
ದೇವಾಧಿ ದೇವನೀತ ಜೀವ ಪ್ರಾಣನಾಥ ಕಾವ ಕರುಣನೀತ ಹಂಸನಾಥ 1 ದೇಶಿಕರ ದೇವ ಭಾಸಿ ಪಾಲಿಸುವ ವಾಸುದೇವ 2 ಸ್ಮರಿಸುವರ ಜೀವ ಹರಿ ಪರಂ ದೈವ ಪರಮ ಭಕ್ತರಿಗೀವ ಹರುಷವ 3 ಸಾಧು ಹೃದಯವಾಸ ಸದಮಲಾನಂದ ಘೋಷ ಸದೋದಿತ ಪ್ರಕಾಶ ಯಾದವೇಶ 4 ಇಹಪರ ಸಾಹ್ಯನೀತ ಬಾಹ್ಯಾಂತ್ರ ಸದೋದಿತ ಮಹಿಪತಿ ಪ್ರಾಣನಾಥ ಅವಧೂತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಿದೆ ಗುರುರಾಯರನ್ನ ಈ ರೂಢಿಯೊಳಗೆ ಮೆರೆವೊ ಸಾರ್ವಭೌಮನ್ನ ಪ ಥಳಥಳಿಸುವ ಬೃಂದಾವನದಿ - ತಾನು ಕುಳಿತು ಭಕ್ತರಿಗೀವ ವರವನು ತ್ವರದಿ ನಳಿನನಾಭನ ಕೃಪಾಬಲದಿ - ಇದೆ ನಳಿನಜಾಂಡದಿ ಸರಿಗಾಣೆ ಮಹಿಮಾದಿ1 ಪೊಳೆವೊ ವಕ್ಷಸ್ಥಳದವನ - ಎಳೆ ತುಳಸಿ ಮಾಲಾಂಕಿತ ಕಂಧರಯುತನಾ ನಳಿನಾಕ್ಷಮಾಲೆ ಶೋಭಿತನ - ಉರ ಚಲುವ ದ್ವಾದಶಪುಂಢ್ರ -ಮುದ್ರಚಿಹ್ನಿತನಾ 2 ಕೃಷ್ಣವರ್ಣದಿ ಶೋಭೀತನಾ - ಮಹಾ ವೈಷ್ಣವ ಕುಮುದ - ನಿಕರಕೆ ಚಂದಿರನಾ ವಿಷ್ಣು ಭಕ್ತಾಗ್ರೇಸರನಾ - ಬಾಲ ಕೃಷ್ಣಮೂರುತಿ ಪದಯುಗ ಸರೋಜ ಇನಾ 3 ದಿನನಾಥ - ದೀಪ್ತಿ - ಭಾಸಕನ - ಭವ ವನಧಿ - ಸಂತರಣ - ಸುಪೋತಕೋಪÀಮನಾ ಮುನಿಜನ ಕುಲದಿ ಶೋಭಿಪನ - ಸ್ವೀಯ ಜನರ ಪಾಲಕ ಮಹಾರಾಯನೆನಿಪನಾ 4 ಗುರುಜಗನ್ನಾಥ ವಿಠಲನ - ಪಾದ ಸರಸಿಜ ಯುಗಳಕಾರಡಿ ಎನಿಪÀನಾ ಪೆರಿವೋನು ತನ್ನ ಜನರನಾ - ಎಂದು ಶಿರಸದಿ ನಮಿಸಿ ಬೇಡಿದೆ ಗುರುವರನಾ 5
--------------
ಗುರುಜಗನ್ನಾಥದಾಸರು
