ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಮವತು ಶ್ರೀ ರಮಾಪತೇ | ರಘುಪತೇ ಸೀತಾಪತೇ ಪ ಭೀಮಪರಾಕ್ರಮ ದನುಜಾರಾತೇ | ಕಾಮಿತಾರ್ಥದಾಯಕ ನಮೋಸ್ತುತೇ ಅ.ಪ ಜನಕ ನೃಪಾತ್ಮಜಾಯುತ ಸುರ ಭೂಜಾ | ಇನಶಶಿತೇಜ ನಯನಸರೋಜ | ವಿನಮಿತ ಶುಂಭ ವಿನತಸುತಾಧ್ವಜ | ಮುನಿಪ ಸಮಾಜ ರೂಪ ಮನೋಜ ||1 ವಾನರಪತಿ ಸಂಸೇವಿತ ಚರಣಾ | ದಾನವವೈರಿ ವಿಭೀಷಣ ಕರುಣಾ | ದೀನಜನಾಶ್ರಯ ಪಾವನಚರಣಾ ಶ್ರೀನುತ ಮಾಂಗಿರಿ ವೆಂಕಟರಮಣಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಂದೇ ವಂದೇ ವಂದೇ ನಾರಾಯಣ ಗುರುದೇವಾ ವಂದೇ ವಂದೇ ವಂದೇ ಪರಿಪೂರ್ಣ ಬ್ರಹ್ಮರೂಪ ಪರಮಾತ್ಮ ಜ್ಞಾನದೀಪ ತಾಪ ಪರಿಹರಿಪ ಜ್ಞಾನಿ ಭೂಪ ಶಿರವಿಡುವೆ ಚರಣಯುಗದೀ ಗುರುದೇವ ಎನ್ನಮನದಿ ಪರತತ್ವ ತಿಳಿವ ತೆರದಿ ಕರುಣಿಪುದು ನೀನೇ ಮುದದಿ ಜಾಗರಣ ಕನಸು ನಿದ್ರಾ ಆಗುಗಳನರಿಯುತಿರ್ದಾ ಈ ಗತಿಗಳೆಲ್ಲ ಮೀರ್ದಾ ಆ ಘನವೆ ನಿರ್ವಿಕಲ್ಪ ಅದೇ ನೀನು ಎಂದು ಪೇಳ್ದೀ ಇದು ಎಲ್ಲ ಮಿಥ್ಯವೆಂದಿ ಇದೊ ಮರಣಭಯವ ಕಳೆದಿ ನಿಜಬೋಧವಚನ ಬಲದಿ ಮರೆದಿರ್ದ ತತ್ವವಿದನು ಪರತತ್ವ ಶೋಧಕರನು ಬೊಧಿಸುತ ನೀ ನಿಜವನು ತೋರಿಸುತ ಕಾಯುವವನು ವರಜ್ಞಾನ ಜಗದಲೆಲ್ಲಾ ಮರೆದಾಡಿ ತಮವನೆಲ್ಲಾ ಪರಿಹರಿಸಲೆಂದು ನೀನೇ ಗುರುಶಂಕರನಿಗೆ ಪೇಳ್ದೀ ವಂದೇ ಶಂಕರಾ ಗುರುದೇವಾ ವಂದೇ ಶಂಕರ ಗುರುದೇವಾ ಪಾವನಚರಣಾ ತೋರೈ ಕರುಣಾ ಜ್ಞಾನಾಂಬುಧಿ ಪೂರ್ಣಾ ವಂದೇ
--------------
ಶಂಕರಭಟ್ಟ ಅಗ್ನಿಹೋತ್ರಿ
ವೆಂಕಟಾಚಲನಿಲಯಾ ಎನ್ನ ಒಡೆಯ ಪ ವೆಂಕಟಾಚಲನಿಲಯಾ ವಿಧಾತೃಸಂತರೊಡೆಯಾ | ಪಂಕಜಮುಖಿ ರಮಣ ಪಾವನಚರಣಾಅ.ಪ. ಉದಯವಾಗದ ಮುನ್ನ ಉದರ ಪೋಷಣೆ ಚಿಂತೆ | ಅದರ ಮೇಲೆ ಧಾನ್ಯ ಧನದ ಚಿಂತೆ || ಮದನ ಯೌವನದ ಚಿಂತೆ ಮತ್ತೆ ಸತ್ವದ ಚಿಂತೆ | ಹೃದಯದಲಿ ನಿಮ್ಮ ಚಿಂತೆಯನು ಮಾಡದಲೆ ಕೆಟ್ಟೆ1 ಮೇದಿನಿ ಆಳುವ ಆಶೆ | ನಂದನರ ಆಶೆ ನಾನಾ ಆಶೆಯು || ಬಂಧುಬಳಗದ ಆಶೆ ಭಾಗ್ಯವುಳ್ಳವನಾಶೆ | ಒಂದು ದಿನ ನಿಮ್ಮಾಶೆಯನು ಮಾಡದಲೆ ಕೆಟ್ಟಿ 2 ಎದುರುಯಿಲ್ಲವೆಂಬೊ ಗರ್ವ ಎದೆಯ ಬಿಗುವಿನ ಗರ್ವ | ವದನನಿಷ್ಠುರ ಗರ್ವ ವಿದ್ಯ ಗರ್ವವು || ಉದಧಿಶಯನ ನಮ್ಮ ವಿಜಯವಿಠ್ಠಲರೇಯಾ | ಮದ ಗರ್ವದಿಂದ ನಿನ್ನ ನೆನಹು ಮಾಡದೆ ಕೆಟ್ಟೆ 3
--------------
ವಿಜಯದಾಸ