ಒಟ್ಟು 4 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೂಜಾನುಷ್ಠಾನವ ಯೋಚಿಸಿ ಮನದೊಳುಪೂಜೆ ಷೋಡಶಗಳ ಮಾಜದೆ ಮಾಡಿರೋ ಪ ಉಷಃ ಕಾಲದಲೆದ್ದು | ಝಷಕೇತು ಪಿತ ನಾಮಉಸುರು ತಿಪ್ಪುದೇ ಪೂಜೆಯೋ 1 ಶೌಚ ಬಾಹ್ಯವು ಮೃತ್ತು ಶೌಚ ಮಾಡಿಕೊಂಡುಶುಚಿಷತ್ತು ನಿನ ನಾಮ ಉಚ್ಚರಿಪುದೆ ಪೂಜೆಯೋ2 ತುಲಸಿ ಮೃತ್ತಿಕೆ ಹಚ್ಚಿ | ತುಲಸಿ ವಂದನೆ ಮಾಡಿಅಲಸಾದೆ ಕೃಷ್ಣನ ವಲಿಸೂವುದೇ ಪೂಜೆಯೋ 3 ಗೋವನೆ ಬಳಸುತ್ತ ಗೋಪುಚ್ಛ ಪಿಡಿಯುತ್ತಗೋವ ವಂದಿಪುದೆಲ್ಲ ಗೋಪಾಲ ನಿನ ಪೂಜೆಯೋ4 ಸ್ನಾನ ಸಂಧ್ಯಾನ ಮೇಣೂಧ್ರ್ವ ಪುಂಡ್ರವ ಧರಿಸಿಭಾನುಗಘ್ರ್ಯವ ನೀಯೆ ಶ್ರೀನಿವಾಸ ಪೂಜೆಯೋ 5 ಪಾದ ತೀರ್ಥ ಸೇವನೆ ಪೂಜೆಯೋ 6 ಅಷ್ಟ ಮಹಾಮಂತ್ರ ಶಿಷ್ಪನಾಗುತ ಹೃದಯಅಷ್ಟ ಕಮಲದಲ್ಲಿ ಧ್ಯಾನ ಮಾಳ್ಪುದೆ ಪೂಜೆಯೋ 7 ಮಂಟಪೋತ್ತಮ ಪೂಜೆ ಸುಷ್ಠು ಕಲಶ ಪೂಜೆಶ್ರೇಷ್ಠ ಪಂಚಾಮೃತ ಪೀಠ ಶಂಖ ಪೂಜೆಯೋ 8 ಘಂಟನಾದಾ ಅಖಂಡ ಶ್ರೇಷ್ಠ ದೀವಿಗೆ ಪೂಜೆಪೀಠಾವರಣ ಹೃತ್ಪೀಠ ಚಿಂತನೆ ಪೂಜೆಯೋ 9 ಮೂರ್ತಿ ಗುರುಮೂತ್ರ್ವೆಕ್ಯವೆ ಪೂಜೆಯೋ || ಚಿಂತಿಸಿ ಸ್ವಾಂತಸ್ಥ ಬಿಂಬನೋಳೈಕ್ಯವಚಿಂತಿಸುತ್ತಾನೇಕ ಗೈವ ವೈಭವ ಪೂಜೆಯೋ 11 ಹೃತ್ಪುಂಡರೀಕಗೆ ಕಲ್ಪ ತರುವನೆ ಬೇಡುತ್ತಪ್ರೀತ್ಯಾದ ಮಾನಸ ಪದಾರ್ಥಗಳ ಪೂಜೆಯೋ 12 ಪೂರ್ಣ ಶೃತಿಯ ಭಾವ ಚೆನ್ನಾಗಿ ಗ್ರಹಿಸುತ್ತಪೂರ್ಣನ ಕಳೆಯೊಂದು ಪ್ರತಿಮಾದಲ್ಲಿರಿಸೋ 13 ನಿಷುಸೀದ ಶ್ರುತಿಯಂತೆ ವಸುದೇವ ಕೃಷ್ಣನೆಅಸಮ ಪೂಜಕ ಪೂಜ್ಯ ಅವನೇವೆ ತಿಳಿಯೊ 14 ಬಾಹ್ಯದರ್ಚನೆಗಳು ಶ್ರೀ ಹಸ್ತದಿಂದಲಿವ್ಯಾಹರಣೆಂಬೋದೆ ಹರಿ ಪೂಜೆಯೋ 15 ಆವಾಹನಭಿಷೇಕ ನೈವೇದ್ಯಾದಿ ಪೂಜೆದೇವಗಾರುತಿ ಶಂಖ ಭ್ರಮಣಾದಿ ಪೂಜೆಯೋ 16 ಸರ್ವವನರ್ಪಿಸಿ ಅಸ್ವಾತಂತ್ರ್ಯವ ಗ್ರಹಿಸಿಶರ್ವಾದಿ ವಂದ್ಯ ಬಿಂಬಗೆ ಸರ್ವ ಪೂಜೆಯೋ 17 ಸರ್ವಾಪರಾಧವ ಸರ್ವೇಶನಲಿ ಪೇಳಿವೈಶ್ವ ದೇವಾದಿಗಳ್ ಸತ್ಕರ್ಮಗಳೆ ಪೂಜೆಯೋ 18 ಯತಿಗಳರ್ಚನೆಯನ್ನು ಮತಿಯಿಂದ ಗೈಯುತ್ತಸುತ ವಿಪ್ರಾದಿಯ ಸಹ ಹುತಶೇಷ ಮೆಲ್ಲೋದೆ ಪೂಜೆಯೋ 19 ಪ್ರಾಣಾಗ್ನಿ ಹೋತ್ರಾನು ಸಂಧಾನದಲಿ ಮದ್ದುಪ್ರಾಣನ ಪ್ರಾಣ ವೈಶ್ವಾನರಗೀಯೋದೆ ಪೂಜೇ 20 ಅಂತರಂಗದ ಪೂಜೆಗೊಲಿದ ಸಂತತ ಹರಿಕಂತು ಪಿತನು ಗುರು ಗೋವಿಂದ ವಿಠಲಾ 21
