ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಗಾಧರ ಸ್ಮರತ್ರಿಪುರಹರ ದೇವಪ ಅಂಗಜಹರ ಭಸಿತಾಂಗ ಮಹಾಲಿಂಗ ತುಂಗಮಹಿಮ ಮೃಗಾಂಶಮೌಳಿ ಶಿವ ಅ.ಪ ಭೂತೇಶ ಸದ್ಯೋಜಾತ ಪ್ರದ್ಯುಮ್ನಸುತೆಯಸುತ ಮತಿಯ ಪ್ರದಾತ ಸದಮಲಮೂರುತಿ ಹೃದಯಸದನದೊಳು ವಿಧಿಪಿತನಂಘ್ರಿಯ ಸ್ಮರಣೆಯ ಕರುಣಿಸು 1 ಪ್ರಮಥಶ್ರೇಷ್ಠರ ಸಂಸೇವಿತ ಸುಮನಸರ ಪ್ರೀತ ಹೈಮವತಿಯ ಪ್ರೀತಾ ರಮಾರಮಣಗೆ ಅತಿಭಕುತಾ ನೀ ಮನೋಭಿಮಾನಿಯೆ ಖ್ಯಾತಾ ತಾಮಸರೊಳು ತಮಸಾಧನ ಮಾಡಿಸಿ ನೀ ಮೋಹಿಪ ದೇವ ಶೂಲಿ ಕಪಾಲಿ 2 ಶುಕದೂರ್ವಾಸಸ್ವರೂಪ ಜೈಗೀಷರೂಪ ವೈಕಾರಿಕಾದಿ ತ್ರೈರೂಪ ಲೋಕನಾಥÀ ಶ್ರೀವೆಂಕಟೇಶನ ಹೃತ್ಕಮಲದಿ ನಲಿಸುವ ಫಾಲನೇತ್ರ ಶಿವ 3
--------------
ಉರಗಾದ್ರಿವಾಸವಿಠಲದಾಸರು
ವಂದಿಪೆ ತವ ಪಾದಕೆ ಭವದ ಬಂಧನ ಕಳೆವುದಕೆಪ ಹಿಂದೆ ಮುಂದೆ ಎಂದೆಂದಿಗು ಎನ್ನಯ ಕುಂದುಗಳೆಣಿಸದೆ ಕರುಣಿಪುದೆನ್ನುತ ಅ.ಪ ಅಪರಾಧಿಯು ಎಂದು ತಿಳಿದರು ಗುಪಿತದಿ ಸಲಹುವದು ಅಪಮೃತ್ಯುವು ಪರಿಹಾರಕೆ ನಿಮ್ಮಯ ಉಪದೇಶದ ಮಂತ್ರವೆ ಪರಮೌಷಧಿ 1 ಕಾಯಕ್ಲೇಶದಿಂದ ಮನಸಿನ ಹೇಯ ವ್ಯಥೆಗಳಿಂದ ಕಾಯಜ ಪಿತನಂಘ್ರಿಯ ಸೇವಿಸದಲೆ ಆಯಾಸದಿ ಮನ ಕಳವಳಗೊಳುತಿದೆ 2 ಆರು ಮಂದಿ ಇಹರು ಮಾಯಾ ಪಾಶಾದಿ ಬಂಧಕ ಪಡಿಸುತ ಹಾಯಲೀಸರೊ ಹರಿ ಅಂಘ್ರಿಗಳಲಿ 3 ಆರಿಗುಸುರಲೇನು ಮಾಡಿದ ಕಾಂiÀರ್iವು ಮುಂದಿನ್ನೂ ಆನಂದಮಯ ವಿಠ್ಠಲದಾಸರ ಕೂಡಿ ಆದರುಸುವುದಿನ್ನೂ ಮುನ್ನೂ4 ಕಮಲನಾಭ ವಿಠ್ಠಲನೊಲುಮೆಯು ಸುಲಭದಿ ಪಡೆವುದಕೆ ಅನುದಿನ ಪ್ರಾರ್ಥಿಸುತ5
--------------
ನಿಡಗುರುಕಿ ಜೀವೂಬಾಯಿ