ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾಗವೇಣಿಯೆ ಕರೆದು ತಾರೆ ನಾಗಶಯನನಾ ಪ ನಗಧರ ಪ್ರಿಯನೆನಿಪ ನಾಗವರದನಾ ಅ.ಪ ಜಲವಪೊಕ್ಕು ತಮ ನಲಿದ ಜಲರುಹಾಕ್ಷನಾ ಜಲಧಿ ಮಥನವನ್ನು ಗೈದ ಚೆಲುವರರಸನಾ 1 ಧರಣಿಪೊಯ್ದ ಖಳನ ಸೀಳ್ದ ನಳಿನನಾಭನಾ ಭರದಿ ಹೊಳೆವ ಕಂಬದಲ್ಲಿ ತರಳಗೊಲಿದನಾ 2 ಧರಣಿ ಈರಡಿಯ ಮಾಡಿ ಸುರರ ಪೊರೆದನಾ ಧರಣಿಪಾಲಕುಲವ ತರಿದ ಪರಶುರಾಮನಾ 3 ಧರಣಿಸುತೆಯನೊಯ್ದ ಖಳನ ಶಿರವನರಿದನಾ ತರಳತನದಿ ವೊರಳನೆಳೆದ ತರಳ ಕೃಷ್ಣನಾ 4 ತರುಣಿಯರ ವ್ರತವನಳಿದು ಪುರವಗೆಲಿದನಾ ಹರುಷದಿಂದ ತುರಗವೇರಿ ನಲಿವ ಸುಗುಣನಾ 5 ಸುರಪುರದಿ ನಲಿವಿನಿಂದ ನೆರೆದು ನಿಂದನಾ ಶರಣರಕ್ಷ ಲಕ್ಷ್ಮಿಯರಸ ಪರಮಪುರುಷನಾ 6
--------------
ಕವಿ ಲಕ್ಷ್ಮೀಶ
ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ ಪಂಕಜಾಲಯ ಸುಪ್ರೀಯ ಪ ಅಹಿ ಕಂಕಣನುತ ಪದ- ಪಂಕಜ ತೋರೊ ಮೀನಾಂಕನ ಜನಕ ಅ.ಪ. ಪತಿತ ಪಾವನ ಮೋಹನ, ಪಾಲಿಸೊ ಎನ್ನ ಸತತ ಬಿಡದೆ ನೋಡೆನ್ನ ಹಿತರಹಿತರಾದವರನ್ನ ಪೊರೆದಳಿದೆ ಘನ್ನ ನತಜನರಿಗೆ ಪ್ರಸನ್ನ ದಿತಿಸುತ ತತಿಸಂಗತಿಯಲಿ ಮಥಿಸಲು ವನಧಿಯ ಅತಿ ಸಮ್ಮತಿಯಲಿ ಚತುರ ಧರಿಸಿ ಪರ್ವತ ಸುರತತಿಗ- ಮೃತ ವುಣಿಸಿದ ಶಾಶ್ವತಗತಿನಾಥ 1 ಸತಿಯ ಕಾಯಿದ ವಿನೋದ ಸಾಮಜವರದ ಚತುರದಶ ಲೋಕಾಧಿನಾಥ ಗತಿ ನೀನೆ ಮಹಾಪ್ರಸಾದ ಪರಮಮೋದ ಅತಿಶಯದಿ ಪೊಳೆವ ಪಾದ ಶತಪತ್ರವು ಹೃದ್ಗತವಾಗಲಿ ಉ- ನ್ನತ ಮಹಿಮನೆ ಕೀರುತಿವಂತನೆ ಅ- ಪ್ರತಿಭಾರತಮಲ್ಲ ಮೂರವತಾರಗೆ ಅತಿಪ್ರಿಯನೆನಿಪ ಮೂರತಿ ಚತುರದೇವ 2 ಸ್ಥಿತ ಮನ ಮಾಡೋ ಭವಭಂಗ ಸಂಗ ನಿಸ್ಸಂಗ ಚ್ಯುತಿ ದೂರ ಶೌರೀ ಕಾಳಿಂಗ- ದುರಿತ ಮಾತಂಗ-ಮರಿಗೆ ಸಿಂಗ ತುತಿಪೆ ಕರುಣಾಂತರಂಗ ಕ್ಷಿತಿಯೊಳಗಹಿ ಪರ್ವತನಿವಾಸನೆ ಖರೆಗೊಳಿಸುವ ದುರ್ಮತಿಯನು ತೊಲಗಿಸಿ ತ್ವತು ಪಾದದಲಿಡು ಮತಿಯಲ್ಲದೆ ತಿರು - ಪತಿ ವಿಜಯವಿಠ್ಠಲ ಇತರವನರಿಯೆ 3
--------------
ವಿಜಯದಾಸ
ತುತಿಸಲಳವೇ ಶ್ರೀ ವರದೇಂದ್ರನಾ ಅಮಿತ ಮಹಿಮ |ಕ್ಷಿತಿಸುರಗುರುಸುಗುಣ ಸಾಂದ್ರನ ಮುನಿಪನ ಪಭಾಗವತರ ಪ್ರಿಯನೆನಿಪನ ಪ್ರಣತ ಜನರ |ರೋಗ ಕಳೆದು ಸುಖ ಕೊಡುವನ ಕುಮತಗಳನು |ಬೇಗ ಗೆಲಿದು ಸುಮತಿ ಕೊಡುವನ ದಯಾ ಸಮುದ್ರ |ಯೋಗಿವರ್ಯರವಿಪ್ರಕಾಶನಾ ಅನಘನ 1ರಾಘವೇಂದ್ರರನುಗ್ರಹ ಪಾತ್ರನ ವೈಷಿಕದ ಕು |ಭೋಗತೊರೆದ ನಿಷ್ಪ್ರಪಂಚನ ದುರ್ಮತಿಗಳ |ಯೋಗಕೊಲಿಯದಿಪ್ಪ ಧೀರನಭವಭಯವನು |ನೀಗಿಹರಿಯ ಸದನವ ತೋರ್ಪನಾ ವರದನ 2ಕಲಿಮಲಾಪಹಾರ ಶಕ್ತನ, ಪ್ರಾಣೇಶ ವಿಠಲ |ನೊಲಿಸಿಕೊಂಡಮಿತ ಸಮರ್ಥನ ಮಾರುತ ಮತ ||ಜಲಧಿಪೆರ್ಚಿಸುತಿಹ ಚಂದ್ರನ ಬೃಹತ್ಸು ತಟ ನೀ |ನಿಲಯಶ್ರೀ ವಸುಧೇಂದ್ರ ಪುತ್ರನ ವಿರಕ್ತನ3
--------------
ಪ್ರಾಣೇಶದಾಸರು