ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಾಗಮವ ಹೀಗಾಯಿತೊ ದೇವ ಇನ್ನು ನೀ ಎನ್ನನು ಸಲಹುವ ಬಗೆಯಂತೊ ಪ ಸಕ್ಕರಿ ತಾಯೆಂದು ಸಂತಿಗೆ ಕಳುಹಲು ತಕ್ಕಡಿ ಲಶುನವ ತಂದ ತರಳನಂತೆ 1 ಪರಮ ನಿರ್ಮಲವಾದ ತುಲಸಿ ತಾಯೆನೆ ದುಷ್ಟ ತುರುಚಿಯನೆ ತಂದ ತರಳನಂತೆ 2 ಮಸಿಯ ಒರೆಸಿಕೊಂಡು ಬಾಯೆನ್ನೆ ಶಿಶು ತಾನೆ ಕೆಸರು ಪೂಸಿಕೊಂಡು ಬಂದ ತರಳನಂತೆ3 ಕಳುಹಿದಾ ಪಿರಿಯರು ಹಳಿಯಲಿ ಚಿಂತಿಲ್ಲ ಗೆಳೆಯಾರು ನಗುವ ಚಿಂತೆಯೆ ಘನವೆಲೊ ದೇವ4 ಆಪುತ ಪ್ರಿಯ ಬಂಧು ವ್ಯಾಪಕ ನೀನೆಂದು ಜ್ಞಾಪಕಗೊಳಿಸಿದೆ ವಾಸುದೇವವಿಠಲ 5
--------------
ವ್ಯಾಸತತ್ವಜ್ಞದಾಸರು
ನೀನೇ ಕಾಪಾಡಬೇಕು ನಿರುತವು ಬಿಡದೆಯ- ಜ್ಞಾನಾಬ್ಧಿಯ ದಾಟಿಸು ಸೀ- ಕಮಲ ಭೃಂಗ ಶುಭಾಂಗ 1 ಸುಗ್ರೀವನ ಮಂತ್ರಿವರ ದ- ಶಗ್ರೀವನ ಗುದ್ದಿದವನೆ ಶತ್ರುನಿಕರವಂ ಶೀಘ್ರದಿ ಗೆಲುವಂದದಲಿಯ- ನುಗ್ರಹವ ಮಾಡುತಲೆಮ್ಮ ಕೈಪಿಡಿ ಹನುಮ 2 ತ್ವರಿತವತಿ ನಿಧಾನವಲಸಿಕೆಗಳನು ಬಿಡಿಸಿ ಪಿರಿಯರು ಪೇಳಿದ ಪರಿಯಲಿ ನೆರೆನಡೆವಂದದಲಿ ಸುಮತಿಯನು ಕೊಡು ಹನುಮ3 ಹೊರಗಿನ ಶತ್ರುಗಳಂ ವಾ- ಕ್ಪೌರುಷದಿ ವೋಡಿಸಲುಬಹುದು ಒಳಗಿನ ಕಾಮ್ಯಾ ದ್ಯರ ಗೆಲುವುದಕೆ ಶಾಂತಿಯೆ ಕ್ಷುರವಹುದು ದಯಮಾಡಿ ನೀನೆ ಕರುಣಿಸು ಹನುಮ4 ಕತ್ತಿಯಲಿ ಕಡಿದೆರೆರಡಾ- ಗುತ್ತಿರುವುದು ಜಡವು ವಾಕ್‍ಕತ್ತಿಯ ದೆಸೆಯಲಿ ನೆತ್ತಿಮೊದಲು ಪಾದವರಿಗು ಕತ್ತರಿಸಿದರೀತಿಯಹುದು ಕಾಯೈ ಹನುಮ 5 ಪರಧನ ಪರಾಕಾಮಿನಿಯರಿ ಕೊರಳೊಳರಿವೆಂಬ ರಜ್ಜುವಿಂದಲಿ ವಿರಾಗ ದೊಣ್ಣೆಯನು ಕಟ್ಟಿ ಕೈಪಿಡಿ ಹನುಮ 6 ಸಂಗವು ನಿತ್ಯಾಹ್ನೀಕಕೆ ಭಂಗವು ಬರುತಿಹುದು ಸದ್ವಿಷಯವಾದರದೆ ಬಂಗಾರವು ರತ್ನವು ತಾ ಹಿಂಗದೆ ಸೇರಿಸಿದ ರೀತಿ ಹಿತವೈ ಹನುಮ 7 ನವವಿಧ ಭಕ್ತಿಯ ಕೊಡು ರಾ- ಘವನಂಘ್ರಿಪರಾಗದಲಿ ಕಡು ವಿರತಿಯನು ನೀಂ ತವಕದಲಿ ಪಾಲಿಸುತಲಿ ನಿ- ನ್ನವರಂ ಕೈಪಿಡಿವುದೆಂದಿಗೂ ಬಿಡದೆ ಹನುಮ 8 ತಾನನುದಿನದಿ ಬರುವ ಕಷ್ಟಗಳನು ಪರಿಹರಿಸುತ್ತ ಹಿಂದೆ ತಿರುಗುತಲಿರುವಂ9
--------------
ಗುರುರಾಮವಿಠಲ
ಮನಸಿಗೆ ಬಂದ ಧನ್ವಂತ್ರಿ ವೈದ್ಯನೇ ಮನಸಿನ ರೋಗವ ಪರಿಹರಿಸೊ ಪ ಧನ ಲೇಶ ಕೇಳಾ ಬಡವರ ಪೊರೆಯೊ ನೀ ಮನೆಗೆ ಬಂದರೆ ತನು ರೋಗಗಳೋಡೋವು ನೆನಹ ಮಾರ್ಗಕೆ ಬೇಗ ತಡಿಯದೆ ಈ ಮನ ಕುನರ ಸೂಲಿವುಳ್ಳ ವಾತವ ಹರಿಸೊ 1 ನಾಮವ ನುಡಿವಲ್ಲಿ ಅರುಚಿ ಇದಕಿದೆ ಭಾಮೆಯ ಕಂಡರೆ ತಲ್ಲಣವಾಹದೊ ಶ್ರೀ ಮನೋಹರನ ಸ್ಮರಣೆ ಹಾರುತಿದೆ ಈ ಮಹಾದೋಷವುಳ್ಳ ಪಿತ್ತವ ಬಿಡಿಸೊ 2 ಪಿರಿಯರು ನೋಡಲು ಗುರುಗುರುಯೆನುತಿದೆ ಪರಿಪರಿ ವಿಷಯದ ನಂಜಿಲಿಂದ ಪರಿಹರಿಸೊ ಶ್ಲೇಷ್ಮ ಮೊರೆಹೊಕ್ಕೆನು ನಾನು ಪರಿಹರಿಸೊ ವಾಸುದೇವವಿಠಲರೇಯ 3
--------------
ವ್ಯಾಸತತ್ವಜ್ಞದಾಸರು
ಸಾಕು ಸಾಕು ಈ ಜನಸಂಗ ಪ ಅದರಿಂದ ಆಗೋದು ವಿಚಾರ ಭಂಗಾ ಅ.ಪ. ನಾಲ್ಕಾರು ತತ್ವಮಾತಿಗೆ ಮರುಳ್ಯಾಗಬ್ಯಾಡ ನಿನ್ನೊಳು ನೀನಾಗಿ ತಿಳಿದುಕೋ ಗಾಢಾನಿನಗೆ ನಾನರುಹುವೆ ಅವರ ಮನೋವೃತ್ತಿ ಗೂಢಾಅನಿಮಿತ್ತವಾಗಿ ಸರಸದಿ ಬಂದು ವಿರಸವ ಮಾಡೋರು ಮೂಢಾ 1 ಪಿರಿಯರು ಪೇಳಿದ ವಾಕ್ಯವನ್ನು ಗ್ರಹಿಸಿ ತ್ಯಜಿಸೋದು ಸತ್ಕರ್ಮ ಬಾಹ್ಯ ವಳಗೆ ನೋಡಲು ತುಂಬಿದೆ ವಿಷಯರಾಶಿ ಜೀಯಾ ಆದ್ದರಿಂದ ನಿನಗೆ ಬೇಡಿಕೊಂಡು ಮುಗಿವೆ ನಾ ಕೈಯ್ಯಾ2 ಸಂತರ ಸಂಗ ಮಾಡಬೇಕು ಅದು ಹ್ಯಾಗೆಂದರೆ ಕಂತೆಯೊಳಗೆ ಉಳ್ಳವರಾಗಬೇಕು ಸಂತೆ ಜನರ ಭಂಗಾ ತಾಳಲು ಬೇಕು ನಮ್ಮ ಸಂತತ ಸುರ ತಂದೆವರದಗೋಪಾಲವಿಠಲನ ದಯಬೇಕು 3
--------------
ತಂದೆವರದಗೋಪಾಲವಿಠಲರು