ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಯೇಷ್ಠಾಭಿಷೇಕ ಗೀತೆ ನೋಡಿದೆ ಜ್ಯೇಷ್ಠಾಭಿಷೇಕದುತ್ಸವವ ಸೃಷ್ಟಿಯೊಳಾಶ್ಚರ್ಯವಾ ಪ. [ಒಪ್ಪುವ] ಮಿಥುನಮಾಸದ ಶುಕ್ಲಪಕ್ಷ ಚತುರ್ದಶಿಯಲ್ಲಿ ವಿಪ್ರರು ಕೂಡಿ ಸಹ್ಯೋದ್ಭವೆಯನ್ನು ತರುವೆವೆಂದೆನುತಲೆ ವಿಪ್ರರು ಪೋದ ವಿಚಿತ್ರ[ವ] ನೋಡಿದೆ 1 ಅಂದು ಗಜೇಂದ್ರನ ತಂದು ಸಿಂಗಾರ ಮಾಡಿ ಕುಂದಣದ ಛತ್ರಿ ಚಾಮರ ಬೀಸುತ್ತ ವಿಪ್ರರು ಬರುವುದ 2 ವೇದಘೋಷಗಳಿಂದ ವಿಪ್ರರು ಕೊಡಗಳ ವಿ ನೋದದಿಂದಲೆ ಪೊತ್ತು ತಾ[ಳ] ತಮ್ಮಟೆ ಭೇರಿ ನಾನಾ ವಾದ್ಯಂಗಳ ಮುಂದೆ ರಜತದಕೊಡ ಬರುವ ವೈಭೋಗವ 3 ಕರಿ ಕೊಡವನ್ನು ಇಳಿಸಲು ಅಸಮಾನ [2ನಿ2]ರಿಗಳ ಬಿಚ್ಚಿ ಹೊಸಬಟ್ಟೆಗಳ ಹಾಸಿ ಕುಶಲದಿಂದಲೆ ಹೊಲೆದು ಪೊಸದಾಗಿ ಕಟ್ಟುವತಿಶಯ[ವ] 4 ಗರ್ಭಗೃಹವು ಗಾಯಿತ್ರಿ ಮಂಟಪವನ್ನು ಶುಭ್ರವಾಗಿಯೆ ತೊಳೆದು ಘಮಘಮಿಸುವ ದಿವ್ಯ ಪರಿಮಳ ವು ಬರುವಂಥ ಗಂಧÀವ ತಳಿದರು ಅಂದು ಆಲಯಕ್ಕೆಲ್ಲ 5 ಭಕ್ತರಿಗೆ ತೊಟ್ಟಕವಚವ ಕಳೆದು ಅಭಯ ಹಸ್ತ ಪಾದವ ನಿತ್ತು ಕಸ್ತೂರಿ ಕಮ್ಮೆಣ್ಣೆ ಒತ್ತಿ ಸಂಭ್ರಮದಿಂದ ಮಿತ್ರಸಹಿತ ನಿಂದ ಭಕ್ತವತ್ಸಲ ರಂಗ 6 ಛಂದದಿ ಇಕ್ಷುರಸವು ಚೂತ ಕದಲಿ ರಸಂಗಳು ದಧಿ ತಿಂತ್ರಿಣಿ ನಿಂಬೆರಸ ಕ್ಷೀರ ಘೃತಗಳಿಂದ ಆ ನಂದದಿ ಯೆರೆದರು ಇಂದಿರೆರಮಣಗೆ 7 ಕೇಸರಿ ಪುನಗಿನ ತೈಲವನೆ ತೆಗೆದು ವಾಸುಕಿಶಯನಗೆ ಲೇಪವನು ಮಾಡಿ ಸ ಹಸ್ರಕೊಡದ ಅಭಿಷೇಕವ ಮಾಡಿದರು 8 ಪಟ್ಟುಪೀತಾಂಬರವನುಟ್ಟು ಶ್ರೀರಂಗನು ಕಳೆದ ಕವಚ ತೊಟ್ಟು ಹತ್ತುಸಾವಿರಸೇರಿನ ಅಕ್ಕಿ ಅನ್ನವ ನಿಟ್ಟು ವಿಪ್ರರು ಸುರಿದರು ವಿಸ್ತಾರವಾಗಿಯೆ9 ದಧಿ ಕದಳಿ ಫಲದಿಂದ ನೈ [ವೃಂದಕ್ಕೆ] ಕರೆಕರೆದು ಕೊಡುವ ಪರಿಯ ನಾ 10 ರಂಗನಾಯಕಿ ಪಟ್ಟದರಸಿ [ವೆರಸಿ]ನರಹರಿ ಚಕ್ರಮೂರುತಿಗೆ ಆಗ ಕಲ್ಪೋಕ್ತದಿಂದಭಿಷೇಕವ ಮಾಡೆ ಕರ್ಪೂರ ತೈಲವ [ಲೇ ಸಾಗಿ]ಹಚ್ಚಿ ಮಲಗಿದ ವೆಂಕಟರಂಗ[ನ] 11
--------------
ಯದುಗಿರಿಯಮ್ಮ
