ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನಗಿನ್ನ ನಾನಧಿಕ ಇಂದಿರೇಶಾ ಎನಗೆ ನಾಥನು ಉಂಟು ಅನಾಥನು ನೀನು ಪ ಕುಲಗೋತ್ರ ನಿನಗಿಲ್ಲ ಕುಲಗೋತ್ರ ಎನಗುಂಟು ಲಲಿತರೂಪನು ನಾನು ಅರೂಪ ನೀನೂ ಚೆಲುವ ಸುಗುಣಿಯು ನಾನು ಅಗುಣರೂಪನು ನೀನು ಬಲಹೀನನು ನೀನು ಸಬಲ ನಾನು ದೇವಾ 1 ನಾಮಧೇಯನು ನಾ ಅನಾಮಧೇಯನು ನೀನು ಕಾಮಕಾಮುಕ ನಾ ಅಕಾಮಿ ನೀನು ಪಾರನು ನಾ ಅಪಾರನು ನೀನಯ್ಯಾ ನೇಮಬದ್ಧನು ನಾ ಅನೇಮಿ ನೀನು 2 ಗತಿಯು ನೀನೆಗೈಯ್ಯ ಸದ್ಗತಿಯು ನಿನಗಾರಯ್ಯ ವ್ರತನೇಮ ಎನಗುಂಟು ನಿನಗಾವುವೋ ಸತತಮಾನಿಯು ನಾನು ಅಮಾನಿ ನೀನಯ್ಯ ವಿತತಕರ್ಮಿಯು ನಾನು ಕರ್ಮಹೀನನು ನೀನು 3 ಪತಿತಪಾತಕಿ ನಾನು ಪತಿತಪಾವನನು ನೀನು ರತಿಬದ್ಧನು ನಾ ವಿರತಿಯು ನೀನು ಶ್ರೀತಜನರಪಾಲ ಆಶ್ರಿತ ನಾನು ನಿನಗೈಯ್ಯ ಸತತಪಾಲಕ ನೀನು ಪಾಲ್ಯ ನಾನು 4 ದೂತರಾಧಮ ನಾನು ದೂತವತ್ಸಲ ನೀನು ಆತುರನು ನಾನು ನಿಜದಾತ ನೀನು ನೀತ ಗುರುಜಗನ್ನಾಥವಿಠಲರೇಯ ತಾತ ನೀ ಎನಗಯ್ಯ ನಿನಗಾವ ತಾತಾ 5
--------------
ಗುರುಜಗನ್ನಾಥದಾಸರು
ಕಾವವನೆ ಕರ್ಮಜಯ ಬಳಿಕಂ ಸಾವವನೆ ಉಣ್ಣುವರು ಜನರು ಭಾವವನೆ ಅರಿದಿರಿಸು ಜೀವರ ನಿನ್ನಂಘ್ರಿಯಲಿ ಪ ದಾಸವೃಂದವು ತೋಷದಿಂದಲೆ ಪೂಶರಯ್ಯನ ವಿಡಿದು ಘನ ಸಂ- ಸುಕೃತ ಫಲವಿಹುದೋ ಶ್ರೀಶನಲಿ ನಿಜದಾಸ ಭಕುತಿಯ ಮೀಸಲಿರಿಸೀ ಮನವ ಮೋಹದೆ ಆಶೆ ಗಳಿಸದೆ ಶ್ರೀಹರಿಯ ನಿಜವಾಸ ಕೈಯ್ಯುವರು 1 ಮೃಗಜಲಕೆ ನೀರೆಂದು ಭಾವಿಸಿ ಪೊಗಲೆಳಿಸುವೆರಳೆಗಳ ಪರಿಯಲಿ ಮೃಗನಯನೇರತಿ ಚೆಲ್ವಿಕೆಗೆ ಜಗವೆಳಸಿ ಬಳಲುವದು ಮಿಗಿಲಾಗಿದ ವಿಷಯಲನಲದಿ ಧಗಧಗಿಸಿ ಜನಗಳು ಪೋಪರಲ್ಲದೆ ಖಗಪತೀ ವಾಹನನ ನೆನೆಯರು ಜಗವ ಪಾವನನು 2 ನೀರಜಾಸನ ಪಿತನೆ ಅಕ್ಷಯ ಶ್ರೀ ರಮಾವಲ್ಲಭನೆ ತವ ಪರಿ ವಾರವಲ್ಲದೆ ಸತಿಸುತರು ಮೇಣ್ ದೇಹ ಬಾಂಧವರು ಸಾರಸುಮತಿಯನಿತ್ತೆಮಗೆ ಹರೆ ಸೇರಿಸೆಮ್ಮನು ನಿನ್ನ ಅಡಿಯಲಿ ಧೀರ ಶ್ರೀ ನರಸಿಂಹವಿಠ್ಠಲ ಪಾರಗಾಣಿಪುದು 3
--------------
ನರಸಿಂಹವಿಠಲರು
ನರಿತಿಹರಾರಿಹರು || ಪರತರಪಾವನನು ಪ ಭಗವದ್ರೂಪನು| ತ್ರಿಗುಣಾತ್ಮಕನು| ಜಗದಾಧಾರಕನು || ಜಗನ್ನಿವಾಸನು| ಜಗದಾನಂದನು| ಜಗದೀಶನು ನೀನು 1 ಜಗನಿಯಾಮಕ | ಜಗದುದ್ಧಾರಕ | ತ್ರಿಜಗವಿರಾಜಿತನು|| ಅಗಣಿತಮಹಿಮನು| ನಿಗಮಗೋಚರ | ತ್ರಿಜಗದ್ವಂದಿತನು2 ಭಕ್ತಾನಂದನು| ಭಕ್ತಾಧೀನನು| ಭಕ್ತಪರಾಯಣನು 3 ಶರಣಾಗತಪರಿ | ಪಾಲಕ | ನೀನು| ಕರುಣಾಸಾಗರನು|| ಪರಬ್ರಹ್ಮನು | ಪರಂಜ್ಯೋತಿಯು | ಪರಮಾತ್ಮನು ನೀನು4 ನಿನ್ನಯ ನಾಮೋ| ಚ್ಚರಿಸಿದ ಪಾಮರ | ಪಾವನನಾಗುವನು|| ನಾಮಾಮೃತವನು | ಸೇವಿಸೆ ಬ್ರಹ್ಮಾ| ನಂದವ ಪೊಂದುವನು5
--------------
ವೆಂಕಟ್‍ರಾವ್
ನಾರಾಯಣನ ನೆನೆ ವರ್ಣಿಸು ಮನ್ನಿಸುಆರಾಧನೆಗಳ ಮಾಡುತ ಪಾಡುತನೀರಾಜನದಿಂದಲರ್ಚಿಸಿ ಮೆಚ್ಚಿಸಿ ವೇದಪಾರಾಯಣಪ್ರಿಯನÀ ಪ. ಅವನ ಶ್ರವಣ ಮನನ ನಿಧಿಧ್ಯಾಸನಶ್ರೀವಿಷ್ಣುವಿನ ಭಕ್ತಿಮಹಾಪ್ರಸಾದಂಗಳುಕೈವಲ್ಯ ಪದಕಿಕ್ಕಿದ ನಿಚ್ಚಣಿಕೆ ಎಂದು ಭಾವಜ್ಞರು ಪೇಳ್ವರೊಜೀವನ ಜವನಬಾಧೆಯ ತಪ್ಪಿಸಿಪಾವನ ವೈಕುಂಠಪುರದೊಳಗೆಂದೆಂದುಆವಾಸವನು ಮಾಡಿ ಸುಖಿಸಬೇಕಾದರೆ ಸೇವಿಸು ವೈಷ್ಣವರ 1 ಲೋಕದಿ ವರಂ ವರಯ ಭದ್ರಂತೆಋತೆ ಕೈವಲ್ಯಮಾತ್ಮನಃಏಕಮೇವೇಶ್ವÀರಸ್ತ ಸಾದ್ಭಗವಾನ್ ವಿಷ್ಣುರವ್ಯಯ ಎಂಬಾಈ ಕಲಿಯುಗದಲಿ ಬೇಕಾದ ಪುರಾಣಾದಿವಾಕುವಿವೇಕವ ಮನದಿ ವಿಚಾರಿಸಿಸ್ವೀಕರಿಸು ವೈಷ್ಣವ ಮತವ ಜೀವ ನಿರಾಕರಿಸನ್ಯಮತವ 2 ದ್ವಾರಾವತಿಯ ಗೋಪಿಚಂದನದಿಂದಶ್ರೀರÀಮಣನ ವರ ನಾಮವ ನೆನೆ-ದೆರಡಾರೂಧ್ರ್ವ ಪುಂಡ್ರಗಳ ಧರಿಸೆಂದೆಂದು ವೀರವೈಷ್ಣವಗುರುವಸೇರಿ ಸಂತಪ್ತ ಸುದರುಶನ ಶಂಖಧಾರಣವನು ಭುಜಯುಗದಲಿ ಮಾಡಿಮುರಾರಿಯ ಮಂತ್ರಗಳವರಿಂದ ಕೇಳುತ ಓರಂತೆ ಜಪಿಸುತ್ತಿರು 3 ಹರಿ ನಿರ್ಮಾಲ್ಯವ ಶಿರದಿ ಧರಿಸುತಿರುಹರಿ ನೈವೇದ್ಯವನೆ ಭುಂಜಿಸುತಿರುಇರುಳು ಹಗಲು ಹರಿಸ್ಮರಣೆಯ ಬಿಡದಿರು ದುರುಳರ ಕೂಡದಿರೊಹರಿಪದ ತೀರ್ಥದ ನೇಮವಬಿಡದಿರುಹರಿಪರದೇವತೆ ಎಂದರುಪುತಲಿರುಗುರುಮುಖದಿಂದ ಸಚ್ಛಾಸ್ತ್ರ ಪುರಾಣವ ನಿರುತದಿ ಕೇಳು 4 ತುಷ್ಟನಹನು ಎಳ್ಳಷ್ಟು ಮುಂದಿಟ್ಟರೆಅಷ್ಟಿಷ್ಟೆನ್ನದೆ ಸಕಲೇಷ್ಟಂಗಳಕೊಟ್ಟುಕಾಯ್ವನು ಶಕ್ರನಿಗೆ ತ್ರಿವಿಷ್ಟಪಪಟ್ಟವ ಕಟ್ಟಿದವದುಷ್ಟರನೊಲ್ಲ ವಿಶಿಷ್ಟರಿಗೊಲಿವ ಅ-ನಿಷ್ಟವ ತರಿದೊಟ್ಟುವ ಜಗಜಟ್ಟಿ ಅರಿಷ್ಟಮುಷ್ಟಿಕಾದ್ಯರÀ ಹುಡಿಗುಟ್ಟಿದ ವಿಠಲ ಬಹು ದಿಟ್ಟ 5 ಕಂದ ಬಾಯೆಂದರೆ ನಂದನಿಗೊಲಿದಿಹಕುಂದುಕೊರತೆ ಬಂದರೆ ನೊಂದುಕೊಳನುಇಂದಿರೆಯರಸ ಮುಕುಂದ ಮುಕುತಿಯ ನಂದನವನೀವ ದೇವಸಂದೇಹವಿಲ್ಲದೆ ಒಂದೆಮನದಿ ಸ-ನಂದನಾದಿಗಳು ಭಜಿಸಲು ಒಲಿವ ಉ-ಪೇಂದ್ರನ ಶುಭಗುಣಸಾಂದ್ರನ ಯದುಕುಲಚಂದ್ರನ ವಂದಿಸಿರೊ 6 ಓಡುವ ಅಡಗುವ ದೇವರೆ ಬಲ್ಲರುಬಾಡುವ ಬೇಡುವ ಮುನಿಗಳೆ ಬಲ್ಲರುನೋಡುವ ಕೂಡುವ ಮುಕುತರೆ ಬಲ್ಲರೊಡನಾಡುವ ರಮೆ ಬಲ್ಲಳುಊಡುವ ಪಾಡುವ ಯಶೋದೆ ಬಲ್ಲಳುಕಾಡುವ ಖಳರ ಮರ್ದಿಸಿ ಹುಡಿಗುಟ್ಟಿದನಾಡೊಳು ಕೇಡುಗಳೆವ [ಕೃಷ್ಣನಿಗೀಡೆಂದಾಡದಿರು] 7 ಆವನ ಪಕ್ಷವದಕೆದುರಿಲ್ಲಆವನ ಕುಕ್ಷಿಯೊಳಕ್ಕು ಜಗತ್ರಯಆವನು ಶಿಕ್ಷಿಪ ರಕ್ಷಿಪನು ಮತ್ತಾವನು ಪಾವನನುಆವನ ಶಿಕ್ಷೆಯ ಮಿಕ್ಕವರಿಲ್ಲ ಕೇ-ಳಾವನುಪೇಕ್ಷೆ ಕುಲಕ್ಷಯವೆನಿಪುದುಆವನುರುಕ್ರಮ ವಿಕ್ರಮನೆನಿಸಿದ ದೇವನಿಗಾವನೆಣೆ 8 ಪತಿ ಆವನ ಚರಣಸೇವಕನಾದಸುರರೊಳಗೀ ಹಯವದನಗಿನ್ನಾರನು ಸರಿಯೆಂದುಸುರುವೆನೊ 9
--------------
ವಾದಿರಾಜ
ಮರವೆ ಮುಸುಕಿತುಋಣದ ಬಾಧೆ ಹತ್ತಿತು ರೋಗವಡಸಿತುಜನರ ಪ್ರೀತಿ ತೊಲಗಿತು ಜಾಣ್ಮೆ ತಾನು ಸಡಿಲಿತು... ದಿಯ ವಾಸ'ಲ್ಲವಾಯ್ತು ... ಮರೆ ದೂರವಾಯ್ತು 1ನಿನ್ನ ಸನ್ನಿಧಿಯ 'ುೀರಿ ಪುಣ್ಯವ ಬೇರೆ ಬಯಸಿದೆನೆನಿನ್ನ ಮೂರ್ತಿಯನುಳಿದು ಅನ್ಯರ ನೆನೆದೆರಗಿದೆನೆನಿನ್ನ ಸೇವೆಗಧಿಕವೆಂದನ್ಯದೇವರ ಸೇ'ಸಿಕೊಂಡೆನೆ 2ಸನ್ನಿಕರ್ಷವನಾದರತೆಯನ್ನು ಕೊಡುವದೆದೆಂದೆನೆ ಅರಿವೆನ್ನೊಳುದಿಸಿತೆ ದೂರನಾದೆನೇತಕೆಇನ್ನುದಾಸೀನಗೈದರೆ ಎನ್ನಿಂದಾಹುದೇನು ಬೇರೆಮನ್ನಿಸಿ ನೀನೊಂದಿರೆ ಸೈರಿಸಲಾರೆಂ 3ಪತಿತಪಾವನನು ನೀನು ಪರಮಕರುಣಾನಿಧಿ ನೀನು ಪತಿಕರಿಸಿ ಬಿಡುವದೇ ಪಾಪಿಯೆ ನಾನು ಸತತ ನಿನ್ನ ನೆನೆಯುವೆನು ಸೇವೆಗೆ ಕಾತರಿಸಿಹೆನು ಅತಿಶಯವ ತೋರಿಸು ಆ ನನ್ನನಿಧಿಯೆ ನೋಡಿನ್ನು 4ಕರೆದು ಮೂಢರಜ್ಞತೆಯ ಪರಿದು 'ಜ್ಞಾನ ಸುಧೆಯಎರೆದು ಕಾಯೆ ಚಿಕ್ಕನಾಗಪುರದೊಳು ನೀನೆಗುರುವರ್ಯ ವಾಸುದೇವಾರ್ಯ ಚರಣಕೆರಗಿದೆನಯ್ಯಾನಿರತ ಮಂಗಳಾರತಿಯಸಿರಿಯ ತೋರಿಸೊ ದಮ್ಮಯ್ಯಾ 5
--------------
ವೆಂಕಟದಾಸರು
