ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿ ಬೇಗನೇ ಪರಮಾತ್ಮ ನೀನೈ ಪರತತ್ವನಾ ತ್ವರಿತದಲಿ ತಿಳಿಯೊ ಪ ಮೂರು ತಾಣಗಳ ಮೀರಿ ಗೋಚರಿಪ ತೋರುತಿಹ ಈ ದೇಹಾದಿಗಳಿಗೆ ಬೇರೆಯಾಗಿಪುದೆ ಪರಮಪದವು ಧೀರ ನೀನರಿಯೊ ಅದೆ ನಾನು ಎಂದು 1 ಕೋಶಪಂಚಕವ ಲೇಸಾಗಿ ಕಳೆದು ವಾಸನೆಯ ಪಾಶವನೆ ಹರಿದೊಗೆದು ಕ್ಲೇಶ ಪಡುವದನು ತ್ಯಜಿಸಿ ಮುದದಿ ನಾಶರಹಿತಾದ ಪದವು ತಾನೆಂದು 2 ಜನನಮರಣಗಳಿಗಾಚೆಗಿರುವಂಥ ಮನವಾಣಿಗಳಿಗೆ ನಿಲುಕದಿರುವಂಥ ಘನಪದವು ಇದುವೆ ಪರಮಾತ್ಮನೈ ಅನುನಯದಿ ಪೇಳ್ವ ಗುರುಶಂಕರಾರ್ಯ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಶೇಷ ಪರ್ಯಂಕ ಶಯನ ವಿಠಲ ಪೊರೆ ಇವಳ ಪ ವಾಸುದೇವನೆ ನಿನ್ನ | ದಾಸಿ ಎಂದೆನಿಸಿ ಭವಪಾಶವನೆ ಕಳೆಯೊ ಸುವಿ | ಶೇಷ ಹರಿಯೇ ಅ.ಪ. ಪತಿಸುತರು ಹಿತರಲ್ಲಿ | ವಿತತವಾಗಿರುವಂಥಅತಿಶಯದ ತವರೂಪ | ಸತತ ಚಿಂತಸುವಾ |ಮತಿಯನೇ ಕರುಣಿಸುತ | ಕೃತ ಕಾರ್ಯಳೆಂದೆನಿಸೊಕ್ಷಿತಿರಮಣ ಭಿನ್ನವಿಪೆ | ಪತಿಕರಿಸೊ ಇದನಾ 1 ಬುದ್ಧಿಯಲಿ ಸನ್ನಿಹಿತ | ವೃದ್ಧಿಗೈಸಿವಳಲ್ಲಿಮಧ್ವಮತ ಸಿದ್ಧಾಂತ | ಪದ್ಧತಿಗಳಾಅಧ್ವರೇಡ್ಯನೆ ಅನಿ | ರುದ್ಧ ಮೂರುತಿ ಹರಿಯೇಕೃದ್ಧಖಳ ಸಂಹಾರಿ | ಪದ್ಮನಾಭಾ 2 ಕೀಚಕಾರಿ ಪ್ರಿಯನೆ | ಮೋಚಕೇಚ್ಛೆಯ ಮಾಡಿಪ್ರಾಚೀನ ಕರ್ಮದಿಂ | ಮೋಚನವ ಗೈಸೋ |ಯಾಚಿಸುವೆನೋ ಸವ್ಯ | ಸಾಚಿಸಖ ನೀನೆಂದುಈಕ್ಷಿಪುದು ಕರುಣ ಕಟಾಕ್ಷದಲಿ ಹರಿಯೇ 3 ಸಾರ ಸುಖಸಾಂದ್ರಾ 4 ಕಾವ ಕರುಣಿಗಳರಸ | ಭಾಮಕರ ಪರಿಪಾಲಾಓವಿತವ ಸಂಸ್ಮರಣೆ | ಸಾರ್ವಕಾಲಿದಲೀಈವುದಿವಳಿಗೆ ಎಂದು | ಭಾವದಲಿ ಭಿನ್ನವಿಪೆಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಹಬ್ಬವೆನಗಿಂದು ಧರೆಯೊಳು ನೋಡಿ ಇಬ್ಬರೊಂದಾದ ನೆಲೆನಿಜಗೂಡಿ ಉಬ್ಬಿ ಉನ್ಮನವಾಗಿ ಎನ್ನೊಳು ಕೊಬ್ಬಿದೆನು ಘನಸುಖ ಬೆರದಾಡಿ 1 ಉಬ್ಬಸೆನಗಿನ್ನು ಹಿಂಗಿತು ನೋಡಿ ಹಬ್ಬದೂಟದ ಸವಿರಸಗೂಡಿ ಹಬ್ಬಿಹವಣಿಸಿ ಬೀಳುವ ಗರ್ಭಪಾಶವನೆಗಳೆದೆನು ಈಡ್ಯಾಡಿ 2 ಹಬ್ಬವಾಯಿತು ಮಹಿಪತಿಗಿಂದು ಒಬ್ಬನಿಜವಾದ ಗುರು ಕೃಪಾಸಿಂಧು ಹಬ್ಬಹರುಷದಿ ನೆಲೆನಿಭಗೊಂಡಿÀನ್ನು ಶೋಭಿಸಿತು ಶುಭಕರ ದಿವಸಿಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು