ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(4) ಚನ್ನಾಕೇಶವ ಶರಣು ಶರಣು ಚೆನ್ನಕೇಶವರಾಯ ಚರಣಗಳೇ ಗತಿ ನಂಬಿದೆ ಜೀಯಾ ಪ ತರಳಧ್ರುವನಿಗಿತ್ತೆಯೊ ಬಹುಶ್ರೇಯ ವರದ ವೇಂಕಟ ಶ್ರೀರಂಗ ಚೆಲ್ವರಾಯಾ ಶರಣ ಶ್ರಿತನಭಯಾ ಆನಂದನಿಲಯಾಅ.ಪ ಅಂದುಗೆ ಗೆಜ್ಜೆಯ ಘಲುಘಲು ತುಂದಿಲನಗೆಮೊಸ ಪೀತಾಂಬರದಿಂ ಧಿಂದಿಮಿಕಿಟ ಕುಣಿಗೋವಿಂದಾ ನಿತ್ಯ ಮುಕುಂದ 1 ಕವಿಕುಲಸ್ತುತ್ಯನೆ ದೇವವರೇಣ್ಯ ಭವಸಾಗರ ತಾರಣ ಪ್ರಾವೀಣ್ಯ ಭುವನಗಳೆಲ್ಲಕು ನೀನೇ ಗಣ್ಯ ಪವಿತ್ರಯೋಗಿಯ ಧ್ಯಾನ ಹಿರಣ್ಯ ಪಾವನ ಪುಣ್ಯ ಶ್ರುತಿ ಪ್ರಾಮಾಣ್ಯ 2 ವಿದುರೋದ್ಭವ ಅಕ್ರೂರ ತ್ರಾತ ಮಧುರ ಬಾಂಧವ ಬದರೀನಾಥ ವಿಧಿ ಪಿತನರನಾರಾಯಣ ಪೂತ ಮಧುಕೈಟಭಾರಿ ಬಹುಪ್ರಖ್ಯಾತ ಬುಧಪ್ರೀತ ಭಾಗ್ಯದಾತ 3 ಒಂದೇ ಅಳತೆಗೆ ಜಗವು ಮೂರಡಿ ಚಂದಿರ ಮುಖಿಮಣಿ ಕೊಟ್ಟನು ಕರಡಿ ನಿಂದೆಯಾ ಕಾಳಿಂಗನ ಮೇಲ್ಗಾರುಡಿ ತಂದೆ ಕರೆದನ ಕರುಣದಿ ಕರಪಿಡಿ ಇಂದೆ ಕಡೆಜನ್ಮಮಾಡಿ ಇಡು ನಿನ್ನಪದದಡಿ4 ಹೆಜ್ಜಾಜೀಶ್ವರ ಶಿವ ಶಂಕರನೆ ಸಜ್ಜನ ಮುನಿಗಣ ಹೃದ್ಭಾಸ್ಕರನೆ ದುರ್ಜನಶಿರಹರ ಶಂಖಚಕ್ರಧರ ವಜ್ರಿ ಅಜಹರಗಾಧಾರ ಧೀರ ಸುಜಯ ಭೂಮ್ಯೋದ್ಧಾರಿ ಜಂiು ಶ್ರೀಕರ 5
--------------
ಶಾಮಶರ್ಮರು
