ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ರಂಗಯ್ಯ ನೀನೇಳು ಕೃಷ್ಣಯ್ಯ ಏಳಯ್ಯ ದೊರೆ ಬೆಳಗಾಯಿತೇಳೆಂದು ಪಾಲ್ಗಡಲೊಡೆಯ ಹರಿಯನೆಬ್ಬಿಸಿದಳಂದು ಬಾಲೆ ಯಶೋದೆಯು ಬಹು ಸಂಭ್ರಮದಿಂದ ಪ ಶಕ್ರನುಪಟಳವ ನೀ ಪರಿಹರಿಸಬೇಕು ವಿಕ್ರಮದಿ ಗೋವರ್ಧನ ಎತ್ತಬೇಕು ಚಕ್ರಧರ ನಿನ್ನ ಮಧುರೆಗೆ ಕರೆದೊಯ್ಯೆ 1 ಮಾವ ಕಂಸನು ನಿನ್ನ ಬಾ ಎಂದನಂತೆ ಸಾವು ಅವನಿಗೆ ಸಮೀಪದಲಿದೆಯಂತೆ ದೇವಕಿ ವಸುದೇವ ಸೆರೆಯಲಿರುವರಂತೆ ಕಾವುದಕೆ ನೀ ಪೋಗಲೇಬೇಕಂತೆ 2 ಬಿಲ್ಲ್ಹಬ್ಬದಲಿ ಜಯಶೀಲನಾಗಬೇಕು ಖುಲ್ಲ ರಕ್ಕಸ ದಲ್ಲಣನೆನಿಸಬೇಕು ಬಲ್ಲಿದ ಮಗಧನ ಕೊಲ್ಲಿಸಲುಬೇಕು 3 ದೇವಿ ದ್ರೌಪದಿಗೆ ಸುಚೇಲವೀಯಬೇಕು ಭಾವಮೈದುಗೆ ಬೋವÀನಾಗಬೇಕು ಪಾವಿನ ಶರದಿಂದವನ ಪೊರೆಯಬೇಕು ಯಾವತ್ತು ಭೂ ಭಾರವನಿಳುಹಬೇಕು 4 ಮಧ್ವರಾಯರ ಹೃತ್ಪದ್ಮದಿ ನಿಲಬೇಕು ಇದ್ದು ಉಡುಪಿಯೊಳು ಪೂಜೆಗೊಳಲುಬೇಕು ಶುದ್ಧ ವೈಷ್ಣವರಿಷ್ಟಗಳ ಸಲಿಸಬೇಕು ಮುದ್ದು ರಂಗೇಶವಿಠಲನೆನಿಸಬೇಕು 5
--------------
ರಂಗೇಶವಿಠಲದಾಸರು
ತಪಿಸಲಾರೆ ನಾನು ಪರಿಪರಿ ತಾಪದಲಿ ಕೃಪೆಮಡಿ ಸಲಹಿರಿ ಶ್ರೀ ಗುರುಗಳೆ ಪ. ಸುಪಥ ಕಾಣದೆ ನಿಮ್ಮ ಪಾದವನೆ ನಂಬಿದೆನು ಗುಪಿತ ಮಹಿಮರೆ ಇನ್ನು ಭವಪಾಶ ಬಿಡಿಸುತ್ತ ಅ.ಪ. ಬಂಧು ವರ್ಗಗಳನ್ನ ಬದುಕಿಸುವರು ಎಂದು ಬಂಧನದೊಳು ಬಿದ್ದು ಬೆಂದು ನೊಂದೆ ಮುಂದೆ ದಾರಿಯ ಕಾಣೆ ಮುಕ್ತಿ ಮಾರ್ಗವನರಿಯೆ ಬಂಧು ಬಳಗಗಳೆಲ್ಲ ನೀವೆಂದು ನಂಬಿದೆ 1 ಅಶನವಸನಗಳಲ್ಲಿ ಆಸೆಯನು ತೊರೆಯದೆ ವಸುಮತಿಯೊಳು ಜ್ಞಾನ ಹೀನವಾಗಿ ಪಶುವಿನಂದದಿ ತಿರುಗಿ ಕಾಲವ್ಯರ್ಥ ಕಳೆದೆ ಅಸಮ ಮಹಿಮರೆ ಇನ್ನು ಅಜ್ಞಾನ ಪರಿಹರಿಸಿ 2 ಮಮತೆಯನು ತೊರೆಯದೆ ಮಾಯ ಪಾಶಕೆ ಸಿಲುಕಿ ಮಮಕಾರದಿಂದ ನಾ ಮೈಮರೆತೆನು ನಮಿಸುವೆನು ದೈನ್ಯದಲಿ ನಾನೀಗ ನಿಮ್ಮ ಪದಕೆ ರಮೆಯರಸನ ತೋರಿ ಎನ್ನ ಮನ ಮಧ್ಯದಿ 3 ಪಾವನರೂಪರೆ ಪಾಪರಾಹಿತ್ಯರೆ ಪಾವಿನಶಯನಗೆ ಪರಮಪ್ರಿಯರೆ ದೇವತೆಗಳೊಡೆಯರೆ ದೇವಾಂಶ ಸಂಭವರೆ ಪಾವಮಾನಿಗೆ ಪ್ರಿಯರೆ ಪಾವನ್ನಗಾತ್ರರೆ 4 ಆಪತ್ತು ಕಳೆಯುವರೆ ಶ್ರೀಪತಿಯ ತೋರ್ವರೆ ಕೋಪಿಸದೆ ಎನ್ನೊಳು ಕೃಪೆಗೈಯ್ಯರಿ ಗೋಪಾಲಕೃಷ್ಣವಿಠ್ಠಲ ತಾನು ಹೃದಯದಲಿ ತೋರ್ಪುತೆ ಕರುಣಿಸುತ ಈ ಪರಿಯಿಂ ಸಲಹಿರಿ5
--------------
ಅಂಬಾಬಾಯಿ
ಪ್ರದ್ಯುಮ್ನ ವಿಠಲ ನೀನಿವಳ ಸಲಹಬೇಕೋ ಪ ವಿದ್ಯಾಯು ಸಂಪತ್ತು | ಭಕ್ತ್ಯಾದಿಗಳನಿತ್ತುಉದ್ಧರಿಸ ಬೇಕಿವಳ | ಮಧ್ವಾಂತರಾತ್ಮಾ ಅ.ಪ. ಹರಿದಾಸ್ಯ ಕಾಂಕ್ಷಿತಳು | ಹಿರಿದಾಗಿ ಬೇಡಿಹಳುವರತೈಜ ಸಾಖ್ಯಹರಿ | ವರದ ನಾಗಿರುವೇಕರುಣನಿಧಿ ತವನಾಮ | ಸ್ಮರಿಪ ಸನ್ಮಾರ್ಗವನುಅರುಹಿ ಮಹ ಭವನಿಧಿಯ | ತರಣ ತಿಳಿಸಿರುವೇ 1 ಕಂಸಾರಿ ತವಪಾದಪಾಂಸುವನೆ ಶಿರದಿ ಅ | ಸಂಶಯದಿ ಧರಿಸೀಮಾಂಸಧಾತುಕ ಸಪ್ತ | ಹೇಸಿಕೆಯ ದೇಹವು - ವಿಪಾಂಸಗನಿಗಧಿಷ್ಠಾನ | ವೆಂಬುದನೆ ತಿಳಿಸೋ2 ಪಂಚಬೇದಾತ್ಮಕ ಪ್ರ | ಪಂಚವು ಸದಾ ಸತ್ಯಅಂಚೆವಹ ಸುರರಾದಿ | ತರತಮ್ಯದಾಸಂಚಿಂತನೆಯ ಕೊಟ್ಟು | ವಾಂಛಿತಾರ್ಥದ ಹರಿಯೆಮಿಂಚಿನಂದದಿ ಪೊಳೆಯೊ | ಹೃತ್ಪಂಕಜದ ನಡುವೆ3 ಮತೆ ಈ ಯುಗದಲ್ಲಿ | ಕೃತ್ಯ ವ್ರತನೇಮಾದಿಸತ್ವ ರಹಿತವು ಆಗಿ | ನಿತ್ಯಫಲರಹಿತಾಎತ್ತ ನೋಡಿದ ರತ್ತ | ಕತ್ತಲೆಯು ಕವಿದಿಹುದುಹತ್ತಿರವೆ ಇರುವಂಥ | ಭಕ್ತವತ್ಸಲ ಸಲಹೋ 4 ದಾವಾಗ್ನಿ ಕುಡಿದವನೆ | ಪಾವಿನಾಮದ ಹರನೆಗೋವುಗಳೊಳುದ್ಗೀಥ | ದೇವಾದಿದೇವಾಕಾವುದಿವಳನು ಎಂಬ | ಭಾವ ಬಿನ್ನಪ ಸಲಿಸೊಮಾವಿನೋದಿಯೆ ಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಶ್ರೀ ವಿಷ್ಣುತೀರ್ಥರು ಅಡಿಗಳ ಭಜಿಸುವ ಮನುಜರ ಬಿಡನೈ ತನ್ನ ಪ ಕಡು ಕರುಣೀ ಬಿಡು ಸ್ಮರಣೀ ನುಡಿ ಮನದೀ ಅಡವಿಗಳೊಡೆಯನ ಪದ ದೃಢದಿ ಪಿಡಿ ಮೂಢ ಮಾನವಾ ಅ.ಪ. ಕಂಕಣ ಕಟ್ಟೀ ಬಿಂಕವ ಮುರಿಯುತ ಕಿಂಕರ ಸಲಹುವ ಪಂಕಜನಯ್ಯನ ಪಂಕಜದೊಳು ತಾ ಮಿಂಚಿನಂದದಿ ಕಂಗಳಿಗೊಪ್ಪುವ ಮಂಗಳಾ ಮಂಟಪದಲಿ ಮೀನಾಂಕನ ಸಹತೋರುವ ಮದಗಜಸಿಂಹನು ಮಾದನೂರಿನಲಿ ನಿಂತಿಹ ಪವನತನಯನು ಕಮಲನಯನನು ಕರಾಳವದನ ಪರಕಪಾಲನಯನನು 1 ಸತಿ ಜಾಹ್ನವಿ ಧರಿಸಿದ ಕೊರಳೊಳು ಶಿರಮಾಲೆ ಕರಮಾಲೆ ಜಟಬಾಲೆ ಸಹಕುಶನದಿ ನಿಲಯನಪದ ಹೃದಯದಿ ಸ್ಮರಿಸುತ 2 ಮೊಮ್ಮಗನೆನಿಸಿ ತಾತನ ಮೋಹಿಸಿ ದಾತನ ತಲೆ ತರಿದವನು ಮಹಾಮುನಿಪುರದೊಳು ತೆರಳಿದ ಸಮಯದಿ ತನ್ನ ಸತಿಯೊಳು ಸರಸವನಾಡಿದನು ಕಾಳಕೂಟವಾ ತಾ ಪಾನಮಾಡಿ ಗರಗೊರಳೆಂದೆನಿಸಿದನೂ ಶಿರಿಸುತ ತಂದೆವರದಗೋಪಾಲವಿಠಲನ ಪದ ಧೇನಿಪನೋ ಸೇವಿಪನೋ ಪಾವಿನ ಪದನೋ ವನದೊಳು ನಿಂದು ಶ್ರೀರಾಮನ ಜಪಿಸುವ 3
--------------
ಸಿರಿಗುರುತಂದೆವರದವಿಠಲರು
ಎಂತಲೊ ನಿನ್ನ ಮಹಿಮೆ ಯಶೋದೆಕಂದ ಪ.ದೇವರದೇವನೆನಿಸಿ ಆ ವೈಕುಂಠವಿರೆನಿತ್ಯಪಾವಿನೊಳು ನಿದ್ರೆಗೈವದಾವ ಚಂದವೊ ಮುಕುಂದ 1ಸರಸಿಜಭವೇಶಾದಿ ಸುರಮುನಿಪೂಜೆಗಿಂದಪಿರಿದು ಸುಖವೆ ವಿದುರನ ಕುಡಿಕೆಪಾಲೌತಣ 2ಪಾಲಗಡಲ ನಿವಾಸ ಮೂಲೋಕದುದರನಾಗಿಬಾಲಕತನದ ಲೀಲೆ ಸಲುವದೆ ನಳಿನಾಕ್ಷ 3ಪಕ್ಷಿವರನೇರಿ ವಾಮ ಲಕ್ಷ್ಮಿಯಿರಲು ಯಜÕಭಿಕ್ಷವ ಬಯಸಿ ನಿನ್ನಕುಕ್ಷಿರಕ್ಷಿಸಿದೆಯಯ್ಯ4ಅನ್ಯಚಿಂತೆಯನು ಬಿಟ್ಟು ನಿನ್ನ ಚಿಂತೇಲಿಹರಜನ್ಮದ ಲತೆಯಹರಿಪ್ರಸನ್ನವೆಂಕಟೇಶ ತಂದೆ5
--------------
ಪ್ರಸನ್ನವೆಂಕಟದಾಸರು