ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೇ ಸುಳಿದವನಿಂದು|ನೀರೇ ತಂದುವನ ತೋರೇ ಪ ನೀಲಮೇಘದ ಕಾಂತಿಮೈಯ್ಯಾ|ನೋಡೇಮದನಯ್ಯಾ| ಕಾಲಲುಂದಿಗೆ ಹೆಜ್ಜೆಘಿಲು ಘಲುಕೆನುವಾ| ಮೇಲು ಪಿತಾಂಬರ ಝಳ ಝಳಿಸುವ ನವನಾರೇ 1 ಮೆರೆವ ವಡ್ಯಾಣ ಘಂಟೆಸಿರಿಯಾ|ಕವಿಹೊಗಳಲರಿಯಾ| ಬೆರಳುಂಗುರ ಕಡಗ ಕೇಯೂರಾ| ಕೌಸ್ತುಭ ಮಾಲೆಯ ಹೊರವನಾರೇ 2 ಕಡೆಗಣ್ಣನೋಟ ಪದುಮದೆಲಿಯೋ|ಮೋಹನದಾಬಲೆಯಾ| ಕುಂಡಲ ಹೊಳೆವ ಕಪೋಲಾ| ಇಡಿದನೇ ನಗೆಯ ಸುನಾಶಿಕ ಸರಳವನಾರೇ 3 ಮೃಗದ ಪಣಿಯಾಲುಂಗುರ ಗುರುಳೋ|ಕಾವನಸರಳೋ| ಝಗಝಗಿಸುವ ರನ್ನ ಮುಕುಟದ ಚೆಲುವಾ| ಬಗೆ ಬಗೆ ಸೊಬಗಿನ ನವರಸಗರೆವನಾರೇ 4 ತರುಣೀ ಮುನ್ನಿನಸುಕೃತಬಂದು|ವದಗಿ ತಾ ಇಂದು| ಗುರು ಮಹಿಪತಿ ಪ್ರಭು ಚರಣವದೋರಿ|ಮರುಳೆನ್ನಾ ಮಾಡಿದ ದೀನೋದ್ಧಾರಿವನಾರೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿಡಿಯೊರಂಗಯ್ಯ ಉಡುಗೊರೆಕೊಡುವೆವೊ ಕೃಷ್ಣಯ್ಯಭಿಡೆ ಬ್ಯಾಡೊ ಬೆತ್ತಲಿದ್ದಿಇದೇನು ಸಡಗರ ರಂಗಯ್ಯ ಪ. ನೀಲ ದೊಡ್ಯಾಣನಿಟ್ಟುಮ್ಯಾಲೆ ಉಂಗುರವು ಮೊದಲಾಗಿಮ್ಯಾಲೆ ಉಂಗುರವು ಮೊದಲಾಗಿ ತಂದೆವಬಾಲ ಕೃಷ್ಣಯ್ಯನ ಜನಕಗೆ ಉಡುಗೊರೆ 1 ಶೌರಿ ಕೃಷ್ಣಯ್ಯನ ಜನನಿಗೆಶೌರಿ ಕೃಷ್ಣಯ್ಯನ ಜನನಿ ದೇವಕಿಗೆಕುವರಿಯರು ಕೊಟ್ಟ ಉಡುಗೊರೆ2 ಹಲವು ಸೂರ್ಯರ ಬೆಳಕು ಗೆಲವೊ ಪಿತಾಂಬರ ಬೆಲೆಯಿಲ್ಲದಂಥ ಮುಕುಟವುಬೆಲೆಯಿಲ್ಲದಂಥ ಮುಕುಟ ಮುತ್ತಿನ ಹಾರ ಬಲರಾಮನಿಗೆ ಉಡುಗೊರೆ3 ಬಿಳಿ ಬಣ್ಣದ ಸೀರೆರನ್ನ ಮಾಣಿಕದಾಭರಣಹೊನ್ನೋಲೆ ಕೊಪ್ಪು ನಡುವಿಟ್ಟುಹೊನ್ನೋಲೆ ಕೊಪ್ಪು ನಡುವಿಟ್ಟು ತಂದೆವ ಕನ್ನೆ ರೇವತಿಗೆ ಉಡುಗೊರೆ 4 ಸಕಲಾತಿ ಸೀರೆ ದೋರೆ ಕಂಕಣ ಸರಿಗೆ ಹಾರ ಪದಕಗಳ ನಡುವಿಟ್ಟುಹಾರ ಪದಕಗಳ ನಡುವಿಟ್ಟು ರಾಮೇಶನನೂರು ಮಂದಿಗೆ ಉಡುಗೊರೆ 5
--------------
ಗಲಗಲಿಅವ್ವನವರು
ಕಾಶಿ ಪಿತಾಂಬರ ಕೈಯಲಿ ಕೊಳಲು |ಪೂಸಿದ ಶ್ರೀಗಂಧ ಮೈಯಲಿ ||ಲೇಸಾದ ಪುಷ್ವಮಾಲಿಕೆ ಹಾಕಿದ-ನಮ್ಮ-|ವಾಸುದೇವಹರಿಬಂದ ಕಾಣಿರೇನೆ? 2ಕರದಲಿ ಕಂಕಣ ಬೆರಳಲಿ ಉಂಗುರ |ಕೊರಳಲಿ ಹಾಕಿದ ಹುಲಿಯುಗರಮ್ಮ ||ಅರಳೆಲೆ ಕನಕಕುಂಡಲ ಕಾಲಲಂದಿಗೆ-ನಮ್ಮ-|ಉರಗಶಯನ ಬಂದ ಕಾಣಿರೇನೆ? 3ಹದಿನಾರು ಸಾವಿರ ಗೋಪಸ್ತ್ರೀಯರ ಕೂಡಿ |ಚದುರಂಗ-ಪಗಡೆಯನಾಡಿದನ ||ಮದನಮೋಹನರೂಪ ಎದೆಯಲ್ಲಿ ಕೌಸ್ತುಭ-ನಮ್ಮ |ಮಧುಸೂದನ ಬಂದ ಕಾಣಿರೇನೆ? 4ತೆತ್ತೀಸಕೋಟಿ ದೇವತೆಗಳು ಕೂಡಿ |ಹತ್ತವತಾರವ ಧರಿಸಿದನ ||ಸತ್ಯಭಾಮೆಯ ಅರಸ ಶ್ರೀ ಪುರಂದರವಿಠಲ |ನಿತ್ಯೋತ್ಸವ ಬಂದ ಕಾಣಿರೇನೆ? 5
--------------
ಪುರಂದರದಾಸರು