ಒಟ್ಟು 7 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟೇಕೆ ನಿರ್ದಯ ಶ್ರೀಹರಿಯೇ ಸೃಷ್ಟೀಪತಿಯೆ ಪ. ಮುಟ್ಟಿ ಭಜಿಪರ ನಿಟ್ಟಿಸಿ ನೋಡದೆ ನಿಷ್ಠುರವಾಗಿಹುದಿಷ್ಟವೆ ನಿನಗಿದು ಅ.ಪ. ಸಣ್ಣ ಮಾತುಗಳಾಡಿದೆನೇನೊ ದೆನ್ನ ತಲೆಯ ಮೇಲಿನ್ನೊಗೆಯದಿರು 1 ಕೋರೆಯ ತೋರುತ ಕೊಸರುವುದೇಕೋ ಶ್ರೀಹರಿ ನೀ ನೀರೀತಿ ಮಾಡುವ ಬಗೆಯಿನ್ನೇಕೋ ನೀರಜಭವಪಿತ ನೀನೇನಗೈದರು ಸೇರಿದೆ ನಿನ್ನನು ಸಾರೆನದಾರನು 2 ಸಿಂಗನ್ನ ಪೋಲುವ ಮುಖ ಧರಿಸಿ ಕಂಗೆಡೆ ಭಯದಿ ಜಗಂಗಳ ನಡುಗಿಪ ನುಂಗಲು ಬರುವಾಸಿಂಗನ ಬಗೆ ಸಾಕೋ 3 ಮುನ್ನಾ ಶುಕ್ರನ ಕಣ್ಣನು ತಿವಿದಾ ಪುಲ್ಲಿನತುದಿಯಿಂ ಎನ್ನೀ ಕಣ್ಣನ್ನು ತಿವಿಯದಿರಣ್ಣಾ ನಿನ್ನೀಕರದೊಳಿಹ ಘನ ಕೊಡಲಿಗೆ ನೀ ನಿನ್ನಾರನು ಗುರಿಗೈಯದಿರೆಂಬೆನು 4 ಶಿಲೆಯಾಗಿದ್ದವಳ ಕಲುಷವ ಕಳೆದು ಪಾವನೆಯೆನಿ ಕಾಳಿಂಗನ ಫಣೆಯೊಳು ಕುಣಿಕುಣಿದೇ ಭಳಿರೆನೆ ಬಾಲ ಗೋಕುಲ ಬಾಲೆಯರೆಲ್ಲರ ಜಾಲವಿದ್ಯೆಯಿಂ ಮರುಳುಗೊಳಿಸಿದೆ 5 ತುರುಗವನೇರುತ ತರುಬಲು ಬೇಡೈ ಧರೆಯೊಳು ನೀನೆತ್ತಿದ ಪರಿಪರಿ ರೂಪವ ಸ್ಮರಿಸಿ ಸ್ಮರಿಸಿ ಮನಬೆರಗಾಗಿದೆ ಹರಿ6 ಶರಣಾಭರಣನೇ ನೀನೆಂದು ಮನದೆಂದು ಮರೆಬೇಡುವೆನೈ ಬಳಿಸಂದು ವರಶೇಷಗಿರಿ ದೊರೆನೀನಿಂದು 7
--------------
ನಂಜನಗೂಡು ತಿರುಮಲಾಂಬಾ
ಗಂಗಾ ಗಂಗಾ ಎಂದು ನಿನ್ನ ಸಾನ್ನಿಧ್ಯದಲ್ಲಿಯೇಇರುವೆನೋ? ಸುಖದಿ ಗಂಗಾ ಪಧರೆಗೊಪ್ಪುವ ಹಾರ'ದೆಂಬಂದದಿಮೆರೆಯುತ್ತಿರುವಾ ಪರಮಪಾವನೆಯೆ 1ಸುರಲೋಕಕೆ ಹತ್ತುವದನು ಸೂಚಿಸುತಿರುವ ಪತಾಕೆಯ ಪರಿಯಳೊಪ್ಪಿರುವ2ಹರಿಚರಣಾಂಬುಜದಿಂದ ಹೊರಡುತಹರನಶಿರಸ್ಯಂ ಹರಿಯುತಾ ಇರುವ 3ಮುಳುಗಿದವರ ಪಾಪಗಳನೆಲ್ಲವನುತೊಳೆಯುವ ಚಿನ್ಮಯೆ ಕಲಿಮಲಾಪಹರೆ 4
--------------
ಹೊಸಕೆರೆ ಚಿದಂಬರಯ್ಯನವರು
ಜಗದಾದಿಮಾತೆಯೆ ಪ ಮೊರೆಯ ಕೇಳಮ್ಮ ಪರಮ ಪಾವನೆಯೆ ಕರುಣ ಹಸ್ತವ ಶಿರದಿ ಇಡು ದಯೆ ಭರಿತೆ ಜಗನ್ಮಯೆ ಅ.ಪ ಕಮಲಜಾತನ ಪ್ರೇಮ ಸುಂದರಿಯೆ ಅಮರ ವಿನುತೆಯೆ ಕಮಲನೇತ್ರೆ ಸಾವಿತ್ರಿ ಶಾರದೆಯೆ ವಿಮಲಚರಿತಳೆ ದಮೆ ದಯಾನ್ವಿತೆಯ ಶಮೆ ಶಾಂತಿನಿಲಯೆ ಕುಮುದಬಾಂಧವಕೋಟಿಪ್ರಭಾಮಯೆ 1 ವರ ಸುವಿದ್ಯ ಸಂಗೀತ ಶರ್ವಾಣೆ ಪರಮಕಲ್ಯಾಣೆ ಶರಣ ಜನಪ್ರಿಯೆ ವೀಣಾಧರಪಾಣಿ ಸ್ಮರಿಪ ಜನ ಮನದಿಷ್ಟ ಪರಿಪೂರ್ಣ ದುರಿತದೂರಿಣೆ ಪೊರೆದೆ ಮನುಗಳ ಜ್ಞಾನದಿಂ ವಾಣಿ 2 ಚರಣದಡಿಲೆನ್ನ ಶಿರವನಿಕ್ಕಿ ಬೇಡಿಕೊಂಬುವೆ ನಾ ಮರೆವ ಹರಿಸಿ ಭರದಿಂ ಕೊಡು ಜ್ಞಾನ ಸ್ಥಿರಮತಿಯ ಮುನ್ನ ನಿರುತದ್ಹೊಗಳುವೆ ನಿಮ್ಮ ಚರಿತವನು 3
