ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದರ ಪೂರ್ತಿಯ ಕೊಡದಿರು ಉದಧಿಶಯನ ಪ ಮುದದಿ ನಿನ್ನನು ನೆನೆದು ಮಲಗುವೆನೊ ಸುಖದಿ ಅ.ಪ ಮುದದಿ ನಿನ್ನ ಚರಣವನು ಸ್ಮರಿಸುವುದು | ಪರಿಹಾರವು ಬಹು ಗರ್ವ ಹೆಚ್ಚುವುದು ಎನಗೆ | ಅರವಿಂದನಾಭ ಹರಿ ವರವಿದೆ ನಿನ್ನ ಕೇಳ್ವೆ | ಪರಿಹಾಸ್ಯ ನುಡಿಯಲ್ಲ ಪರಮ ಪಾವನಗೆ 1 ತನುಮನವು ನಿನ್ನ ವಿಷಯಕ್ಕೆರಗಲಿ | ಅನುಮಾನವಿದ್ದ ಪರಿಯೆಲ್ಲ ತೊಲಗಿ || ವನಜಸಂಭವನೈಯ್ಯ ವೈಕುಂಠಪತಿ ನಿನಗೆ | ಅನವರತ ದೊರೆ ಎಂಬೊ | ಘನತೆ ತಪ್ಪದೆ ಇರಲಿ2 ಗಜಮದದಿ ಕಂಗೆಟ್ಟ ಪರಿಯನ್ನ ಮಾಡದೇ | ಅಜಮಿಳಗೆ ಒಲಿದಂತೆ ಎನಗೆ ವೊಲಿದೂ || ಸುಜನ ರಕ್ಷಕನೆಂಬೊ ಬಿರುದು ಬೇಕಾದರೆ | ನಿಜವಾಗಿ ದಯಮಾಡೊ ವಿಜಯವಿಠ್ಠಲನೇ3
--------------
ವಿಜಯದಾಸ
ಜಯ ಜಯವೆನ್ನಿ ಗುರು ಜಗದೀಶಗೆ ಜಯ ಜಯ ಜಗತ್ರಯ ಪಾವನಗೆ ಧ್ರುವ ಆನಂದೊ ಬ್ರಹ್ಮ ಆನಂದ ಕಂದಗೆ ಅನುದಿನ ಜಯ ಜಯ ಅನುಪಮಗೆ ಸನಕ ಸನಂದನ ವಂದಿತಗೆ ಮುನಿಜನ ಹೃದಯ ನಿವಾಸಗೆ 1 ನಿತ್ಯ ನಿರ್ಗುಣಗೆ ಅಗಣಿತಗುಣ ಪರಿಪೂರ್ಣಗೆ ಝಗಿಝಗಿಸುವ ಜಗನ್ಮೋಹನಗೆ ಜಗಜ್ಜೀವ ಜಗದಾತ್ಮಗೆ 2 ಜಯ ಜಯ ಮಂಗಳ ಮಹಾಮುನಿಗೆ ಮಹಿಮಾನಂದ ಗುರುಮೂರ್ತಿಗೆ ಮಹಿಪತಿ ಸ್ವಾಮಿ ಸರ್ವೋತ್ತಮಗೆ ಜಯ ಜಯವೆನ್ನಿರೊ ಜಗದೊಳಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಲಂ ಜಯ ಶುಭಮಂಗಲಂ ಪ. ಶ್ರೀಗೌರೀಸುಕುಮಾರನಿಗೆ ಯೋಗಿವರೇಣ್ಯ ಶುಭಾಕರಗೆ ರಾಗ ಲೋಭ ರಹಿತಗೆ ರಜತೇಶಗೆ ಭಾಗೀರಥಿಸುತ ಭವಹರಗೆ 1 ಪಾಶಾಂಕುಶ ವಿವಿಧಾಯುಧಗೆ ಪಾಶದರಾರ್ಚಿತ ಪಾವನಗೆ ವಾಸರಮಣಿಶತಭಾಸಗೆ ಈಶಗೆ ಭಾಸುರ ತನಕ ವಿಭೂಷಣನಿಗೆ2 ಶೀಲ ಸುಗುಣಗಣ ವಾರಿಧಿಗೆ ನೀಲೇಂದೀವರಲೋಚನೆಗೆ ಲೋಲ ಲಕ್ಷ್ಮೀನಾರಾಯಣ ರೂಪಗೆ ಶಾಲಿ ಪುರೇಶ ಷಡಾನನಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಲಂ ಮಂಗಲಂ ಭವತು ತೇ ಮಂಗಲಂ ಪ. ವಿಜ್ಞಾನಶಕ್ತಿ ಪ್ರಕಾಶಗೆ ಈಶಗೆ ಸಜ್ಜನನಿವಹಾರಾದಿತಗೆ ಅಜ್ಞಾನತಿಮಿರಮಾರ್ತಾಂಡ ಪ್ರಚಂಡಗೆ ಮೂಜದೊಡೆಯ ಮನೋಜ್ಞ ಮೂರುತಿಗೆ 1 ಚಂದ್ರಶೇಖರಸುಕುಮಾರಗೆ ಮಾರನ ಸುಂದರರೂಪ ಪ್ರತಾಪನಿಗೆ ನಿಂದಿತ ಖಲಜನವೃಂದವಿದಾರಗೆ ಸ್ಕಂದರಾಜ ಕೃಪಾಸಿಂಧು ಪಾವನಗೆ 2 ತಾರಕದೈತ್ಯಸಂಹಾರಗೆ ಧೀರಗೆ ಶೂರಪದ್ಮಾಸುರನ ಗೆಲಿದವಗೆ ಸೇರಿದ ಭಕ್ತರ ಸುರಮಂದಾರಗೆ ನಾರದಾದಿ ಮುನಿವಾರವಂದಿತಗೆ 3 ವಲ್ಲೀವಲ್ಲಭನಿಗೆ ಒಲಿದರ್ಗೆ ವರದಗೆ ಎಲ್ಲ ಭೂತಾಶ್ರಯ ಬಲ್ಲವಗೆ ಖುಲ್ಲದಾನವರಣಮಲ್ಲ ಮಹೇಶಗೆ ಬಿಲ್ಲುವಿದ್ಯಾಧೀಶ ಭೀಮವಿಕ್ರಮಗೆ 4 ಕಂಜಾಕ್ಷ ಲಕ್ಷ್ಮೀನಾರಾಯಣ ತೇಜಗೆ ಮಂಜುಳಕಾಂತಿ ವಿರಾಜನಿಗೆ ನಂಜುಂಡನ ಕರಪಂಜರಕೀರ ಪಾ- ವಂಜೆ ಕ್ಷೇತ್ರಾದಿವಾಸ ಸುರೇಶನಿಗೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳಂ ಜಯ ಮಂಗಳಂ ಪ ಆದಿನಾರಾಯಣನೆನಿಸಿದಗೆ ಪಾದದಿ ಗಂಗೆಯ ಪಡೆದವಗೆ ಸಾಧುಸಜ್ಜನರನ್ನು ಸಲುಹುವ ದೇವಗೆ ವಿ ನೋದ ಮೂರುತಿಯಾದ ವೆಂಕಟಗೆ 1 ಶಂಖ ಚಕ್ರಧರಿಸಿಪ್ಪವU ಪಂಕಜ ಹಸ್ತವ ತೋರ್ಪವಗೆ ಬಿಂಕದೊಳಸುರರ ಕೆಡಹಿದ ಧೀರಗೆ ಮೀ ನಾಂಕನ ಪಿತನಾದ ವೆಂಕಟಗೆ 2 ಪೀತಾಂಬರಧರನೆನಿಸಿದಗೆ ನೂತನ ನಾಮದಿ ಮೆರೆವವಗೆ ಪಾತಕನಾಶನ ಪರಮಪಾವನಗೆ ಅ ತೀತ ಮಹಿಮನಾದ ವೆಂಕಟಗೆ 3 ಖಗವಾಹನನೆಂದೆನಿಸಿದಗೆ ನಗಧರನಾಗಿಹ ಅಘಹರಗೆ ಮೃಗಧರರೂಪಗೆ ಮುಂಚಕಲಾಪಗೆ ಜಗದಾಧಾರಕ ವೆಂಕಟಗೆ 4 ಲೋಕನಾಯಕನಾದ ಕೇಶವಗೆ ಶೋಕಭಂಜನನಾದ ಮಾಧವಗೆ ಸಾಕಾರ ರೂಪಗೆ ಸರ್ವಾತ್ಮಕನಿಗೆ ಶ್ರೀಕರನೆನಿಸುವ ವೆಂಕಟಗೆ 5 ಆಲದ ಎಲೆಯೊಳ್ವೊರಗಿದಗೆ ಆ ಕಾಲದಿ ಅಜನನು ಪೆತ್ತವಗೆ ನಿಗಮ ವಿದೂರಗೆ ಕಾಲಕಾಲಾಂತಕ ವೆಂಕಟಗೆ 6 ಸ್ವಾಮಿ ಪುಷ್ಕರಣಿಯ ವಾಸನಿಗೆ ಭೂಮಿ ವರಾಹತಿಮ್ಮಪ್ಪನಿಗೆ ಪ್ರೇಮದಿ ಜಗವನು ಸಲುಹುವ ನಾಮದ ಸೋಮ ಸನ್ನಿಭನಾದ ವೆಂಕಟಗೆ 7
--------------
ವರಹತಿಮ್ಮಪ್ಪ
ಶ್ರೀ ಮಹಾದೇವದೇವಗೆಸೋಮಶೇಖರನಿಗೆವಾಮಾಂಕದೊಳು ಪಾರ್ವತಿಯಪ್ರೇಮದಿಂದ ತಾಳ್ದವಗೆಹೇಮದಾರತಿಯ ಬೆಳಗಿರೆ 1 ಮಾರಮರ್ದನಗೆ ತ್ರಿಪು-ರಾರಿಗೆ ಶ್ರೀಕರನಿಗೆಶಾರದೆ ಲಕ್ಷ್ಮಿಯರು ವೈ-ಯಾರದಿಂದ ಪಾಡುತಮೇರುವೆಯಾರತಿಯ ಬೆಳಗಿರೆ 2 ಕರುಣಾಸಾಗರಗೆ ಶ್ರೀ-ಕರಗೆ ಸರ್ವೇಶಗೆಪರಮ ಪಾವನಗೆಪಾರ್ವತಿಗೆ ವನಿತೆಯರುಕುರುಜಿನಾರತಿಯ ಬೆಳಗಿರೆ 3 ದೇವದುಂದುಭಿ ಮೊಳಗೆದೇವತೆಗಳೆಲ್ಲಾ ನೆರೆದುಹೂವಿನ ಮಳೆಗರೆಯೆಭಾವಕಿಯರು ಮಾದೇವಗೆಹೂವಿನಾರತಿಯ ಬೆಳಗಿರೆ 4 ಪಂಕಜಾಕ್ಷಿಯರು ಕೂಡಿಭೋಂಕನೆ ಗಾನವ ಪಾಡಿಕಂಕಣ ಕಡಗ ಝಣ ಝಣರೆನೆ ಶ್ರೀರಾಮೇಶಗೆಕುಂಕುಮದಾರತಿಯ ಬೆಳಗಿರೆ5
--------------
ಕೆಳದಿ ವೆಂಕಣ್ಣ ಕವಿ
ಬಣ್ಣಿಸಲಳವೇ ನಿನ್ನ ಪಬಣ್ಣಿಸಲಳವಲ್ಲ ಭಕುತವತ್ಸಲ ದೇವಪನ್ನಗ ಶಯನ ಪಾಲ್ಗಡಲೊಡೆಯನೆ ರಂಗಅ.ಪಅಸಮ ಪರಾಕ್ರಮಿ ತಮನೆಂಬ ದೈತ್ಯನುಶಶಿಧರನ ವರದಿ ಶಕ್ರಾದ್ಯರಿಗಳುಕದೆಬಿಸಜಸಂಭವನ ಠಕ್ಕಿಸಿ ನಿಗಮವ ಕದ್ದುವಿಷಧಿಯೊಳಡಗಿರಲ್ ಒದಗಿ ಬಂದಮರರುವಸುಧೀಶ ಕಾಯಬೇಕೆಂದೆನಲವನ ಮ -ರ್ದಿಸಿ ವೇದಾವಳಿಯ ತಂದು ಮೆರೆದ ದಶದಿಸೆಯೊಳು ಬೊಮ್ಮಗಂದು ವೇದವ ಕರುಣಿಸದೆ ಕಂಜಾಕ್ಷ ಕೇಶವ ದಯಾಸಿಂಧು 1ಇಂದ್ರಾದಿ ಸಕಲ ದೇವತೆಗಳೆಲ್ಲರು ದೈತ್ಯವೃಂದವೊಂದಾಗಿ ಮತ್ಸರವ ಮರೆದು ಕೂಡಿಬಂದು ನೆರೆದುಮುರಹರ ನಿನ್ನ ಮತದಿಂದಮಂದರಾದ್ರಿಯ ಕಡೆಗೋಲ ಗೈಯ್ದತುಳ ಫಣೀಂದ್ರನ ತನು ನೇಣಿನಂದದಿ ಬಂಧಿಸಿ ||ಸಿಂಧು ಮಥಿಸುತಿರಲು ಘನಾಚಲವಂದು ಮುಳುಗಿ ಪೋಗಲು ಬೆನ್ನಾಂತು ಮುಕುಂದ ನೆಗಹಿದೆಸುರರು ಜಯ ಜಯವೆನಲು2ಖಳಶಿರೋಮಣಿ ಕನಕಾಕ್ಷನೆಂಬಸುರ ನಿನ್ನೊಳು ಸೆಣಸುವೆನೆಂಬ ಗರುವದಿಂದಲಿ ಬಹುಬಲದಿಂದುದ್ಧಟನಾಗಿ ದಿವಿಜರನಂಜಿಸಿಇಳೆಯ ಕದ್ದು ರಸಾತಳದೊಳಗಿರೆ ನಿನ್ನಪೊಳೆವ ಕೋರೆಗಳಿಂದ ತಿವಿದು ರಕ್ಕಸನ ಅ ||ಪ್ಪಳಿಸಿ ಕೊಂದವನ ದಿಂಡು ಗೆಡಹಿ ಮಹೀಲಲನೆಯೊಡನೆ ಕೈಕೊಂಡು ಪಾಲಿಸಿದೆ ಪೂಮಳೆಗರೆದರುಅಮರರು ನೆಲೆಗೊಂಡು3ಹಗಲಿರುಳಳಿವಿಲ್ಲದಸುರ ಕಶಿಪು ತನ್ನಮಗನ ಹರಿಯ ತೋರೆಂದಧಿಕ ಬಾಧಿಸುತಿರೆಬಗಿದು ಕಂಬವನೊಡೆದಧಿಕ ರೋಷಾಗ್ನಿ ಕಾರ್ಬೊಗೆ ಸೂಸಿ ಗಗನಮಂಡಲ ಧಗ - ಧಗಧಗಧಗಿಪ ಪ್ರಜ್ವಾಲೆಯನುಗುಳಿ ಹಿರಣ್ಯಕನ ಕುರುಗುರಿಂದೊಡಲ ಸೀಳಿ ಕರುಳಮಾಲೆತೆಗೆದು ಕಂಠದಲಿ ತಾಳಿ ಒಪ್ಪಿದೆನರಮೃಗರೂಪೀ ತ್ರಾಹಿಯೆನಲು ಶಶಿಮೌಳಿ 4ಕುಲಿಶಧರನ ಗೆದ್ದು ಕುವಲಯದೊಳು ಭುಜಬಲವಿಕ್ರಮದಲಿ ಸೌಭಾಗ್ಯದುನ್ನತಿಯಿಂದಬಲಿ ವಾಜಿಮೇಧ ಗೆಯ್ಯಲು ವಟುವೇಷದಿಂದಿಳಿದು ತ್ರಿಪಾದ ಭೂಮಿಯ ದಾನವ ಬೇಡಿಬಲುಹಮ್ಮ ಮುರಿಯಬೇಕೆಂದವನ ಶಿರಮೆಟ್ಟಿ ||ನೆಲನ ಈರಡಿಮಾಡಿದೆ ಚರಣವಿಟ್ಟುಜಲಜಜಾಂಡವನೊಡೆದೆ ಅಂಗುಷ್ಟದಿಸುಲಲಿತಸುಮನಸ ನದಿಯ ನೀ ಪಡೆದೆ5ಪೊಡವಿಪತಿಗಳೊಳಗಧಿಕ ಕಾರ್ತವೀರ್ಯಕಡುಧೀರ ದೇವ ದೈತ್ಯರಿಗಂಜದವನ ಬೆಂಬಿಡದೆ ಸಂಗ್ರಾಮದೊಳಧಿಕ ಸಮರ್ಥನಹೊಡೆದು ತೋಳ್ಗಳ ಕುಟ್ಟಿ ಕೆಡಹಿ ಆಗಸದೊಳುಮೃಢಮುಖ್ಯ ದೇವಸಂತತಿ ನೋಡೆ ಕ್ಷತ್ರಿಯರಪಡೆಯನೆಲ್ಲವ ಸವರಿ ಮಾತೆಯ ಶಿರಕಡಿದು ತತ್ಪತಿಗೆ ತೋರಿ ಪಿಡಿದೆ ಗಂಡುಗೊಡಲಿಯ ಕರದಿಬಲ್ಲಿದ ದನುಜಾರಿ6ದಶರಥರಾಯ ಕೌಸಲ್ಯಾನಂದನನಾಗಿಋಷಿ ವಿಶ್ವಾಮಿತ್ರನಧ್ವರವ ರಕ್ಷಿಸಿಘನವಿಷಕಂಠಧನುವ ಖಂಡಿಸಿ ಜಾನಕಿಯ ತಂದುತ್ರಿಶಿರದೂಷಣ ಖರರಳಿದು ವಾಲಿಯನಂದುನಿತಿ ಶಾಸ್ತ್ರದಿಂದ ಸಂಹರಿಸಿ ಸಾಗರವ ಬಂಧಿಸಿ ರಾವಣನ ಶಿರವ ಕತ್ತರಿಸಿ ರಂಜಿಸುವ ಲಂಕಾಪುರವ ವಿಭೀಷಣಗೆಎಸೆವ ಪಟ್ಟವ ಕಟ್ಟಿದೆಲೆ ದೇವಗರುವ 7ದೇವಕಿ ವಸುದೇವರಲ್ಲಿ ಜನಿಸಿ ಲೋಕಪಾವನಗೆಯ್ದು ಪನ್ನಗನ ಪೆಡೆಯ ಮೆಟ್ಟಿಗೋವಳನಾಗಿ ಗೋವರ್ಧನ ಗಿರಿಯೆತ್ತಿಮಾವ ಮಲ್ಲರ ಕೊಂದು ಪಾರಿಜಾತವ ತಂದುಆ ವಿಪ್ರನಲಿ ಓದಿ ಪೋದಪತ್ಯವನಿತ್ತ ||ತಾವರೆದಳಸುನೇತ್ರ ತ್ರಿಭುವನ ಸಂಜೀವಪರಮ ಪವಿತ್ರ ಶ್ರೀ ರುಕ್ಮಿಣಿದೇವಿ ಮನೋಹರ ಶುಭನೀಲಗಾತ್ರ 8ಸರಸಿಜಾಸನಭವ ಇಂದ್ರಾದಿಗಳುಕದೆದುರುಳ ದಾನವರಿರಲಂದು ಖೇಚರದೊಳುನಿರುಪಮ ನೀನೆ ಒಂದೊಂದು ರೂಪಗಳಿಂದಹರಗೆ ಸಹಾಯವಾಗಿ ದನುಜಸ್ತ್ರೀಯರ ವ್ರತಪರಿಹಾರ ಮಾಡಿ ಆಯಾಸವಿಲ್ಲದಲೆ ಮುಪ್ಪುರವ ಅಳಿದ ನಿಸ್ಸೀಮ ಅಖಿಳಶ್ರುತಿಯರಸೆ ಕಾಣದ ಮಹಿಮ ಹೇಸಾಮಜವರದ ಸುಪರ್ಣವಾಹನ ಸಾರ್ವಭೌಮ 9ಮಣಿಮಯ ಯುಕ್ತ ಆಭರಣದಿಂದೆಸೆವ ಲಕ್ಷಣವುಳ್ಳ ದಿವ್ಯ ವಾಜಿಯನೇರಿಧುರದೊಳುಕುಣಿವ ಮೀಸೆಯ ಘೋರವದನ ಖಡ್ಗ ಚರ್ಮವನು ಕೊಂಡು ದ್ರುಹಿಣಾದಿಗಳು ಪೊಗಳಲುಕಲಿದನುಜರೆಲ್ಲರನೊಂದೆ ದಿನದೊಳು ಸವರಿದ ||ರಣಭಯಂಕರ ಪ್ರಜಂಡ ಮೂಜಗದೊಳುಎಣೆಗಾಣಿನೆಲೊಉದ್ದಂಡ ಕಲ್ಕಿ ದಿನಮಣಿ ಕೋಟಿತೇಜ ದುಷ್ಕøತ ಕುಲ ಖಂಡ10ಚಿತ್ತಜನಯ್ಯನೆ ಚಿನ್ಮಯ ಗಾತ್ರನೆಉತ್ತಮದರ ಚಕ್ರ ಗದೆ ಜಲಜಾಂಕನೆಸುತ್ತಲು ಅರಸಲು ನಿನಗೆಲ್ಲಿ ಸರಿಕಾಣೆಹೊತ್ತು ಹೊತ್ತಿಗಾದಿತ್ಯರಬಿನ್ನಪಕೇಳಿಹತ್ತವತಾರದಿ ಅಸುರರ ಮಡುಹಿದೆನಿತ್ಯ ತ್ರಿಸ್ಥಾನವಾಸ ವಾಗಿಹ ಸರ್ವಭಕ್ತರ ಮನೋವಿಲಾಸ ಸಲಹೋ ಪುರುಷೋತ್ತಮಪುರಂದರ ವಿಠಲ ತಿರುಮಲೇಶ11
--------------
ಪುರಂದರದಾಸರು
ಮಂಗಲಂ ಜಯ ಶುಭಮಂಗಲಂ ಪ.ಶ್ರೀಗೌರೀಸುಕುಮಾರನಿಗೆಯೋಗಿವರೇಣ್ಯ ಶುಭಾಕರಗೆರಾಗ ಲೋಭ ರಹಿತಗೆ ರಜತೇಶಗೆಭಾಗೀರಥಿಸುತ ಭವಹರಗೆ 1ಪಾಶಾಂಕುಶ ವಿವಿಧಾಯುಧಗೆಪಾಶದರಾರ್ಚಿತ ಪಾವನಗೆವಾಸರಮಣಿಶತಭಾಸಗೆ ಈಶಗೆಭಾಸುರತನಕ ವಿಭೂಷಣನಿಗೆ2ಶೀಲ ಸುಗುಣಗಣ ವಾರಿಧಿಗೆನೀಲೇಂದೀವರಲೋಚನೆಗೆಲೋಲಲಕ್ಷ್ಮೀನಾರಾಯಣ ರೂಪಗೆಶಾಲಿ ಪುರೇಶ ಷಡಾನನಗೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಂಗಲಂ ಮಂಗಲಂ ಭವತು ತೇ ಮಂಗಲಂ ಪ.ವಿಜ್ಞಾನಶಕ್ತಿ ಪ್ರಕಾಶಗೆ ಈಶಗೆಸಜ್ಜನನಿವಹಾರಾದಿತಗೆಅಜ್ಞಾನತಿಮಿರಮಾರ್ತಾಂಡ ಪ್ರಚಂಡಗೆಮೂಜದೊಡೆಯ ಮನೋಜÕ ಮೂರುತಿಗೆ 1ಚಂದ್ರಶೇಖರಸುಕುಮಾರಗೆ ಮಾರನಸುಂದರರೂಪ ಪ್ರತಾಪನಿಗೆನಿಂದಿತ ಖಲಜನವೃಂದವಿದಾರಗೆಸ್ಕಂದರಾಜ ಕೃಪಾಸಿಂಧು ಪಾವನಗೆ 2ತಾರಕದೈತ್ಯಸಂಹಾರಗೆ ಧೀರಗೆಶೂರಪದ್ಮಾಸುರನ ಗೆಲಿದವಗೆಸೇರಿದ ಭಕ್ತರ ಸುರಮಂದಾರಗೆನಾರದಾದಿ ಮುನಿವಾರವಂದಿತಗೆ 3ವಲ್ಲೀವಲ್ಲಭನಿಗೆ ಒಲಿದರ್ಗೆ ವರದಗೆಎಲ್ಲ ಭೂತಾಶ್ರಯ ಬಲ್ಲವಗೆಖುಲ್ಲದಾನವರಣಮಲ್ಲ ಮಹೇಶಗೆಬಿಲ್ಲುವಿದ್ಯಾಧೀಶ ಭೀಮವಿಕ್ರಮಗೆ 4ಕಂಜಾಕ್ಷ ಲಕ್ಷ್ಮೀನಾರಾಯಣ ತೇಜಗೆಮಂಜುಳಕಾಂತಿ ವಿರಾಜನಿಗೆನಂಜುಂಡನ ಕರಪಂಜರಕೀರ ಪಾ-ವಂಜೆ ಕ್ಷೇತ್ರಾದಿವಾಸ ಸುರೇಶನಿಗೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