ಒಟ್ಟು 8 ಕಡೆಗಳಲ್ಲಿ , 2 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವಧೂತಾ ನೀ ಅವಗುಣಗಳ ನಿರ್ಧೂತಾ ದೇವನಹುದೋ ಶ್ರೀನಾಥಾ ಧ್ರುವ ಭಾವಿಸಿ ನೋಡಲು ಭಾವಕತೀತ ಭವಹರ ಗುರು ಸಾಕ್ಷಾತ ಪಾವನಗೈಸುವದಯ ಪ್ರಖ್ಯಾತ ದೇವಾದಿಗಳೊಂದಿತ 1 ಝಗಝಗಿಸುವ ಜಗಜ್ಯೋತಿ ಸ್ವರೂಪ ಅಗಣಿಗತುಣೋಪಮೋಪ ತ್ರಿಗುಣರಹಿತ ಚಿದ್ಛನ ಚಿದ್ರೂಪ ಯೋಗಿಜನರ ಪಾಲಿಪ 2 ಇಹಪರದಾತ ಮಹಿಪತಿ ಗುರುನಾಥ ಬಾಹ್ಯಾಂತ್ರ ಸದೋದಿತ ಮಹಾಮಹಿನು ನೀ ಆನಂದಭರಿತ ಸಹಕಾರ ನೀ ಸತತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ಇದೇ ಘನಸುಖಾ ಸಾಧಿಸಿ ಗುರುಮುಖಾ ಧ್ರುವ ಅಂಜದಾಲಿಸಿ ಕೇಳಿ ಪ್ರಾಂಜಳಾಗ್ಯದೆ ಝಂ ಝಂ ಝಂ ಝಂ ಝಂ ಝಂ ಝೆಂಕರಿಸುತಲ್ಯದೆ 1 ಒಂದೊಂದು ಪರಿಲ್ಯಾನಂದವುದೋರುತಲ್ಯದೆ ಧೀಂ ಧೀಂ ಧೀಂ ಧೀಂ ಧೀಂ ಧೀಂ ಧೀಂಮಿಡುಗುತದೆ 2 ಮನೋಹರಾಗುವ ಅನುಭವದೋರುತದೆ ದೀನ ಮಹಿಪತಿಗೆ ಪಾವನಗೈಸುತದೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಂದೆಂದು ಎನಗೆ ನೀನೆ ಅಖಿಳದೊಳು ಎಂದೆಂದು ಎನಗೆ ನೀನೆ ಅಂದಿಗಿಂದಿಗೆ ಎನ್ನ ತಂದೆ ತಾಯಿಯು ನೀನೆ ಬಂಧು ಬಳಗವು ನೀಯೆನಗೆ ಹರಿಯೆ ಧ್ರುವ ಸುಖಸೌಖ್ಯದಲಿ ಸದಾನಂದ ಘನ ಬೀರುತಿಹ್ಯ ಭಗುತ ಜನರಿಗಹುದು ನೀ ಪ್ರೀಯ ಸಕಲದೇವಾದಿಗಳ ಕೈಯಲೊಂದಿಸಿಕೊಂಬ ಮಕುಟ ಮಣಿಯಹುದೊ ನೀ ಎನ್ನಯ್ಯ ಲೋಕಾಧಿಲೋಕಪಾಲನೆಂದು ಶ್ರುತಿಸ್ಮøತಿ ಅಖಿಳ ಭುವನದಲೆನ್ನ ಸಾಕಿ ಸಲಹುವ ಸ್ವಾಮಿ 1 ಏಕೋದೇವನೆ ನೀನದ್ವಿತೀಯ ಶ್ರೇಯಧೇನುವಾಗಿ ಸಾರಸಗರವುತಿಹ್ಯ ಸುಖ ದಾಯಕಹುದಯ್ಯ ನೀ ಸಾಕ್ಷಾತ ದಯಕರುಣದಿಂದಭಯಕರ ನಿತ್ಯಸಂಗಪೂರ್ಣ ತೋಯಜಾಕ್ಷ ನೀ ಪೂರ್ಣಪರಮ ಭಕ್ತರ ಪ್ರಾಣ ನಾಯಕನೆ ನೀನೆ ಪ್ರಖ್ಯಾತ ಕ್ಷಯರಹಿತನೆಂದು ಜಯವೆನಿಸಿಕೊಳುತಿಹ್ಯ ದಯಭರಿತನಹುದುಯ್ಯ ಸದೋದಿತ 2 ನೀನೆ ಗತಿಯೆಂದು ಧರೆಯೊಳು ಕೊಂಡಾಡುವ ನೆನಹುತಿಹ್ಯ ನÀಹುದುಯ್ಯ ಬಾಲಕನು ನಾ ನಿನ್ನ ಫನದೊಲವಿನಿಂದ ಪಾವನಗೈಸುತಲಿಹ್ಯ ದೀನ ದಯಾಳು ನೀನೆ ಎನ್ನ ಅನುದಿನದಲಾಧಾರಿ ಮುನಿಜನರ ಸಹಕಾರಿ ನೀನಹುದಯ್ಯ ಜಗಜ್ಜೀವನ ಮನೋಹರನ ಮಾಡುತಿಹ್ಯ ದಾಸ ಮಹಿಪತಿಸ್ವಾಮಿಭಾನುಕೋಟಿಯು ನೀನು ಪ್ರಸನ್ನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯವೆನ್ನಿ ಸ್ವಾಮಿ ಶ್ರೀಹರಿಗೆ ದಯೆಯುಳ್ಳ ಮಹಿಮ ಶ್ರೀಮುಕುಂದ ಮುರಾರಿಗೆ ಧ್ರುವ ಭಾವಿಸಿ ನಿಮ್ಮೊಳಗೆ ದೇವಾಧಿ ಶ್ರೀದೇವಿಗೆ 1 ಅನುಭವಿಸುವ್ಹಾಂಗೆಂದೆಂದು ಮನೋಮಂದಿರಕೆ ತಂದು 2 ಕಾಣುವನ ಕಂಡು ನೋಡಿ ಕಾಣಿಸಿಕೊಂಬ್ಹಾಂಗೆ ಮಾಡಿ 3 ಪಾವನಗೈಸುವ ದೇವಗೆ ಕಾವ ಕರುಣನಿಧಿಗೆ 4 ಸಿರಿ ಸುಖಲೋಲಗೆ 5 ಅಂತರಾತ್ಮಲಿಹಗೆ ಸಂತತ ಸದೋದಿತಗೆ 6 ಭಾನುಕೋಟಿ ತೇಜಗೆ ದೀನಮಹಿಪತಿ ಸ್ವಾಮಿಗೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಪ್ಪು ಕ್ಷಮೆ ಮಾಡೊ ಕೃಪೆಯಿಂದ ನೋಡೊ ಧ್ರುವ ನೀನೆ ದಯಾನಿಧಿ ನಾನೆ ಅಪರಾಧಿ ಖೂನ ದೋರು ಹಾದಿ ಸ್ಥಾನ ನಿಜಗಾದಿ 1 ಅನಾಥನೆಂದು ನೋಡಿ ಸುನಾಥ ಎನ್ನ ಮಾಡಿ ಸ್ವಾನಂದ ಸುಖ ನೀಡಿ ಮನ್ನಾಥ ನಿಜಗೂಡಿ 2 ಹೆಳಲಾರೆ ಬಹಳ ಕೇಳೋ ನೀ ದಯಾಳ ತಾಳಿ ಎನ್ನ ತೋಳ ಬಾಳ ವಿಶ್ವಪಾಲ 3 ಸೇವೆ ಇದೆ ನಮ್ಮ ಭಾವಿಸುದು ನಿಮ್ಮ ಪಾವನಗೈಸು ವರ್ಮ ಸುವಿದ್ಯ ಪರಬ್ರಹ್ಮ 4 ಬಂದ ಮ್ಯಾಲೆ ಶರಣಕುಂದಬ್ಯಾಕೊ ಪೂರ್ಣ ಕಂದ ಮಹಿಪತಿ ಗುಣ ಚಂದಮಾಡೊ ಕರುಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾಸರಾಯ ಪುರಂದರದಾಸರಾಯ ಪ. ಘಾಸಿಗೊಳಿಸದೆ ಇತ್ತು ಕರುಣಿಸಿ ವಾಸುದೇವನ ಕೃಪೆಗೈಸಿರಿ ಅ.ಪ. ದಾಸಕೂಟಕೆ ಮೊದಲನೆ ಗುರು ದೊಷವರ್ಜಿತ ಭಕ್ತರೆನಿಸಿ ಆಶಪಾಶವೆ ತೊರೆದು ಹರಿಯ ದಾಸತನವನು ತೋಷದಲಿ ಕೊಂಡು ಕೇಶವನು ಸರ್ವೋತ್ತಮನು ಎನ್ನುತ ಶ್ರೀಶನ ಗುಣಗಳನೆ ಪೊಗಳುತ ಭೂಸುರರ ರಕ್ಷಿಸುತ ಭಕ್ತರ ಕ್ಲೇಶಗಳೆÉದಂಥ ಗುರುವರ 1 ವೀಣೆ ಕರದಲಿ ಗಾನಮಾಡುತ ಜಾಣತನದಲಿ ಕೃಷ್ಣನೊಲಿಸುತ ಆನಂದದಲಿ ನರ್ತಿಸುತ್ತ ಧ್ಯಾನದಲಿ ಶ್ರೀ ಹರಿಯ ನೋಡುತ ಆನನವ ತೂಗುತ್ತ ವೇದ ವಿ- ಧಾನದಲಿ ಪದಗಳನೆ ರಚಿಸುತ ಮೌನಿವ್ಯಾಸರ ಶಿಕ್ಷೆಯಿಂದಲಿ ದಾನವಾಂತಕ ಹರಿಯನೊಲಿಸಿದ 2 ಪಾಪಿಗಳ ಪಾವನಗೈಸುತ ಶ್ರೀ ಪತಿಯ ಅಂಕಿತವ ನೀಡುತ ಈ ಪರಿಯಲಿ ಮೆರೆದ ಮಹಿಮೆಯ ನಾ ಪೇಳಲಳವಲ್ಲವಿನ್ನು ನಾ ಪಿರಿಯರಿಂ ಕೇಳಿದುದರಿಂ ದೀಪರಿ ನುಡಿದಿರುವೆನಲ್ಲದೆ ಗೋಪಾಲಕೃಷ್ಣವಿಠ್ಠಲನ ರೂಪ ನೋಡುತ ಸುಖಿಸುವಂಥ 3
--------------
ಅಂಬಾಬಾಯಿ
ಭಜಿಸೊ ಮನವೆ ಪೂರ್ಣ ಅಜಸುರೊಂದಿತ ಚರಣ ಸುಜನ ಹೃದಯ ಪ್ರಾಣ ಗಜಭಯ ನಿವಾರಣ 1 ಹಿಡಿಯ ಬ್ಯಾಡನುಮಾನ ಜಡಿಯೊ ನಿಜಧ್ಯಾನ ಅಮೃತ ಪೂರ್ಣ 2 ಸಾಧಿಸಬೇಕೊಂದೇ ಮನ ಬುಧಜನರ ಜೀವನ ಸದಮಲಾನಂದ ಸದ್ಗತಿ ಸುಖಸಾಧನ 3 ಪಾವನಗೈಸುವದಾ ಭಾವಿಸೊ ಗುರುಪಾದ ಬೋಧ ಸೇವಿಸು ನಿಜ ಸುಸ್ವಾದ 4 ತ್ಯಜಿಸಿ ತನುಮನ ದ್ವಂದ್ವ ಭಜಿಸೊ ಭಾವಾರ್ಥದಿಂದ ಪೂಜಿಸೊ ಮಹಿಪತಿ ಆನಂದ ನಿಜಗುರು ಪಾದಾರವಿಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀ ಗುರುಕರುಣವು ಸೋಜಿಗವು ಕೌತುಕವು ಧ್ರುವ ಗುರುಹಸ್ತ ಪರುಷಸದೃಶ ನಿದರುಶÀದೋರುತಿಹ್ಯ ಅಗಣಿತ ತೇಜೋಮಯ ಪ್ರಕಾಶ ಇದು ಅನಿಮಿಷ ನೇತ್ರಲಿ ನೋಡುವದು ನೋಡುವದು ಘನ ಮಹಿಮೆಯೊಳು ಬೆರದಾಡುವದು ಬೆರದಾಡುವದು ತನ್ನೊಳು ತಾ ನಲಿದಾಡುವದು ನಲಿದಾಡುವದು ಅನುಭವ ಸುಖ ಸೂರ್ಯಾಡಿ ಸದ್ಗತಿ ಮುಕ್ತಿಯನೆ ಪಡೆವದು ಶ್ರೀಗುರುದಾಸರು 1 ಗುರುವುಪದೇಶ ಜ್ಞಾನಪ್ರಕಾಶ ಅತಿಸಂತೋಷ ಛೇದಿಸುವುದು ಭವಪಾಶ ಇದು ನಿದ್ರಸ್ಯ ಕರ್ನಲಿ ಕೇಳ್ವದು ನಿದ್ರಸ್ಯ ಕರ್ನಲಿ ಕೇಳ್ವದು ಲಯ ಲೀಲೆಯೊಳು ಆಲಿಸುವದು ಆಲಿಸುವದು ಪರಿಪರಿ ಶ್ರುತಿಗ್ಹೇಳೆನಿಸುವದು ಹೇಳೆನಿಸುವದು ಪತಿತಜೀವನ ಪಾವನಗೈಸುವದು ಸದ್ಗುರು ಮಹಿಮೆಯ ತಿಳಿಯದು ತಿಳಿಯದೀ ಶ್ರೀಗುರು ದಾಸರು 2 ಗುರು ನಿಜಬೋಧ ಬಲು ಅಗಾಧ ಪರಮ ಆಹ್ಲಾದ ತಿಳಿದವ ಜನ್ಮಕ ವಿರಹಿತವಾದ ಇದು ಅತಿಸೂಕ್ಷ್ಮಗತಿ ಭೇದಿಸುವದು ಭೇದಿಸುವದು ಗುರುಪಾದವೆಗತಿ ನಿಶ್ಚೈಸುವದು ನಿಶ್ಚೈಸುವದು ಸಮ್ಯಕಙÁ್ಞನವು ಸಾಧಿಸಿ ಆತ್ಮದಿ ಜೀವನ್ಮುಕ್ತನಾಗುವದು ಸದ್ಗುರು ಪಾದವು ಸಾಧಿಸಿ ಸಾಧಿಸಿ ಶ್ರೀಗುರುದಾಸರು 3 ಗುರುಕೃಪೆಜ್ಞಾನನ ಅಳಿವುದಙÁ್ಞನ ತಿಳಿವದು ಯಾತನ ಕಳೆವದು ಜನ್ಮ ಜರಾಮರಣ ಇದು ಪೂರ್ವ ಕಲ್ಪನೆಯು ಕಲ್ಪನೆಯು ಆತ್ಮಙÁ್ಞನದ ವರ್ತನೆಯು ವರ್ತನೆಯು ಸಾಯಸವಳಿದು ಯತ್ನವು ಪ್ರಯತ್ನವು ಶ್ರೀಗುರು ಭಕ್ತಿಯು ಮಾಡಿರಯ್ಯ ಮಾಡಿರಯ್ಯ ಸದ್ಗುರುದಾಸರು4 ಗುರುಙÁ್ಞನ ದೀಕ್ಷಾ ಕರುಣಾ ಕಟಾಕ್ಷ ಸದ್ಗತಿಮೋಕ್ಷ ತೋರುತಿಹ್ಯ ಗುರುತಾನೆ ಪ್ರತ್ಯಕ್ಷ ಇದು ಭಾಸ್ಕರ ಗುರು ಕೃಪಾದೃಷ್ಟಿಯು ಅಮೃತದ ದೃಷ್ಟಿಯು ಜೀವನ ಸಂತುಷ್ಟಿಯು ಮುರಿಯಿತು ಮಹಿಪತಿ ಹುಟ್ಟುವ ಹೊಂದುವ ಬಟ್ಟೆಯು ತ್ರಾಹಿ ತ್ರಾಹಿ ಗುರುನಾಥ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು