ಒಟ್ಟು 12 ಕಡೆಗಳಲ್ಲಿ , 11 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾ ಮೋಹನನೇ ನೋಡಮ್ಮಯ್ಯಾ| ಸಂತತ ತೃಪ್ತನು ಬಾಲಕನಾದಾ|ಅ- ನಂತ ಚರಿತೆಯಾ ದೋರುವ ಕೃಷ್ಣ ಪ ಮೂಡಣ ದೇಶಕೆ ಪಡರಲು ಗೋಪಿಯು| ತಡೆಯದೆ ದುಮುಧುಮು ಧುಮುಕೆನುತ| ಕಡೆಯಲು ಧುಡು ಧುಡು ಧುಡುನಡೆಯುತ ಬಂದು| ಪಿಡಿದೆನ್ನ ಸೆರಗ ಬೆಣ್ಣೆ ಬೇಡುವಾ ಕೃಷ್ಣ 1 ಸಮಗೆಳೆಯರ ಸಂಗಡ ಧ್ವನಿವೇಣಿಯ| ಉಮಟೆಸುತಲಿ ಧಿಗಿಧಿಗಿಲೆನುತಾ| ಧಿಮಿಕಿಟ ಧಿರಕಿಟ ತಿರುಕಿಟವೆಂಬೋ| ಕ್ರಮದಿ ವಾದ್ಯವ ಬಾರಿಸುವಾ ಕೃಷ್ಣ 2 ಗುರು ಮಹೀಪತಿ ಪ್ರಭುವಿನ ಪದರಜ| ದೊರಕದು ಅಜಭವ ಮುಖ್ಯರಿಗೆ! ಹರುಷದಿ ತೋಳ್‍ದೊಡೆ ಮೇಲೆ ಓಡಾಡುವಾ| ಧರೆಯೊಳು ಯಶೋಧೆ ಸುಕೃತವೆಂತೋ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನುಕಾರಣ ಯೆನಗೆ ತಿಳಿಯದಿದೇಕೋ ನೀನುದ್ಧರಿಸುವುದಕೋ ಕೆಡಿಸುವುದಕೋ ಕೃಷ್ಣ ಪ ಸುರರು ಹಬ್ಬವ ಕೆಡಿಸೆ ಸುರಪತಿಯು ಕೋಪದಲಿ ಭರದಿಂದ ಕಲ್ಲು ಮಳೆಯನು ಕರೆಯಲಾಗ ಕಿರುವೆರಳ ತುದಿಯಲ್ಲಿ ಗಿರಿಯ ನೀನಾಂತು ಹಗ ಲಿರುಳೇಳು ದಿನ ಬೋವಿಗಳಂತೆ ಕೊಡೆವಿಡಿದ 1 ಭವ ತಿಮಿರ ಶರಧಿಯದಾಂಟಿಸುವ ವೋಲು ಸುರಿವ ಮಳೆಗತ್ತಲೆಗೆ ಬೋವಿಯಾಗಿ ಕರದಲ್ಲಿ ಕೊಡೆ ದೀವಟಿಗೆಯ ಪಿಡಿದೆನ್ನ ಮನೆ ಪರಿಯಂತ ಕಳುಹಿ ಕ್ಷುಧೆಯಾಯಿತೆಂಬುದೇನು 2 ಕೊಟ್ಟ ಕಜ್ಜಾಯಂಗಳಿಗೆ ನೀ ಸೆರಗೊಡ್ಡಿ ಕಟ್ಟಿ ಕೊಂಡೊಯ್ದು ಲಕ್ಷ್ಮಿಯ ಬಳಿಯೊಳು ಇಟ್ಟರ್ಧವನು ಎನ್ನ ಸಂತತಿಗೆ ನೀಕರುಣಿಸಿದೆ ಇಷ್ಟರೊಳಗೆ ವೈಕುಂಠಪತಿ ಚೆನ್ನಿಗರಾಯಾ 3
