ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತಹುದೊ ನಿನ್ನಯ ಭಕುತಿ ಎನಗೆ - ಶ್ರೀ-ಕಾಂತ ನಿನ್ನಯ ಒಲುಮೆಯಿಲ್ಲದ ಮೂಢಾತ್ಮನಿಗೆ ಪ ಸುಕೃತ ಫಲವು ಮೊದಲಿನಿತಿಲ್ಲಇಂದು ಬಂದಡೆ ಒಳ್ಳೆ ಮತಿಯ ಕೊಡಲಿಲ್ಲಸಂದ ವಯಸನು ತಿಳಿದು ಕುಂದುತಿದೆ ಎನ್ನ ಮನ-ದಂಧಕಾರವ ಬಿಡಿಸಿ ಹೊಂದಿಸು ಜ್ಞಾನವನು 1 ವೇದಶಾಸ್ತ್ರ ಶಬ್ದ ತರ್ಕ ಮೀಮಾಂಸೆಗಳಓದಿದವನಲ್ಲ ನಿನ್ನಯ ಭಕುತಿಗಧಿಕವಾದ ಇನ್ನೊಂದೇನನುಸುರುವೆನು ನಾ ಮುನ್ನ ಸಂ-ಪಾದಿಸುವ ಭಕುತಿ ಇನ್ನೆಂತಿಹುದೊ ದೇವ 2 ಇಂದು ಪರಿಯಂತರವುಭ್ರಷ್ಟನಾಗಿ ಪರರ ಸೇವೆಯಿಂದಿರುತಿಹೆನುಇಷ್ಟಲ್ಲದಿನ್ನೆನಗೆ ತೃಪ್ತಿ ಇನ್ನೆಂತಹುದೀಕಷ್ಟ ಶರೀರದೊಳು ತೊಳಲಲಾರೆನು ಹರಿಯೆ 3 ನರಜನ್ಮವೆಂಬ ಪಾತಕದ ಪಂಜರದೊಳಗೆಸ್ಥಿರವೆಂಬೊ ಅಹಂಕೃತಿ ಜೀವನವ ನಿರ್ಮಿಸಿಎರವಿನ ಮಾತಾಪಿತರನುಜರೆಂಬಉರಿಕಾವು ಕ್ಷಯವೆಂಬ ಸರಿಗಳನು ವಂದಿಸುವೆನು 4 ಇನಿತುಪರಿಯಲಿ ನಾನು ಹಲುಬಿದೊಡೆನೀನು ಸುಮ್ಮನಿದ್ದೊಡೆ ಬಹು ಅಪಕೀರ್ತಿಯುನಿನ್ನ ದಾಸಗೊಲಿದು ಸಲಿಸಯ್ಯ ಮನದಿಷ್ಟಕನಕಾದ್ರಿಯೊಳು ನೆಲಸಿದಾದಿಕೇಶವರಾಯ 5
--------------
ಕನಕದಾಸ
ಬಿದ್ದ ಹುಣ್ಣು ಮಾಯವಲ್ಲದವ್ವಾ ಹ್ಯಾಂಗೆ ಸಹಿಸಲಸಾಧ್ಯ ಬೇನೆ ನಿದ್ರೆ ಬರದವ್ವಾ ಪ ಬಿದ್ದ ಹುಣ್ಣು ಮಾಯವಲ್ಲದು ಮುದ್ದು ಮುಖ ನಿನ್ನಪಾದ ಪದ್ಮಕೆ ಬಿದ್ದು ಬೇಡುವೆ ಸದ್ದು ಮಾಡದೆ ಅಬ್ದಿಶಯನನೆಂಬ್ವೈದ್ಯನ್ನ್ಹಿಡಿತಾ ಅ.ಪ ಮುತ್ಯ ಅಜ್ಜರನಳೀತು ಯೀ ಹುಣ್ಣು ಮತ್ತು ಎನ್ನ ಹೆತ್ತ ತಾತ ಮಾತಾ ಪಿತರನು ಹತ್ತಿಕೊಂಡು ಭ್ರಾತೃ ಬಂಧುವನು ಗೊತ್ತಿಗ್ಹಚ್ಚಿತು ಎತ್ತಪೋದರೊ ಪತ್ತೆಗಾಣೆನು ಅತ್ತು ಅತ್ತು ಇದರ ಬೇನೆಗೆ ಸತ್ತು ಸತ್ತು ಹೋದರೆಲ್ಲರು ಪುತ್ರ ಮಿತ್ರ ಕÀ ಳತ್ರರೆಲ್ಲರ ವ್ಯರ್ಥಕೊಲ್ಲಿ ಬೆನ್ಹತ್ತಿದೆನ್ನಗೆ 1 ಎಷ್ಟು ಬಂಧುಬಳಗವನೀ ಹುಣ್ಣು ನುಂಗಿಬಿಟ್ಟಿದೆ ಇಷ್ಟು ಖೂನಕ್ಕುಳಿಸಿಲ್ಲೋರ್ವರನು ಶಿಷ್ಟಜನರಿಗೆ ಮೃತ್ಯು ಕಾಣ್ಹುಣ್ಣು ಬಿಟ್ಟಿಲ್ಲಾರನು ಎಷ್ಟು ಪೇಳಲಿ ನಷ್ಟಸುದ್ದಿಯನು ದುಷ್ಟಶಿಷ್ಟರೆಂಬರೆಲ್ಲರ ಕಟ್ಟಿ ಮುರಿದು ಮುಟ್ಟಿಗಿಯಮಾಡಿ ಮೊಟ್ಟೆಕಟ್ಟಿ ಕೊಟ್ಟು ಮೃತ್ವಿಗೆ ಕಟ್ಟಕಡಿಗೆ ಬೆನ್ನಟ್ಟಿದೆನಗೆ 2 ಕುಂತೆನೆಂದರೆ ಕುಂದ್ರಗೊಡದಮ್ಮ ಸಂತಜನರೊಳು ನಿಂತೆನೆಂದರೆ ನಿಂದ್ರ ಗೊಡದಮ್ಮ ಸಂತಸೆಂಬುದು ಇನಿತು ಇಲ್ಲಮ್ಮ ಅಂತರಂಗದಿ ನಿಂತು ಸುಡುವುದು ತಾಳಲೆಂತಮ್ಮ ಅಂತ:ಕರಣದಿ ಪೋಗಿ ಎನ್ನಯ ಅಂತ್ಯಕ್ವೈದ್ಯನಾದಂಥ ಪ್ರಾಣದ ಕಾಂತ ಶ್ರೀರಾಮನನ್ನು ಕರೆತಂದು ಕಾಂತೆ ಈ ಹುಣ್ಣು ಮಾಯ್ಸೆ ಬೇಗನೆ 3
--------------
ರಾಮದಾಸರು
ರಾಗಿ ತಂದಿರಾ - ಭಿಕ್ಷಕೆ -ರಾಗಿ ತಂದಿರಾ ಪ.ಯೋಗ್ಯರಾಗಿ ಭೋಗ್ಯರಾಗಿ |ಭಾಗ್ಯವಂತರಾಗಿ ನೀವು ಅಪಅನ್ನದಾನವ ಮಾಡುವರಾಗಿ |ಅನ್ನಛತ್ರವನಿಟ್ಟವ ರಾಗಿ ||ಅನ್ಯವಾರ್ತೆಗಳ ಬಿಟ್ಟವರಾಗಿ |ಅನುದಿನಭಜನೆಯ ಮಾಡುವರಾಗಿ..........1ಮಾತಾಪಿತರನು ಸೇವಿಪರಾಗಿ |ಪಾತಕಕಾರ್ಯವ ಬಿಟ್ಟವರಾಗಿ |ಖ್ಯಾತಿಯಲ್ಲಿ ಮಿಗಿಲಾದವರಾಗಿ |ನೀತಿಮಾರ್ಗದಲಿ ಖ್ಯಾತರಾಗಿ 2ಗುರು ಕಾರುಣ್ಯವ ಪಡೆದವರಾಗಿಗುರುವಿನ ಮರ್ಮವ ತಿಳಿದವರಾಗಿ ||ಗುರುವಿನ ಪಾದವ ಸ್ಮರಿಸುವರಾಗಿ |ಪರಮಪುಣ್ಯವನು ಮಾಡುವರಾಗಿ3ವೇದ ಪುರಾಣವ ತಿಳಿದವರಾಗಿ |ಮೇದಿನಿಯಾಳುವಂಥವರಾಗಿ ||ಸಾಧು ಧರ್ಮವಾಚರಿಸುವರಾಗಿ |ಓದಿ ಗ್ರಂಥಗಳ ಪಂಡಿತರಾಗಿ 4ಆರರ ಮಾರ್ಗವ ಅರಿತವರಾಗಿ |ಮೂರರ ಮಾರ್ಗವ ತಿಳಿದವರಾಗಿ ||ಭೂರಿತತ್ವವನು ಬೆರೆತವರಾಗಿ |ಕ್ರೂರರ ಸಂಗವ ಬಿಟ್ಟವರಾಗಿ 5ಕಾಮಕ್ರೋಧಗಳನಳಿದವರಾಗಿ |ನೇಮನಿಷ್ಠೆಗಳ ಮಾಡುವರಾಗಿ ||ಆ ಮಹಾಪದದಲಿ ಸುಖಿಸುವರಾಗಿ |ಪ್ರೇಮದಿ ಕುಣಿಕುಣಿದಾಡುವರಾಗಿ 6ಸಿರಿರಮಣನ ಸದಾ ಸ್ಮರಿಸುವರಾಗಿ |ಕುರುಹಿಗೆ ಬಾಗುವಂತವರಾಗಿ ||ಕರೆಕರೆಸಂಸಾರ ನೀಗುವರಾಗಿ |ಪುರಂದರವಿಠಲನ ಸೇವಿಪರಾಗಿ 7
--------------
ಪುರಂದರದಾಸರು