ಒಟ್ಟು 13 ಕಡೆಗಳಲ್ಲಿ , 10 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಶರಣು ಪ ಶರಣು ಶರಣರ ಪೊರೆವ ಕರುಣಿಗೆ ಶರಣು ಸುರವರ ದೇವಿಗೆ ಅ. ಪ. ಶ್ರಧ್ಧೆ ಭಾರತಿ ಭಾಗ್ಯ ಸಂಪನ್ನೆ ಪದ್ಮ ಮಂದಿರ ನಂದನೆ ಬುದ್ಧಿ ವರದಾಯಕಳೆ ಕರುಣಾಬ್ಧಿಯೆ ಭಕ್ತರ ಪ್ರಿಯಳೆ 1 ಪನ್ನಗ ಗಿರಿಶರಿಂದಲಿ ಮಿಗಿಲೆನಿಪೆ ಶತಗುಣದಲಿ ಮೃಗನ ನಾಭಿ ನೊಸಲಿಗೊಪ್ಪುವ ಮೃಗಕಲಾನನೆ ದೇವಿಯೆ2 ಇಂದ್ರಸೇನಳೆ ವಿಪ್ರಕನ್ನಿಕೆ ಚಂದ್ರಾಧಿಷ್ಠನ ವಾಸಳೆ ಸಿರಿ ವಿಜಯವಿಠ್ಠಲನ ವಂದಿಪ ದ್ರೌಪದಿ ದೇವಿಯೆ3
--------------
ವಿಜಯದಾಸ
ಇಂದಿರೆ ಪ ನೀರಜ ನಿಲಯೆ ಅ.ಪ ಬಾರೆನ್ನಯ ಭವನಕೆ ಭಾಗ್ಯದ ನಿಧಿ ಪೂರಗೊಳಿಸೆ ಮನ ಕೋರಿಕೆಗಳನು1 ಕೊಳಲೂದುವ ಗೋವಳನಿಲ್ಲಿರುವನು ತಿಳಿನಗುಮೊಗದಲಿ ಬೆಳಗೆಲೆ ಭವನವ 2 ಚಿನ್ನದ ಹೊಗೆಯಾಡಿಸೆ ಈ ಮಂದಿರ ನಿನ್ನದೇ ಭಕುತ ಪ್ರಸನ್ನನ ಪ್ರಿಯಳೆ3
--------------
ವಿದ್ಯಾಪ್ರಸನ್ನತೀರ್ಥರು
ಚಿಂತೆಯಾತಕೆ ನಿನಗೆ ಎಲೆ ಪ್ರಿಯಳೆ | ಸಂತತ ತಿಳುಪುವೆನು ಭಕುತಿಯಿಂದಲಿ ಕೇಳು ಪ ಈ ಭೋಗ ನಮಗೆ ಯಾಕೆಂದು ನೀ ಕೇಳುವಿಯಾ | ಲಾಭವಲ್ಲದ ಇದು ನೋಡುವದಕೆ ಶ್ರೀ ಭೂರಮಣ ತಾನೆ ತಂದಿತ್ತ ವಿಚಿತ್ರ ವೈಭೋಗವಲ್ಲೆನೆಂದರೆ ಬಿಡದು ರಮಣೀ 1 ಹಿರಿಯರು ಈರ್ವಗೆ ಮಾಡಿದ ನಿಷ್ಠೆ ವಿ ಪರಿ ಸೌಖ್ಯವ ಹಿರಿದಾಗಿ ಕೊಟ್ಟು ನಮ್ಮನು ಪಾಲಿಸುವುದು ಬಲು ಮೊರೆಯಿಟ್ಟರೆ ಕೇಳು ಹರಿಯ ಮಹಿಮೆಗೆ ನಮೋ 2 ಕ್ಷೀರಸಾಗರದೊಳಗೆ ಓಲ್ಯಾಡುವವನ ವಿ ಚಾರಮಾಡದೆ ತಂದು ಹೃದಯಮಧ್ಯ ಸೇರಿಸುವಂದದಿ ಎನಗೆ ಇಲ್ಲಿಹ್ಯುದು ಸಂ ಸಾರದೊಳಗಿದ್ದ ಸುಖವಿನಿತುಂಟು ರಮಣೀ 3 ಸಂತಾನವಿಲ್ಲೆಂದು ಈರ್ವರೂ ಚಿಂತಿಪದ್ಯಾಕೆ ಪಿಂತೆ ಕಾಂತಾರದಲಿ ಬಾಲಮೃಗನ ಅಂತಕನ ಪುರಿಗೆ ಅಟ್ಟಿದ ದೋಷದಿಂದ ನಮ- ಗಿಂತು ತೋರಿತು ಗುಟ್ಟು ಪೇಳಬಾರದು ರಮಣೀ 4 ಈ ಜನ್ಮ ಬಂದದಕೆ ಇನ್ನಾದರೆಚ್ಚೆತ್ತು ಮಾಜಿಕೊಂಡಿದ್ದು ಜನರಂತೆ ನಡದು ಸಿರಿ ವಿಜಯವಿಠ್ಠಲನ ಸ ರೋಜ ಚರಣವನು ಪೂಜಿಸುವೆನು ರಮಣೀ 5
--------------
ವಿಜಯದಾಸ
ಮಹಾಲಕ್ಷ್ಮಿ ಏನಂತಿ ಕಮಲನಾಭನ ಪ್ರಿಯಳೆ ಜಗ- ದಾನಂತ ಪದುಮನಾಭನ ಭಾರ್ಯಳೆ ಪ ಸಿರಿ ಎನ್ನ ಮೊರೆ ಕೇಳೆ ಸಿದ್ಧವಾಗೆನಗ್ಹೇಳೆ ಶುದ್ಧ ಮಾರ್ಗವ ತೋರೆ ಬುದ್ಧಿಪೂರ್ವಕವಾಗಿ ಭುವನದೊಡೆಯನ ಪಾದ- ಪದ್ಮದಲ್ಲಾಸಕ್ತೆ ಬುದ್ಧಿ ಕೇಳುವೆ ಶಾಂತಿ1 ಜನಕಾತ್ಮಜಳೆ ನೀ ಜಗದೇಕ ಸುಂದರಿ ಜಗದಾಧಿಪತಿ ವಕ್ಷಸ್ಥಳ ಆಶ್ರಯಳೆ ಕೃತಿ ಸರ್ವಮಂಗಳಕಾರಿ ಪರಮ ಕರುಣದಿ ನೋಡೆ ವರಲಕ್ಷ್ಮಿ ದಯಮಾಡೆ ವರಗಳನೀಡ್ಯಾಡೆ 2 ಭೀಷ್ಮಕನ ಪುತ್ರಿ ಬಿರುದೇನೆ ಸರಸಿಜನೇತ್ರೆ ಮೃಡ ಬ್ರಹ್ಮರೊಡೆಯ ಭೀಮೇಶಕೃಷ್ಣನ ಮಿತ್ರೆ ಪೊಡವಿಗಧಿಕಳೆ ಜಯ ಮೂಡಲಗಿರಿವಾಸಿ ಬಿಡದೆ ಕೈ ಹಿಡಿದೆನ್ನ ಕಡೆಹಾಯ್ಸೆ ಕಮಲಾಕ್ಷಿ 3
--------------
ಹರಪನಹಳ್ಳಿಭೀಮವ್ವ
ವಾರಿಧಿ ಈರೇಳು ಲೋಕನಾಯಿಕೆ ಪ ದೂರ ನೋಡದಲೆ ಅಪ ನಿತ್ಯ ಕಲ್ಯಾಣಿ ವೇದವತಿಯೆ ರುಕ್ಮಿಣಿ ವೇದ ವೇದಾಂತದಭಿಮಾನಿ ವಾರಿಜ ಪಾಣಿ ಆದಿ ಮಧ್ಯಾಂತ ಗುಣಮಣಿ ಭೇದಗೊಳಿಪ ಕಾಮಕ್ರೋಧಗಳೋಡಿಸಿ ನೀ ದಯದಿಂದಲೆ ಮುಂದೆ ಗತಿಗೆ ಪಂಚ ಮಾಧವ ಪ್ರಿಯಳೆ 1 ಮಾಯಾ ಕೃತಿ ನಾಮದೊಳಪ್ಪ ಗುಣವಂತೆ ಕೋಮಲವಾದ ವೈಜಯಂತೆ ಧರಿಸಿದ ಶಾಂತೆ ಸೋಮಾರ್ಕ ಕೋಟಿ ಮಿಗೆ ಕಾಂತೆ ತಾಮರಸಾಂಬಕೆ ರಮೆ ಲಕುಮಿ ಸತ್ಯ ಭಾಮೆ ಭವಾರಣ್ಯ ಧೂಮಕೇತಳೆ ಯಾಮ ಯಾಮಕೆ ಹರಿ ನಾಮವ ನುಡಿಸಿ ಉತ್ತಮರೊಡನೆ ಪರಿ ಣಾಮವನೀಯುತ 2 ಅನೇಕಾಭರಣ ಭೂಷಿತೆ ಧರಣಿಜಾತೆ ಜ್ಞಾನಿಗಳ ಮನೋಪ್ರೀತೆ ಆನಂದಲೀಲೆ ವಿಖ್ಯಾತೆ ಆದಿದೇವತೆ ಕಾಣೆನೆ ದಾನಿ ಇಂದಿರಾದೇವಿ ನಾನಾ ಪರಿಯಲಿ ಶ್ರೀನಿಧಿ ವಿಜಯವಿಠ್ಠಲನ ಮೂರುತಿಯಧ್ಯಾನದೊಳಿಡುವಂಥ ಜ್ಞಾನ ಭಕುತಿ ಕೊಡು3
--------------
ವಿಜಯದಾಸ
ವೃಂದಾವನದೊಳು ಶೋಭಿಸುತಿರುವಳು ಸುಂದರ ಶ್ರೀ ತುಳಸಿ ಪ ನಂದನಂದನ ಗತಿ ಪ್ರಿಯಳೆಂದೆನಿಸುತ ಭವ ಬಂಧವ ಬಿಡಿಸುತ ಅ.ಪ ನಿತ್ಯವು ಪ್ರಾತಃಕಾಲದೊಳೆದ್ದು ಪವಿತ್ರ ಚಿತ್ತದಲಿ ಭಕ್ತಿಯಲಿ ಸ್ತೋತ್ರವ ಗೈಯುತ ಸುತ್ತಿ ಪ್ರದಕ್ಷಿಣೆ ಮತ್ತೆ ನಮಿಪರಘ ಬತ್ತಿಸಿ ಸಲಹುತ 1 ತುಳಸಿ ವೃಂದಾವನ ಮಹಿಮೆಯ ಮನದಲಿ ನಿಲಿಸಿ ಸೇವಿಸುವ ಸಜ್ಜನರ ಕಲಿದೋಷಗಳನು ಕಳೆದು ಸತತ ಶ್ರೀ ನಿಲಯನÉೂಳ್ ಭಕ್ತಿಯ ಕೊಡುವೆನೆಂದೆನುತ 2 ತುಳಸಿ ದಳದಿ ಶ್ರೀ ಕರಿಗಿರೀಶನ ವಿಲಸಿತ ಪೂಜೆಯ ಮಾಡುವರ ಸುಲಲಿತ ಸತ್ಪಥದೊಳು ನಡೆಸುತ ನಿ ರ್ಮಲಮತಿ ಕರುಣಿಸಿ ಸಲಹುವೆನೆನ್ನುತ 3
--------------
ವರಾವಾಣಿರಾಮರಾಯದಾಸರು
ಶ್ರೀ ತುಳಸಿ ಇಂದಿರೆ ವಂದೆ ಆನಂದೀ ತುಳಸೀದೇವಿ ನಂಬಿದೆ ಸುರಸುಂದರಿ ಪ ಎಂದೆಂದಿಗೂ ನಾ ನಿನ್ನಧೀನವೆ ಮಾತೆ ಸಿಂಧುಶಯನ ಪ್ರಿಯೆ ವರದೆ ಆನಂದದೆ ಅ.ಪ ಆದಿಕಾರಣ ವಿಷ್ಣು ಪ್ರಿಯಳೆ ಶ್ಯಾಮಲೆ ಕೋಮಲೆ ವಿಧಿಶರ್ವವಂದಿತೆ ವಿದ್ಯಾಧರಾದಿ ಅರ್ಚಿತೆ ಆದರದಲಿ ನಿನ್ನ ಪಾದಪಂಕಜಗಳ ಪ್ರತಿದಿನ ಸ್ಮರಿಪೆನೆ ವೃಂದಾವನಸ್ಥಿತೆ ತುಳಸಿ ಸುರೇಶ್ವರಿ1 ಈರಾರು ಅಕ್ಷರ ಮಂತ್ರ ಸುಪ್ರತಿಪಾದ್ಯೆ ನಾರದನುತೆ ನಾರಾಯಣ ಮನಃಪ್ರಿಯಳೆ ಪಾತಕ ಬಹು ಪಾಪಹಾರಿಣಿ ನಿನ್ನ ಎನ್ನ ವರದೆ ತುಳಸೀದೇವಿ 2 ನಿನ್ನ ಸ್ಮರಣೆ ಮಾಡೆ ಸರ್ವತ್ರ ವಿಜಯವಹುದೆ ನಿನ್ನ ಸಂದರ್ಶನದಿ ಸರ್ವಪಾಪವು ಪೋಪುವೆ ಪಾತಕ ತಾಪಾದಿ 1 ಗಳಳಿಯೆ ಘನ್ನ ಪ್ರಸನ್ನ ಶ್ರೀನಿವಾಸನ ನಿಜಸತಿ ವಿರಜೆ ತುಳಸೀಮಾತೆ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಜಾನಕಿದೇವಿ ನಿನ್ನ ನಾ ಧ್ಯಾನಿಪೆ ತಾಯಿ ಪ ಸುಜ್ಞಾಪ್ರದೆಯೆನ್ನ ಮನೋಭೀಷ್ಟವನೀಯ್ಯೆ ಅ.ಪ ಸಂಸಾರವಾರ್ಧಿಯೊಳಗೆ ಮುಳುಗಿ ಬಳಲುವೆನಮ್ಮ | ಇದು ಪಾರುಗಾಣೋದೆಂದಿಗೊ ನಿನ್ನ ಪತಿಯ ಕೇಳಮ್ಮ 1 ವಿನುತ ಪದಾಂಬುಜಯುಗಳೆ ಜಗದಂಬೆ ನಿನ್ನ ನಂಬಿದೆ ವಿಶ್ವಂಭರಪ್ರಿಯಳೆ 2 ಸಾಮಜರಾಜವರದ ಶ್ರೀಗುರುರಾಮವಿಠಲನ | ಹೃ ದ್ಧಾಮದಲ್ಲಿ ತೋರಿಸಿ ಪರಚಿಂತೆ ಬಿಡಿಸೆನ್ನ 3
--------------
ಗುರುರಾಮವಿಠಲ
ಸರಸಿಜಾಲಯೆ ಪೊರೆಯೆ ಬೇಗನೇ ಹೇ ಮಾತೆ ಪ ಸಾರಸಭವನ ವೀರ ಮಾತೆಯೆ ನೀರಜಾಕ್ಷಿಯೆ ಹೇ ಮಾತೆ ಸಾರಸಾಕ್ಷ ಪರಮಪ್ರಿಯಳೆ ಸಾರಿಬಾರೆನ್ನ ಹೇ ಮಾತೆ 1 ತುರುವು ತನ್ನ ಕರುವ ಧ್ವನಿಯಂ ಅರಿತು ಬಾರದೆ ಹೇ ಮಾತೆ ಈ ತೆರದಿ ಎನ್ನ ಮೊರೆಯ ಕೇಳಿ ಕರವ ಹಿಡಿಯೆ ಹೇ ಮಾತೆ 2 ಪರಿಯು ಯಾರೆ ಸಿರಿಯು ನಿನಗೆ ಪರಮಪಾವನೆ ಹೇ ಮಾತೆ ಕರುಣದಿಂದ ಪೊರೆದು ತೋರೆ ಸಿರಿರಂಗೇಶವಿಠಲನ ಹೇ ಮಾತೆ 3
--------------
ರಂಗೇಶವಿಠಲದಾಸರು
ಯಾತಕೆ ಕೃಪೆಮಾಡದೆ ಯಿರುತಿಹೆ ಸಿರಿಯೇಪೀತಾಂಬರಧರ ತರುಣಿಯೆ ಪಪಾತಕಹಾರಿಣಿ ಭಾವಜನನೀಭಕ್ತ ಕುಟುಂಬಿನಿಭವಭಯ ನಾಶಿನಿ 1ದಾರಿದ್ರ್ಯಾಂಬುಧಿ ತರುಣೋಪಾಯವುತೋರಿಸು ರಘುಕುಲದೊರೆ ಸುಪ್ರಿಯಳೆ 2ರತ್ನಾಭರಣಯುಕ್ತ ಸುಗಾತ್ರೇರತ್ನಾಕರಸುತೇ ರಾಜೀವಾಲಯೇ 3ಹೇಮಭೂಧರ ಸ್ವಾಮಿನಿ ತುಲಸೀರಾಮದಾಸ ಸುಕ್ಷೇಮವು ನಿನ್ನದು 4
--------------
ತುಳಸೀರಾಮದಾಸರು
ಲಕ್ಷ್ಮೀದೇವಿ151ಅಂಬೆ ಶ್ರೀ ಅಂಬೆ ಜಗದಂಬೆ ಶರಣೆಂಬೆಅಂಬುಜಾಯತಾಂಬಕನ ಇಂಬಲಿಹ ಬೊಂಬೆ ಪ.ಕಾವನಯ್ಯನ ಭಟರ ಕಾವೆ ವರವೀವೆದೇವಾದಿ ದೇವರ್ಕಳಿಗೆ ಕುಲದ ದೇವೆ ವಿ?ಭಾವಕರ ಜೀವೆ ಚಿದ್ಭವನೈದಿಸುವೆಸೇವಕರಾವೆ ಕಾಯಿ ಎನುವೆ ಧನ್ಯ ಎನುವೆ 1ಮಾಯಾಗುಣಮಯ ಅಂಬಾ ತರುವ ಹೊಂದಿರುವೆತಾಯಂದಿರಖಿಳಾರ್ಥ ತಾಯಿ ನೀನೀವೆಬಾಯೆನ್ನ ತಾಯೆನ್ನಲಾಯಾಸ ಬಿಡಿಸುವೆ ಎನ್ನಯ ಪ್ರಿಯಳೆ ಪೀಯೂಷನುಣಿಸುವೆ 2ಬೊಮ್ಮನಿಗಮ್ಮ ಪರಬೊಮ್ಮನೊಲಿಸಮ್ಮಸುಮ್ಮನಸರ ಮನೋರಮ್ಮೆ ಶ್ರೀರಮ್ಮೆನಿಮ್ಮ ಮನ ನಮ್ಮರಿಯಾ ಉಮ್ಮಯವೀಯಮ್ಮನಮ್ಮಯ ಪ್ರಸನ್ನವೆಂಕಟನ ಮೆಚ್ಚಿನಮ್ಮ 3
--------------
ಪ್ರಸನ್ನವೆಂಕಟದಾಸರು
ವೃಂದಾವನದೇವಿ ನಮೋನಮೋ-ಚೆಲ್ವ-|ಮಂದರಧರನ ಮನಃ ಪ್ರಿಯಳೆ ಪನಿನ್ನ ಸೇವಿಸಿ ಉದಕವನು ಎರೆಯಲು |ಮುನ್ನ ಮಾಡಿದ ಪಾಪವಳಿಯುವುದು ||ಎನ್ನ ಇಪ್ಪತ್ತೊಂದು ಕುಲದವರಿಗೆ ಎಲ್ಲ |ಉನ್ನತ ವೈಕುಂಠಪದವೀವಳೆ 1ಒಂದೊಂದು ದಳದಲಿ ಒಂದೊಂದು ಮೂರುತಿ |ಸಂದಣಿನೆವೆ ಬಹು ಗುಪಿತದಲಿ ||ಬಂದು ಕುಂಕುಮ ಶಂಖಚಕ್ರವಿರಿಸಿದರೆ |ತಂದೆ ನಾರಾಯಣ ಕರೆದೊಯ್ಯುವ 2ಹರಿಗೆ ಅರ್ಪಿಸಿದ ತುಳಸಿ ನಿರ್ಮಾಲ್ಯವ |ಕೊರಳೊಳು ಧರಿಸಿ ಕರ್ಣದೊಳಿಟ್ಟರೆ ||ದುರಿತರಾಶಿಗಳೆಲ್ಲ ಅಂಜಿ ಓಡುವುವು ಶ್ರೀ-|ಹರಿಯು ತನ್ನವರೆಂದು ಕೈಪಿಡಿವ 3ಹತ್ತು ಪ್ರದಕ್ಷಿಣಿ ಹತ್ತು ವಂದನೆ ಮಾಡೆ |ಉತ್ತಮ ವೈಕುಂಠ ಪದವೀವಳು ||ಭಕ್ತಿಯಿಂದಲಿ ಬಂದು ಕೈಮುಗಿದವರನು |ಕರ್ತೃನಾರಾಯಣ ಕರೆದೊಯ್ವನು 4ಆವಾವ ಪರಿಯಲಿ ಸೇವೆಯ ಮಾಡಲು |ಪಾವನ ವೈಕುಂಠಪದವೀವಳೆ ||ದೇವ ಶ್ರೀಪುರಂದರವಿಠಲರಾಯನ |ದೇವಿ ನಿನ್ನ ಮುಟ್ಟಿತ್ರಾಹಿಎಂಬೆ5
--------------
ಪುರಂದರದಾಸರು