ಒಟ್ಟು 3 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಿಂಗಟ ಬೇಡವ್ವಾ ಪಿಂಗಟ ಸಂಗಟ ಬರುತಾದೆ ತಡಕೊಳ್ಳೆ ಪ ಕಂಗೆಡಿಸಿ ಬಲುಜವನ ದೂತರು ಭಂಗಬಡಿಪುದನು ನೀ ತಾಳೆ ಅ.ಪ ಸುಜನರ ಕಾಲ್ಕಸ ಮಾಡಿದಿ ಕುಜನರ ಮಾತಿಗೆ ಮರುಳಾದಿ ನಿಜವರಿದ್ಹೇಳಲು ಮೋರೆ ಮುರುಕಿಸಿದಿ ಅಜಾಂತಪರಿ ನೀ ಬಳಲುವಿ ನರಕದಿ 1 ನಾಶನ ಕಾಯಕ್ಕೆ ಮೋಹಿಸಿದಿ ಹೇಸದೆ ಪಾಪಕ್ಕೆ ಗುರಿಯಾದಿ ಈಶನ ದಾಸರನು ದೂಷಣ ಗೈದಿ ಸೀಸ ಕಾಸುವ ಯಮ ಯೋನಿದ್ವಾರದಿ 2 ಉನ್ನತಧಮ ತಿಳೀಲಿಲ್ಲ ಗನ್ನಗತಕವಯ ಕಳಕೊಂಡಿ ಇನ್ನೆಲ್ಲಿ ಕ್ಷೇಮ ನಿನಗ್ಹುಚ್ಚು ಇನ್ನರ ಶ್ರೀರಾಮ ಎನ್ನೂ 3
--------------
ರಾಮದಾಸರು
ಭವ ಹಿಂಗವ್ವ ಸುಳ್ಳೆ ಮಂಗ್ಯಳಾಗಿ ತಿರುಗಬೇಡವ್ವ ಪ ಪಿಂಗಟದಿಂದ ಭವಸಂಕಟದಲಿ ಬಿದ್ದು ಭಂಗದಿಂ ಕಂಗೆಡಬೇಡವ್ವ ಅ.ಪ ಮುಂಗಿಯ ಮನೆಯೊಳು ನಿಂತೆವ್ವ ತಂಗಿ ಹ್ಯಾಂಗಿದ್ದದರಂತರಿಯವ್ವ ಕಂಗಳಿನಿಕ್ಕಿ ಮಹ ಮಂಗಳಾತ್ಮನ ಕಂಡು ಪಿಂಗದ ಸವಿಸುಖ ಸುರಿಯವ್ವ 1 ಹಾಳು ಜಗದ ಗಾಳಿ ಬೇಡವ್ವ ನಿಜ ಬಾಳುವ ಮಾರ್ಗವ ತಿಳಿಯವ್ವ ನೀಲ ಶ್ಯಾಮನ ಧ್ಯಾನ ತಾಳಿಯ ಕಟ್ಟಿಕೊಂಡು ಕಾಲನ ದಾಳಿಯ ಗೆಲಿಯವ್ವ 2 ಮೈಲಿ ಮುಟ್ಟು ಚಟ್ಟಳಿಯವ್ವ ನೀ ಮೇಲುಮಂಟಪ ಹತ್ತಿ ನೋಡವ್ವ ಬೈಲಿಗೆ ಬೈಲು ನಿರ್ಬೈಲು ಶ್ರೀರಾಮನ ಲೀಲೆಯೊಳಗೆ ನಿಂತು ನಲಿಯವ್ವ 3
--------------
ರಾಮದಾಸರು