ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪರಾಧ ಎನ್ನದಯ್ಯ ಹೇ ಗುರುವರ್ಯ ಪ ಅಪರಾಧ ಎನ್ನದಯ್ಯ ಅಪರಿಮಿತವು ಸರಿ ಕೃಪೆಯು ಮಾಡಲಿ ಬೇಕು ಕೃಪಣವತ್ಸಲ ಗುರುವೆ ಅ.ಪ. ಹಡೆದ ತಾಯಿ ಶಿಶುವ ಬಡಿದು ಕೊಂದರೆ ತೃಣವು ಬಿಡಿಸಿಕೊಳ್ಳಲು ಬಲ್ಲುದೆ ಜಡಕೆ ಸಮವಾದದ್ದು ಒಡೆಯ ನೀ ಎನ್ನಯ ಅಸ್ವಾತಂತ್ರ ಎಣಿಸದೆ ಬಿಡುವೆನೆಂದರೆ ನಿನಗೆ ತಡೆಯ ಬರುವರು ಯಾರೈ 1 ದೀನವತ್ಸಲ ಕೇಳು ಅನೇಕ ಜನ್ಮದೊಳು ನಾನಾ ಪರಿಯೊಳು ನೊಂದು ಸೇರಿದೆ ನಿನಗೆ ಬಂಧು ಏನು ಪೇಳದೆ ಎನ್ನ ಕಾನನದಲಿ ಬಿಟ್ಟು ಶ್ರೀನಾಥನ ಸೇರಿದಿ ಅನಾಥನ ಮಾಡಿದಿ ಎನ್ನ 2 ಬ್ಯಾರೆ ಉಪಾಯವಿಲ್ಲ ಸಾರಿದೆ ನಿನಗಯ್ಯ ಕಾರುಣ್ಯ ನಿಧಿಯೆ ಅಪಾರ ಕರುಣಮಾಡಿ ಮಾರಪಿತನಾದ ಜಯೇಶವಿಠಲನ್ನ ಆರಾಧನೆಯಲಿ ಸತತ ಧಾರಾಳ ಮತಿನೀಡೋ 3
--------------
ಜಯೇಶವಿಠಲ
ಕರುಣಾಳುವೈ ನಿಂನ ಭಜನೆಯೊಂದೇ ಸಾಕು ಭರದಲಿ ಪಾಪಿಯ ಶುದ್ಧ ಮಾಡಲಿಲೇ ಪ ಅಜಮಿಳ ಜನ್ಮದಿ ಘೋರ ಪಾಪವ ಗೈದು ಭಜನೆ ಮಾಡಲು ತನುನೀಗು ಕಾಲದಲೀ ಭಜಕರ ಲೋಲನೆ ಹೀನನಿಗೊಲಿದು ನೀ ಕುಜನನ ಪರೆದು ಮೋಕ್ಷವನಿತ್ತೆ ಹರಿಯೇ1 ದುರುಳ ವಾಲ್ಮೀಕನು ಹೀನ ಕೃತ್ಯವಗೈದು ಸುರಮುನಿಯಾಜÉ್ಞಯಿಂ ನಾಮವಭಜಿಸೇ ದುರಳನ ಸರಸದ ಭಕ್ತಿಗೆ ವಲಿಯುತ ಪರಮ ಙÁ್ಞನವನು ನೀ ನಿತ್ತೆ ಶ್ರೀಹರಿಯೆ 2 ತರಳ ದಾಸರುಕೂಡಿ ಹರಿ ನಿಂನ ಸ್ತುತಿಸಲು ನಿರುತ ಭಕ್ತರಿಗೆ ನೀನೊಲಿದೆ ಶ್ರೀಕಾಂತಾ ಪರಮ ಆದರದಿಂದ ಹರಿಯಂನ ಮನವನ್ನು ಪರಿ ಶುದ್ಧಮಾಡಿ ದೀನನ ಸೇರೋ ಹರಿಯೇ 3 ರಂಗನ ಮಹಿಮೆಯ ನುಡಿಯಲಾರೆನು ನಾನು ಅಂಗಜ ಪಿತನಾದ ದಶರೂಪಧರನ ನಿತ್ಯ ದೂರ್ವಾಪುರದಿನಿತ್ತುಮಂಗಳ ಪದವೀವ ಚೆನ್ನಕೇಶವನೆ 4
--------------
ಕರ್ಕಿ ಕೇಶವದಾಸ
ಗಜವದನಾ ಸುಂದರವದನನೆ ವೋ ಪ ಭುಜಗಬಂಧನಪಾದಾ ಭಜಿಪೆನಹುದೊ ರಾಜಾ ಅ.ಪ ಗೌರೀನಂದನ ಸರ್ವಸಿದ್ಧಿ ಪ್ರದಾಯಕ ಶೌರೀ ಮೂಷಕವಾಹನ ಕುಶಲ ಅಂತಕದೇವ 1 ದೇವಿಜನಿತ ಪುತ್ರಾಭಾವ ಲಂಬೋದರನೇ ಪಾವನಂಘ್ರಿಯ ತೋರೋ ಪಾಶ ಅಂಕುಶ ಹಸ್ತಾ 2 ಅಸುರಸಿಂಧುಕನರಿದೂ ವಸುಧೆ ಬಾಧಿಸುತಿರೆ ನಶಿದು ಹೋಗಲಿಯೆಂದ ನಾರಾಯಣನೆ ದೇವಾ 3 ಬಾಲನಾಗಿರೆ ಚೆಲ್ವ ಬಾಲೆಯೀಶ್ವರಿಯೊಳೊ ಫಾಲಲೋಚನ ಶಂಭೋ 4 ನಮಿಸುವ ಪ್ರಮಧಾರಿಗಮಿತ ಫಲವನೀವಾ ಕಮಲಜಪಿತನಾದದಾ ಕಾಣುವರಿಗೆ ಬ್ರಹ್ಮ5 ನಿತ್ಯ ಮಂಗಳನಾಮ ಪ್ರತ್ಯಕ್ಷಮಾದಾ ಮದ್ಗುರುವೇ ತುಲಸೀರಾಮಾ 6
--------------
ಚನ್ನಪಟ್ಟಣದ ಅಹೋಬಲದಾಸರು
ದಾಸನಾಗಬೇಕು ಶ್ರೀಕಾಂತನ ದಾಸನಾಗಬೇಕು ಪ ವಾಸುಕಿ ಶಯನನ ಸಾಸಿರ ನಾಮದಿ ಮೆರೆವ ಕೇಶವನ ಅ.ಪ. ಶಂಖ ಚಕ್ರಗಳನ್ನು ಕರದೊಳು ಧರಿಸಿದ ಪಂಕಜ ರಮಣ ಶ್ರೀ ಗೋವಿಂದನ ಪಂಕಜ ಲೋಚನ ಪರಮ ಪಾವನನ ಪಂಕಜೋದ್ಭವ ಪಿತನಾದ ಶ್ರೀಧರನ 1 ನವನೀತ ಚೋರನ ವಸುದೇವ ತನಯನ ಭವರೋಗ ವೈದ್ಯನ ಶರಣ ರಕ್ಷಕನ ಪವನಜನೊಡೆಯನ ಜಾನ್ಹಕಿ ಪ್ರಿಯನ 2 ದನುಜರ ತರಿಯುವ ಪ್ರಣವ ಸ್ವರೂಪನ ಅನುದಿನ ಭಕ್ತರ ಪೊರೆವ ಮಾಧವನ ಚಿನುಮಯ ರೂಪನ ಕನಕ ಸೇವಿತನ ಸನಕಾದಿ ವಂದಿತ ಚನ್ನಕೇಶವನ 3
--------------
ಕರ್ಕಿ ಕೇಶವದಾಸ
ಪಂಚ ವೃಂದಾವನದಿ ಮೆರೆಯುತಿರುವಾ ||ಪಂಚಾಸ್ಯ ಸಂದಿಷ್ಟ ವೈಭವವ ಕೇಳಿ ಪ ವಿಪುಲ ಮತಿ ಪದಕರ್ಹ ಕಪಿಪ ರಾಮನ ಭಂಟಸ್ವಪನದಾಖ್ಯಾನವನೆ ಶಪಥ ಪೂರ್ವಕದೀ |ವಿಪ್ರಗೋಸುಗವಾಗಿ ಸುಪ್ರಕಟ ಗೈದಿಹರು ಅಪ್ರತಿಮ ಹಯಮೊಗನ ಸುಪ್ರೇಮ ಪಿಡಿದೂ 1 ಆಖ್ಯಾನ ಪೆಟ್ಟಿಗೆಯು ಅಂಧಕಾರದಲಿದ್ದುವ್ಯಾಖ್ಯಾತೃ ವೇದನಿಧಿ ಜನ್ಮತಾಳುತಲೀ |ವ್ಯಾಖ್ಯಾನ ಗೈದಾಗ್ಯು ಭಾವ ತಿಳಿಯದಲೇವೆಪ್ರಖ್ಯಾತಿ ಪಡೆಯದಲೆ ಬೀಗ ಮುದ್ರಿತದೀ 2 ಅಂಧ ಭಾವದೊಲೊಬ್ಬ ಪಂಗು ಭಾವದಲೊಬ್ಬ ಇಂದಿರೇಶನ ಮಹಿಮೆ ಪ್ರಕಟ ಗೈಯ್ಯುವಲೀ|ಅಂಧ ಪಂಗುನ್ಯಾಯ ಆಶ್ರಯಿಸಿ ಪ್ರಕಟಿಸುವಮಂದ ಜನರುದ್ಧಾರ ಕಾರ್ಯ ಗೈಸುತಲೀ 3 ಅನುಮಾನ ತೀರಥರ ಶಾಸ್ತ್ರವನೆ ಮಥಿಸುತ್ತತನುಮನ ಧನಧಾನ್ಯ ತೃಣವೆಂಬ ಕೀಲಿಯಲೀ |ಜ್ಞಾನ ಪೆಟ್ಟಿಗೆ ಬೀಗ ಮುದ್ರೆಯನೆ ತೆರೆಯುತ್ತ ಮನದ ಪಾತ್ರಿಯಲುಣ್ಣಿ ಆಖ್ಯಾನದನ್ನಾ 4 ಸಂತ ಸಂಗದಲಿಂದ ಮಂಥಿಸಲು ತತ್ವಗಳಅಂತ ರಂಗದ ಕದವು ತೆರೆದಂತರಾತ್ಮನನುಕಂತು ಪಿತನಾದ ಗುರು ಗೋವಿಂದ ವಿಠಲನ್ನಅಂತರಂಗದಿ ಕಾಂಬ ಪಂಥವಿತ್ತವರಾ 5
--------------
ಗುರುಗೋವಿಂದವಿಠಲರು
ಮಂಗಳಂ ಜಯ ಮಂಗಳಂ ಪ ಆದಿನಾರಾಯಣನೆನಿಸಿದಗೆ ಪಾದದಿ ಗಂಗೆಯ ಪಡೆದವಗೆ ಸಾಧುಸಜ್ಜನರನ್ನು ಸಲುಹುವ ದೇವಗೆ ವಿ ನೋದ ಮೂರುತಿಯಾದ ವೆಂಕಟಗೆ 1 ಶಂಖ ಚಕ್ರಧರಿಸಿಪ್ಪವU ಪಂಕಜ ಹಸ್ತವ ತೋರ್ಪವಗೆ ಬಿಂಕದೊಳಸುರರ ಕೆಡಹಿದ ಧೀರಗೆ ಮೀ ನಾಂಕನ ಪಿತನಾದ ವೆಂಕಟಗೆ 2 ಪೀತಾಂಬರಧರನೆನಿಸಿದಗೆ ನೂತನ ನಾಮದಿ ಮೆರೆವವಗೆ ಪಾತಕನಾಶನ ಪರಮಪಾವನಗೆ ಅ ತೀತ ಮಹಿಮನಾದ ವೆಂಕಟಗೆ 3 ಖಗವಾಹನನೆಂದೆನಿಸಿದಗೆ ನಗಧರನಾಗಿಹ ಅಘಹರಗೆ ಮೃಗಧರರೂಪಗೆ ಮುಂಚಕಲಾಪಗೆ ಜಗದಾಧಾರಕ ವೆಂಕಟಗೆ 4 ಲೋಕನಾಯಕನಾದ ಕೇಶವಗೆ ಶೋಕಭಂಜನನಾದ ಮಾಧವಗೆ ಸಾಕಾರ ರೂಪಗೆ ಸರ್ವಾತ್ಮಕನಿಗೆ ಶ್ರೀಕರನೆನಿಸುವ ವೆಂಕಟಗೆ 5 ಆಲದ ಎಲೆಯೊಳ್ವೊರಗಿದಗೆ ಆ ಕಾಲದಿ ಅಜನನು ಪೆತ್ತವಗೆ ನಿಗಮ ವಿದೂರಗೆ ಕಾಲಕಾಲಾಂತಕ ವೆಂಕಟಗೆ 6 ಸ್ವಾಮಿ ಪುಷ್ಕರಣಿಯ ವಾಸನಿಗೆ ಭೂಮಿ ವರಾಹತಿಮ್ಮಪ್ಪನಿಗೆ ಪ್ರೇಮದಿ ಜಗವನು ಸಲುಹುವ ನಾಮದ ಸೋಮ ಸನ್ನಿಭನಾದ ವೆಂಕಟಗೆ 7
--------------
ವರಹತಿಮ್ಮಪ್ಪ
ವೈಕುಂಠವಾಸಿ ನಾರಾಯಣಗೆ ನೀಲಕಂಠ ವಿಶ್ವೇಶ್ವರಗೆ ಭಾಳಲೋಚನ ಭವಹಾರಕಗೆ ಮಂಗಲಂ ಜಯ ಮಂಗಲಂ ಪ ವಾಸುಕಿ ಫಣಿವರ ಭೂಷಿತಗೆ ಶೇಷ ಪರೀಯಂಕ ವಾಸನಿಗೆ ಮಂಗಲಂ ಜಯ ಮಂಗಲಂ 1 ಗಿರಿವರ ಬಿರುಳಲಿ ನೆಗಹಿದಗೆ ತರಳೆಗಂಗಾ ಜಲಧಾರನಿಗೆ ಮಂಗಲಂ ಜಯ ಮಂಗಲಂ 2 ಗಜರಾಜನ ಕಾಯ್ದ ಗೋವಿಂದಗೆ ಅಜಪಿತನಾದ ನಾರಾಯಣಗೆ ಮಂಗಲಂ ಜಯ ಮಂಗಲಂ 3 ಶಂಖಚಕ್ರಧರ ಶಂಕರ ಪ್ರಿಯಗೆ ಪಂಕಜಾಂಬಕ ವಿಷ್ಣು ವಲ್ಲಭಗೆ ರಂಗರಕ್ಷಕ ಮಹಾಬಲೇಶ್ವರಗೆ ಮಂಗಲಂ ಜಯ ಮಂಗಲಂ 4
--------------
ಶಾಂತಿಬಾಯಿ
ಸುಮ್ಮನೆ ಹರಿದಾಸರೆಂಬಿರೆ ಎಮ್ಮನೆಲ್ಲಾ ಪ ಹಮ್ಮಿನ ಅರಿಷಡ್ವರ್ಗ ಬಿಡದೆ ಅಧರ್ಮರ ಸೇವೆ ಮಾಡಿ ಕಾಲ ಕಳೆವ ಪಾಮರ ಮನುಜನ ಅ.ಪ ಹರಿದಿನದುಪವಾಸ ಮರುದಿನ ಪಾರಣೆ ಸರಿಯಾಗಿ ಮಾಡಿದೆನೆ ಕೊರಳಲ್ಲಿ ತುಳಸೀ ಸರಗಳ ಧರಿಸಿ ಹರಿಗೆ ಮೈಮರೆದಾನೊಂದಿಸಿದೆನೆ 1 ಪಾತ್ರರ ಕೂಡ ಯಾತ್ರೆ ಮಾಡಿ ಪುಣ್ಯ ಕ್ಷೇತ್ರಗಳ ಬಳಸಿ ಪಾದ ನೇತ್ರದಿಂದ ನೋಡಿ ಕೃತಾರ್ಥ ನಾನಾದೆನೆ 2 ವರ ನಾರೇರ ಕಂಡು ನರಕ ಭಯವಿಲ್ಲದೆ ಕರೆದು ಮನ್ನಿಸುವ ವರ ಗಾಯಿತ್ರಿ ಮೊದಲಾದ ಪರಿಪರಿ ಮಂತ್ರಗಳು ನಿರುತ ನಾ ಜಪಿಸುವೆನೆ 3 ಕಾಲಿಗೆ ಗೆಜ್ಜೆಕಟ್ಟಿ ಶಿರಿಲೋಲನ ಮುಂದೆ ಲಲಿತದಿಂ ಕುಣಿಯುವೆನೆ ತಾಳ ಮ್ಯಾಳಾದಿಂದ ನೀಲಮೇಘಶ್ಯಾಮನ ಬಾಲಲೀಲೆ ಪಾಡಿ ಲೋಲನಾಗುವೆನೆ 4 ಕಂದರ್ಪ ಪಿತನಾದ ವಿಜಯ ರಾವi ಚಂದ್ರವಿಠಲನ್ನ ಮಂದಹಾಸ ಮುಖವನ್ನು ಒಂದಿನವಾದರು ನೋಡ್ಯಾನಂದಪಟ್ಟು ಮಂದ ಜ್ಞಾನ ತೊರೆದನೆ 5
--------------
ವಿಜಯ ರಾಮಚಂದ್ರವಿಠಲ
ವಾವೆಯೆಲ್ಲಿಹುದಯ್ಯ ವೈಕುಂಠಪತಿಗೆ |ದೇವಭಾರ್ಗವನಾಗಿ ಮಾತೆಯ ಶಿರವ ಕಡಿದ ಪಒಬ್ಬ ಮಾವನ ಕೊಂದ, ಒಬ್ಬ ಮಾವನನೆಸೆದ |ಒಬ್ಬ ಮಾವನ ಕೂಡೆ ಕಡಿದಾಡಿದ ||ಒಬ್ಬ ಭಾವನ ಹಿಡಿದು ಹೆಡಗೈಯ ಕಟ್ಟಿದನು |ಒಬ್ಬ ಭಾವಗೆ ಬಂಡಿ ಬೋವನಾದ 1ಕುಂಭಿನಿಗೆ ಪತಿಯಾದ ಕುಂಭಿನಿಗಳಿಯನಾದ |ಕುಂಭಿನೀಪತಿಯ ಸಂಹಾರ ಮಾಡಿದ ||ಅಂಬುಧಿಗೆ ಪಿತನಾದ ಅಂಬುಜೆಗೆ ಪತಿಯಾದ |ಅಂಬುಜಾಸನಗೆ ತಾ ಸ್ವಾಮಿಯಾದ 2ಮೊಮ್ಮನನು ಮಲಗಿಸಿದ ಅವನ ಹೆಮ್ಮಕ್ಕಳನು |ಇಮ್ಮೆಯ್ಯವರಿತು ಸಂಹಾರ ಮಾಡಿದ- ||ರಮ್ಯ ಮೂರುತಿ ಪುರಂದರವಿಠಲ ದೇವೇಶ |ಬೊಮ್ಮಮೂರುತಿಗೆಲ್ಲಿ ಬಂಧು ಬಳಗ 3
--------------
ಪುರಂದರದಾಸರು