--------------
ಬೇಲೂರು ವೈಕುಂಠದಾಸರು
ಒಬ್ಬನೆ ದಾಸ ಹುಟ್ಟಿದವನಿವ | ನೊಬ್ಬನೆದಾಸ ಪ ಸೂರಿ ತಾಯಿತಂದೆಗಳಿಂದಾಯಿತು ಅ.ಪ ನಾಲ್ಕು ವರ್ಷದವರೆವಿಗೂ ಮಾತಾಪಿತರು ಪಾಲನೆಗೈದರು ಬಳಿಕ ಕಾಲಾಧೀನವನೈದಿದರವರಾ ಮೇಲೆ ನಡೆದ ಕಥೆಯನು ಬಿನ್ನೈಸುವೆ 1 ದ್ವಾದಶ ವರುಷ ಪರಿಯಂತವು ಮಾತುಳನ ಗೃಹದಿ ಬೆಳೆದು ಪಾದವೂರದೆ ದೇಶವÀ ತಿರುಗುತ- ಲಾದುದು ಇಪ್ಪತ್ತುನಾಲ್ಕು ವರುಷವು 2 ಶ್ರೀರಮಣ ಗುರುದ್ವಾರದಲಿ ಇಪ್ಪತ್ತು ಮೂರನೆಯ ವರುಷದಲಿ ಸಾರವ ತಿಳುಹಿಸಿ ಅನುಗ್ರಹಿಸಿದನ- ಪಾರ ಸುಗುಣನಿಧಿ ಕೈಪಿಡಿದೆನ್ನನು 3 ಹರಿನಾಮಬಲದಿಂದಲಿಪ್ಪತ್ತೈದು ವರುಷದ ಮೊದಲು ಸುಕೃತದಿಂ ಹರಿಸೇವೆಗಳಿಂ ನೆರೆದ್ರವ್ಯಗಳಿಸಿ ನಲವತ್ತು ವರುಷವಾಯಿತು 4 ನಲವತ್ತೊಂದನೆ ವರ್ಷಮೊ- ದಲು ಬಲು ಜನಗಳ ಬೇಡಿ ಕಳೆದಿತು ಐವತ್ತಾರು ವರ್ಷಗಳು 5 ಮಧ್ವರಾಯರೆ ನಮ್ಮ ತಂದೆಯು ಮಧ್ವರಾಯರೆ ನಮಗೆ ಗುರು ಮಧ್ವರಾಯರೆ ಉದ್ಧಾರಕರ್ತರು ಪದ್ಮನಾಭಗತಿ ಪ್ರೀತ್ಯಾಸ್ಪದರು 6 ಬೆಂಡಾಗಿರುವುದು ಶರೀರ- ಧರ್ಮವು ಬೇರೊಬ್ಬರ ಕಾಣೆ ಉಂಡುಟ್ಟು ತೆಗೆಯುವ ವಿಷಯದಿ ಊರಿನವರ ದೂರುವುದಿನ್ಯಾಕೆ 7 ಹರಿನಾಮದ ಬಲದಿಂದ ಗಳಿಸಿದುದು ಹರಿಗೆ ಪ್ರೀತಿಯಾಯಿತು ಪರರು ವ್ಯರ್ಥವಾಗಸೂಯೆ ಪಟ್ಟರೆ ದುರಿತವ ಪ್ರಯೋಜನವು ಸತ್ಯವಿದು 8 ಏನು ಕೋರುವುದು ಸಾಕು ಸೀತಾಪತಿ ಗುರುರಾಮವಿಠ್ಠ- ಲನ ಸೀಮೆ ಈಗಲು ಮುಂದಕು ಇರಬೇಕು9
--------------
ಗುರುರಾಮವಿಠಲ
