ಮಾತೆ ದಾತೆ ಹಿತೆ| ಘನ ಸುಚರಿತೆ| ಮಾತೆ ದಾತೆ ಹಿತೆ ಪ
ಮಾತೆ ಸದ್ಗುಣ ಭರಿತೆ ಘನ ವಿ| ಖ್ಯಾತೆ ಭುವನ ವಿರಾಜಿತೆ||
ದಾತೆ ದೀನಾನಾಥ ಜನಸಂ|ಪ್ರೀತಿಯುತೆ ಪರಿಪೋಷಿತೆಅ.ಪ
ಕರವ ಜೋಡಿಸಿ| ವಿನಯದಿಂದಲಿ ಬೇಡುವ||
ಅಖಿಳ ಸಂಪದವೀಯುತ 1
ಪಾದ ಸೇವೆಯ ಗೈಯುವೆ||
ಆದರಿಸಿ ಪೊರೆಯೆನ್ನ ಸರ್ವಪ| ರಾಧಗಳನು ಕ್ಷಮಿಸುತ 2
ಜನನಿ ನೀನತಿಕರುಣೆಯಿಂದಲಿ| ಸುರರಿಗಭಯವನೀಯುತ||
ದುರುಳ ದೈತ್ಯನ ವಧಿಸಿ ನಂದಿನಿ| ನದಿಯ ಮಧ್ಯದಿ ನೆಲೆಸಿದ3
ಪಂಕಜಾಂಬಕಿ ಪರಮಪಾವನೆ| ಶಂಕರಿ ಸರ್ವೇಶ್ವರಿ||
ವೆಂಕಟಾಚಲನಿಲಯ ಶ್ರೀವರ| ವೆಂಕಟೇಶನ ಸೋದರಿ4