ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸೆನ್ನ ಪಾಲಿಸೋ ಎನ್ನಾ ಪ ಪಾಲಿಸೆನ್ನ ಗುರು ಫಾಲನಯನಾಸುರಪಾಲನ ಪಿತ ಶ್ರೀ ಪಾರ್ವತಿರಮಣಅ.ಪ. ಲಿಂಗವೇರಿ ಸುರರಂಗದಿ ಚರಿಸುವ ಶಿರಿರಂಗನ ಪದ ಪವನನ ಭೃಂಗಾ 1 ಕವಿ ವಿನುತ ಪರರಾಳಿಯ ಪ್ರಿಯಬಾಲಾ 2 ನವಿಲನೇರಿ ಬರುತಿಪ್ಪನ ಪಿತತಂದೆವರದಗೋಪಾಲವಿಠಲನ ಆಪ್ತಾ 3
--------------
ತಂದೆವರದಗೋಪಾಲವಿಠಲರು
ಪ್ರಾಣದೇವನ ನಮಿಪೆ ನಮೋ ಪ್ರಾಣಕಧೀಶನೆ ಶರಣು ನಮೋ ಕಾಣಿಸು ಹರಿಯಂಘ್ರಿಯನು ನಮೋ ಪ್ರಾಣ ಪಂಚÀರೂಪಾತ್ಮ ನಮೋ ಪ. ಅಂಜನೆ ಆತ್ಮಜ ಕುವರ ನಮೋ ಸಂಜೀವನ ಗಿರಿ ತಂದೆ ನಮೋ ನಂಜುಂಡನ ಪ್ರಿಯ ಜನಕ ನಮೋ ಕಂಜಾಕ್ಷನ ದಾಸಾರ್ಯ ನಮೊ1 ಆಪ್ತವರ್ಗ ನಿರ್ಧೂತ ನಮೋ ಶಕ್ತ ಜರಾದಿ ಹಂತ ನಮೋ ತಪ್ತಕಾಂಚನ ಸುದೀಪ್ತ ನಮೊ 2 ಏಕವಿಂಶತಿ ಮತಧ್ವಂಸ ನಮೋ ಶ್ರೀಕಳತ್ರಪ್ರಿಯ ಪಾತ್ರ ನಮೋ ಏಕ ಚತುರ ನವಗ್ರಂಥ ನಮೋ ಜೋಕೆಯಿಂದ ನಿರ್ಮಿಸಿದೆ ನಮೋ 3 ಮುಕ್ತ ಜೀವರ ಸ್ತುತ್ಯ ನಮೋ ಯುಕ್ತಿವಂತ ಜಗದ್ವ್ಯಾಪ್ತ ನಮೋ ಶಕ್ತಿವಂತ ಶುದ್ಧಾತ್ಮ ನಮೋ ಭಕ್ತಭರಿತ ಹರಿಪ್ರೀತ ನಮೋ 4 ನಮೋ ನಮೋ ಶ್ರೀಗೋಪಾಲ ಕೃಷ್ಣವಿಠ್ಠಲನಿಗೆ ಪ್ರಿಯಬಾಲ ನಮೋ ನಮೋ ಶ್ರೀ ಭಾರತಿಲೋಲ ನಮಿಸುವೆ ಚಳ್ಳಕೆರೆಯ ಪಾಲ 5
--------------
ಅಂಬಾಬಾಯಿ
ಲಾಲಿಮನುಕುಲತಿಲಕ ಮದನಾರಿವಿನುತ ಲಾಲಿಜನಕಜಾಮಾತ ಜಾನಕೀ ಸಮೇತ ಪ. ಕೌಸಲ್ಯಾಪ್ರಿಯಬಾಲ ಕನಕಮಯ ಚೇಲ ಕೌಶಿಕಕ್ರತುಪಾಲ ಕರುಣಾಲವಾಲ ಪೋಷಿತಾಮರಜಾಲ ಬಾಲೇಂದು ನಿಭಫಾಲ ದಶಕಂಠಮುಖಕಾಲ ಜಾನಕೀಲೋಲ 1 ನಾಕೇಶನುತಚರಣ ನಕ್ತಂಚರಶಮನ ಶ್ರೀಕಾಮಿನೀಸದನ ರಾಜೀವನಯನ ಲೋಕನಾಯಕ ಸರ್ವ ಲೋಕಪಾಲಕ ದಿವ್ಯ ಸಾಕೇತಪುರನಿಲಯ ಸನಕಾದಿಗೇಯ 2 ಈಶಸನ್ನುತ ನಾಮ ನೀಲಮೇಘಶ್ಯಾಮ ಶೇಷಾದ್ರಿಶಿಖರಧಾಮ ಶ್ರೀರಾಮನಾಮ ಕ್ಷೇಶಪಾಶವಿರಾಮ ವಿಶ್ವಜನಸುಪ್ರೇಮ ಕೋಸಲಾಧಿಪರಾಮ ಪರಿಪೂರ್ಣಕಾಮ 3
--------------
ನಂಜನಗೂಡು ತಿರುಮಲಾಂಬಾ
ಸ್ವಾಮಿಯ ನೆನೆಯೋ ಪಾಮರ ಮನಸೆ ನೀ ತಾಮಸವನು ನೀಗಿ ಪ ಕಾಮಾದಿಗಳ ಜೈಸಾಮಹಿಮ ಸತ್ಯ ಭಾಮೇಶಗತಿಯೆಂದು ನೇಮವಹಿಸಿ ಬಿಡದೆ ನಾಮ ಪೊಗಳುವರ ಕಾಮಿತಗಳನಿತ್ತು ಪ್ರೇಮದಿಂ ಕಾಯ್ವಂಥ 1 ಗೋಪ ಗೋಪತಿ ನಮಿತ ಗೋಪಿಯ ಪ್ರಿಯಬಾಲ ಪಾಪನಿವಾರಣ ಆ ಪರಬ್ರಹ್ಮನ ಶ್ರೀಪಾದ ಪೊಗಳಲು ತಾಪತ್ರಯಂಗಳ ಲೋಪಮಾಡುವಂಥ 2 ಪರಮ ಶ್ರೀಗುರು ಎಂದು ಪರಮಾತ್ಮ ಶ್ರೀರಾಮ ಚರಣಸಾನ್ನಿಧ್ಯಕ್ಹೊಂದು ನರಕಯಾತನೆ ಗೆಲಿಸಿ ಬರುತಿರ್ಪ ಕಷ್ಟಗಳ ಪರಿಹರಿಸಿ ಕರಪಿಡಿದು ಕರುಣದಿ ಸಲಹುವ 3
--------------
ರಾಮದಾಸರು