ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಒಂಬತ್ತು ಶ್ರೀ ವಾಣೀಭಾರತೀ ಗೌರೀ ಶಚೀಭಿಃಸ್ನಾಪಿತೋವತಾತ್| ಕುಚೀರಾಲ್ಲಬ್ಧ ವಿತ್ತೋರ್ಚನ್ ವಿಪ್ರಾನ್ ಲಕ್ಷ್ಮೀಪ್ರಿಯಂಶರಃ|| ವಚನ ಪರಮೇಷ್ಠಿ ಮಾಡಿದನು ಸರಸ್ವತಿಯು ಮೊದಲಾದ ಶೃಂಗರಿಸಿಕೊಂಡರು ತಾವು ವರನಾಗಿ ಶೋಭಿಸಿದ ವರ ಹರುಷದಲಿ ನಾಲ್ಕು ವರಕಲಶಗಳನಿಟ್ಟು ವರ ರತ್ನ ಸುರಗಿಯನು ಸುತ್ತಿ ಶ್ರೀಹರಿಗೆ ಸುರರೊಡೆಯ ಬೇಗಿನ್ನು ಮಜ್ಜನ ಮಾಡು ಹರಿಯೆ ನೀನು 1 ರಾಗ:ನೀಲಾಂಬರಿ ಆದಿತಾಳ ಕೇಳೀ ಕಂದಗಂದನು ಶೋಕ ದಲಿ ನೊಂದು ಮನದಲಿ1 ಹಿರಿಯರೆಂಬವರಾರೆನಗೆ ಹರುಸವರಾರಿಲ್ಲ ಅಕ್ಕರವಿಲ್ಲಾ 2 ಅಕ್ಕರದಿಂದ ಪೂಸೆ ಹಿಕ್ಕಿ ಎರೆಯುವದಕ್ಕೆ ಅಕ್ಕ ತಂಗಿಯರಾರಿಲ್ಲ ಅಕ್ಕರವಿಲ್ಲಾ 3 ಬಿಡದ ಕರ್ಮಕ್ಕೆ ಮಾಡುವದು ಬಿಡುವದೆ ಇದು 4 ತಂದೆ ತಾಯಿಗಳಿಲ್ಲದೆ ನೊಂದು ಬಳಲಿದೆ 5 ವಚನ ಎಂದಿಗಾದರು ನಿನಗೆ ತಂದೆ ಬರುವರು ಮಂದಿ ಚಂದೇನೊ ನಿನಗೆ ಇದು ಎಂದಿಗಗಲದೆ ನಿನ್ನ ಸಂದೇಹವ್ಯಾಕೆ ನಗುತ ಮುಂದಿರುವ ತನ್ನ ನೋಟದಿಂದ ನೋಡಿದನು 1 ತಿಳಿದು ತರಸಿದಳು ತೈಲವನು ಹರುಷದಲೆದ್ದು ತಿಳಿದು ತ್ವರದಿ ವರರತ್ನ ಪೀಠದಲ್ಲಿ ಹರಿಣಾಕ್ಷಿ ತಾ ಬಂದು ಸರಸಾದಸಂಪಿಗೆಯ ಹರಸಿದಳು ಹೀಗೆ2 ಮಂಡಿತನೆ ಭಕ್ತರಿಗುದ್ದಂಡ ವರ ಸಂತತಿ ಉದ್ದಂಡ ನಾಯಕನೆ ಭೂಮಂಡ ಕೂಡಿಕೊಂಡು ನಿನ್ನ ಈ ಲೇಪಿಸಿದಳಾ ಜಗದ್ವಾಪಕನ ಎರೆವಳು ತಾಪಿತೋ ದಕÀದಿ ಸಂತಾಪ ಹಾರಕಳು 3 ಗಂಧಪರಿಮಳದಿಂದ ಚಂದಾಗಿ ತಿರೆ ತಂದಳಾರತಿದೇವಿ ಚಂದದಾರತಿ ಒಡಗೂಡಿ ಮುಕುಂದನ ಫಣಿಗೆ ಆರತಿ ಬೆಳಗಿ ಮುಂದೆ ಮತ್ತೆರ ಸುಂದರಾಂಗಿಯು ತನ್ನ ಹರಿವಾಣದ್ಹಿಂದಿಟ್ಟು