ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಳು ತಾಳೆಲೊ ಕೋಪ ಜಾಲಮಾಡದೆ ಭೂಪ ಕೇಳಿಕೊಂಬೆನು ನಿನ್ನ ಕಾಲಪಿಡಿವೆನೊ ಪ. ಫಾಲಲೋಚನನುತ ಶ್ರೀಲೋಲ ನಿನ್ನನೇ ಕೇಳಿಕೊಂಬೆನು ಮಾತಕೇಳೋ ಕಾಳುಮಾಡದೆ ಮಾತ 1 ದುರುಳತನದಲಿ ನಿನ್ನ ತೆರೆದಕಣ್ಣಳನೆಂದು ಜರಿದು ಪೇಳಿದೆನೋ ತಿರುಗಿ ನಾ ನಿನ್ನ ಗಿರಿಯ ಬೆನ್ನೊಳು ಪೊತ್ತು ಮೆರೆಯುವ ದಡ್ಡನೆಂದೊರೆದ ಕಾರಣದಿಂದ 2 ಕೋರೆಯೊಳ್ ಕೊರೆದು ಕೊನ್ನಾರಿಗೆಡ್ಡೆಯ ತಿಂದು ಳೀರಡಿ ಮಾಡಿದೆ ಘೋರವಿಕ್ರಮನೆಂದು ದೂರಿದೆನದರಿಂದ3 ಹೆತ್ತತಾಯಿಯ ಕೊಂದು ಮತ್ತೆ ಕಪಿಗಳ ಕೂಡಿ ಚಿತ್ತವಸೆರೆಗೈದ ಮತ್ತನೆಂದೆನಲಾಗಿ 4 ಉತ್ತಮಸತಿಯರ ಚಿತ್ತವ ಕಲಕಿದ ಮತ್ತನೆಂದಾಡಿದೆನೋ ಮತ್ತೆ ಕುದುರೆಯನೇರಿ ಕತ್ತಿಯ ಪಿಡಿದೆತ್ತಿ ಸುತ್ತುವನಿವನುನ್ಮತ್ತನೆಂದುದರಿಂದ 5 ಪಿತ್ತವು ತಲೆಗೇರಿ ಮತ್ತೆ ಮತ್ತೆ ನಾನಿನ್ನ ಒತ್ತೊತ್ತಿಜರಿದೆನೊ ಚಿತ್ತಜಪಿತನೆ ಮತ್ತೊಮ್ಮೆ ಬೇಡುವೆ ಗತಿನೀನೆ ನಮಗೆಂದು ಪತಿಕರಿಸೆನ್ನಪರಾಧವ ಮನ್ನಿಸಿ 6 ಕಂದನಿವಗೈದ ಕುಂದುಗಳೆಣಿಸದೆ ತಂದೆ ಸಲಹಯ್ಯ ಶ್ರೀ ಶೇಷಗಿರಿವರ 7
--------------
ನಂಜನಗೂಡು ತಿರುಮಲಾಂಬಾ
ಪರಮೌಷಧಿ ಸಿಕ್ಕಿತು ಪರಿಪರಿರೋಗ ಪರಿಹಾರಕಿದು ದಕ್ಕಿತು ಪ ಜ್ವರದ ಬೇಗೆಗೆ ದಾಹ ಕರುಳ ಕುಂದಿಸಿಯೆನ್ನ ನರಳಿಸಿದಾಗ ಮಾಂಗಿರಿರಂಗಾ ಎಂದೆಂಬ ಅ.ಪ ಸುರನರೋರಗ ಗರುಡ ಚರಣ ಗುರು ದಿವಾಕರ ಕಿನ್ನರಾಪ್ಸರ ಶರಣಜನ ಕರುಣಾಕರ ಶ್ರೀ ಧರ ಸುಖಂಕರ ಶೌರಿಯೆಂಬಾ1 ಪಿತ್ತವು ತಲೆಗೇರಿತು ಸುತ್ತಲು ಕಣ್ಗೆ ಕತ್ತಲೆ ಮುಸುಕಿದ್ದಿತು ಚಿತ್ತಪಲ್ಲಟಿವಾಗಿ ಮತ್ತನಾಗಿರಲಾಗ ನೆತ್ತಿಯೊಡೆದ ಎನ್ನ ಕುತ್ತಿಗೋಂಕಾರ 2 ಚಿತ್ತ ಮಸ್ತಕ ನೆತ್ತಿಗಳ ಬೆಂಬತ್ತಿ ಮತ್ತತೆಯಿತ್ತ ಪತ್ತದ ಕತ್ತಲೆಯನುತ್ತರಿಸಿದುತ್ತಮ ಚಿತ್ತಜನಪೆತ್ತಚ್ಯುತಾ ಯೆಂಬ 3 ಉಸಿರು ಉಗ್ಗಡಿಪಾಗ ವಸುದೇವ ಸುತಯೆಂಬ 4 ರಸರಸಂಗಳೊಳೆಸೆದು ವಾಸಿಸಿ ಉಸಿರು ಬಸಿರನು ವಸುವಿಲಾಸದೊಳೆಸೆದು ಪೊಸ ಪೊಸ ಎಸಕದಿಂ ಸುಖ ರಸವನೀಯುವ ರಾಮಯೆಂಬಾ 5 ಕರ ನೇತ್ರಗಳು ತಂಪಿಂಪಿನ ಸವಿ ಬಲೆಯೊಳು ಬಿದ್ದುವು ಜವ ನೇಣೆಸೆದಾಗ ಭವದೂರಹರಿ ಯೆಂಬ 6 ಶಿವ ಭವಾಮರಪವನಪಾವಕ ಜವ ಶಶಾಂಕವಾಕರಾನಕ ಶ್ರೀಧರ ಹರೇ ಭವದೂರನೆಂಬಾ 7 ಲಕ್ಷನಾಮಗಳೆಲ್ಲ ಲಕ್ಷಣವಾದ [ತು ರಕ್ಷೆಯೀಯುವಗುಳಿಗೆ] ಮಾತ್ರಾ ಮೋಕ್ಷಸುಖವನಿತ್ತು ರಕ್ಷಿಪುದೆಂಬುದ ದಕ್ಷಸುತೆಗೆ ಫಾಲಾಕ್ಷ ತಾಂ ಪೇಳಿದ 8 ಅಕ್ಷಯಾತ್ರವಿಪಕ್ಷ ರಾಕ್ಷಸ ಶಿಕ್ಷ ಸುಜನರಕ್ಷ ಪ್ರದವ ಅ ಧ್ಯಕ್ಷ ನುತಕಮಲಾಕ್ಷ ಶರಣಕಟಾಕ್ಷ ಲಕ್ಷ್ಮೀಪಕ್ಷ [ಮೂಂಗಿರಿರಂಗ] ಯೆಂಬಾ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್