ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೆಲವ ನೀಡೆನಗೆ ಇಹ್ಯದ ಗೆಲವ ನೀಡೆನಗೆ ಪ ಗೆಲವ ನೀಡಿಯೆನ್ನ ಮಲಿನಬಿಡಿಸಿ ನಿನ್ನ ವರ ದಿವ್ಯಪಾದನಳಿನದೊಲುಮೆಯಿತ್ತು ಅ.ಪ ಎಡರು ಆವರಿಸಿದ ಕಾಲದಿ ದೈರ್ಯವ ದಯಮಾಡೊ ಸಡಗರಸಿರಿ ಬಂದ ಕಾಲದಿ ಶಾಂತಿ ವಿನಯ ಕೊಡೊ ಕಡುಜವ್ವನದಲಿ ದುಡುಕನುಕೊಡದಿರು ಪಿಡಿದು ನೇಮವನು ಬಿಡದ ಛಲವನಿತ್ತು 1 ಧರಣಿಯ ಸುಖಕಾಗಿ ಎನ್ನಿಂ ಪುಸಿಯ ನುಡಿಸದಿರೋ ಹರಣಪೋದರು ಪರರಿಗೆ ದೇಹಿಯೆನಿಸದಿರೋ ಪರಮಹರುಷದಿಂದ ಹರಿಶರಣರು ಮೆಚ್ಚಿ ಶಿರವದೂಗುವಂಥ ನಿರುತವರ್ತನೆಯಿತ್ತು 2 ಸತತದಿ ಕರ್ಣಕ್ಕೆ ಹರಿಕಥೆ ಕೀರ್ತನೆ ಕರುಣಿಸೊ ಪತಿತಪಾವನವೆನಿಪ ಭಜನಾನಂದವ ಪಾಲಿಸೊ ಕ್ಷಿತಿಯೋಳಧಿಕ ಸದುಗತಿ ಮೋಕ್ಷಾಧಿ ಪತಿ ಶ್ರೀರಾಮ ನಿಮ್ಮ ಪಾದಭಕ್ತಿಯಿತ್ತು 3
--------------
ರಾಮದಾಸರು
ವರಗಡದಿನ್ನೀಶೇಷ ವಿಠಲ ಪೊರೆ ಇವನ ಪ ನಿರುತ ತವ ಚರಿತೆಗಳ | ಸ್ಮರಿಸುತ್ತ ಭಕ್ತಿಯಲಿಮರುತಾಂತರಾತ್ಮ ತವ | ಚರಣಕರ್ಪಿಪನ ಅ.ಪ. ಭವ | ಬಂಧದೊಳು ಸಿಲ್ಕಿ ಬಹುನೊಂದವಗೆ ಕರುಣದಲಿ | ಕುಂದನೆಣೆಸದಲೇಮಂದ ಹಾಸವ ಬೀರಿ | ಸಂಧಿಸೋ ಸಂತೋಷಇಂದಿರಾರಾಧ್ಯ ಪದ | ಮಂದರೋದ್ಧಾರೀ 1 ಉತ್ತಮ ಸುಸಂಸ್ಕøತಿಯ | ಪೊತ್ತು ಜನಿಸಿಹನಿವನುಮತ್ತೆ ದಾಸರ ಕರುಣ | ಪಾತ್ರನಿರುವಾಅರ್ಥಿಯಲಿ ದಾಸತ್ವ | ಪ್ರಾರ್ಥಿಸುತ್ತಿಹಗೆ ನಾ-ನಿತ್ತಿಹೆನೊ ಅಂಕಿತವ | ಸುಪ್ತೀಶನಾಜ್ಞಾ2 ಮೋದ ತೀರ್ಥರ ತತ್ವ | ವಾದಾನುವರ್ತಿ ಇವಭೋಧಿಸೀ ಪರತಮವ | ಭೇದ ಪಂಚಕನಆದರದಿ ಕೈ ಪಿಡಿದು | ಉದ್ಧರಿಸ ಬೇಕೆಂದುವೇದ ವೇದ್ಯನೆ ನಿನ್ನ | ಪ್ರಾರ್ಥಿಸುವೆ ಹರಿಯೇ 