ಪಾದಗಳಂ ನಂಬಿದೆನಾಂ ಶ್ರೀಧರಾಚ್ಯುತಗೋವಿಂದ ಪ ಮಧ್ಯೆದೊಳಾದರದಿ ಕುಣಿಯುತಿರುವಅ.ಪ ಅಳೆದು ಮೂರಡಿಯಿಂದ ಜಗವ ಬಲಿಯ ಪಾತಾಳಕ್ಕೆ ತುಳಿದು ಲಲನೆಗಂಗೆಯ ಪೆತ್ತು ಮಂಗಳಗಳನು ಭಕ್ತರಿಗೀವ ಶುಭದಾ 1 ಧನುವ ಮೆಟ್ಟಿಮುರಿದು ಮೊಳಲಸದಾನಂದದೊಳಿರುವ 2 ಗರಡುದೇವ ನಿತ್ಯಪೊತ್ತ ಸಿರಿಯು ಸದಾ ಒತ್ತುತಿರುವ ಪರಮಪಾವನ ಹೆಜಾ ಜಿಯ ವರದನೆನುತ ನಾರದನೆನೆವ 3
--------------
ಶಾಮಶರ್ಮರು
ಮಾಯಾ ಜಯಕೃತಿಗೆ ಮಂಗಳಂ ಶಾಂತಿ ಸ್ವರೂಪಳಿಗೆ ಮಂಗಳಂ ಭಕ್ತರ ಕಂಗಳಿಂದಲಿ ನೋಡಿ ರಂಗನ ಪಾದವ ತೋರ್ವಳಿಗೆ ಪ. ಮಂಗಳಂ ಜಯ ಮಂಗಳಂ ಅ.ಪ. ಅಲ್ಲಿ ವೈಕುಂಠದೊಳಗೆ ಇರಲು ಬಲ್ಲಿದ ಭೃಗು ಋಷಿ ತಾ ಬರಲು ವಲ್ಲಭನ ವಕ್ಷಸ್ಥಳ ಒದೆಯಲು ಹರಿ ಸೊಲ್ಲು ಕೇಳದೆ ಓಡಿ ಬಂದಳಿಗೆ 1 ಕೊಲ್ಲಾಪುರದಲಿ ನಿಂದಳಿಗೆ ಎಲ್ಲರಭೀಷ್ಟವ ಸಲಿಪಳಿಗೆ ಖುಲ್ಲರ ಮರ್ಧಿಪ ಹರಿಯ ವಕ್ಷಸ್ಥಳ ದಲ್ಲಿ ಸದಾ ನೆಲಸಿರ್ಪಳಿಗೆ 2 ಶ್ರೀ ಜಯದೇವಿಗೆ ಶ್ರೀ ಲಕ್ಷ್ಮಿಗೆ ಶ್ರೀ ರುಕ್ಮಿಣೀ ಸತ್ಯಭಾಮಳಿಗೆ ಶ್ರೀ ಪದ್ಮಾವತಿ ನಾಮಕ ನಾನಾರೂಪ ಗುಣಾನ್ವಿತೆಗೆ 3 ಮುಕ್ತಾಮುಕ್ತರಿಗೊಡೆಯಳಿಗೆ ಮುಕ್ತಿಯ ಭಕ್ತರಿಗೀವಳಿಗೆ ಮುಕ್ತಳೆನಿಸಿ ಮುಕ್ತಾಶ್ರಯನಿಗೆ ಆ- ಸಕ್ತಿಯಿಂದ ಸೇವೆ ಮಾಳ್ಪಳಿಗೆ 4 ಗೋಪಾಲಕೃಷ್ಣವಿಠ್ಠಲನ ಆಪಾದ ಮೌಳಿಯ ಗುಣಗಳನು ತಾ ಪರಿಪರಿಯಿಂದ ವರ್ಣಿಸುತ್ತಿದ್ದರು ಅಪಾರವಾಗಿಯೆ ಕಾಂಬಳಿಗೆ 5
--------------
ಅಂಬಾಬಾಯಿ
ಶರಣು ಹೋಗುವೆನಯ್ಯ ನಾನು ಪ ಸಿರಿ ಅಜಭವ ಶಕ್ರ ಸುರಸ್ತೋಮಗಳನೆಲ್ಲ ಸರಸದಿಂದ ಆಳ್ವ ಪರಮಪುರುಷ ಹರಿಗೆ ಶಿರಬಾಗಿ ನಮಿಸುತ ಅ.ಪ. ನಿರುತ ಆನಂದದಿ ಮೆರೆದು ಇರುವಂಥ ನಿರಜ ನಿತ್ಯನು ಆದ ಉರಗನ ಮೇಲ್ವರಗುತ ಪರಮ ಪರಾತ್ಪರ ಪರಮವೇದದ ಸಾರ ಪರಮ ಸದ್ಗುಣ ಪೂರ್ಣ ಪುರುಷಸೂಕ್ತ ವಂದ್ಯ ಪರಿಪರಿ ರೂಪದಿ ಸರ್ವತ್ರ ಇರುವಂಥ ನಿರ್ಗುಣ ನಿರಾಕಾರ ನಿರುಪಮ ನಿಸ್ಸೀಮ ನಿರುತ ತೃಪ್ತನು ಆದ ಸರ್ವಸಾರ ಭೋಕ್ತ ಸರ್ವರ ಬಿಂಬನು ಸರ್ವಗುಣ ಪೂರ್ಣ ಸರ್ವರ ಆಧಾರ ಸರ್ವೇಶ ಸ್ವತಂತ್ರ ಸರ್ವಶಬ್ದ ವಾಚ್ಯ ಸರ್ವರಿಂ ಭಿನ್ನನು ಸರಸಸೃಷ್ಟಿಯ ಮಾಳ್ವ ನೀರಜನಾಭಗೆ ಚರಣವ ಪಿಡಿಯುತ್ತ ಉರುಗಾಯನ ದೇವ ಸಲಹು ಸಲಹೆಂದು 1 ವಾರಿಯೊಳಾಡುವ ಭಾರವಹೊರುವ ಕೋರೆಯತೀಡುವ ಕರುಳಾನು ಬಗೆಯುವ ವರವಟು ಆಗುವ ಪರಶುವ ಪಿಡಿಯುವ ನಾರಿಯ ಹುಡುಕುವ ನಾರಿಯ ಕದಿಯುವ ಬರಿಮೈಯ್ಯ ತೋರುವ ತುರುಗವನೇರುವ ನಾರಿಯು ಆದವ ಭಾರತ ಮಾಡುವ ವರ ಸಾಂಖ್ಯ ಹೇಳುವ ಕರಿಯನು ಪೊರೆಯುವ ಪೋರಗೆ ಒಲಿದವ ವರ ಋಷಭನಾದ ಹರಿ ಯಜ್ಞ ನಾದವ ತರಿವ ರೋಗಂಗಳ ವರಹಂಸ ರೂಪನು ತುರುಗ ವೇಷಧಾರಿ ನಾರಾಯಣ ಮುನಿಯೆ ಗುರು ದತ್ತಾತ್ರೇಯನೆ ಪರಿಸರ ಪರಮಾಪ್ತ ಪೊರೆಯೊ ಮಹಿದಾಸನೆಂದು ಕರವೆತ್ತಿ ಮುಗಿಯುತ 2 ಪಾಪಿಯ ಪೊರೆದವಗೆ ತಾಪ ಇಲ್ಲದವಗೆ ಅಪವರ್ಗದಾತಗೆ ವಿಪನ ಏರಿದವಗೆ ಗೋಪತಿಯಾದವಗೆ ತಾಪವ ಮೆದ್ದವಗೆ ಚಾಪವ ಮುರಿದವಗೆ ಚಪಲ ಇಲ್ಲ ದವಗೆ ಕಪಟರ ವೈರಿಗೆ ಗುಪ್ತದಿ ಇರುವಗೆ ವಿಪ್ರನ ಸಖನಿಗೆ ಅಪ್ರಮೇಯನಿಗೆ ಗೋಪೇರ ವಿಟನಿಗೆ ತಾಪಸ ಪ್ರೀಯಗೆ ವಿಪ್ರಶಿಶು ತಂದವಗೆ ಮುಪ್ಪಿಲ್ಲ ದವಗೆ ತ್ರಿಪುರಾರಿ ಸಖಗೆ ಕೃಪಣ ವತ್ಸಲನಿಗೆ ತಪ್ಪು ಮಾಡದವಗೆ ಆಪ್ತತಮನಿಗೆ ಸಪ್ತ ಶಿವವ್ಯಕ್ತನಿಗೆ ಶ್ರೀಪತಿಯಾದವಗೆ ಕಪಟನಾಟಕ ಪ್ರಭು ಗೋಪಾಲಕೃಷ್ಣಗೆ ಒಪ್ಪಿಸಿ ಸರ್ವಸ್ವ ಅಪ್ಪನೆ ಅಪ್ಪನೆ ತಪ್ಪದೆ ಸಲಹೆಂದು 3 ಅನ್ನವು ಆದವಗೆ ಅನ್ನಾದ ನೆಂಬುವಗೆ ಅನ್ನದ ಖ್ಯಾತನಿಗೆ ಚಿನ್ಮಯ ರೂಪಗೆ ಬೆಣ್ಣೆಯ ಕಳ್ಳಗೆ ಅನಾಥನಾದವಗೆ ಕನಕಮಯನಿಗೆ ಅನಂತರೂಪನಿಗೆ ಉಣ್ಣದೆ ಇರುವವಗೆ ಉಣ್ಣುತ ಉಣಿಸುವವಗೆ ಜ್ಞಾನಿಗಮ್ಯನಿಗೆ ಜ್ಞಾನ ದಾಯಕನಿಗೆ ಗುಣತ್ರಯ ದೂರಗೆ ಭಾನುವ ತಡೆದವಗೆ ಆನತ ಬಂಧುವಿಗೆ ಅನುಪಮನಾದವಗೆ ತನುಮನ ಪ್ರೇರಿಪಗೆ ದಾನವ ವೈರಿಗೆ ತನ್ನಲ್ಲೆ ರಮಿಸುವನಿಗೆ ಮನ್ಮಥ ಪಿತನಿಗೆ ಪೆಣ್ಣಿನ ಪೊರೆದವಗೆ ಅಣುವಿಗೆ ಅಣುವಿಹಗೆ ಘನಕೆ ಘನ ತಮನಿಗೆ ಕಣ್ಣಿಲ್ಲದೆ ನೋಳ್ಪ ಉನ್ನತ ಪ್ರಭುವಿಗೆ ಬೆನ್ನು ಬೀಳುವೆ ನಾನು ಇನ್ನು ಕಾಯೋ ಎಂದು 4 ಹೇಯನಾಗದ ಶೃತಿ ಗೇಯನು ಸುಜನರ ಪ್ರೀಯನು ಸರ್ವರ ಕಾಯುವ ಸುಂದರ ಹಯಮುಖ ಸರ್ವದ ಪ್ರಾಯದಿ ಮೆರೆಯುವ ಗಾಯನ ಪ್ರಿಯನಾದ ಮಾಯಾರಮಣ ಭಾವ ಮಾಯೆ ಹರಿಸಿ ಮುಕ್ತಿ ಭಾಗ್ಯ ಭಕ್ತರಿಗೀವ ತೋಯಜಾಂಬಕ ಸುರ ನಾಯಕರಿಗೆ ಭಕ್ತಿ ತೋಯದಿ ಮುಳುಗಿಪ ಶ್ರೀಯರಸಾಭಯ ದಾಯಕ ಗುರು ಮಧ್ವ ರಾಯರ ಪ್ರಿಯನಾದ ಜೇಯ ಜಯಮುನಿ ವಾಯುವಿನ ಅಂತರದಿ ನವನೀತ ಧರಿಸಿರ್ಪ ತಾಂಡವ ಸಿರಿಕೃಷ್ಣ ವಿಠಲ ರಾಯನಿಗೆ ಕಾಯ ವಾಚಮನದಿ ಗೈಯ್ಯುವ ಸಕಲವನು ಈಯುತ ನಮಿಸುತ ಜೀಯನೆ ಜೀಯನೆ ಕಾಯಯ್ಯ ಕಾಯೆಂದು 5
--------------
ಕೃಷ್ಣವಿಠಲದಾಸರು