ಅಧ್ಯಾಯ ಎರಡು ಪದ:ರಾಗ:ಯರಕಲಕಾಂಬೋದಿ ತಾಳ:ಬಿಲಂದಿ, ಸ್ವರ ಷಡ್ಜ ದೇವಕಿಯಲಿ ಅವತರಿಸಿದ ದೇವಾಧೀಶನ ಕಂಡು ಆ ವಸುದೇವನು ಸ್ತುತಿಸಿದ ಕೇವಲ ಭಕುತಿಯಲಿ | ಲಾವಣ್ಯಾಂಬುಧಿಯನಿಸುವ ಭಯದಿಂದ || 1 ಲೋಕಾಧೀಶನೆ ನಿನ್ನ ಅತೌಕಿಕ ರೂಪಾವು ಕಂಡು ಆ ಕಂಸನ ಭಯದಲ್ಲಿ ನಾ ವ್ಯಾಕುಲಳಾಗಿರುವೆ| ಸಾಕೀಕಾಲಕ ಈ ಅಪ್ರಾಕೃತರೂಪವು ಎÀÀನಲು ಶ್ರೀಕಾಂತನು ಆಕ್ಷಣದಲಿ ಪ್ರಾಕೃತ ಶಿಶುವಾದಾ|| 2 ಆ ಕಾಲದಲ್ಯಾದುರ್ಗಾ ತಾ ಕಾಲವ ಕಳಿಯದಲೆ ಗೋಕುಲದಲ್ಲಿ ಪುರುಷೆಂದಾಕಿಯು ತಿಳಿಯದೆ ನಿದ್ರಿಲಯಲ್ಯಾಕ್ರಾಂತಾದಳು ಹುಟ್ಟಿರುವಾಕಿಯ ಮಹಿಮೆ ಇದು|| 3 ಪಟ್ಟಣದಲಿ ಸರ್ವರು ಭಯಬಿಟ್ಟು ನಡರಾತ್ರಿಯೋಳ್ ತಟ್ಟಲು ಬಹುನಿದ್ರಿ ಸೃತಿಗೆಟ್ಟು ಮಲಗಿರಲು | ಹÀುಟ್ಟಿದ ಬಾಲಕನ ನಾ ಬಚ್ಚಿಟ್ಟು ಬರುವೆನೆಂದ ಥಟ್ಟನೆ ನಡದನು ಕೃಷ್ಣನ ಘಡ್ದ್ಹಡದು ಶೌರಿ|| 4 ಕಾಲೊಳಗಿನ ಬೇಡಿಯು ತತ್ಕಾಲಕ ಕಡದಿತು ಬಾಗಿಲಕೀಲಿಗಳೆಲ್ಲಾ ಸಾಲ್ಹಿಡದಿಂದ್ಗರಂತೆ| ಬೈಲಾದವು ಬಾಗಿಲಗಳಾ ಕಾಲದಿ ಹೀಂಗಾದದ್ದು ಬಾಲಕ ಹರಿ ಬದಿಲಿದ್ದ ಮ್ಯಾಲೇನಾಶ್ಚರ್ಯ 5 ವಾಸದ ವೃಷ್ಟಿಯ ಮಾಡಲು ಶೇಷನು ಬೆನ್ನಿಲೆ ಬಂದು ಸೂಸಿ ಬಾಹುವ ಯಮುನಿ ವಾಸುದೇವನ ಕಂಡು ಘಾಸಿಯು ಮಾಡದೆ ಕೂಟ್ಟಳು ಅಸಮಯಕೆ ಹಾದಿ 6 ಗೋಕುಲಕ್ಹೋಗುತ ಶೌರಿಯು ಶ್ರೀ ಕೃಷ್ಣನ ಅಲ್ಲಿಟ್ಟು ಆ ಕನ್ನಿಕೆಯ ತಂದು ತನ್ನಕಿಯ ಬದಿಲಿಟ್ಟಾ| ಆ ಕಾಲಕ ಆ ಬೇಡಿಯ ತಾಕಾಲಗಳಲ್ಲಿತಟ್ಟು|| ಶ್ರೀ ಕಾಂತನ ಸ್ಮರಿಸುತಲೆ ಏಕಾಂತದಲ್ಲಿರುವಾ|| 7 ಬಾಗಿಲುಗಳು ಎಲ್ಲಾ ಮತ್ಥಾಂಗೆ ಕೀಲಿಗಳ್ಯಲ್ಲಾ ಬ್ಯಾಗನೆ ಆದವು ಮುಂಚಿನ್ಹಾಂಗೆ ತಿಳಿಗೂಡದೆ| ಆಗಾ ಕೂಸಿನ ಧ್ವನಿ ಛಂದಾಗಿ ಕಿವಿಯಲಿ ಬೀಳಲು ಬಾಗಿಲಕಾಯುವ ಭೃತ್ಯರು ಬ್ಯಾಗನೆದ್ದರು ಭಯದಿ|| 8 ಗಡಿಬಿಡಿಯಿಂದಲ್ಯವರು ಯಡವುತ ಮುಗ್ಗುತ ತ್ಯೋಡುತ ನಡಿದರು ನಿಂದಿರದಲೆ ಬಹುಸಡಗರದರಮನಿಗೆ| ಒಡಿಯಾನಂತಾದ್ರೀಶನ ಖಡುದ್ವೇಷ ಆಸವಗೆ ನುಡಿದರು ದೇವಕಿದೇವಿಯು ಹಡಿದಾಳೆಂತೆಂದು|| 9 ಪದ್ಯ ನುಡಿಯ ಕೇಳೀಪರಿಯ ಖಡುಪಾಪಿ ಕಂಸ ಗಡವಡಿಸಿ ಕೊಂಡೆದ್ದು ಭಯ ಬಡುವತಲೆ ಶ್ವಾಸವನು ಬಿಡುವುತಲೆ ಭರದಿಂದ ಎಡವುತಲೆ ಮುಗ್ಗುತಲೆ ನಡದನಾ ದೇವಕಿಗೆ ಕುಡು ಕೂಸು ಎಂತ್ಯಂದು ನುಡಿಕೇಳಿ ಮನದಲ್ಲಿ ಮಿಡುಕುತಲೆ ದೇವಕಿಯು ದೃಢವಾಗಿ ಕೈಯೊಳಗೆ ಹಿಡಿದು ಆಕೂಸಿನಾ ಕುಡದೆ ಕಂಸನ ಮುಂದೆ ನುಡಿದಳೀ ಪರಿಯು|| 1 ಪದ:ರಾಗ:ನೀಲಾಂಬರಿ ತಾಳ:ತ್ರಿವಿಡಿ ಕುಡಲಾರೆ ಕೂಸಿನ್ನನಾ ನಿನಗೆ || ಅಣ್ಣ ಕುಡಲಾರೆ ಒಡ್ಡಿ ಬೇಡುವೆ ಕಡಿ ಹುಟ್ಟ ಹೆಣ್ಣದು|| ಪ ಸೂಸಿಯು ನಿನಗೆ ಈಕಿ ತಿಳಿ ನೀನು | ಮತ್ತು ಹಸಗೂಸು ಎಂಬುವದರಿಯೇನು | ಇಂಥಾ ಶಿಶುವಿನಳಿದಾರೆ ಪಾಪ ಬರದೇನು| ವಸುಧಿ ಒಳಗೆ ಬಹು ಹೆಸರಾದವನೋ ನೀನು|| 1 ಹಿರಿಯಣ್ಣನಲ್ಲೇನೊ ನೀ ಎನಗೆ | ಸ್ವಲ್ಪ ಕರುಣಾವಿಲ್ಲವೋ ಎನ್ನೊಳು ನಿನಗೆ|| ಮಕ್ಕಳಿರಧಾಂಗ ಮಾಡಿದಿ ಮನಿಯೋಳಗೆ ಗುರುತಕ್ಕಿದು ಒಂದು ನೋಡಿ ಮರೆತೆನ್ಹಿಂದಿನ ದುಃಖ|| 2 ನಾ ಏನು ನಿನಗೆ ಮಾಡಿದೆ ಪೇಳು | ಬಹು ಬಾಯಿತಗುವೆ ಕೋಪವು ತಾಳು| ಇಂಥಾ ಮಾಯಾ ಮೋಹತಳಿಗಿ|| 3 ಪದ್ಯ ಅಪ್ಪ ಕುಡಲಾರೆಂದು ತಪ್ಪದಲೆ ಆ ಕೂಸಿನಪ್ಪಿಕೊಂಡಳುವಾಗ ಕಲ್ಲ ಮ್ಯಾಲಪ್ಪಳಿಸಲಾಕೂಸು ತಪ್ಪನ್ಹಾರಿತು ಮ್ಯಾಲೆ ಅಷ್ಟು ಚಿನ್ಹಿಗಳಂದ ಉಟ್ಟ ಪೀತಾಂಬರದಿ ತೊಟ್ಟ ಹೀಂಗೆ ಸ್ಪಷ್ಟಪೇಳಿದಳು| ಪದ ರಾಗ:ತೋಡಿ ತಾಳ ಬಿಲಂದಿ ಮಂದ ಮತಿಯೇ ಕಂದರನ್ನ ಕೂಂದರೇನು ಫಲವೂ| ಇಂದು ಎನ್ನ ಕೂಂದ ವ್ಯೂಲ ಮುಂದೆ ಬರುವದೇನು| 1 ವೈರಿ ಅನ್ಯರಲ್ಲಿ ಇನ್ನ ಬೆಳೆವುತಿಹನೊ| ಮುನ್ನ ಬಂದು ತನ್ನ ಬಲದಿ ನಿನ್ನ ಕೊಲ್ಲುವೊನು 2 ಅಂತಕನ್ನ ನಿಂತು ಕೊಲ್ಲುವ ಭ್ರಾಂತಿ ಬಿಡೆಲೊ ನೀನು| ಅನಂತಾನಂತಾದ್ರೀಶನಂತು ತಿಳುವದೇನೇ|| 3 ಪದ್ಯ ಆ ಮಹಾ ಪಾಪಿ ಗ್ಯಾಡೀ ಮಾತು ದೇವಿ ತಾ ಭೂಮಿಯಲಿ ಬಂದು ಬಹುಗ್ರಾಮದಲೆ ನಿಂತು ಬಹುನಾವು ಉಳ್ಳವಳಾಗಿ ಕಾಮಿತಾರ್ಥಗಳನ್ನೂ ಪ್ರೇಮದಲಿ ಕುಡುತಿಹಳು ನೇಮದಿಂದಾ|| ಆ ಮಾಯಿ ವಚÀನವನು ಪಾಮರನು ತಾ ಕೇಳಿ ರೋಮಾಂಚಗಳು ಉಬ್ಬಿ ನಾ ಮಾಡಿದಲ್ಲೆಂದು ನೇಮದಲಿ ಇಬ್ಬರಿಗೆ ನೇಮಿಸಿದ ಬೇಡಿಯನು ತಾ ಮೋಚನವು ಮಾಡಿ ಪ್ರೇಮದಿ ನುಡದಾ|| 1 ಪದ:ರಾಗ :ಸಾರಂಗ ಅದಿತಾಳ ಸ್ವರ ಮಧ್ಯಮ ಎಲೆ ತಂಗಿಯೆ ಎಲೊ ಶಾಲಕ ಬಲು ಪಾಪಿಯು ನಾನು| ಬಲು ಮಂದಿ ಮಕ್ಕಳನ ಛಲದಿಂದ ಕೊಂದೆ| ತಿಳಿಯದೆ ನಾ ಇಂಥ ಕೆಲಸಕ್ಕೆ ತೊಡಕಿ ಪರಿ ಪಾಪದ ಫಲ ಭೋಗಿಯು ಆದೆ|| 1 ಅಶರೀರದ ವಾಣಿಯು ಹುಸಿ ಅಯಿತು ಇಂದು ವಸುಧಿಯೋಳಿರುವಾ ಮಾನುಷರಾ ಪಾಡೇನು|| ಶಶಿಮುಖಿ ನಾನಿಮ್ಮ ಶಿಶುಗಳ ಕೂಂದೆ||2 ಅಮಿತಾ ಅಪರಾಧಾಯಿತು ಕ್ಷಮಾ ಮಾಡಿರಿ ನೀವು|| ವಿಮಲ ಮನಸಿನಿಂದ ನಮಿಸಿದೆ ನಿಮಗೆ|| ಕಮಲೋದ್ಭವ ಬರದಂಥಾ ಕ್ರಮ ತಪ್ಪದು ಎಂದು ಶ್ರಮಯಾತಕ ಸುಖದುಃಖವ ಸಮಮಾಡಿರಿ ನೀವು|| 3 ತಿಳಗೇಡಿಯು ಆ ಕಂಸ ತಿಳಿಹೇಳಿಪರಿಯು ಸ್ಥಳಬಿಟ್ಟು ತಾ ತನ್ನ ಸ್ಥಳಕ್ಹೋದನು ಬ್ಯಾಗೆ\ ಬ್ಯಳಗಾಗಲು ಎಲ್ಲಾರಿಗೆ ತಿಳಿಸೀದನು ಆಗೆ ಹೊಳುವಾ ದೇವಿಯ ಮಾತುಗಳನೆಲ್ಲ ಬಿಡದೆ || 4 ಖಳರಂದರು ನಾವಿನ್ನ ಇಳಿಯೊಳ್ಹುಟ್ದರುವಾ| ಉಳದಾ ಬಾಲಕೃಷ್ಣಕರನ್ನ ಕೊಲ್ಲು ವುದ ಸತ್ಯಾ| ತಿಳದೀಪರಿ ಅವರನ್ನ ಕಳಸೀದ ಕಂಸಾ ಚಲುವಾನಂತಾದ್ರೀಶನ ಕೊಲ್ಲವೊದು ಎಂದು|| 5 ಪದ್ಯ ಮುಂದ ಗೋಕುಲದಲ್ಲಿ ನಂದಗೋಪನು ತನ್ನ ಕಂದನಾ ಮುಖವನ್ನು ಛಂದದಲಿ ನೋಡಿ ಆನಂದ ಹಿಡಿಸದೆ ತಾನು ಬಂದ ಬಂದವರಿಗ್ಯಾನಂದ ಬಡಸಿದ ಮನಕ ಬಂದದ್ದು ಕೂಟ್ಟು| ನಂದನಂದನನ ವದನೇಂದು ದರ್ಶನಕಾಗಿ ಬಂಧು ಬಾಂಧವರೆಲ್ಲ ಬಂದು ಒದಗಿದರಲ್ಲೆ ದುಂದುಬಿಯು ಮೊದಲಾದ ಛಂದಾದ ವಾದ್ಯಗಳು ಒಂದಾಗಿ ನುಡದÀವಾನಂದದಿಂದಾ| ಗೀತ ಬಲ್ಲವರು ಸಂಗೀತವನು ಮಾಡಿದರು ಪ್ರೀತಿಯಲಿ ಪಾಡಿದರು ಶ್ರೋತ್ರಸುಖರಾಗಿ ಮಾಡಿದರು ಪ್ರೀತಿಯಲಿ ಪಾಡಿದರು ಶ್ರೋತ್ರಸುಖರಾಗಿ ತಾತನವ ತನ್ನಲ್ಲೆ ಜಾತನಾಥಂಥವಗೆ ಜಾತಕರ್ಮವು ಮಾಡಿ ಪ್ರೀತನಾದಾ| ಪ್ರೀತಗೋಕುಲದಲ್ಲಿ ನೂತನೈಶ್ವರ್ಯಗಳು ಜಾತವಾದವು ಸರ್ವಜಾತಿಗಳಿಗ್ಯಾದರೂ ಯಾತಕ್ಕೂ ಕಡಿಮಿಲ್ಲ ಸೋತಂಥ ದಾರಿದ್ರ್ಯ ಯಾತಕಿರುವದು ರಮಾನಾಥ ಇರಲು|| 1 ಸ್ಥಿರ ಮನಸಿನಿಂದಲ್ಲೆ ಸ್ಥಿರವಾಗಿ ಕುಳಿತು ಈ ಚರಿತವನು ಕೇಳಿದವರ ಪರಿಪರಿಯ ಅಭಿಲಾಷ ಪರಿಪೂರ್ಣವಾಗುವದು ಚರಿಸದಲೆ ಅವರಲ್ಲಿ ಸ್ಥಿರಳಾಗಿ ಇರುವವಳು ವರಮಹಾಲಕ್ಷ್ಮೀ| ಧರಿಯೊಳಗ ಇರುವಂಥ ವರಕವೀಶ್ವರರಂತೆ ಸ್ಥಿರವಲ್ಲ ಗೋಕುಲದಲ್ಲಿ ತ್ವರ ಅವನೇ ಮುಗಿಸಿದಿಲ್ಯರಡು ಅಧ್ಯಾಯಾ|| 2 “ಶ್ರೀ ಕೃಷ್ಣಾರ್ಪಣ ಮಸ್ತು” ಎರಡನೆಯ ಅಧ್ಯಾಯವು ಸಂಪೂರ್ಣವು”
--------------
ಅನಂತಾದ್ರೀಶ - ಕಥನಕಾವ್ಯಗಳು
ದುರಿತಭಂಜನ ನರಹರಿಯೆ |ಪರಿಪರಿಯಿಂದ ಸಲಹು ಶ್ರೀವೈಕುಂಠ ದೊರೆಯೆ ಪ ನಿನ್ನ ದಾಸರ ದಾಸ ನಾನು |ಎನ್ನವರು ದಾಸರ ದಾಸರಲ್ಲೇನು ||ಇನ್ನು ಒದಗದೆ ಇಹುದೇನು |ಉನ್ನತವಾದ ಬಿರುದಂಗಳ್ನಿನಗಿಲ್ಲವೇನು ? 1 ತೊತ್ತು ಮೆರಿಸಿಕೊಂಡವನಲ್ಲ |ಹೆತ್ತವರ ಭಾವಗಳನೆಲ್ಲ ಮರೆವನಲ್ಲ ||ಒತ್ತಿ ಆಪತ್ತವು ಬರಲು | ಪೊತ್ತವರಿಗೆ ಮೊರೆಯಿಡೆ ಕಡೆಗೆ ಬಿಡುವನಲ್ಲ 2 ಬರುತಿಹುದು ಸಂಕಟವೆಂದು |ಹಿರಿಯರು ನಮ್ಮನೆಲ್ಲವನು ಮರೆದರಂದು ||ಮರೆಯದೆ ರುಕ್ಮಗಿನ್ನಿದು |ಮರೆ ಮಾಡುವ ಪೀತಾಂಬರದಿಂದ ಬಂದು3
--------------
ರುಕ್ಮಾಂಗದರು
ಬೇಗದಿ ಮುಕುಂದ ಪ. ಮಾಡುವ ಭಾಗ್ಯ ಕರುಣಿಸೊ ಕೃಪೆಯಿಂದ ಅ.ಪ. ನಿರುತ ನಿನ್ನೊಳಗಿಹವು ಸರಸಿಜ ಭವಮುಖರು ನಿನ್ನಪಾಂಗಮಸ್ಮರಣೆಯಿಂದಲಿ ಬಾಳ್ವರು ಪೀತಾಂಬರದಿಸರಿರವ ರೂಪಿಯಾಗಿ ಹೊಂದಿರುವಳು ನಗುತ 1 ನಿತ್ಯ ಸಂತೃಪ್ತರೂಪ ಸಕಲ ಲೋಕ ವ್ಯಾಪ್ತನಾಗಿರುವ ಭೂಪ ಜ್ಞಪ್ತಿ ಮಾತ್ರದಿ ಎನಗೆ ಒಲಿವ ಪರಮಾಪ್ತ ನೀನಿರುತಿರಲು