ಒಟ್ಟು 8 ಕಡೆಗಳಲ್ಲಿ , 4 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಡಮತಿಗಡ ಕಡಿದೀಡ್ಯಾಡಿ ಪಡಿರೋ ಸನ್ಮಾರ್ಗವ ಹುಡುಕ್ಯಾಡಿ ಪ ಗಡಗಡಸದೃಢದಯಿಡುತೋಡೋಡಿ ಪಡಿರೋ ಕಡು ಅನಂದ್ವೊಯ್ಕುಂಠ ನೋಡಿ ಅ.ಪ ಚಿಂತೆ ಭ್ರಾಂತಿಗಳ ದೂರಮಾಡಿ ನಿ ಶ್ಚಿಂತರಾಗಿರೋ ಮನ ಮಡಿಮಾಡಿ ಶಾಂತಿತೈಲ್ಹೊಯ್ದು ಜ್ಞಾನಜ್ಯೋತಿಕುಡಿ ಚಾಚಿ ನಿಂತು ನೋಡಿರೋ ಹರಿಪುರದಕಡೆ ಅಂತ್ಯ ಪಾರಿಲ್ಲದಾತ್ಯಂತ ಪ್ರಕಾಶದಿಂ ನಿಂತು ಬೆಳಗುತಾರೋ ಆನಂತಸೂರ್ಯರು ಕೂಡಿ 1 ಬೋಧಾದಿಮಯ ಮಹದ್ವಾರಗಳು ಮತ್ತು ವೇದ ನಿರ್ಮಯ ಪುರಬೀದಿಗಳು ಆದಿಅಂತಿಲ್ಲದಷ್ಟ ಭೋಗಗಳು ವಿ ನೋದ ಮುಕ್ತಿ ಕಾಂತೇರಾಟಗಳು ವೇದವೇದಾಂತ ಅಹ್ಲಾದದಿಂ ಪೊಗಳುವ ಸುಜನ ಮಹದಾದಿಪದವಿಗಳು2 ಸೇವಿಪ ಸುರಮುನಿಗಣಗಳು ಕೋವಿದ ನಾರದಾದಿ ಗಾನಗಳು ರಂಭೆ ನಾಯಕಿಯರ ಮಹನರ್ತನಗಳು ಸಾವಿರಮುಖಪೀಠದ್ಹೊಳೆವ ಶ್ರೀರಾಮನ ಪಾವನಪಾದಕಂಡು ಸಾವ್ಹುಟ್ಟು ಗೆಲಿರೆಲೋ 3
--------------
ರಾಮದಾಸರು
ದಯವದೋರೋ ದೇವ ಭಕುತ ಭಯನಿವಾರ ಅಭವ ಪ ದಯವದೋರೋ ನಿನ್ನ ಪಾವನಪಾದ ಸು ಸೇವಕ ಜನಮಹಜೀವ ಜಾನಕೀಧವ ಅ.ಪ ಪಾಪಗೆಲಿಯ ಬಂದೆ ಸಂಸಾರ ಕೂಪದೊಳಗೆ ನಿಂದೆ ಕೋಪಜ್ವಾಲದಿ ಬೆಂದೆ ವಿಷಯ ತಾಪತ್ರಯದಿನೊಂದೆ ಆ ಪರಲೋಕದ ವ್ಯಾಪಾರ ಮರೆದಿಹ್ಯ ದ್ವ್ಯಾಪಕನಾಗಿ ಬಲುತಾಪಬಡುವೆ ತಂದೆ 1 ಅಂಗಮೋಹವ ಬಿಡಿಸೋ ನಿನ್ನವರ ಸಂಗವ ಕರುಣಿಸೊ ಭಂಗವ ಪರಹರಿಸೊ ಜಗದವ ರ್ಹಂಗಹನು ತಪ್ಪಿಸೊ ಮಂಗಳಾತ್ಮ ನಿನ್ನ ಮಂಗಳಾಮೂರ್ತಿ ಎನ್ನ ಕಂಗಳೋಳ್ನಿಲ್ಲಿಸಿ ಹಿಂಗದಾನಂದ ನೀಡು 2 ದೋಷದಾರಿದ್ರ್ಯ ಹರಿಸೊ ಮನದ ಅಶಾಪಾಶ ಬಿಡಿಸೊ ಹೇಸಿಪ್ರಪಂಚ ಗೆಲಿಸೊ ಸುಜನರಾ ವಾಸ ತೀವ್ರ ಪಾಲಿಸೊ ದೋಷನಾಶ ಜಗದೀಶ ಶ್ರೀರಾಮ ನಿನ್ನ ದಾಸಾನುದಾಸೆನಿಸಿ ಪೋಷಿಸು ಸತತ 3
--------------
ರಾಮದಾಸರು
ನೆರೆನಂಬಿ ಬೇಡುವೆನೊ ಶ್ರೀಹರಿಯೆ ನಿನ್ನ ಪರಮ ಪರತರ ತವಬಿರುದುಗಳರಿದು ಪ ಪುರನಾಶಗೈದು ನೀ ಪುರಸತಿಯರ್ವ್ರತ ಕೆಡಿಸಿ ಪುರದೊಳಗೆ ತೋರಿದೆಲೋ ಪರಿಪರಿಯ ಲೀಲೆ ಕರುಣಿಸದ್ಯಸಮಸುಖ ಪರಮ ದಯಾನಿಧಿಯೆ 1 ಸತಿ ಅಹಲ್ಯಾದೇವಿಗೆ ಪತಿಯಿತ್ತ ಶಾಪವನು ಅತಿಹಿತದಿ ಪರಿಹರಿಸಿ ಗತಿಯಿತ್ತಿ ದೇವ ಕ್ಷಿತಿಜಾತೆಪತಿ ನಿನ್ನ ಪತಿತಪಾವನಪಾದ ನುತಿಪ ಭಕ್ತರಿಗೆ ಜವಮೃತ್ಯುಭಯತರಿವಿ 2 ಮೃಡಸಖ ಶ್ರೀರಾಮ ದೃಢದಿ ಭಜಿಪರ ಬೆಂ ಬಿಡದಿರ್ದು ಕಾಯ್ವಂಥ ಕಡುದಯದ ದೇವ ದೃಢದಿಂದ, ನಂಬಿದೆ ಒಡಲಾಸೆ ಪೂರೈಸು ಜಡಜಾಕ್ಷ ಕಡುದಯದಿ ಪಿಡಿಯೆನ್ನ ಕೈಯ 3
--------------
ರಾಮದಾಸರು
ಪಾದ ಎಂಥ ಸುಂದರ ಪಾದಎಂಥೆಂಥವರಿಗದರ ಅಂತ ತಿಳಿಯದಂಥಾ ಅ.ಪಸರ್ವದಾ ಸಿರಿದೇ'ಯು ತೊಡೆಯಮೇಲೆಇಟ್ಟು ಮೆತ್ತಗೆ ಒತ್ತುತಾ ದಿಟ್ಟಿಸಿ ನೋಡುತಾದ್ಟೃತಾಕೀತೆಂದು ಗಟ್ಟಿ ಹಣೆಯ ಹಚ್ಚಿಬಚ್ಚಿಟ್ಟುಕೊಂಡಂಥಾ 1ಹುಡಗರ ಕೂಡಿಕೊಂಡು ಗಡಿಗೆಯ ಒಡೆದುಕುಡಿದು ಕೆನೆಪಾಲ್ ಮೊಸರು 'ಡಿತುಂಬ ಬೆಣ್ಣೆಯ'ಡಕೊಂಡು ಓಡುತ 'ಡಿಯಬಂದರೆ ದೊಡ್ಡಗಿಡವೇರಿ ಅಡಗು' 2ಚಲುವ ಗಂಗೆಯ ಪಡೆದ ಪಾವನಪಾದಶಿಲೆಯು ಸತಿಯ ಮಾಡಿತು ಪ್ರಲಯಕಾಲದ ಆಲ-ದೆಲೆ ಮೇಲೆ ಮಲಗುತ ಬಲಪಾದಾಂಗುಟಚೀಪುವ ಭೂಪತಿ'ಠ್ಠಲ 3