ಕೈಪಿಡಿದೆನ್ನನು ಕಾಪಿಡು ನಲವಿಂ ಕನ್ನಡ ನುಡಿವೆಣ್ಣೆ ಪ. ಈ ಪಸುಳೆಗೈದಾ ಪಾಪವದಾವುದು ಕೋಪಿಸದಿರೆನ್ನಾಣೆ ಅ.ಪ ಮುಳಿವಿಂತೇತಕೆ ನಳಿನದಳಾಂಬಕೆ ಎಳೆಗೂಸಿನ ಮನಕೆ ಕಳವಳದಿಂದತಿ ಬಳಲಿಕೆಯಾದರು ತಳುವುದಿದೇನಿದು ಸಾಕೇ 1 ಮಾತೆಯ ಮಮತೆಗೆ ಸೋತು ಭಜಿಸುವೀ ಪೋತನ ನೆರೆನೋಡಿ ಪ್ರೀತಿಯಿಂ ಕರೆದಾತುಕೋ ನಲ್ವಾತಿನಿಂ ಕೈನೀಡಿ 2 ಪರಿಪರಿಯೆಡರಿನ ಗಿರಿದುರ್ಗಂಗಳಾವರಿಸಿರುತಿಹುದೆ ಪರಿಯಿಂದದನುತ್ತರಿಸಿ ಬಂದಪೆ ಕರುಣಿಸು ಭರದೆ 3 ಕಾರ್ಯ ಕಾರಣ ಕರ್ತೃ ನೀನಹುದಾರ್ಯೆ ಸದಾ ಪೊರೆಯೇ ಕೋರಿಕೆಗಳನೀಡೇರಿಸಿಯಣುಗರ ನಿರಪಾಯದೆ ಕಾಯೇ 4 ಭಾಷೆಗೆ ತಪ್ಪಿದ ದೋಷಿಯೆನ್ನುತುಪೇಕ್ಷಿಸಬೇಡೆನ್ನ ಶೇಷಗಿರೀಶನೆ ಪೋಷಕನಾಗಿರೆ ನಿರ್ದೋಷಿಯೆನಿಸುವೆ ನೀಂ5
--------------
ನಂಜನಗೂಡು ತಿರುಮಲಾಂಬಾ
ಗೋಪಾಲಕೃಷ್ಣ ಪಾಲಿಸೋ - ತವ ಭವ್ಯವೆನಿಪಶ್ರೀಪಾದಾ ತೋರಿಸೋ ಪ ಭವ ಕೂಪಾರ ಹರಿಸಿಕೈಪಿಡಿದೆನ್ನನು ಕಾಪಾಡುವುದು ಹರೆ ಅ.ಪ. ಸಾರ ಮುರ ವೈರಿ | ನಿಜ ಜನ ಭವಹಾರಿ1 ಭವ ನಾಕೇಶ ವಿನುತ ಶ್ರೀಕರ ಪದ ಪಲ್ಲವನವ | ಲೋಕನ ಕೊಡು ಕರಿವರದ | ಧೃವ ವರದ | ಜಿತ ಖಲ ಕುಲ ಸರ್ವಮದ ||2 ವೇದಾಂತ ವೇದ್ಯಾ - ವೇದ ವೇದ್ಯಾ ವೇದಾತ್ಮಿಕಾರಾಧ್ಯಾ |ಆದಿ ಹರಿಯೇ ಗುರು ಗೋವಿಂದ ವಿಠಲಮೋದ ಪ್ರಮೋದ ಸಂ | ಮೋದವ ನೀಯೋಗೋವಿಂದ | ಮುಕುಂದ | ಮುನಿ ವಂದ್ಯ |ಧೃತ ವ್ರಜಗಿರಿ ಆನಂದ 3
--------------
ಗುರುಗೋವಿಂದವಿಠಲರು
ಚಿಂತೆಯಿಲ್ಲದ ನರನು ಧರೆಯೊಳಗಿಹನೇ ಅಂತರಂಗದಿ ನಮ್ಮ ರಂಗನಿಲ್ಲದಿರೆ ಪ ಅಂತರಂಗದಿ ಶುದ್ಧಿ ಇಲ್ಲದಿರೆ ರಂಗಯ್ಯ ಎಂತು ನೀನಿಹೆಯಯ್ಯ ಮಾನಸದಿ ಸ್ವಾಮಿ ಅ.ಪ ಧನಧಾನ್ಯಗಳ ಚಿಂತೆ ಕನಕದೊಡವೆಯ ಚಿಂತೆ ತನುಜ ತನುಜೆಯರನ್ನು ಪಡೆವ ಚಿಂತೆ ಅನಿಶ ಯೌವ್ವನವಾಂತು ಕನಸು ನನಸುಗಳಲ್ಲಿ ವನಿತೆಯರನೊಡಗೂಡಿ ಭೋಗಿಸುವ ಚಿಂತೆ 1 ಉಡಿಗೆ ತೊಡಿಗೆಯ ಚಿಂತೆ ಉಡುವೆನೆಂಬಾ ಚಿಂತೆ ಒಡಲ ಪೋಷಿಪ ಚಿಂತೆ ಕಡಲಲೆಗಳಂತೆ ಪಿಡಿದೆನ್ನ ಬಾಧಿಪುವು ಬಿಡಿಸೆಲ್ಲ ಚಿಂತೆಗಳ ಕೊಡು ನಿನ್ನ ಸೇವೆಯನು ಮಾಂಗಿರಿಯರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಯ ಕೃಪ ಆಲಯ ಬಾಲಗೋ ಪಾಲ ಬೇಗ ಪಾಲಿಸು ಪಿಡಿದೆನ್ನ ಪ ನಿತ್ಯನಿರ್ಮಲ ಸತ್ಯಚರಿತ ದೇವ ಸತ್ಯಭಾಮೆಯ ಪ್ರಿಯನಾಥ ಸ್ವಾಮಿ ನಿತ್ಯನಿಗಮ ವೇದವಿನುತ ಜಗ ಕರ್ತು ಕಾರುಣ್ಯರಸಭರಿತ ಆಹ ಭಕ್ತಾಂತರ್ಗತ ಕಾಲಮೃತ್ಯುಸಂಹರ ಸ ಚ್ಚಿತ್ತಾನಂದ ಹರಿ ಸತ್ಯ ಸರ್ವೋತ್ತಮ 1 ದಿನಮಣಿಕೋಟಿಪ್ರಭಾಕರನುತ ವನಜಸಂಭವ ಸುರನಿಕರ ದಿವ್ಯಗುಣ ಘನನಿಧಿಗಂಭೀರ ಜೀಯ ಅನುಪಮ ಭೂಗಿರಿವರ ಆಹ ಮನಸಿಜಪಿತ ಮನುಮುನಿಮನಮಂದಿರ ತನುತ್ರಯದಲಿ ನಿನ್ನ ನೆನಹನು ಪಾಲಿಸು 2 ಶ್ಯಾಮಸುಂದರ ಕೋಮಲಾಂಗ ಭಕ್ತ ಕಾಮಿತಫಲಪ್ರದಪುಂಗ ದುಷ್ಟ ಸೋಮಕಸುರಮದಭಂಗ ಪುಣ್ಯ ನಾಮಕ ಸುಜನತರಂಗ ಆಹ ತಾಮಸ ಪರಿಹರ ಭೂಮಿಜನಕ ಜಯ ಕ್ಷೇಮ ಕರುಣಿಸು ಮಮಸ್ವಾಮಿ ಶ್ರೀರಾಮಯ್ಯ3
--------------
ರಾಮದಾಸರು
ಪಾಲಿಸೋ | ಪಾವ9ತಿಯ ಪ್ರಾಣೇಶ | ಪಾಲಿಸೋ ಪ ಪಾಲಿಸೆಮ್ಮನು ಪಶುಪತಿಯೆ | ನಿಜ | ಬಾಲಾಕ9 ಕೋಟಿದೀಧಿತಿಯೆ | (ನಮ್ಮ) | ಏಳಿಗೆಗೊಳಿಪ ಸದ್ಗತಿಯೆ ಎಂಬು || ಮೂಲ ಮೂರುತಿ ಸರ್ವಕಾಲಕಾಲನೆ ತ್ರೀ || ಶೂಲವ ಪಿಡಿದೆನ್ನ ಆಲಸ್ಯ ತ್ಯಜಿಸಿನ್ನು 1 ಪ್ರಮಥ ಪ್ರಜಾಪ್ರಭೂದಾರ | ಧರ್ಮ | ದ್ರುಮ ಸುಮನಸರಿಗಾಧಾರ |ಜಗ | ತ್ಕ್ರಮಜಳಿಂತೆನುವ ವಿಚಾರ | ಸ್ವಾಮಿ | ನಮಿಸಿ ಕೇಳುವೆ ಸವ9ಸಾರ | ಆಹಾ || ಗಾತ್ರ | ದ್ಯುಮಣಿಸನ್ನುತ ನಮೋ | ನಮೋಯೆಂಬೆ ಜಯ ಶಂಭೋ 2 ಶರಣವತ್ಸಲ ಮೃತ್ಯುಂಜಯನೆ | ನಿನ್ನ | ಮರೆಯ ಹೊಕ್ಕೆನು ಕಾಲಾಂತಕನೆ | ಎನ್ನ | ಕರುಣದಿ ಸಲಹೊ ಶಂಕರನೆ | ಶಿರ- ವೆರಗಿ ಬೇಡುವೆ ದಯಾಪರನೆ | ದೇವ || ಕರುಣಾಸಾಗರ ನಿನ್ನ | ತರಳನಾಗಿದೆ9ನ್ನ | ಪರ ಗುರುರಾಯನೆ 3
--------------
ಸದಾನಂದರು
ಬಾರಯ್ಯ ದಯೆದೋರಯ್ಯ ನೀರಜನಾಭನೆ ಕರುಣಿಸು ಮಹರಾಯ ಪ ಸಂಸಾರಸರಕಿನೊಳು ಸಿಲುಕಿ ನಾ ಬಳಲುವೆ ಶಿಶುವಿನೊಳು ದಯವಿಟ್ಟು ಸೆರೆ ಬಿಡಿಸೆನ್ನಯ್ಯ 1 ಪುಸಿನುಡಿ ನುಡಿದು ನಾ ದೆಸೆ ಬಾಯ ಬಿಡುವೆನು ಕುಸುಮಾಕ್ಷ ಪಿಡಿದೆನ್ನ ಹಸನ ಮಾಡೆನ್ನಯ್ಯ2 ಜಡಭವತೊಡರನು ಗಡನೆ ಕಡೆಹಾಯ್ಸಿ ನಿ ನ್ನಡಿಭಕ್ತಿ ಕೊಡು ಬೇಗೆನ್ನೊಡೆಯ ಶ್ರೀರಾಮಯ್ಯ 3
--------------
ರಾಮದಾಸರು
ಮರೆತು ಬಿಡುವರೇ ಸ್ವಾಮಿ ಪ ಕರಪಿಡಿದೆನ್ನನು ಕಾಯೊ ಮಾರುತಿಅ.ಪ. ಸೀತೆಗೋಸುಗ ಪೋಗೀ ಶಿರಧಿಯದಾಟಿ ನೀ ಮೋದ ಪಾತಕಿ ರಾವಣನಾ ಪುರದ ದಹಿಸಿ ಬಂದು ಚೂಡಾಮಣಿಯ ತಂದು ಶ್ರೀ ರಾಮರಿ ಗರ್ಪಿಸಿದೇ 1 ಪರಮಾತ್ಮಾ ಶ್ರೀ ಕೃಷ್ಣಗರ್ಪಣೆ ಮಾಡಿದೆ 2 ಮಧ್ವರಾಯರೆಂಬೊ ಪೆಸರಿನಿಂದಾ ಅದ್ವೈತವಾದಿಗಳ ಖಂಡಿಸಿ ಮೆರೆದೇ ಅದ್ಭುತ ಮಹಿಮ ವೇಂಕಟವಿಠಲನ ಪಾದ ಪದ್ಮಂಗಳ ನಿರುತ ಸೇವಿಸುತಿರಾ 3
--------------
ರಾಧಾಬಾಯಿ