ನೆನೆದು ಮರುಳಾದೆನು ವಿಲಿಪ್ತಿಯ ಸಲಿಸು 2 ತೋರದೊ ವರದ ನಿನ್ನನು ಮರೆದ ಕಾಯುವರ ಕಾಣೆ ನಿನ್ನಾಣೆ ಸಲಹೊ ಪುರಂದರಗೊಲಿದ 3 ಧರ್ಮಮಾರ್ಗವ ತೊರೆದು ಶೃತ್ಯದಿತ ಸತ್ಕರ್ಮಗಳ ಮರೆದು ನಿರ್ಮಲರನು ಜರಿದು ನೀಚರನೆಲ್ಲ ಭರ್ಮಗೋಸುಗ ತರಿದು ಸುಖವ ನೀಗಿ ನಾ ಬಾಗಿ ಕೂರ್ಮನಂತಿರುವೆ 4 ಆಸೆಯೆಂಬುದು ಎನ್ನನು ನಾನಾವಿಧ ಕ್ಷೇಶಬಡಿಸುವುದಿನ್ನು ಘಾಸಿಗೆ ಒಳಗಾದೆನು ಕೈಯಲಿ ಒಂದು ಕಾಸಿಲ್ಲದವನಾದೆನು ಶ್ರೀಶ ನೀ ಕರುಣಿಸಿನ್ನು ಸದ್ಗತಿಯನ್ನು ಸುಜನಪಹಾಸಗೊಳಿಸದೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ತಪ್ಪುಗಳನೆಲ್ಲ ನೀನೊಪ್ಪಿಕೊಳ್ಳೊ - ನ-|ಮ್ಮಪ್ಪ ಕಾಯಬೇಕುತಿಮ್ಮಪ್ಪನೀನೆಪಸತಿ-ಸುತ ಸಂಸಾರಗಳಿಗೆ |ಮತಿ ಹೀನನಾದೆನು ವ್ಯರ್ಥ ||ಮಿತಿಗಾಣೆನಯ್ಯ ಎನ್ನ ಪಾಪಗಳಿಗೆ |ಗತಿಯದಾವುದು ಪೇಳೊ ಮುಂದೆನಗೆ 1ಬಿಸಿಲು ಬಿರುಮಳೆ ಗಾಳಿಯೊಳಗೆ-ಬಲು-|ದೆಸೆಗೆಟ್ಟು ದೇವ ತಿರುಗಿದೆ ||ಹಸಿವು-ತೃಷೆಗಳು ಬಹು ಬಾಧಿಸಲು |ಹುಸಿಯಾಡಿದೆನಯ್ಯ ಹುಟ್ಟು ಮೊದಲು 2ಸ್ನಾನ-ಸಂಧ್ಯಾವಂದನವರಿಯೆ-ನಾನಾ-|ದಾನ-ಧರ್ಮದ ಗುರುತುಗಳಿಯೆ ||ಹೀನಜನರ ಸಂಗವ ಮರೆಯೆ-ಸು-|ಙ್ಞÕನಿಗಳನು ಬಾಯೆಂದು ಕರೆಯೆ 3ಗಂಗೆ ಅಗ್ರೋದಕಗಳ ತಂದು - ನಾ-|ಮಂಗಳಮಜ್ಜನಮಾಡಲಿಲ್ಲವೆಂದೂ ||ಹೊಂಗೇದಗೆ ಪುಷ್ಪವನೊಂದು ಶ್ರೀ-|ರಂಗಗರ್ಪಿಸಲಿಲ್ಲ ಕಾಯೊ ಬಂದು 4ಪೀತಾಂಬರದಿ ವಸ್ತ್ರಗಳಿಂದ -ದಿವ್ಯ-|ನೂತನವಾದ ಆಭರಣದಿಂದ ||ಪ್ರೀತಿಪಡಿಸಲಿಲ್ಲಾದರದಿಂದ-ಹೇ-|ಸೀತಾಪತೆ ಕೃಷ್ಣ ಹರಿಮುಕುಂದ 5ಗಂಧಾಕ್ಷತೆ ಪುಷ್ಪಗಳಿಂದ -ಬರಿ-|ಒಂದುದಳಶ್ರೀ ತುಳಸಿಯಿಂದ ||ಇಂದಿರೇಶನ ಅರ್ಚಿಸದರಿಂದ -ಬಹು-|ನೊಂದು ದೂರಾದೆ ಸದ್ಗತಿಯಿಂದ 6ಏಕಾರತಿ ದೂಪಾರತಿಯ -ಎಂದು-|ಶ್ರೀಕಾಂತ ನಿನಗೆ ನಾ ಮಾಡಲಿಲ್ಲ ||ವ್ಯಾಕುಲದಲಿ ಹೋಯಿತು ಹೊತ್ತು -ಬಂದು-|ನೀ ಕರುಣಿಸು ಲಕ್ಷ್ಮೀರಮಣ 7ಪಾಯಸ ಪಂಚಭಕ್ಷ್ಯಗಳಿಂದ -ಬಲು-|ಆಯತವಾದ ಶಾಕಗಳಿಂದ ||ತೋಯೆ ಶಾಲ್ಯನ್ನ ಸದ್ಘøತದಿಂದ -ಶ್ರೀ-|ಮಾಯಾಪತಿಗೆ ಅರ್ಪಿಸಲಿಲ್ಲ 8ಮಂಗಳಾರತಿಯ ನಾ ಮಾಡಲಿಲ್ಲ-ಜಯ-|ಮಂಗಳವೆನ್ನುತ ಪಾಡಲಿಲ್ಲ ||ಕಂಗಳ ನೋಟದಿ ನೋಡಲಿಲ್ಲ -ನರ-|ಸಿಂಗನೀ ಬಾಯೆಂದು ಕರೆಯಲಿಲ್ಲ9ಹರಿಯ ಪಾದಕೆ ಬಿದ್ದವನಲ್ಲ -ನರ-|ಹರಿಗೆ ಪ್ರದಕ್ಷಿಣೆ ಮಾಡಲಿಲ್ಲ ||ಹರಿದಿನದುಪವಾಸ ವ್ರತವು ಇಲ್ಲ -ಬಲು-|ಹರಿಯ ದಾಸರ ಸಂಗ ಎನಗಿಲ್ಲ 10ಹೋಮಾರ್ಚನೆ ಔಪಾಸನವೆಲ್ಲ |ನೇಮದಿಂದಲಿ ನಾ ಮಾಡಲಿಲ್ಲ ||ಕಾಮಾತುರನಾಗಿ ಕಂಡಕಂಡ ಕಡೆ |ಸ್ವಾಮಿಯ ಕಾಣದೆ ತಿರುಗಿದೆನೊ 11ಅತಿಥಿಗಳ್ ಬಂದರೆ ಮನೆಗೆ -ಅಂದೆ-|ಗತಿಯಿಲ್ಲವಯ್ಯ ಕೊಡುವುದಕೆ ||ಯತಿಯ ಕಂಡರೆ ನಿಂದಿಸಿದೆ-ಶ್ರೀ-|ರತಿಪತಿ ಪಿತ ನೀ ದಯ ಮಾಡೊ 12ಎಷ್ಟು ಹೇಳಲಿ ಎನ್ನವಗುಣವ -ಅವು-|ಅಷ್ಟು ಇಷ್ಟೆಂದು ಎಣಿಕೆಯಿಲ್ಲ ||ದೃಷ್ಟಿಯಿಂದ ನೋಡಿ ದಯ ಮಾಡೊ -ಶ್ರೀ-|ಬೆಟ್ಟದ ವೆಂಕಟ ಪುರಂದರವಿಠಲ 13
--------------
ಪುರಂದರದಾಸರು