ಎತ್ತಿ ಕಲಶವೃಂದದಿಂದೋ ಕುಳಿಯ ಚಂದಾಗಿ ಎರೆವಳಾನಂದದಲ್ಲಿ ಸುಂದರಿಯರಿಂದ ಕೂಡಿ 4 ಮೈವರಿಸಿ ಸುತ್ತ ವಸ್ತ್ರ ಪೀತಾಂಬರವ ಬಹುಭಕ್ತಿಯಲಿ ಗಿರಿಜೆ ಸುತ್ತ ಕೇಶಗಳೆಲ್ಲ ತನ್ನ ಪುತ್ರಿ ಭಾಗೀ ಮೆಟ್ಟಿ ಪತ್ನಿಯಳ ಉತ್ತಮಾಸನದಲ್ಲಿ ಹತ್ತಿಕುಳಿತ5 ರಾಗ:ನೀಲಾಂಬರಿ ಆದಿತಾಳ ಎಲ್ಲರು ಬಂದರು ಬಹು ಉಲ್ಹಾಸದಿಂದಲ್ಲೆ ಅವನ ಚಲ್ವಿಕೆಯ ನೋಡುತಲೆ ಅಲ್ಲೆ ಕುಳಿತರು 1 ಚಂದದ ಚಾಮರಗಳ ಪಿಡಿದರು 2 ಕೊಟ್ಟಳು ವಿಚಿತ್ರದ ಕನ್ನಡಿ3 ಚೆನ್ನಾಗಿ ಹಚ್ಚಿಕೊಂಡ ಚನ್ನಿಗ ತಾನು 4 ಮುದದಿಂದ್ಹೀಗೆಂದಳು ಸೊಸೆಗೆ ಮುದು ಮಗನಿಗೆ ಕುಂಕುಮ ಹಚ್ಚು ಮದಗಜಗಮನೆ 5 ಫಣಿಗೆ ತಿದ್ದಿ ಕುಂಕುಮ ವನ್ನಿಟ್ಟಳು ಮುದ್ದು ಸುರಿಯುತ 6 ಮುಂದಲ್ಲೆ ಕುಬೇರಕೊಟ್ಟ ಚಂದದಾಭರಣಗಳಿಟ್ಟು ಸಂಧ್ಯಾನು- ಷ್ಠಾನವ ವಿಧಿಯಿಂದ ಮಾಡಿದ 7 ಪುಣ್ಯಾಹ ವಾಚನಕೆ ಕುಳಿತಾ ಪುಣ್ಯಾತ್ಮನು ತಾನು 8 ಒಡಗೂಡಿ ಕುಳಿತಳಲ್ಲೆ ಸಡಗರದಿಂದ 9 ಮತ್ತಲ್ಲೆ ವಶಿಷ್ಠ ಮುನಿಯು ಮುತ್ತಿನ ರಾಸಿಗಳಿಂದ ಉತ್ತಮ- ಗದ್ದಿಗೆಯ ಬರೆದ ಕ್ಲಪ್ತದಿಂದಲಿ 10 ವಿಧಿಯಿಂದ ಮಾಡಿಸಿದನÀು ವಿಧಿಸುತ ತಾನು11 ಸಂಭ್ರಮದಿಂದಲ್ಲೆ ಕೊಟ್ಟ ತಾ ಬ್ರಹ್ಮದೇವ 12 ದೇವಾಧಿದೇವಗೆ ಕೊಟ್ಟರಾ ವೇಳೆಯಲ್ಲಿ 13 ಮುತ್ತಿನ ಅಕ್ಷತೆ ಇಟ್ಟು ಮುತ್ತೈದೆರಲ್ಲೆ 14 ನುಡಿದ ಕುಲದೇವಿ ಯಾವಕೆ ನಿನಗೆ ಶ್ರೀನಾಥಪೇಳೋ 15 ಹಲವು ಕಾಲದಲ್ಲಿ ಎನ್ನ ಕುಲಪುರೋಹಿತನಾದ ಮೇಲೆ ಕುಲದೇವಿ ಯಾವಕೆ ಅರಿಯೆ ಮುನಿನಾಥ ನೀನು 16 ಕುಲಪುರೋಹಿತ ನೆನಿಸುವೆನೊ ಶ್ರೀನಾಥನಿನಗೆ17 ಕುಲದೇವಿ ಎನಗೆ ಉಂಟು ಮುನಿನಾಥ ಕೇಳೊ 18 ಯಾವರೂಪ ದಿಂದೆಸೆವಳು ಶ್ರೀನಾಥ ಪೇಳೊ19 ವೃಕ್ಷರೂಪದಿಂದ ಅಮಿತಾದ ಫಲಕೊಡುವಳಯ್ಯ ಮುನಿನಾಥ ಕೇಳೊ20 ವೃಕ್ಷ ಎಲ್ಲಿ ಇರು ತಿಹುದು ಪೇಳೋ ಶ್ರೀನಾಥ ನೀನು 21 ಇರುತಿಹುದು ವೃಕ್ಷ ಮುನಿನಾಥ ಕೇಳೊ 22 ಸಹಿತ ತ್ವರದಿ ನಡೆದ ಕುಲದೇವಿಯ ಕರೆವುದಕೆ 23 ವಚನ ಕ್ರಮದಿಂದ ಪೂಜಿಸುತ ದಯಮಾಡು ನಮಗೆ ಕುಲ ಅಮಿತ ಕಾರ್ಯವನು ಕ್ರಮ 'ಶಮಿಶಮಮೇ' ಎಂತೆಂಬ ಮಾಡಿ ಕುಲದೇವತೆಯಾ ಮಾಡಿ ನುಡಿದವು ಆಗ ಸೂರಾಡುತಲೆ ಬಂದ ಗಾಢನೆ ಸ್ನೇಹ ಸಂರೂಢನಾಗಿ 1 ವರಹದೇವನೆ ಎನ್ನವರ ಧರಣಿದೇವಿಯ ಕೂಡಿ ಸರಸಾಗಿ ಎಲ್ಲರಿಗೆ ಹರಿಯೆ ನೀನು ಹರಿ ಅಂದಮಾತಿಗೆ ಆ ಹಿರಿಯಳೆಂತೆಂದು ತಿಳಿ ಎನ್ನ ಇರುವೆ ಕೃಷಿ ಕಾರ್ಯದಲಿ ನಿರತನಾಗಿ 2 ಎಲ್ಲ ಈ ಪರಿಕೇಳಿ ಫುಲ್ಲನಾಭನು ಅವನ ಒಲಿದಾಜ್ಞೆಯ ಕೊಂಡು ಉಲ್ಲಾಸಬಟ್ಟು ಮನದಲ್ಲಿ ಕುಲದೇವತೆಯ ಅಲ್ಲಿ ಸ್ಥಾಪನೆ ಮಾಡಿ ನಿಲ್ಲದಲೆ ಸ್ವಸ್ಥಾನದಲಿ ಬರುತಾ ರಮಾ ವಲ್ಲಭನು ನುಡಿದನಾಗಲೆ ಈ ಪರಿಯು ಎಲ್ಲರ್ಹೊರಡಿರಿ ಇನ್ನು ಸುಳ್ಳ್ಯಾಕೆ ತಡ ದೂರದಲ್ಲೆ ಇರುತಿಹದು ಬಲ್ಲಿ ದಾಕಾಶಪುರ ಇಲ್ಲಿದ್ದ ಬಾಲಕರು ಎಲ್ಲ ವೃದ್ಧರು ಮತ್ತೆ ಮೆಲ್ಲಗ್ಹೋಗಲಿ ಮುಂದೆ ನಿಲ್ಲದಲೆ ಸಾಗಿ3 ತನ್ನ ತಂದೆಯ ವಚನವನ್ನು ಕೇಳೀಪರೀ ಮುನ್ನ ನುಡಿ ದನು ಬ್ರಹ್ಮ ಪುಣ್ಯಪುರುಷನೆ ಕೇಳು ಪುಣ್ಯಾಹ ವಾಚನವ ಚೆನ್ನಾಗಿ ನೀ ಮಾಡಿ, ಮುನ್ನ ಆಕುಲದೇವಿಯನ್ನು ಸ್ಥಾಪನೆಮಾಡಿ, ಉಣ್ಣದಲೆ ಪೋಗುವುದುಚಿತವಲ್ಲಾ ಸಣ್ಣ ಬಾಲರು ಮತ್ತೆ ಹೆಣ್ಣು ಮಕ್ಕಳು ದೇಹಹಣ್ಣಾಗಿ ಇರುವ ಬಹು ಪುಣ್ಯ ಶೀಲರು ಮತ್ತೆ ನೀನ್ನ ಕುಲ ಬಾಂಧವರು ಮಾನ್ಯ ಮುನಿಗಳು ಎಲ್ಲ ಉಣ್ಣದಲೆ ಹಸಿವೆಯಲ್ಲಿ ಬಣ್ಣಗೆಟ್ಟಿಹರು 4 ತನ್ನ ತನಯನ ವಚನವನ್ನು ಕೇಳೀ ಪರಿಯಮುನ್ನ ಶ್ರೀಹರಿನುಡಿದ ಎನ್ನ ಪುತ್ರನೆ ಕೇಳು ಎನ್ನ ಕಾರ್ಯಕೆ <ಈಔಓಖಿ ಜಿಚಿ
--------------
ಅನಂತಾದ್ರೀಶ - ಕಥನಕಾವ್ಯಗಳು
ಧನ್ಯರಾದರು ಗುರುಗಳನು ಪೂಜಿಸುತ ಇನ್ನಿವರ ಪಾತಕವು ತೊಲಗಿತು ಜಗದಿ ಪ. ತಂದೆ ಮುದ್ದುಮೋಹನದಾಸ ರಾಯರನು ಚಂದದಿಂ ಸತಿಸಹಿತ ಕರೆತಂದು ಮನೆಗೆ ಮಂದರೋದ್ಧರನ ಪದಸೇವೆ ಇದು ಎಂದರಿತು ಮಂದಹಾಸದಲಿ ನಸುನಗುತ ಸದ್ಭಕ್ತರು 1 ಮಂಗಳೋದಕದಿಂದ ಮಜ್ಜನವಗೈಸುತಲಿ ಅಂಗಗಳನೊರೆಸುತಲಿ ನಾಮಗಳನ್ಹಚ್ಚಿ ರಂಗನಾಥನಿಗರ್ಪಿಸುತ ಪುಷ್ಪಹಾರವನ್ಹಾಕಿ ಶೃಂಗಾರವನೆಗೈದು ಶ್ರೀ ಗುರುಗಳನ್ನು 2 ಪಚ್ಚೆಕರ್ಪೂರ ಕೇಸರಿಯಿಂದ ಕೂಡಿದ ಅಚ್ಚ ಗಂಧವನ್ಹಚ್ಚಿ ಅಕ್ಷತೆಯನಿಟ್ಟು ಮಚ್ಛರೂಪಿಯ ನೆನೆದು ಪಾದಕಮಲವ ತೊಳೆದು ನಿಚ್ಚಳದ ಭಕ್ತಿಯಲಿ ನಿಜ ಭಕ್ತರೆಲ್ಲ 3 ಸತಿಸಹಿತ ಕುಳ್ಳಿರಿಸಿ ಗುರುಗಳನು ಪೀಠದಲ್ಲಿ ಅತಿಶಯದಿ ಕುಡಿಬಾಳೆ ಎಲೆಗಳನೆ ಹಾಕಿ ಮತಿಯಿಂದ ರಂಗೋಲೆಗಳನ್ಹಾಕಿ ಲವಣ ಸ- ಪರಿಯಂತ ಬಡಿಸುತಲಿ 4 ಅನ್ನಾದಿ ಸಕಲ ಷಡ್ರಸಗಳನೆ ಬಡಿಸುತ್ತ ಘನ್ನ ಮಹಿಮರಿಗೆ ಭಕ್ಷಾದಿಗಳ ಬಡಿಸಿ ಸನ್ನುತಿಸುತಲಿ ತೀರ್ಥ ಆಪೋಷನವನ್ಹಾಕಿ ಪನ್ನಗಶಯನನಿಗೆ ಅರ್ಪಿಸುತ ಮುದದಿ 5 ಘೃತಶರ್ಕರಾದಿಗಳನಡಿಗಡಿಗೆ ಬಡಿಸುತಲಿ ನುತಿಸಿ ಗಾನಗಳಿಂದ ಗುರುಮಹಿಮೆಯ ದಧಿ ಕ್ಷೀರದನ್ನಗಳನುಣಿಸುತಲಿ ಘೃತ ಕ್ಷೀರದಿಂದ ಕೈ ತೊಳೆದು ಸಂಭ್ರಮದಿ 6 ಯಾಲಕ್ಕಿ ಕರ್ಪೂರ ಮಿಳಿತ ವೀಳೆಯವನಿತ್ತು ವೇಳೆವೇಳೆಗೆ ತಪ್ಪು ಕ್ಷಮೆಯ ಬೇಡುತಲಿ ವ್ಯಾಳಶಯನಗರ್ಪಿಸುತ ಉಡಿಗೆ ತೊಡಿಗೆಗಳನಿತ್ತು ಮಾಲೆಹಾಕುತ ಆರತಿಯನೆತ್ತಿ ಮುದದಿ 7 ಹರಿಪ್ರೀತನಾಗುವನು ಗುರು ಹೃದಯದಲಿ ನಿಂತು ಕರ್ಮ ತೊಡಕುಗಳು