ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಾರತಿ ಎತ್ತುವೆ ಮಾರಮಣಗೆ ಪ ಅಂಗಜ ಜನಕ ಶುಭಾಂಗ ಶ್ರೀರಂಗಗೆ ಅ.ಪ ವೈರಾಜ್ಯ ಸ್ಯಾರಾಜ್ಯ ಮಹ ಪರಮೇಷ್ಠಿ ರಾಜ್ಯ ಸಾರ್ವಭೌಮ ನೀನೆಂದು 1 ವೇದೋಕ್ತ ಮಂತ್ರ ಪುಷ್ಪಾಂಜಲಿಯಿಂದ ನಿನ್ನಯ ಪಾದಕ್ಕೆರಗಿ ಪುನಃ ಪ್ರಾರ್ಥನೆಗೆಯ್ಯುತ 2 ಪಾಪಿಗಳೊಳಗತಿ ಪಾಪಿಯು ನಾನೆನ್ನ ತಾಪತ್ರಯವ ಬಿಡಿಸಿ ಕಾಪಾಡು ನೀನೆಂದು 3 ಪದಜಾನುಕರಗಳಿಂ ಉದರ ಹೃದಯದಿ ಶಿ- ರದಿ ದೃಷ್ಟ್ಯಮನಸವಚನಸಾಷ್ಟಾಂಗದಿಂ ಮಣಿದು 4 ಕಂದರ್ಪ ಕೋಟಿ ಲಾವಣ್ಯ ಸರ್ಪಶಯನ ನಮ್ಮಪ್ಪಾ ತಿಮ್ಮಪ್ಪನೆಂದು 5 ವಾಹನ ವಸ್ತೂಗಳರ್ಪಿಸಿ ಸರ್ವೋತ್ತಮ ನೀನೆಂದ್ಹೊಗಳಿ 6 ಅಪರಾಧವೆಮ್ಮಿಂದಲಾಗುವುದೆಲ್ಲ ಕ್ಷಮಿಸು ಕಪಟನಾಟಕ ಸೂತ್ರಧಾರೀ ಗುರುರಾಮವಿಠಲ 7
--------------
ಗುರುರಾಮವಿಠಲ