ಸ್ವಾಮಿ ಯಾತಕೆನ್ನೊಳುಪೇಕ್ಷೆ ಮಾಡುವಿ ದೀನನಾಥ ಸುಮ್ಮನೆ ನಿಂತು ನೋಡುವಿ ಪ. ನಡೆವನ ಕಣ್ಣ ಕಟ್ಟಿ ಕೆಡಹುವುದುಚಿತವೆ ಒಡೆಯ ನಿನ್ನಡಿಗಳ ಪೊಗಳುವ ಪಾಡಿ ನುಡಿವ ಕಾರ್ಯಕೆ ಬಾಡಿ ಬಳಲುತ ನಾ ನಿತ್ಯ ನೋಡುತ ಬಡವನ ಬಿಡದಿರು ಕಡಲಶಯನ ನಿಜ ಮಡದಿ ಸಹಿತನಾಗಿ ಶ್ರೀಶನೆ ಕೃಪೆ ಕಂಜಕರ ಶ್ರೀನಿವಾಸನೆ1 ಭಾವಜ ಪಿತ ನಿನ್ನ ಸೇವೆ ಮಾಳ್ಪರಿಗೆಂದು ನೋವ ನೀಡದೆ ಕಾವ ಬಿರುದನು ಭವ ಸಾರÀ ನೀ ಮರೆವುದು ನೀತಿಯೆ ಎನ್ನ ನೀ ವಿಧ ಮಾಳ್ಪುದು ಖ್ಯಾತಿಯೆ ಪಾವನ ಚರಿತ ಪುರಾಣ ಪುರುಷ ಮಹ ದೇವ ನೀ ಕರಪಿಡಿದೆನ್ನನು ಕರು- ಣಾವಲಂಬನವಿತ್ತು ಪೊರೆವುದು 2 ದುರುಳ ಭಾವನೆಯಿಂದ ಸರಿದು ಹೋಗುವ ಪಂಚ ಕರಣಕೆ ನೀನರಸನಲ್ಲವೆ ಭಕ್ತಾ- ಭರಣಕೆ ನಿನ್ನೊಳಿರಿಸು ಮಾರ್ಗವನಂತ:- ಕರಣಕೆ ತರಿದು ಪಾಪಗಳನು- ದ್ಧರಿಸೆನ್ನ ವೆಂಕಟಗಿರಿವರ ದೀನಾರ್ತಿ ಚಕ್ರಧರ ಸಕಲಾನಂದ ಕಾರಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಾಕರ ನೀನೆಂಬುವುದೆತಕೊ |ಭರವಸೆ ಇಲ್ಲೆನಗೆ ಪಕರಿಧ್ರುವಬಲಿಪಾಂಚಾಲಿ ಅಹಲ್ಯೆಯ |ಪೊರೆದವ ಭವದಲಿ ನೀನಂತೆ ||ಅರಿತು ವಿಚಾರಿಸಿ ನೋಡಲಿದೆಲ್ಲವು |ಪರಿಪರಿ ಕಂತೆಗಳಂತಿದೆ ಕೃಷ್ಣ 1ಕರುಣಾಕರ ನೀನಾದರೆ ಈಗಲೆ |ಕರಪಿಡಿದೆನ್ನನು ನೀ ಕಾಯೊ ||ಸರಸಿಜಾಕ್ಷನೇ ಅರಸು ನೀನಾದರೆ |ದುರಿತಗಳೆನ್ನನು ಪೀಡಿಪುದುಂಟೆ 2ಮರಣ ಕಾಲದಲಿ ಅಜಮಿಳಗೊಲಿದೆಯೊ |ಗರುಡಧ್ವಜನೆಂಬ ಬಿರುದಿನಿಂದ ||ವರಬಿರುದುಗಳ್ನಿನಗುಳಿಯಬೇಕಾದರೆ |ತ್ವರಿತದಿ ಕಾಯೋ ಪುರಂದರವಿಠಲ 5
--------------
ಪುರಂದರದಾಸರು