3 ಶ್ರವಣ ಮನಕಾನಂದ | ಭುವನ ಪಾವನವೆನಿಪತವಮಹಿಮೆ ಪೊಗಳಲ್ಕೆ | ಕವನ ಶಕ್ತಿಯನೂನೀವೊಲಿದು ಅಭಿವೃದ್ಧಿ | ಗೈವುದಿವನಲಿಯೆಂದುಪವನಾಂತರಾತ್ಮ ಬಿ | ನ್ನವಿಪೆನೋ ದೇವಾ4 ಭಾವಕ್ರಿಯೆ ದ್ರವ್ಯದೊಳು | ಅದ್ವಿತಿಯ ನೀನೆಂಬಭಾವದನುಭವವಿತ್ತು | ನೀ ವೊಲಿಯೊ ಇವಗೇಕಾವರನ್ಯರ ಕಾಣೆ | ಗೋವರ್ಧನೋದ್ಧರನೆಕೋವಿದರ ಒಡೆಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶಿರಿ ಮುದ್ದು ಕೃಷ್ಣವಿಠಲ | ಪೊರೆಯ ಬೇಕಿವಳಾ ಪ ಪಾದ | ಸಾರಿ ಭಜಿಸುವಳಾ ಅ.ಪ. ಪರಿಪರಿಯ ವಿಧದಿಂದ | ತೈಜಸನೆ ನೀನಾಗಿವರಸೂ ರೂಪಗಳಿಂದ | ವಸುದೇವ ಸುತನೇತರಳೆಗತಿ ಆಶ್ಚರ್ಯ | ತೋರಿ ಅಡಗಿದೆ ದೇವಶಿರಿಮುದ್ದು ಕೃಷ್ಣನೇ | ಮರುತಂತರಾತ್ಮ 1 ಸುಪ್ತಿಯಲಿ ಗುರುಪಾದ | ಭಕ್ತಿಯಲಿ ನಮಿಸುತ್ತತೀರ್ಥವನೆ ತಕ್ಕೊಂಡು | ಧನ್ಯನಾನೆಂದುಅತ್ಯಂತ ಹರ್ಷದಲಿ | ಸ್ತೋತ್ರವನೆ ಮಾಡುತ್ತಸಕ್ತಿಯನೆ ತೋರಿಹಳು | ದಾಸಪಂಥದಲೀ 2 ಭುವನ ಪಾವನವೆನಿಪ | ಮಧ್ವಮತದಾಸಕ್ತಿಶ್ರವಣಕಾನಂದವೆನೆ | ಕವನ ಸಂಸ್ಪೂರ್ತೀಜೀವೊತ್ತಮರ ಭಕುತಿ | ವಿಷಯದಲಿ ವಿರಕ್ತಿಹವಣಿಸೋ ಶ್ರೀಹರಿಯೆ | ಭವಕರಿಗೆ ಹರಿಯ 3 ಪತಿಸುತರು ಹಿತರಲ್ಲಿ | ಮತಿಮತಾಂವರರಲ್ಲಿರತನು ಶ್ರೀಹರಿಯೆಂಬ | ಸುಜ್ಞಾನವನ್ನುಕೃತಿಪತಿಯ ಕರುಣಿಸುತ | ಸಾಧನವ ಗೈಸುವುದುಚತುರಾಸ್ಯಪಿತ ಹರಿಯೆ | ದುರಿತವನ ದಾವಾ 4 ಮಾನನಿಧಿ ಶ್ರೀಹರಿಯೆ | ಧ್ಯಾನಾನುಕೂಲಿಸುತಸಾನುರಾಗದಿ ನಿನ್ನ | ರೂಪಹೃದ್ಗುಹದೀಕಾಣಿಪಂತಸಗೊ ಗುರು | ಗೋವಿಂದ ವಿಠಲನೆಆವಾದದನ್ಯವನು | ಬೇಡ ಬಂದಿಲ್ಲ5
--------------
ಗುರುಗೋವಿಂದವಿಠಲರು