ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೇ ನರಹರಿಯೆ ನಾ ಪ ನಂಬಿದೆನೊ ಬ್ರಹ್ಮಾದಿ ವಂದಿತ ಪೂರ್ಣ ಸುಗುಣ ಕಂದಂಬ ನಿರುಪಮ ನಿತ್ಯಮುಕ್ತಾಮುಕ್ತ ಜೀವದ ವಿಶ್ವ ಭಾಸಕ ಮುಕ್ತಿದನೇಕನೆಂಬುದಾ ಅ.ಪ ನೊಂದು ನೊಂದೆನೊ ಭವದಿ ಹಿಂದುಮುಂದನು ಕಾಣೆ ಬಂಧ ನೀಡುವ ನೀನೆ ಬಂಧಾ ಬಿಡಿಸಲುಬೇಕೊ ಸ್ವಾಮಿ ಸಂಶಯವೆಂದು ಪೊಗಳುವೆ ಪೂರ್ಣ ಪೂರ್ಣಾನಂದ ಸಜ್ಜನನಂದ ಕಾಮದ ಸಾಮ ಪೂರ್ಣಚಂದ್ರ ಸುತೇಜಭವಹರ 1 ಕರ್ಮ ಅಡ್ಡಿಯಾಗಿದೆ ಸುಖಕೆ ವಡ್ಡುವೆ ಸರ್ವಸ್ವನಿನಗೆ ದೊಡ್ಡವನು ನೀವಲಿಯೆ ಎನ್ನಯ ದಡ್ಡತನ ನಿನ್ನೇನುಮಾಳ್ಪದು ಸಡ್ಡೆಮಾಡದೆ ದೋಷರಾಶಿಯ ಮಮತೆ ತೊಲಗಿಸಿ ಗುಡ್ಡಹೊತ್ತ ಮಹಾಂತರೊಡೆಯನೇ 2 ಸಿರಿ “ಕೃಷ್ಣವಿಠಲ”ನೆ ನಿನ್ನಾಕರುಣವೆ ತಾರಕ ಇನ್ನುಮುನ್ನು ನಿನ್ನ ನಂಬಿಹೆ ಜ್ಞಾನಮಾನವ ನೀಡ್ವದಾತನೆ ಸಣ್ಣವನ ಪಿಡಿದಿನ್ನು ನೀ ಪ್ರಸನ್ನನಾಗೆಲೊ ದೇವದೇವನೆ ನಿನ್ನದಾಸರ ಭಾಗ್ಯವೊಂದೇ ಸಾಕು ಸಾಕೈಯೆಂದು ಬೇಡುವೆ ಅನ್ಯರೊಳ್‍ರತಿ ಇಲ್ಲದಿರಲೈ ಮಾನ್ಯ ಮಧ್ವರ ಮತದಿ ನಿಲಿಸು 3
--------------
ಕೃಷ್ಣವಿಠಲದಾಸರು
ಪರಾಕು ಜೀಯ ವೆಂಕಟರಾಯ ಪರಾಕು ಸರ್ವೋದ್ವøಕ್ತ ನೀನೊಬ್ಬ ಸಾಕು ಉಕ್ತಿಯ ಕೇಳಬೇಕು ಪಾಲಿಸು ಸಾಕು ಪ. ಇಂದಿರಾವರ ದೀನ ಬಂಧು ನಿನ್ನ ಪಾದಾರ- ವಿಂದವೆ ಶರಣವೆಂದು ಹೊಂದಿದೆನಿಂದು ಮಂದ ಭಾವನೆಯ ಕುಂದು ಕ್ಷಮಿಸು ಯೆಂದು 1 ಕಾಲ ಶುಭ ಲೀಲೆಯರಸವೆಂಬ ಪಾಲ ಕುಡಿಸುತೆನ್ನನು ಪಾಲಿಸು ಪದ್ಮ ಲೋಲ ನಿನ್ನಣುಗನನ್ನು ಕೈಪಿಡಿದಿನ್ನು 2 ತಡೆಯದೆ ಸಕಲಾರ್ಥ ಕೊಡುವೆ ಶ್ರೀ ವೆಂಕಟಾದ್ರಿ ಒಡೆಯ ನೀನೊಲಿದಿರಲು ವೈರಿಗಳನ್ನು ಕೆಡವುತ ಸುಖ ಲಾಭವು ಸಿದ್ಧವಾಗಿಹವು 3
--------------
ತುಪಾಕಿ ವೆಂಕಟರಮಣಾಚಾರ್ಯ