ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸನಾದ ಮೇಲೆ ಈಶ ದೂರುಂಟೆ ಆಸೆನೀಗಲು ಸುಖದ ರಾಶಿ ಬೇರುಂಟೆ ಪ ದೋಷಕ್ಕಂಜಿದಮೇಲೆ ಸನ್ಮಾರ್ಗ ಬೇರುಂಟೆ ಕ್ಲೇಶ ನೀಗಿದಮೇಲೆ ಪುಣ್ಯ ಇನ್ನುಂಟೆ ಹೇಸಲು ಪ್ರಪಂಚಕೆ ಸತ್ಸಂಗ ಬೇರುಂಟೆ ವಾಸನ್ಹಿಂಗಿದಮೇಲೆ ವೈರಾಗ್ಯವುಂಟೆ 1 ಜ್ಞಾನಗೂಡಿದಮೇಲೆ ಮತ್ತೆ ತೀರ್ಥಗಳುಂಟೆ ಧ್ಯಾನವಿಡಿದಮೇಲೆ ಅನ್ಯಮೌನುಂಟೆ ಹೀನಗುಣ ತೊಳೆದಮೇಲಿನ್ನು ಸ್ನಾನಗಳುಂಟೆ ಮಾನಸವು ಶುದ್ಧಿರಲು ಬೇರೆ ಮಡಿಯುಂಟೆ 2 ಕೈವಲ್ಯ ಇನ್ನುಂಟೆ ಶರಣು ಪೊಂದಿದಮೇಲೆ ಪರಮಾರ್ಥ ಬೇರುಂಟೆ ಅರಿವನರಿತರೆ ಬೇರೆ ಪರಲೋಕ ಇರುಲುಂಟೆ ಶರಣರೊಲಿದಮೇಲ್ಹರಿಚರಣ ಹೊರತುಂಟೆ 3 ಸಫಲನಾದಮೇಲೆ ವ್ರತನೇಮ ಬೇರುಂಟೆ ಗುಪಿತವರಿತಮೇಲೆ ಪರತತ್ವವುಂಟೆ ಅಪರೂಪ ಧ್ಯಾನಿರಲು ತಪ ಬೇರೆ ಇರಲುಂಟೆ ಅಪರೋಕ್ಷಜ್ಞಾನ್ಯಾದ ಮೇಲೆ ಮಿಕ್ಕಸಾಧನುಂಟೆ 4 ಮಾನಹೋದಮೇಲೆ ಮರಣ ಬೇರಿರಲುಂಟೆ ನಾನತ್ವ ಪೋದಮೇಲೆ ಸತ್ಕರ್ಮವುಂಟೇ ಧ್ಯಾನದಾಯಕ ಮಮಪ್ರಾಣ ಶ್ರೀರಾಮನಡಿ ಖೂನ ತಿಳಿದ ಮೇಲೆ ಮುಕ್ತಿ ಬೇರುಂಟೆ 5
--------------
ರಾಮದಾಸರು
ಮಂದಾಸಲ ರಗಳೆ ರಾಮ ಪದಾಂಬುಜ ಭೃಂಗಗೆ ಜಯ ಜಯ ತಾಮಸ ಕುರುಕುಲ ಧ್ವಂಸಕ ಜಯ ಜಯ ಶ್ರೀ ಮತ್ಪೂರ್ಣ ಪ್ರಜ್ಞಗೆ ಜಯ ಜಯ 1 ವಾಸುದೇವ ಸುನಾಮಕ ಜಯ ಜಯ ದೋಷ ಜ್ಞಾನ ವಿನಾಶಕ ಜಯ ಜಯ ಸೂರ್ಯ ವ್ಯಾಸ ಸುಭೋಧೆಯ ದರ್ಪಣ ಜಯ ಜಯ 2 ಶುಭಗುಣಲಕ್ಷಣ ಶೋಭಿತ ಜಯ ಜಯ ಭವ ಮೋಚಕ ಜಯ ಜಯ ಇಭವರದಾಜ್ಞಾಧಾರಕ ಜಯ ಜಯ ವಿಭುಧ ಸುಖಾಂಬುಧಿ ಸೋಮನೆ ಜಯ ಜಯ3 ನಿತ್ಯ ಸದಾಗಮ ಕೋಶಗೆ ಜಯ ಜಯ ಸತ್ಯವತೀಸುತ ಪ್ರೀಯಗೆ ಜಯ ಜಯ ಸತ್ಯಾಖ್ಯಾತ ಸುಮಿತ್ರಗೆ ಜಯ ಜಯ ಸುರತರು ಜಯ ಜಯ 4 ಅಚ್ಚುತ ಪ್ರೇಕ್ಷರ ಶಿಷ್ಯಗೆ ಜಯ ಜಯ ಸ್ವಚ್ಚಗುಣಾರ್ಣವ ಋಜುಪತಿ ಜಯ ಜಯ ಕೆಚ್ಚೆದೆ ವೀರಾಗ್ರೇಸಗೆ ಜಯ ಜಯ ಪಾವಕ ಜಯ ಜಯ 5 ಶೃತಿತತಿ ವಿಮಲ ಸುಭೋದಕ ಜಯ ಜಯ ರತಿಪತಿ ಪಿತವರ ದೂತಗೆ ಜಯ ಜಯ ಕ್ಷಿತಿಧರ ದ್ವಿಜಶಿವವಂದಿತ ಜಯ ಜಯ 6 “ಶ್ರೀ ಕೃಷ್ಣವಿಠಲ” ಸದಾರತ ಜಯ ಜಯ ಲೋಕ ಹಿತಪ್ರದ ನಿಜಗುಣ ಜಯ ಜಯ ಶ್ರೀಕರ ಶುಭಕರ ಜಯಕರ ಜಯ ಜಯ ಆಕಮಲಾಸುತ ರಯೀಪತಿ ಜಯ ಜಯ 7
--------------
ಕೃಷ್ಣವಿಠಲದಾಸರು