ಬಾರೆ ದೇವಿ ಭಾಗ್ಯವಂತೆ ಬೇಡಿಕೊಂಬೆ ಬೇಗ ಹಸೆಗೆ ಪ ಸುತ್ತನಾಲ್ಕು ದೀಪಗಳಿಟ್ಟು ಎತ್ತಲೂ ಪ್ರಜ್ವಲಿಸುತಿರ್ಪ ಮುತ್ತುರತ್ನ ಕೆತ್ತಿಸಿರುವ ಉತ್ತಮ ಮಣಿಪೀಠಕೆ 1 ಜಡೆಯಬಂಗಾರವನು ಹಾಕಿ ಬಿಡದೆ ಕಮಲಮಾಲೆಧರಿಸಿ ಮುಡಿದು ಮಲ್ಲಿಗೆ ಸಂಪಗೆಯ ಒಡನೆ ಪೀತಾಂಬರವನುಟ್ಟು 2 ಜಾಜಿಪಟ್ಟಣನರಸಿಯೆ ನೀಂ ರಾಜಿಸು ತನುರಾಗದಿಂ ದೀನ ಜನರಂ ಹರುಷಗೊಳಿಸು ಮಾಜದೇ ನೀ ಮಂಗಳಾಂಗಿ3
--------------
ಶಾಮಶರ್ಮರು
ಭೀಮನೆಂಬುವಂಗೆ ಯಾತರ ಭಯವಿಲ್ಲ ಭೀಮರಾಯ ಪ ಕಾಮಿತ ಫಲಗಳ ಕೊಟ್ಟು ನೀ ಸಲಹಯ್ಯ ಭೀಮರಾಯಅ ಅಗಣಿತ ಬಲವಂತ ಭೀಮರಾಯಕಂಜನಾಭನ ದೂತ ಕರುಣಿಸೊ ಬಲವಂತ ಭೀಮರಾಯ 1 ಕಟ್ಟಿದ ಪೂಮಾಲೆ ಕಸ್ತೂರಿ ನಾಮದ ಭೀಮರಾಯ - ಪೊಂಬಟ್ಟೆ ಪೀತಾಂಬರವನುಟ್ಟು ಮೆರೆವಂಥ ಭೀಮರಾಯ2 ವಾರಿಧಿಯನು ದಾಟಿ ಸೀತೆಗುಂಗುರವಿತ್ತ ಭೀಮರಾಯಸೂರಿವೆಗ್ಗಳತನ ಕಿತ್ತು ಈಡಾಡಿದ ಭೀಮರಾಯ3 ರಾಮರಾಯರಿಗೆ ನೀ ಪ್ರೇಮದ ಬಂಟನು ಭೀಮರಾಯಕಾಮಿತ ಫಲವಿತ್ತು ಕರುಣದಿ ಸಲಹಯ್ಯ ಭೀಮರಾಯ 4 ಛಪ್ಪನ್ನ ದೇಶಕ್ಕೆ ಒಪ್ಪುವ ಕಾಗಿನೆಲೆಯ ಭೀಮರಾಯತಪ್ಪದೆ ಕನಕಗೆ ವರಗಳ ಕೊಡುವಂಥ ಭೀಮರಾಯ 5
--------------
ಕನಕದಾಸ
ನಿನ್ನ ನಾನೇನೆಂದೆನೆ ಬಗಳಾಮುಖಿ ನಿನ್ನ ನಾನೇನೆಂದೆನೆನಿನ್ನ ನಾನೇನೆಂದೆ ತತ್ವವ ಕೇಳುತ ಚೆನ್ನಾಗಿಎನ್ನ ಬಳಿ ಕುಳ್ಳಿರೆಂದೆನಲ್ಲದೇಪಹತ್ತಿಯನರೆ ಎಂದೆನೇ ಹಳ್ಳದ ನೀರಹೊತ್ತು ಹಾಕೆಂದೆನೆ ಮತ್ತೆ ಹರಡಿಯ ತೋರಿ ಬೀ-ಸುತ್ತೆ ಚವುರಿಯಲಿಮತ್ತೆ ಗಾಳಿಯ ನೀಗ ಬೀಸೆಂದೆನಲ್ಲದೇ1ಕುಸುಬೆಯ ಒಡೆಯೆಂದೆನೇ ಕುದುರೆಯ ಮೈ-ಹಸನಾಗಿ ತೊಳೆಯೆಂದೆನೇಹೊಸ ಪೀತಾಂಬರವನುಟ್ಟು ಹೂವಮುಡಿಯೊಳು ಇಟ್ಟುಅಸಿಯ ಹಿಡಿದು ಮುಂದೆ ನಡೆಯೆಂದೆನಲ್ಲದೆ2ಕಲ್ಲನು ಹೊರು ಎಂದೆನೆಎಲ್ಲ ಕೆಲಸವನೀಗ ಮಾಡೆಂದೆನೆಬಲ್ಲಂತೆ ಪಾರುಪತ್ಯವನು ಮಾಡುತ್ತಾ ಕಾಲ್ಗೆಜ್ಜೆಘುಲ್ಲೆನಿಸಿ ನಡೆ ಎಂದೆನಲ್ಲದೇ3ಗೋಡೆಯನು ಬಳಿ ಎಂದೆನೆರಾಗಿಯ ಹಿಟ್ಟನು ಬೀಸೆಂದೆನೆಈಡಾಗಿ ಒಪ್ಪುವಾಭರಣಗಳ ನೀ ತೊಟ್ಟುಆಡುತ್ತ ಮಠದೊಳಗೆ ಇರು ಎಂದೆನಲ್ಲದೇ4ಬಟ್ಟೆಯನು ಒಗೆ ಎಂದೆನೆದುಷ್ಟರನು ಕೂಡಿ ನಲಿಯೆಂದೆನೇಶಿಶು ಚಿದಾನಂದ ಬ್ರಹ್ಮಾಸ್ತ್ರ ದೈವ ತಾನಿಷ್ಟ ದೇವತೆಯಾಗಿ ನೆಲೆಸೆಂದೆನಲ್ಲವೆ5
--------------
ಚಿದಾನಂದ ಅವಧೂತರು