ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಸುಬ್ರಹ್ಮಣ್ಯ ಸ್ತೋತ್ರ) ಬ್ರಹ್ಮಣ್ಯ ಪುಂಜವನ್ನು ಕಾವಾ ಮೊರೆಯ ಕೋಳೂ ಸು- ಬ್ರಹ್ಮಣ್ಯಕ್ಷೇತ್ರಪಾಲದೇವಾ ಪ. ಶ್ರೀಶನ ಕರುಣ ಪೂರ್ಣಪಾತ್ರ ಷಡ್ವಕ್ತಪಾರ್ವ ತೀಶಸಂಪ್ರೀತಿಕಾರಿಪತ್ರ ಸುರನಿಕರ ಭಯತ್ರ ಸೂಸುತ ದೇಹದಿ ವಾಸವಾಗಿಹ ತ್ವ- ಗ್ದೋಷವ ತರಿವ ಮಹಾಸುರ ದಾರಿ1 ಸಾಂಬಾಸನತ್ಕುಮಾರನೆನಿಸಿ ಸಾಂಖ್ಯಾಯೋಗಗಳ ನಂಬಿದ ಭಕ್ತ ಜನಕೆ ಸಲಿಸಿ ದೈತ್ಯರ ಜವಗೆಡಿಸಿ ಜಾಂಬವತೀವದನಾಂಬುಜ ವಿಕಸನ ಕುಂಬುಜನಾಭ ಕುಟುಂಬಾಭರಣೀ 2 ಶೇಷಾದ್ರಿವಾಸಲಕ್ಷ್ಮೀಪತಿಯ ಪೂರ್ಣಾನುಗ್ರಹದಿ ವಾಸುಕಿಗೊಲಿದು ವಿಪ್ರತತಿಯ ಸಲಹುವ ಭೂಪತಿಯ ದೋಷವಾರಿ ಧಾರಾತೀರದಲಿ ನಿವಾಸಗೊಂಡ ನಿನ್ನಾಶ್ರಯ ಕರುಣಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
ದಯದಿ ಪಾಲಿಸೋ ವಾದಿರಾಜ ಗುರುವೇ | ನತಜನ ಸುರತರುವೇ ಪ ಹಯಮುಖ ಪದ ಸದ್ವನಜ ಸುಭೃಂಗಾ | ಪಾಲಿಸು ದಯಾಪಾಂಗಾ ಅ.ಪ. ರಜತ ಪೀಠದೊಳು ಕೃಷ್ಣ ಪೂಜೆಗಳನ್ನು | ಪರಿಪರಿ ರಚಿಸಿನ್ನೂ |ಕುಜನರ ಭೇದಿಪ ಭಜನೆ ಪದಗಳನ್ನೂ | ಸುಜನಕಿತ್ತೆ ನೀನೂ ||ಭಜಿಸೆ ಬಂದವರಿಗನ್ನೋದಕಗಳನೂ | ಏರ್ಪಡಿಸಿನ್ನೂ |ನಿಜ ಜನರ ಪೊರೆವ ಸುವ್ಯವಸ್ಥೆಗಳನ್ನೂ | ರಚಿಸಿ ಮೆರೆದೆ ನೀನೂ 1 ಅಂತರಂಗದಿ ಪೂಜಿಪೆ ಹಯವದನನ್ನ | ಭಾವಿ ಮರುತ ಎನ್ನ|ಅಂತರಂಗದೊಳು ನೆಲಿಸುತ ನೀಯೆನ್ನ | ಸಂಚಿತಾದಿಯನ್ನ ||ಅಂತಗಾಣಿಪ ಶ್ರೀ ಅಂತರಾತ್ಮನನ್ನ | ಚಿಂತೆ ಪಾಲಿಸು ಮುನ್ನ |ಯೆಂತು ವರ್ಣಿಸಲಿ ತವ ಮಹಿಮೆಗಳನ್ನ | ನಿಂತು ನಲಿ ವದನದೊಳೆನ್ನ 2| ಭರತ ಖಂಡದಿ ತೀರ್ಥ ಕ್ಷೇತ್ರ ಚರಿಸೀ | ತತ್ಪ್ರಂಬಂಧ ರಚಿಸೀ |ವಿರಚಿಸಿದೆಯೋ ರುಕ್ಮಿಣೀಶ ಕಾವ್ಯಾ | ಯುಕ್ತಿಮಲ್ಲಿಕೇಯಾ ||ಸುರಸ ಪದಗಳಲಿ ತತ್ವ ಪುಂಜವನ್ನ | ರಚಿಸಿ ಮೆರೆದೆರನ್ನ |ನಿರಣಯಾದಿಗಳ ಭಾವಗಳನ್ನ | ಕನ್ನಡದಿ ರಚಿಸದೆ ಘನ್ನ 3 ಸ್ವಾದಿ ಪುರದಿ ಬಲು ಮುದದಲಿ ಮೆರೆದಾ | ಬಿರಿದು ಪೊತ್ತ ಶೈವಾವಾದಿಸೆ ನಿನ್ನೊಳು ಸೋತು ನಿಂತನವ | ಪಾದದಿ ಬಿದ್ದು ಅವ || ಮೇದಿನಿಯೊಳ್ ನಿಮಗೆ ಸಮರು ಆವ | ಎಂದೊಪ್ಪಿಸಿದನು ಅವ |ಮೋದದಿಂದಲಿ ಬಸವ ಚಿನ್ಹಿತನಾದ | ತವ ಚರಿತೆ ಆಗಾಧಾ 4 ಪಂಚ ಸುವೃಂದಾವನಗಳ ರಚಿಸುತ್ತಾ | ತಾವ್ನಡುವಿರ ಬೇಕೆನುತಾ |ಅಂಚೆಗಮನ ಪ್ರಾಣ ಗಂಗಾಧರನಾ | ಗುರು ಗೋವಿಂದ ವಿಠಲನಾ ||ಸಂಚಿಂತಿಸಿ ನಿಲಿಸುತ ನಾಲ್ಕರಲ್ಲೀ | ಚತುರ ದಿಕ್ಕಿನಲ್ಲೀ |ಪಂಚರೂಪಿ ನಿಷ್ಕಿಂಚಿನ ಪ್ರಿಯ ಹರಿಯಾ | ಪುರವ ಸೇರಿದಯ್ಯಾ 5
--------------
ಗುರುಗೋವಿಂದವಿಠಲರು