ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಣ್ಣಿಸಲಳವೆ ನಾನು ಬಣ್ಣಿಸಲಳವೆ ನಾ ಬಹುವೇಷವುಳ್ಳ ಲಾ-ವಣ್ಯದ ಕಣಿಯಾದ ಉಡುಪಿನ ಕೃಷ್ಣನ ಪ. ಕರಗುವ ಮಿಸುನಿಯ ಕಾಂತಿಯಿಂ ಗರುಡನಗರಿಗಳ ಇರವ ಧಿಕ್ಕರಿಪ ಪೀತಾಂಬರಎರಡು ಪಾಶ್ರ್ವಗಳಲ್ಲಿ ಶಿರದ ಕಿರೀಟವುಕೊರಳಹಾರದ ಜೋಡು ಇರಲು ಈ ಪರಿಯಿಂದಮರೆಯಲಬ್ಜದ ಕಂಕಣ ಭೂಮಿಗೈದುವವರ ಸೂರ್ಯನಾರಾಯಣ ಬಾಹುಗಳುಳ್ಳಮಕರಕುಂಡಲ ಬಾಹುಪುರಿಗಳಿಂದೆಸೆವನ1 ಪಾದ ಕಂಸೆಯಗಲಿ ಇಂದ್ರ ನೀಲದದಾಳ ದಿಕ್ಕುಗಳನೆಬೆಳಗುತಲೆ ಬಹಳ ಲೀಲೆಯ ತೋರ್ಪಖಳರೆದೆ ಶೂಲನ ಚೆಲುವ ಗೋಪಾಲನ 2 ಜಾತಿಮುತ್ತಿನ ಚುಂಗು ಖ್ಯಾತಿಯಿಂದೊಪ್ಪುವಚಾತುರ್ಯದಿ ವಾರೆಗೊಂಡೆಯ ಕಟ್ಟಿಆ ಜೂತದಿಂದಲಿ ಅತಿ ಮೈಜೋಡು ತೊಟ್ಟು ಈ-ರೀತಿಯಿಂದೆಡಗೈಯ ವಂಕಿ ಮಧ್ಯದೊಳಾನುಚ್ಚುತ ಖಡ್ಗದಿಂದೊಪ್ಪುವ ಭೂತಳದಿವಿಖ್ಯಾತಿ ಪಡೆದು ಮೆರೆವÀ ದುಷ್ಟಮೃಗವಘಾತಿಸಿ ಬಿಡುವ ಕಿರಾತÀ ಸ್ವರೂಪನ್ನ 3 ಮಿಸುನಿಯ ಮುಂಡಾಸು ಪೊಸರವಿಯಂತಿರೆಶಶಿಯ ಪ್ರಭೆಯಂತೆ ಪಸರಿಸಲಂಗಿಯುಹಸನಾದ ನವರಂಜು ವಶದಲ್ಲಿ ತುಂಬಿರೆಕುಸುಮನಂದದಿ ಧೋತ್ರವ ಉಟ್ಟುವೈರ್ವಸನವ ಸುತ್ತಿ ಗಾತ್ರದಿ ಕುಲಾಯಿ ಒಪ್ಪಿನಸುನಗೆಯಿಂದೊಪ್ಪುವ ನವವಿಪ್ರವೇಷನ್ನ 4 ಕಡೆದ ಬೊಗರಿಯಂತೆ ಕಡೆದು ಮಾಡಿದ ಬಾಹುದೃಢವಾದ ಕುಚಗಳು ದುರಿತದುನ್ನತವಾದಬಡನಡು ಬಳುಕಲು ಕಡೆಗಣ್ಣ ನೋಟದಿಮೃಡ ಮುಖ್ಯರ್ಮೋಹಿಸಿ ಒಡಲ ಮಾರದಿರಲುಮುಡಿಯ ನೋಡುತ ನವಿಲು ನಾಚಿ ಮೊಗಗೊಡದಡವಿಯ ಸೇರಲು ಭೂಷಣಗಳುಜಡಿವುತ್ತ ಜಗದೊಳು ಕಡುಮೋಹಿನೀ ಬಲು 5 ಕರ್ಮ ಕಿಂಕರರೊಳಗಾಗಿಟೊಂಕದಿ ಕೈಯಿಟ್ಟು ಶಂಕಿಸಲು ತನ್ನಂಘ್ರಿಪಂಕಜಂಗಳ ಬೇಡಿ ಪುರುಷಾರ್ಥ ಪಡೆಯಿರೊಶಂಕೆ ಬೇಡವೊ ಎಂದು ಲೆಂಕರಿಗೆ ಸೂಸಿಪ್ಪ-ಸಂಖ್ಯಾತ ಕರಯುಗಳದಿಂದೊಪ್ಪುವಶಂಖ ಚಕ್ರ ಆಯುಧಂಗಳ ಪಿಡಿದು ಸರ್ವಾಲಂಕಾರದಿಂ ವೆಂಕಟೇಶನ ರೂಪ6 ಈ ವಿಧ ತಪ್ಪದೆ ಏಳು ವಾರಗಳಲ್ಲಿಪಾವನಮತ ಗುರು ಬಳಿಗೆ ಬಂದವರೆಲ್ಲಶ್ರೀವರ ಹಯವದನನ ಸೇವೆಗೊಳ್ಳಿರೋ ನಿತ್ಯಆವಾವ ನಾಡಿನ ಆಶ್ರಿತ ಜನರನ್ನುಭಾವಶುದ್ಧಗಳರಿತು ಕೋರಿಕೆಗಳಈವ ಭಕ್ತರಿಗೊಲಿದು ಪಾಷಂಡಾದಿಶೈವರ ತರಿದ ಸದ್ವೈಷ್ಣವರ ದೇವÀನ್ನ7
--------------
ವಾದಿರಾಜ
ಹನುಮ - ಭೀಮ - ಮಧ್ವರು ಅಮಮ ಎನಿತÀದ್ಭುತಮಹಿಮೆ ಪೊಗಳನು ಪಮ ದೇವ ಜೀವೋತ್ತಮ ಸುರಸಾರ್ವಭೌಮ ಹನುಮ ಪ ಭೀಮ ರಿಪುಕುಲಧೂಮ ಯತಿಕುಲಸೋಮ ಶ್ರೀಮದಾನಂದ ಮುನಿಮಹಿಮಾಅ.ಪ ಜೀಯ ಈ ಪಯೋಜಾಂಡದೊಳಿನ್ನೆಣೆಯಿಲ್ಲ ಬಲದೊಳು ಶೌರ್ಯ ಕಾಯನೋಡಲು ಆಖಣಾಶ್ಮಸಮನು ನಿನ್ನೊಳು ಹರಿಯರೂಪಗಳೆನಿತು ಇಹುದಯ್ಯ ನಿನ್ನಲ್ಲಿಹುದು ಇನ್ನೆಷ್ಟಯ್ಯ ಶ್ರೀಯರಸ ಶ್ರೀ ಶಿಂಶುಮಾರನು ನಿನ್ನ ಮುಖಕಮಲದಲ್ಲಿಹನೂ ವಾಯುಮೂರುತಿ ನಿನ್ನ ನಾಸಾಗ್ರದೊಳು ಶೋಭಿಪ ಮತ್ಸ್ಯಮೂರುತಿಯು ಜೀಯ ನಿನ್ನಯ ನಾಸಪೃಷ್ಠದಿ ಕೂರ್ಮ ಮೂರುತಿಯು ಅಲ್ಲಿ ನೆಲೆಸಿಹನು ನಯನದ್ವಯದಿ ಕಪಿಲವಿಷ್ಣು ಶ್ರವಣದ್ವಯಗಳೊಳು ಕೃಷ್ಣರಾಮರು ನಾರಾಯಣ ಇಹನು 1 ಬಾಹುದ್ವಯಗಳೋಳ್ಕಲ್ಕಿ ಬುದ್ಧರೂಪಿರೆ ಬಾಹುಬಲವಿನ್ನೆಷ್ಟಯ್ಯ ಅಹುದು ಪವನಹಸ್ತದೊಳ್ ಪಾವನ್ನ ಶ್ರೀ ಬಾದಾರಾಯಣ ಕಂಗೊಳಿಪನಯ್ಯ ಶ್ರೀ ಹರಿಯು ನೆಲೆಸಿಹನು ಪಾದ ಮಧ್ಯಸ್ಥಾನದಲಿ ಸಲೆ ಬೆಳಗುತಿಹನು ಮಹಮಹಿಮ ನಿನ್ನಯ ಪಾದಪೃಷ್ಠದಿ ಹೃಷೀಕೇಶ ಹರಿಯು ನಿಂತಿಹನು ಇಹರಯ್ಯ ದಕ್ಷಿಣ ವಾಮಜಾನುಗಳಲಿ ಯಜ್ಞ ಶ್ರೀಧರರಿಹರು ಕಟಿ ಪ್ರದೇಶದಿ ದಿಟ್ಟರಾಗಿಹರು 2 ದಕ್ಷಿಣದಲ್ಲಿಹ ವನಮಾಲೆಯಲ್ಲಿಹರು ಗುಣನಿಧಿಯೆ ತದುಪರಿ ಸೂರ್ಯವರುಣಅಶ್ವಿನಿಗಳೆಲ್ಲ ನಿನ್ನಯ ವನಮಾಲೆಯಲಿಹರು ಎಣಿಸೆ ದಕ್ಷಪ್ರಜಾಪತಿಯು ನಿನ್ನ ವಾಮ ವನಮಾಲದೊಳಲ್ಲಿ ಇರುತಿಹನು ಮಣಿದು ಸೇವಿಪ ಜಯಂತ ಮನುಯಮ ತದನಂತರ ವನಮಾಲೆಯಲ್ಲಿಹರು ಜಾಣ ಬೃಹಸ್ಪತಿ ದಕ್ಷಿಣ ವನಮಾಲದೊಳು ಆಶ್ರಯಿಸಿ ತಾವಿಹರು ಪ್ರಾಣ ಅಪಾನ ವ್ಯಾನೋದಾನ ಸಮಾನ ವನಮಾಲದಲ್ಲಿಹರು 3 ಪದುಮನಾಭನು ಸಲೆ ಬೆಳಗುತಿಹನು ವಾಮದಕ್ಷಿಣ ಕುಕ್ಷಿಯೊಳಿಹರು ಹರಿಮೂರುತಿ ನಿನ್ನಾಂತರದಿಂದ ನಿಂತಿಹನು ಪಾದಪಾಶ್ರ್ವಗಳಲ್ಲಿ ಋಷಭ ಗೋವಿಂದ ಮೂರುತಿ ಅಲ್ಲೆ ಇರುತಿಹರು ಮುದದಿ ನಿನ್ನಯ ವಕ್ಷದೊಳು ಶ್ರೀ ವರಹಮೂರುತಿ ಅಲ್ಲೆ ನೆಲೆಸಿಹನು ಎದುರಿಲ್ಲ ನಿನಗೆ ಕಪೋಲದೊಳು ಶ್ರೀ ವಾಸುದೇವನು ಇಹನು ವಿಧಿವಾಯುಗಳು ನಿನ್ನಯ ವಾಮಭುಜದೊಳು ಮುದದಿ ನಲಿಯುತಿಹರು ವಿಧಿ ವಾಯುಸತಿಯರು ದಕ್ಷಿಣಭುಜದೊಳು ನುತಿಸುತಿಹರು 4 ಪವನಶಕ್ತಿ ಹನ್ನೆರಡೆಲ್ಲ-ನಿನ್ನಯ ಹೃದಯದಾಭರಣ ಪವನಿಸಿರ್ಪುದು ಕ್ರಮದಿ-ಶಕ್ತಿ ಪ್ರತಿಷ್ಠೆ ಸಂವಿತ್ ಸ್ಪೂರ್ತಿ ಭವಹಾರಿ ನಿನಗೆ ಕಲಾವಿದ್ಯಾಮತಿ ನಿಯತಿ ಮಾಯಾ ಕಾಲಪುರುಷ ಈ ಪರಿಯು ಜೀವೇಶ ನಿನ್ನಯ ಮಹಿಮ ಗುಣಗಳ ಪೊಗಳಲಳವೇ ಹರಮುಖಾದ್ಯರಿಗೆ ಜೀವರೆಸಗುವ ಕಾರ್ಯಗಳು ಲವಲೇಶ ನಿನ್ನ ಬಿಟ್ಟು ನಡೆಯದೊ ಪವಮಾನಮೂರುತಿ ಹರಿಯ ಕರುಣಾಕಟಾಕ್ಷ ನಿನ್ನೊಳು ಇಟ್ಟುಇರುವುದು ಇನ್ನೆಷ್ಟೊ ದೇವ ನಿನ್ನಯ ಖ್ಯಾತಿ ಎಷ್ಟೋ ಬಲದಿ ಶೇಷಶೈಲವ ತಂದೆ ಕಾವುದಯ್ಯ ಶ್ರೀ ವೇಂಕಟೇಶನ ಪ್ರೇಮದ ದೂತ 5
--------------
ಉರಗಾದ್ರಿವಾಸವಿಠಲದಾಸರು