ಶ್ರೀಹರಿ ಸ್ತವನ ಅರ್ಜುನಗಾನಂದಾ ಮಾಡಿದ ಗೋವಿಂದಾ ಪ ರಥದಿ ಮಂಡಿಸಿ ಚತುರತನದಲಿಂದಾ ಚತುರ ಹಸ್ತದಿಂ ವಾಜಿಯಂ ಪಿಡಿದು ರಥಕನ ಬೆನ್ಹಿಂದಿಟ್ಟುಕೊಂಡು ಸಾ- ರಥಿಯು ತಾನೆ ಅಶ್ವವ ನಡಿಸುತಲಿ ರತಿಪತಿಪಿತನತಿಚಮತ್ಕಾರದಿಂ ಪೃಥಿವಿಯ ಮೇಲೆ ನರನಟನ ತೋರುತಲಿ ಪತಿತ ಪಾವನನು ಫಲ್ಗುಣ ಸಖನು ನುತಿಸಿದವರ ನೆರೆ ಪಾಲಿಸುತಿಹನು ಅತುಳ ಶಂಖದಿಂ ಭೌಂ ಭೌಂ ಎನಿಸುತ ರಥದ ಗಾಲಿ ಛಿಟ್ ಛಿಟ್ ಛಿಟಿಲೆನುತ ಕುದುರೆ ಖುರಪುಟಧ್ವನಿ ಫಳ್ ಫಳ್ ಫಳ್ಳೆ ಗೋವಿಂದನು ರಭಸದಿ ಭಕ್ತನೂಳಿಗಾ1 ಮಂದಜಭವ ಮುಖ್ಯಾಮರ ವೃಂದವು ನಂದತನುಜನಾರಂದಲೀಲೆಯಂ ಛಂದದಿ ನೋಡುತ ನಭೋಮಾರ್ಗದೊಳ್ ಬಂದು ಕುಸುಮಗಳ ವೃಷ್ಟಿಯ ಸುರಿದು ಸಿಂಧುಶಯನ ನಾಮಾಮೃತ ಸುರಿದು ಬೃಂದಾರಕ ನಿಕರವು ಕೈಯೆತ್ತಿ ಇಂದುಕಲಾಧಿಪ ಪ್ರಾರ್ಥನೆ ಸೈ ಸೈ ಎಂದು ದೇವದುಂದುಭಿ ಧೋಂ ಧೋಂ ಕಂಸಾ- ಳದರವ ಖಿಣಿಖಿಣಿ ಖಿಣಿ ಭೇರಿ ನಾದ ಖಡ್ ಖಡ್ ಖಡಲ್ ಭಾರಿ ತಾ- ಹತಜಂತರಿಧೂಂ ನರ್ತನಗೈವುತ ತೆರಳುತ 2 ಮಂಗಳ ರವದಿಂ ಜಯಜಯ ಎನಿಸುತ ಮಂಗಳಾಂಗಿ ರುಕ್ಮಿಣಿ ವಲ್ಲಭನು ರಂಗಿನಿಂದ ರಥವಿಳಿದು ಗೆಳೆಯನ ಮುಂಗೈಯನೆ ಪಿಡಿದು ಅಂಗಜನಯ್ಯ ರಂಗುಮಣಿಯ ಉಂಗುರದಿ ಒಪ್ಪುತಲಿ ಭಂಗಾರಕೆ ಮಿಗಿಲೆನಿಪ ದುಕೂಲದಿ ಶೃಂಗರದಲ್ಲಿ ಉತ್ತುಂಗ ಪರಾಕ್ರಮ ಅಂಗಳದೋಳ್ ನಲಿದಾಡುತ ರಂಗನು ತಿಂಗಳ ಕುಲದೀಪನ್ನ ನೋಡುತಲಿ ರಂಗ ಕದರುಂಡಲಗೀಶನ ಒಡೆಯನು ತಾ 3
--------------
ಕದರುಂಡಲಗೀಶರು
ಹರಿ ನಿನ್ನ ನಾಮದ | ಸ್ಮರಣೆಯ ನಾನು || ನಿರುತವು ಮಾಡುವೆ | ಪೊರೆಯೆನ್ನ ನೀನು ಪ ಶರಣರ ಪೊರೆವ| ಪರಮ ಪಾವನನು | ಕರುಣಾಳು ನಿನ್ನಯ | ಶರಣನಾಗಿಹೆನುಅ.ಪ ಕರಿರಾಜಗಿತ್ತೆ ನೀ | ವರ ಮುಕ್ತಿಪಥವ || ತರಳನಿಗೊಲಿದಿತ್ತೆ | ವರಧ್ರುವಪದವ 1 ಹರಿಯನು ತೋರೆಂದು | ಗರ್ಜಿಸಿ ಜರೆದ|| ದುರುಳನ ಬಗಿಯುತ್ತ| ತರಳನಿಗೊಲಿದ 2 ಕಾಮಿತಾರ್ಥವನಿತ್ತೆ| ಪ್ರೇಮದೊಳನಿಶ 3 ಮರಣದ ಸಮಯದಿ | ಕರೆದಜಾಮಿಳಗೆ|| ಪರಮಪದವನಿತ್ತು | ಕರುಣದಿ ಪೊರೆದ 4 ಅರಿತಾದರು ಮನ| ಕ್ಕರಿಯದೆ ಗೈದ || ದುರಿತಂಗಳಿರೆ ಪರಿ| ಹರಿಸೆಂದು ಸತತ 5 ನೀನಲ್ಲದೆನ್ನನು | ಪೊರೆಯುವರಿಲ್ಲ || ನಿನ್ನ ಸೇವೆಯ ಮಾಡ | ಲರಿಯೆ ನಾನಲ್ಲ6 ಇಹಪರಸುಖವಿತ್ತು | ಮುಕ್ತಿಯನೀವ || ಮಹಿಮನೆಂದರಿತಿಹೆ | ಭಕ್ತಸಂಜೀವ 7
--------------
ವೆಂಕಟ್‍ರಾವ್
ಕರ್ಮಬಂಧನ ಛೇದನ - ಶ್ರೀ - |ರಾಮನ ನಾಮವ ನೆನೆ ಮನವೆ ಪ.ಅರ್ಚಿಸಲರಿಯೆನು ಪೂಜಿಸಲರಿಯೆನು |ಮೆಚ್ಚಿಸಲರಿಯೆನೆಂದೆನ ಬೇಡ ||ಅಚ್ಯುತಾನಂತ ಗೋವಿಂದನ ನಾಮವ |ಇಚ್ಛೆ ಬಂದಾಗಲೆ ನೆನೆ ಮನವೆ 1ಸ್ನಾನವನರಿಯೆನು ಧ್ಯಾನವನರಿಯೆನು |ಏನನು ಅರಿಯೆನೆಂದೆನಬೇಡ ||ಜಾನಕಿರಮಣನ ದಶರಥನಂದನ |ದಾನವನಾಶನ ನೆನೆ ಮನವೆ 2ಮಂತ್ರವನರಿಯೆನು ತಂತ್ರವನರಿಯೆನು |ಎಂತು ಅರಿಯೆನೆಂದೆನಬೇಡ ||ಸಂತತಾನಂತ ಗೋವಿಂದನ ನಾಮವ |ಅಂತರಂಗದೊಳು ನೆನೆ ಮನವೆ 3ಜಪವ ನಾನರಿಯೆನು ತಪವ ನಾನರಿಯೆನು |ಉಪವಾಸವರಿಯೆನೆಂದೆನಬೇಡ ||ಅಪರಿಮಿತ ಗುಣಗಳ ಅನಂತಮಹಿಮನ |ಕೃಪೆಯ ಸಮುದ್ರನ ನೆನೆ ಮನವೆ 4ಕಲಿಯುಗದೊಳು ಹರಿನಾಮವ ನೆನೆದರೆ |ಕುಲಕೋಟಿಗಳುದ್ಧರಿಸುವುವು ||ಸುಲಲಿತ ಭಕ್ತಿಗೆ ಸುಲಭನೆಂದೆನಿಸುವ |ಜಲರುಹನಾಭನ ನೆನೆ ಮನವೆ 5ತಾಪತ್ರಯಗಳ ತಪ್ಪಿಸಿ ಸುಜನರ |ಪಾಪಗಳೆಲ್ಲವ ಪರಿಹರಿಸುವುದು ||ಶ್ರೀಪತಿ ಸದಮಲಧ್ಯಾನಗೋಚರನ |ಗೋಪೀನಾಥನ ನೆನೆ ಮನವೆ 6ವರದ ವೀರನಾರಾಯಣ ಸ್ವಾಮಿಯು |ಪರಮಪಾವನನು ಹಿತನಾಗಿ ||ಹರಿಯದ ಇಹಪರ ಕೊಡುವ ಸುಖಂಗಳ |ಪುರಂದರವಿಠಲನ ನೆನೆ ಮನವೆ 7
--------------
ಪುರಂದರದಾಸರು