--------------
ಗುರುಗೋವಿಂದವಿಠಲರು
ವಾಮ ಭಾಗದಿ ಲಕ್ಷ್ಮೀದೇವಿಯುಭೂಮಿ ದೇವಿಯು ದಕ್ಷಭಾಗದಿಶ್ರೀ ಮನೋಹರನಿಹನು ಮಧ್ಯದಿಪ್ರೇಮದಲಿ ನಮಿಸು 1 ನಮಿಸು ಕೃದ್ದೋಲ್ಕ ವಾಸುದೇವರಸ್ಮರಿಸು ಕೇಶವದ್ವಿತಿ ಮತ್ಪರಸ್ಮರಿಸು ಕೂರ್ಮಾನಂತ ಶಕ್ರರಸುರಿಪ ದಿಶಿಯಲ್ಲೀ 2 ಸ್ಮರಿಸು ಸಹಸ್ರೋಲ್ಕ ಮಾಯರಶಿರಿವರಾವನಿ ಧರನ ವಾರುಣಿಸ್ಮರಹರಾಂಚಿತನು ವಹ್ನಿಯಶರನ ಕೋನದಲಿ 3 ನಮಿಸು ಮಹೋಲ್ಕ ಸಂಕರ್ಷಣನನಮಿಸು ಗೋವಿಂದ ವಿಷ್ಣು ನರಹರಿನಮಿಸು ವಾಮನ ಬ್ರಹ್ಮ ಯಮರನುಕ್ರಮದಿ ದಕ್ಷಿಣದಿ 4 ಸ್ಮರಿಸು ಸಹಸ್ರೋಲ್ಕ ಜಯರನುಸ್ಮರಿಸು ಮಧುಹನ ಪರಷುರಾಮನಸರಸಿಜಾಸನ ಸತಿಯು ನಿಋತಿಯತಿಋತಿ ಕೋಣದಲಿ 5 ವೀರ ಉಲ್ಕ ಪ್ರದ್ಯುಮ್ನ ತ್ರಿವಿಕ್ರಮಸಾರ ರಘುವರ ವೃಷ್ಣಿನಾಥಸ-ಮೀರ ವರುಣರ ಪೂಜಿಸೂವುದುವಾರಿ ದಿಶೆಯಲ್ಲೀ 6 ನುತಿಸು ಸಹಸ್ರೋಲ್ಕ ಕೃತಿಯರನತಿಸು ಶ್ರೀಧರ ಬುದ್ಧಿ ಭಾರತಿಸತತ ಗಮನರ ವಾಯು ಕೋಣದೊಳತಿ ಸುಭಕ್ತಿಯಲಿ 7 ದ್ಯುಲ್ಕ ಅನಿರುದ್ದೇಂದ್ರಿಶೇಯರನಳಿನನಾಭನ ಕಲ್ಕಿ ನಂತರಸಲಿಲ ಮೂರುತಿ ರೋಹಿಣೇಶರಒಲಿಸು ಉತ್ತರದೀ 8 ಸ್ಮರಿಸು ಸಹಸ್ರೋಲ್ಕ ಶಾಂತರಸ್ಮರಿಸು ದಾಮೋದರನ ವಿಶ್ವನಗಿರಿಜೆಯನು ಪಾರ್ವತೀ ಪತಿಯಹರನ ಕೋಣದಲಿ 9 ವಾರಣಾಸನ ಮೊದಲು ನಿಜಪರಿವಾರ ಸಹಿತದಿ ಸರ್ವದಿವಿಜರುಮಾರನಯ್ಯನ ಸುತ್ತಲೂ ಪರಿ-ಚಾರರಾಗಿಹರು 10 ಈಸು ಪೀಠಾವರಣ ತ್ರಿದಿವನಿವಾಸಿಗಳ ಮಧ್ಯದಲಿ ಸಂತತವಾಸುದೇವನ ಪೂಜಕೇಶನಿ-ವಾಸ ಪೊಂದುವರು 11 ಗಿರಿಯೊಳಿರುತಿಹ ವೆಂಕಟೇಶನಸರಸ ಪೀಠಾವರಣ ಪೂಜೆಯಕರಡಿ ಮಗಳಿಗೆ ಜೈಗಿಷವ್ಯನುಅರುಹಿದನು ಮುದದಿ 12 ಗರುಡನಿಗೆ ಶ್ರೀಕೃಷ್ಣ ಪೇಳಿದಹರಿಯ ಪೀಠಾವರಣ ಪೂಜೆಯಸರ್ವ ಜನರಿಗೆ ತಿಳಿಯಲೋಸುಗವಿರಚಿಸಿದೆ ನಾನೂ 13 ಇಂದಿರೇಶನು ಎನ್ನವಾಣಿಲಿನಿಂದು ಮಾಡಿದನೀ ಸುಗ್ರಂಥವಲೆಂದು ಆತನ ಪಾದಕಮಲದ್ವಂದ್ವಕೊಪ್ಪಿಸುವೆ 14
--------------
ಇಂದಿರೇಶರು