--------------
ರಾಮದಾಸರು
ಜಾಹ್ನವಿ ದೇವಿ ಜಯ ಭಕುತ ಸಂಜೀವಿ ಜಯ ಪ್ರದಾಯಕ ವೀವೆ ಜಯ ಎಮ್ಮ ಕಾವೆ ಪ ಅಜನ ಸಭೆಯಲಿ ವರುಣಗೆ ಶಾಪವು ಬರಲು ಪ್ರಜಪಾಲನಾದ ಶಂತುನ ನಾಮದೀ ನಿಜರೂಪದಲಿ ಬಂದು ಅಷ್ಟವಸುಗಳ ಪಡೆದೆ ಭಜಿಸಬಲ್ಲೆನೆ ನಿನ್ನ ಬಹು ಭಾಗ್ಯವಂತೇ1 ಸಗರರಾಯನ ವಂಶವನ್ನೆ ಉದ್ಧಾರೆ ಅಗಣಿತೋದಯ ಪಾರಂವಾರೆ ಶುಭಶರೀರೆ ಮುಗುವೆನು ಕರವೆತ್ತಿ ಸಂತತ ವಾರಂವಾರೆ 2 ಏನು ಧನ್ಯರೊ ಎನ್ನ ಕುಲಕ ಪಾವನೆಯೆನಲು ನೀನುಬ್ದಿ ಪೊರದೆ ಉತ್ಸಾಹದಿ ಮೆರೆದೆ ಮಾನನಿಧಿ ವಿಜಯವಿಠ್ಠಲನ ಸನ್ನಿಧಿಯಲ್ಲಿಜ್ಞಾನಪೂರ್ವಕ ವೊಲಿದು ಭಕುತಿ ಕೊಡು ಎನಗೆ 3
--------------
ವಿಜಯದಾಸ
ಪಾಲಿಸು ಶಾರದೆ ಪರಮ ಪಾವನೆಯೆ ಪಾಲಿಸು ಎನ್ನನು ಪರಬ್ರಹ್ಮನ ಸತಿಯೆ ಪ ತವಪಾದ ಕೃಪೆಯಿಂದ ಕನ್ನಡ ನುಡಿಯಲಿ ವಿವರಿಸಿ ಪೇಳುವೆ ಭಾಗ್ಯ ಸನ್ನುತಿಯ ತವಕದಿ ಬಲಿದೀಗ ಕೊಡು ಸರಸ್ವತಿಯೆ ರವಿ ಕೋಟಿ ತೇಜ ವಿರಾಜಿತಾತ್ಮಿಕೆಯ 1 ಜಲಕೆ ಕ್ಷೀರವು ಮುಟ್ಟಿದಂತೆನ್ನ ಮನದಿ ಸುಲಲಿತ ವಾಕ್ಯವ ಪಾಲಿಸು ದಯದಿ ಜಲಜ ಭವನರಾಣಿ ಕರದಿ ಪುಸ್ತಕವೇಣಿ ಕಲಕೀರ ವಾಣಿ ಕಪಿಲೆ ಸುವಾಣಿ 2 ಧರೆಯೊಳಧಿಕವೆಂಬ ಕೊಡಚಾದ್ರಿಯೊಳಗೆ ಸ್ಥಿರವಾಗಿ ನೆಲೆಸಿದ ಮೂಕಾಂಬೆ ಎನಗೆ ಕರುಣಿಸಿದದಾರನು ವರಿಸಿದರೆನಗೆ ಹರುಷದಿ ಪಾಲಿಸೆ ಪರಮ ಪಾವನೆಯೆ 3
--------------
ಕವಿ ಪರಮದೇವದಾಸರು
ಕೊಡು ಬೇಗ ದಿವ್ಯ ಮತಿ - ಸರಸ್ವತಿಕೊಡು ಬೇಗ ದಿವ್ಯಮತಿ ಪಮೃಡಹರಿಹಯ ಮುಖರೊಡೆಯಳೆ ನಿನ್ನಯ |ಅಡಿಗಳಿಗೆರಗುವೆ ಅಮ್ಮನ ಬ್ರಹ್ಮನ ರಾಣಿ ಅ.ಪಇಂದಿರಾರಮಣನ ಹಿರಿಯ ಸೊಸೆಯು ನೀನು|ಬಂದೆನ್ನ ವದನದಿನಿಂದುನಾಮವ ನುಡಿಸಿ1ಅಖಿಳವಿದ್ಯಾಭಿಮಾನಿ ಅಜನ ಪಟ್ಟದ ರಾಣಿ |ಸುಖವಿತ್ತು ಪಾಲಿಸೆಸುಜನಶಿರೋಮಣಿ2ಪತಿತ ಪಾವನೆಯೆ ನೀ ಗತಿಯಂದು ನಂಬಿದ |ವಿತತಪುರಂದರವಿಠಲನ ತೋರೆ3
--------------
ಪುರಂದರದಾಸರು