ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೂರದಿ ನಿಲ್ಲೆಲೆ ಬಾಲೆ ಎನ್ನ ಜಾರನು ಎಂದು ತಿಳಿದೆಯಾ ಜಾರೆ ಅಹಲ್ಯೆಯ ನಾರಿ ಮಾಡಿದ ಬ್ರಹ್ಮಚಾರಿಯೆಂದರಿತೆನೊ 1 ಅಂಗಸಂಗ ಯಾಚಿಸಲು ಎನ್ನ ಅ ನಂಗನೆಂದು ಭ್ರಮಿಸಿದೆಯಾ ಸಂಗದಿಂದ ಪಾಪಭಂಗ ಮಾಡುವ ಅ ನಂಗಜನಕನೆಂದರಿತೆ 2 ಪತಿಯನು ಬಿಟ್ಟು ನೀ ಬಂದು ಬಾಲೆ ಪತಿತಳಾಗದಿರು ಇಂದು ಪತಿತ ಪಾವನ ಜಗತ್ಪತಿಯು ಎನಗೆ ನೀನೆ ಪತಿಯೆಂದು ತಿಳಿದು ಬಂದಿರುವೆ 3 ನಿಂದಿಸರೇ ನಿನ್ನ ಜನರು ಬಾಲೆ ಹಿಂದು ಮುಂದು ನುಡಿಗಳಲಿ ಮುಕುಂದನೆ ಪ್ರಿಯಳನು ನಿಂದಿಪ ಜನರೆಲ್ಲ ಮಂದಮತಿಗಳಲ್ಲವೇನೊ 4 ನಿನ್ನ ನಡತೆ ತರವಲ್ಲ ಬಾಲೆ ಚೆನ್ನಾಗಿ ಯೋಚಿಸು ಎಲ್ಲ ಇನ್ನು ತಾಳಲಾರೆ ಕನ್ಯೆಯ ಮೇಲೆ ಪ್ರ ಸನ್ನನಾಗೋ ಶ್ರೀಕೃಷ್ಣ 5
--------------
ವಿದ್ಯಾಪ್ರಸನ್ನತೀರ್ಥರು
ರಾಮನಾಮದಿ ಪಾಮರರಿಗೆ ಪ್ರೇಮ ಪುಟ್ಟುವುದೆ ಪ. ಭೃತ್ಯ ನ್ಯಾಯವರಿಯದ ಕಾಮಿಗಿದರೊಳು ನೇಮ ಬಪ್ಪುದೆ ಅ.ಪ. ದಾಶರಥಿ ಎನಿಸಿ ಜಗದೊಳು ಶ್ರೀಶನವತರಿಸೆ ಕೌಶಿಕನ ಮಖ ಘಾಸಿಗೈಯ್ಯುವ ದೋಷಿಗಳ ತಾ ನಾಶಗೈಸಿದ 1 ಶಿಲೆಯ ಪೆಣ್ಗೈದು ಲಲನೆ ಸೀತೆಯ ಒಲುಮೆಯಿಂ ವರಿಸಿ ಕುಲವನಳಿದನ ಛಲವ ಭಂಗಿಸಿ ಲಲನೆ ಸಹಿತದಿ ನೆಲಸೆ ಪುರದಲಿ 2 ಅನುಜ ಸ ಹಿತ ವನಕೆ ಬರೆ ಖ್ಯಾತಿ ರಾವಣನಾ ತಳೋದರಿ ಪ್ರೀತಿಸಲು ವಿಘಾತಿಗೈಸಿದ 3 ಮಾಯಾಮೃಗ ಕಂಡು ಪ್ರಿಯ ನೀಡೆನೆ ಸಾಯಕವನೆಸೆಯೆ ಕಾಯ ಬಿಡುತಿರೆ ಹೇಯ ರಾವಣ ಪ್ರಿಯಳನುಯ್ಯೆ ನೋಯ್ದ ಮನದಲಿ 4 ಬೆಟ್ಟವನೆ ಕಂಡು ಕುಟ್ಟಿ ವಾಲಿಯ ಪಟ್ಟ ಕಪಿಗಿತ್ತು ಶ್ರೇಷ್ಠ ಹನುಮಗೆ ಕೊಟ್ಟು ಉಂಗುರ ಪಟ್ಟದರಸಿಗೆ ಮುಟ್ಟಿಸೆಂದ 5 ಕೇಳಿ ಶ್ರೀ ವಾರ್ತೆ ತಾಳೀ ಹರುಷವ ಬೀಳು ಕೊಂಡಲ್ಲಿಂ ತಾಳೆ ಕೋಪವ ಕೇಳಿ ವನಧಿ ಸೀಳು ಆಗಲು ಶಿಲೆಯ ಬಿಗಿದ 6 ದುಷ್ಟ ರಾವಣನ ಕುಟ್ಟಿ ಶಿರವನು ಪಟ್ಟದರಸಿ ಕೂಡಿ ಶ್ರೇಷ್ಠ ಭರತಗೆ ಕೊಟ್ಟು ದಶರ್Àನ ಪಟ್ಟವಾಳಿದ ದಿಟ್ಟಯೋಧ್ಯೆದಿ 7 ರಾಮ ರಾಮನೆಂಬಾ ಹನುಮಗೆ ಪ್ರೇಮದಿಂದೊಲಿದು ಧಾಮ ಅಜಪದ ನೇಮಿಸಿ ಮುಂದೆ ಸೋಮನೆನಿಸಿದ ಭಾನು ವಂಶಕೆ8 ಬೆಟ್ಟದೊಡೆಯನ ಇಷ್ಟು ಮಹಿಮೆಯ ಮುಟ್ಟಿಮನ ಭಜಿಸಿ ದಿಟ್ಟ ಗೋಪಾಲಕೃಷ್ಣವಿಠ್ಠಲ ಶ್ರೇಷ್ಠನೆನ್ನುವ ಶ್ರೇಷ್ಠಗಲ್ಲದೆ 9
--------------
ಅಂಬಾಬಾಯಿ