--------------
ಭೂಪತಿ ವಿಠಲರು
ಪಾವನಪಾದವ ಭಜಿಸೆಲೊ ಮನುಜ ನೀ ಪ ದೇವರದೇವಾ ನಿನ್ನ ಸೇವೆಯೊಳಿರಿಸೆಂದು ಅ.ಪ ಶ್ರುತಿಪಥವನುಗೂಡಿ ಸುಖದು:ಖ ದೂರಮಾಡಿ ಮತಿಗೆ ಮಂಗಳವೂ ಸದ್ಗತಿಗೆ ಕಾರಣಮಾದ 1 ಧರೆಯೊಳು ರಾಜಿಪ ಗುರುವೆ ಗಿರೀಶನೆಂದು ಧರಣಿ ತುಲಸೀರಾಮ ಗುರುವೆ ತಾನಾದ 2
--------------
ಚನ್ನಪಟ್ಟಣದ ಅಹೋಬಲದಾಸರು
ಮಧ್ವಾಂತರ್ಯಾಮಿ ಶ್ರೀ ಗುರು ಬಿಂಬ ಕಾಯೊ ಪ. ಹೃದ್ವನಜದಲಿ ನೆಲಸಿ ಆಜ್ಞಾನ ಹರಿಸಿ ಅ. ಸಾಟಿ ರಹಿತನೆ ನಿನ್ನ ಮುಖ ದರ್ಶನಾ ಹಾಟಕೋದರ ಮುಖರು ಅರಿಯದಂತವನನ್ನು ಕೋಟಲೆಯಭವ ಜನರು ಅರಿವದೆಂತಯ್ಯಾ 1 ತ್ರಿವಿಧ ಜೀವರ ತೆಗೆದು ಜನ್ಮದಲಿ ತೊಡಕಿಸೀ ಕರ್ಮ ಬಲೆ ಬೀಸಿ ಪವನನೈಯ್ಯನೆ ನಿನ್ನ ಮಾಯ ಮೋಡವ ಕವಿಸಿ ಭವಣಪಡಿಸಲು ಇನ್ನು ಬಿಡುಗಡೆಯದೆಂತೋ 2 ನೀನಾಗೆ ವಲಿದು ನಿನ್ನ ಭಕ್ತರನು ಕಾಯುತಿಯೊ ಮಾನಾಭಿಮಾನದೊಡೆಯನೆ ಆರ್ತಪಾಲ ಗಾನಲೋಲನೆ ನಿನ್ನ ಧ್ಯಾನ ಮೌನವನಿತ್ತು ಮಾನಸದಿ ನಿನ್ನ ತೋರೊ ದೀನ ರಕ್ಷಕನೇ3 ಅಂಗುಟದಿ ಗಂಗೆಯನು ಪೆತ್ತ ಪಾವನಪಾದ ಶೃಂಗಾರ ವಸನ ವಡ್ಯಾಣ್ಯನಡುವೂ ಅಂಗನೆಯು ವಕ್ಷದಲಿ ಹಾರಪದಕಗಳುಲಿಯೆ ಉಂಗುರದ ಬೆರಳು ಕಂಕಣ ಕಡಗ ಪಾಣೀ 4 ಕರ್ಣಕುಂಡಲ ಕಾಂತಿ ಮುಗುಳುನಗೆ ಕುಡಿನೋಟ ರನ್ನ ತಿಲಕದ ಫಣಿಯ ಮುಂಗುರುಳ ಸೊಬಗೊ ಸ್ವರ್ಣಕಾಂತಿಯ ತೇಜ ಕಡಗೋಲ ಕೈ ಸೊಬಗು ಚನ್ನಗೊಪಾಲಕೃಷ್ಣವಿಠಲ ಉಡುಪೀಶಾ 5
--------------
ಅಂಬಾಬಾಯಿ
ಸೇವಕಗೆ ದಯಮಾಡಲೊ ಹರಿ ದೇವ ನಿಮ್ಮ ಪಾವನಪಾದ ಭಾವದಿಂ ನಮಿಸಿ ಪಾವನನಾಗ್ವೆ ಪ ಕಲ್ಲನು ನಲ್ಲೆಯ ಮಾಡಿದ ಪಾದ ಕಳ್ಳನ ರಿಸಿಯೆಂದೆನಿಸಿದ ಪಾದ ನಲ್ಲೆಯ ಬೆಂಬಲ ನಿಂತಿರ್ದ ಪಾದ ಖುಲ್ಲ ಪೂತನಿಯ ಮೆಟ್ಟಿದ ಪಾದ1 ಮಂಕು ಕಾಳಿಂಗನ ತುಳಿದ ಪಾದ ಶಂಖಾಸುರನ ಒದೆದ ಪಾದ ಜಿಂಕೆಯನು ಹಿಂಬಾಲಿಸಿದ ಪಾದ ಪಾದ 2 ಭೂಮಿ ಓರಡಿ ಮಾಡಿದ ಪಾದ ಭಾಮೆ ದೃಢದಿ ಪೂಜಿಸಿದ ಪಾದ ಪ್ರೇಮದಿಂ ಭಕುತರನುದ್ಧರಿಪ ಪಾದ ಸ್ವಾಮಿ ಶ್ರೀರಾಮ ತವ ಕೋಮಲಪಾದ 3
--------------
ರಾಮದಾಸರು
ನಿನ್ನ ನಾಮದ ಸವಿ ಎಲ್ಲರರಿಯರಂತೆಬಲ್ಲವರೆ ಬಲ್ಲರಂತೆನಿನ್ನ ನಾಮದ ಸವಿ ಎಲ್ಲರರಿಯರಂತೆ ಪಸ್ಥಿರಪದವನುಭವಿ ಧ್ರುವನು ಬಲ್ಲನಂತೆಪರಮಕಂಟಕ ಗೆದ್ದವರಪ್ರಹ್ಲಾದ ನಾಮನೆಲೆ ತಿಳಿದನಂತೆಸ್ಥಿರಪಟ್ಟ ಪಡೆದಂಥ ವರವಿಭೀಷಣನುಸರಿಯಾಗಿ ನಾಮದ ಸವಿಯುಸುರಿದನಂತೆ 1ಅಂಬರೀಷನೆಂಬ ನೃಪನು ಬಲ್ಲನಂತೆಪರಮಪಾವನಪಾದಅಂಬುಜಾಕ್ಷಿಯಳಾದ ಅಹಲ್ಯೆ ಬಲ್ಲಳಂತೆಅಂಬುಜಾಕ್ಷನ ಪಾದಸಂಭ್ರಮದಸವಿಕುಂಭಿನಿಯೊಳುಕರಿತುಂಬಬಲ್ಲನಂತೆ2ಪರಮಜ್ಞಾನಿಯಾದ ವಿದುರ ಬಲ್ಲನಂತೆವರನಾಮದ ಸವಿತರುಣಿ ಪಾಂಚಾಲಿಯು ಅರಿತುಕೊಂಡಳಂತೆಪರಿಯಲಿಅವರಧರ್ಮಜನುನಿರುತ ನಾಮಾಮೃತ ಅರಿತುಸುರಿದನಂತೆ 3ತುಂಬುರಾದಿಮುನಿಸುರರು ಬಲ್ಲರಂತೆವಿಮಲನಾಮದ ಸವಿಅಂಬುಜಾಸನಕಂಡು ಪೊಗಳುತಿರುವನಂತೆಕುಂಭಿಜಾತೆಸಿರಿಅಂಬರೇಶನ ಸುತೆಎಂಬುವರು ನಿನ್ನ ಅಂದ ಬಲ್ಲರಂತೆ 4ಚರಣದೆಡೆಯಲ್ಲಿರ್ದ ಗರುಡ ಬಲ್ಲನಂತೆರಾಗರಹಿತನಾಗವರಹನುಮಂತನು ಪೂರ್ಣಬಲ್ಲನಂತೆಪರಿಯೇನಿರುವುದು ಅರಿತು ಭಜಿಪೆ ನಿನ್ನಕರುಣದೆನತು ತೋರು ರಾಮನಾಮದ ಸವಿ 5
--------------
ರಾಮದಾಸರು