ಗೋ ಪಾಲಾ ಶೃತಬಾಲಾ | ಮುನಿಕುಲಾನತಬಲ ಪ
ಶ್ರೀಪದುಮಾಯುತ ನಯನಾ | ವನಮಾಲ ಕೃಪಾಲವಾಲ ಅ.ಪ
[ಶ್ರೀ]ಪಾದಾಂಬುಜಾತ ಪ್ರೀತಲೋಲ
[ಗೋಪೀಜನ] ವಿಮಲಚರಿತಾ ಶ್ರೀಯುತ ಅ.ಪ
ದೇವಾನತ ದೇವೇಶಾ ಮುರಳೀರವ ಲೋಲಾ |
ಗೋವರ್ಧನೋದ್ಧಾರ ಲೀಲಾ | ಶ್ರೀವರ ವನಮಾಲಾ |
ಪಾವನ ಪದಜಲಜಾಯುತ ಲೋಚನ | ಶ್ರೀ
ಗೋವಿಂದ ಮಾಂಗಿರೀಶ ಭಾವುಕಜನ ಚೈತನ್ಯ 1