ಸರಸಿಜಾಕ್ಷನು ತಾನು ಹರುಷಪಡುವನು ದಯದಿ ಕರಕರೆಯ ಸಂಸಾರ ಕಡಿದು ಗತಿ ಈವ 8 ಗುರುದ್ವಾರ ಒಲಿಯುವನು ಹರಿಯು ಮೋಕ್ಷಾರ್ಥಿಗಳ ಅರಘಳಿಗೆಯಗಲದಲೆ ಕಾಯುವನು ಸತತ ಗುರು ಅಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ತ್ವರಿತದಿಂ ಹೃದಯದಲಿ ತೋರ್ವನು ತನ್ನ9
--------------
ಅಂಬಾಬಾಯಿ
ಮಾರ ಜನಕನ ನೀರೆ ಪ ಕರವ ಹರುಷದಿಂದಾ ಅ.ಪ ಕ್ಷೀರವಾರ್ಧಿತನಯೆಯೆಂದು ಸಾರಸಾಕ್ಷಿಯರು ಬಂದು ಕೋರಿ ಭಜಿಸುವರು ನಿನ್ನ ಅಪಾರ ಮಹಿಮೆಗಳನು 1 ಸುತ್ತ ಜ್ಯೋತಿಗಳ ಬೆಳಗಿ ಮುತ್ತೈದೆಯರೆಲ್ಲ ಕೂಡಿ ಮುತ್ತು ಮಾಣಿಕ ಪೀಠವಿರಿಸಿ ಭಕ್ತಿಯಿಂದ ಪ್ರಾರ್ಥಿಸುವರು 2 ಜನಕರಾಯನ ಕುಮಾರಿ ಸನಕಾದಿಯೋಗಿ ಜನಾಧಾರೀ ದಿನಕರ ಕೋಟಿ ಪ್ರಕಾಶೆ ದಿವ್ಯಮಣಿಮಯ ಭೂಷೆ 3 ಮಾನಸಾಬ್ಜ ಮಂಟಪದಲಿ ಧ್ಯಾನವೆಂಬೊ ಪೀಠದಲ್ಲಿ ಜ್ಞಾನಿಶಕ್ತಿಗಳು ಪೊಗಳೆ ಸಾನುರಾಗದಿಂದಲೀಗಾ 4 ನಿತ್ಯಸಂಪತ್ಪ್ರದಾಯಿನಿ ಭೃತ್ಯವತ್ಸಲೆ ಜನನೀಸತ್ಯಸಂಕಲ್ಪ ಗುರುರಾಮ ವಿಠಲನ ಪಟ್ಟದರಾಣಿ 5
--------------
ಗುರುರಾಮವಿಠಲ
ರಾಜಮುಖೀ ಬೇಗ ಪ. ಚಿತ್ರವಿಚಿತ್ರಮಾಗಿ ಮೆರೆವ ರತ್ನಖಚಿತ ಮಂಟಪದಿ ಕೆತ್ತನೆಯ ಹಸೆಯಮೇಲೆ ರತ್ನಗಂಬಳಿಯ ಹಾಸಿ 1 ಪರಿಪರಿಯ ರಾಗದಿಂದ ತರುಣಿಯರು ನಿನ್ನ ಪಾಡಿ ಕರೆಯುತಿಹರೋಳ್ ಕರುಣೆಯಿರಿಸಿ ಅರಸನೊಡನೆ ಸರಸದಿಂದ2 ಪಂಕಜಾಕ್ಷಿ ನಿನ್ನ ಚರಣಕಿಂಕರರ ಮೊರೆಯ ಕೇಳಿ ಕನಕಪೀಠದಲ್ಲಿ ಕುಳಿತು ಕಾಂಕ್ಷಿತಾರ್ಥವಿತ್ತು ಸಲಹು 3 ಪರಮಪುರುಷ ಶೇಷಶೈಲವರದನರಸಿ ನಿನ್ನ ಗುಣವೆ ಸ್ಮರಿಸಿ ಸ್ಮರಿಸಿ ಕರೆಯುತಿರುವ ತರಳೆಯರಂ ಪೊರೆಯೆ ತಾಯೆ4
--------------
ನಂಜನಗೂಡು ತಿರುಮಲಾಂಬಾ